Thursday, 31 March 2016

Sāra Saṅgama 09

ಸಾರ ಸಂಗಮ  by “ತ್ರಿವೇಣಿ ತನಯ

ಪರೀಕ್ಷೆ

ಕಷ್ಟ ನೋವುಗಳು ಬಂದಾಗ ಕುಗ್ಗಬೇಡ,
ನಿಜ ಅವೇ ನಿನ್ನ ಶುದ್ಧ ಮಾಡುತಿವೆ ನೋಡ,
ಅಶಾಶ್ವತ ಅಸ್ಥಿರ ಬಾಳಿನಿಂದಲೇ ಅನಂತನ ಅರಿವು,
ಇದನರಿತು ಶರಣಾದಾಗಲೇ ಬಿಡುಗಡೆಯ ಸುಳಿವು.

ಮನ -ಕನ್ನಡಿ

ಅಹಂಕಾರ ಒಣಪ್ರತಿಷ್ಠೆಗಳಿಂದ ಹಾಳಾದರೆ ಬಾಳು,
ಯಾರನ್ನ ಅದಕೆ ನೀ ಹೊಣೆ ಮಾಡುತೀ  ಹೇಳು,
ತಾಳ್ಮೆ ವಿವೇಚನೆಯಿಲ್ಲದ ಸೊಕ್ಕಿನ ಮಾತು,
ಮನದ ಕನ್ನಡಿ ಒಡೆದರೆ ಜೋಡಿಸುವ ಬಗೆ ಎಂತು?

ಅನುಗಾಲದ ಚಿಂತೆ

ಬಿಸಿಲು ಮಳೆ ಛಳಿ ಯಾವುದಕ್ಕೂ ತಡೆಯದ ದೇಹ,
ಎಲ್ಲದಕೂ ಗೊಣಗುತಲೇ ತಾಳಿಕೊಳ್ಳುವ ವ್ಯಾಮೋಹ,
ಎಂದಿದ್ದರೂ ಬಿದ್ದುಹೋಗುವ ದೇಹದ ಕಾಳಜಿ ಸಾಕು,
ನೀನಾರು ಎಂದು ಹುಡುಕುತ್ತ ಒಳಗೊಮ್ಮೆ ಕಣ್ಹಾಕು.

ಕರುಣೆ -ಸ್ಮರಣೆ

ಸಾಸಿರ ನಾಮದವನ ಭಕ್ತಿಯಿಂದಲಿ ಭಜಿಸು,
ಲೋಕವ್ಯಾಪಾರಗಳ ಅಂಟದಂತಿದ್ದು ಭರಿಸು,
ಎಲ್ಲ ಕೊಟ್ಟ ತಂದೆಗೆ ನಾವೇನು ಕೊಡಬಲ್ಲೆವು ಹೇಳು?
ಶರಣಾಗಿ ಸ್ಮರಿಸುವುದೊಂದೇ ನಿಜ ತಪವದು ಕೇಳು.

ಪದ ಬಂಧ

ಈ ಬಾಳೊಂದು ಪದಬಂಧ,
ನುಡಿ ಸವಿಯಿದ್ರೆ ಸಂಬಂಧ,
ಸತತವಿರಬೇಕಾದ್ರೆ ಆನಂದ,
ವಿಸ್ಮರಣೆಯಾಗದಿರಲಿ ಗೋವಿಂದ.


(Contributed by Shri Govind Magal)

Tuesday, 29 March 2016

Sāra Saṅgama 08

ಸಾರ ಸಂಗಮ  by “ತ್ರಿವೇಣಿ ತನಯ

ಜಗದ ಶಾಲೆಯ ವಿದ್ಯಾರ್ಥಿ

ಹಂಗ್ಯಾಕೆ ಹಿಂಗ್ಯಾಕೆ ಊರ ಉಸಾಬರಿ ಯಾಕೆ?
ನಿನ್ನ ನೀ ಅರಿವುದಕ್ಕಿಂತ ವಿಶೇಷ ಬೇರೆ ಬೇಕೆ?
ಬೇಕಿರಲಿ ಬೇಡದಿರಲಿ ಎಲ್ಲರೊಂದಿಗೆ ಕೂಡು,
ಜಗದ ಶಾಲೆಯಲಿ ನಿನ್ನ ನೀನರಿಯುವ ವಿದ್ಯಾರ್ಥಿ ನೋಡು.

ಗುರು -ಗುರಿ

ಗುರಿ ಬೇಕು ಗುರು ಬೇಕು ಬದುಕಿನಲಿ ಎಂದೂ,
ಎರಡೂ ಇರದಿರೆ ಬಿಡುಗಡೆ ಇಲ್ಲ ಎಂದೆಂದೂ,
ಗುರಿ ಅದು ಹರಿಚರಣ ಗುರು ತಾ ಮುಖ್ಯಪ್ರಾಣ,
ಪ್ರತಿಕ್ಷಣದ ಬದುಕಾದಾಗ "ಮಂಥನ"ದೊರಕೀತವನ ಕರುಣ.

ಕಡೆತ -ಮಿಡಿತ

ಬೆಣ್ಣೆಗಾಗಿ ಮೊಸರ ಕಡೆಯಬೇಕು,
ನಿಜ ಭಕ್ತಿಗಾಗಿ ಮನವ ಕಡೆಯಬೇಕು,
ಮಧ್ವಶಾಸ್ತ್ರ ದಧಿಯ ಮನನದಿಂದ ಕಡೆ,
ಜನ್ಮಾಂತರಗಳಾಗಲಿ ಹರಿಪಾದದೆಡೆಗೆ ನಡೆ.

ಪುಟಕ್ಕಿಟ್ಟ ಭಕ್ತಿ -ಮುಕ್ತಿ

ಮೊಸರ ಕಡೆದಾಗ ಬೆಣ್ಣೆ,
ಮನವ ಕಡೆದಾಗ ಭಕ್ತಿ ದೊನ್ನೆ,
ಬೆಣ್ಣೆ ಕಾಯಿಸಿದಾಗಾ ತುಪ್ಪ,
ಭಕ್ತಿ ಪುಟಕ್ಕಿಟ್ಟಾಗ ಮುಕ್ತಿ ನೋಡಪ್ಪ.

ಅಂತರಂಗದ ಆಚರಣೆ

ಪಾರಾಯಣ ಪುರಾಣ ಯಾತ್ರೆಗಳಿಂದಲ್ಲ ಮುಕ್ತಿ,
ಮೆಟ್ಟಿಲುಗಳವು ಸಾಧಿಸಲು ನಿಜದೈವ ಭಕ್ತಿ,
ಹೃದಯ ಮನಗಳಲ್ಲಿ "ಮಂಥನ"ಸತತವಿರಲಿ,
ಕೊಳೆನೀಗಿ ಮನತಿಳಿಯಾಗಿ ಹರಿಪಾದ ಸೇರಲಿ.


(Contributed by Shri Govind Magal)

Monday, 28 March 2016

Sāra Saṅgama 07

ಸಾರ ಸಂಗಮ  by “ತ್ರಿವೇಣಿ ತನಯ


ಜಗನ್ನಾಥ ದಾಸರ ಸ್ಮರಣ -ನಮನ

ಜಗನ್ನಾಥ ಗುರು ದಾಸರೇ ನಿಮ್ಮ ಚರಣ ಕಮಲವ ನಂಬಿದೆ,
ನಿಮ್ಮ ಗ್ರಂಥದ ಪದ ಪದಾರ್ಥ ಸಾರವ ಎರೆವ ಭಾರವು ನಿಮ್ಮದೇ,
ಒಂದು ಅರಿಯದ ಮಂದ ಮತಿ ನಾ ಸುಮ್ಮನೆ ಗ್ರಂಥವನೋದಿದೆ,
ಅಕ್ಷರಾಭಿಮಾನಿಗಳ ಕೃಪೆಯ ತೋರಿಸಿ ಜ್ಞಾನವೆರೆಯೋ ಓ ತಂದೇ,
ಶ್ರೀನಿವಾಸಾಚಾರ್ಯನೆನಿಸಿ ಶಾಸ್ತ್ರಾಧ್ಯಯನವ ಮಾಡಿದೆ,
ಕಾಲ ಕೂಡಿ ಬರುವವರೆಗೂ ನಿನ್ನ ದಾರಿಯ ನೀ ಹಿಡಿದೆ,
ಪೊರೆಯ ಕಳಚಿದ ವಿಜಯರಾಯರ ಕೃಪೆಗೆ ನೀ ಪಾತ್ರನಾದೆ,
ಗೋಪಾಲದಾಸರ ಅನುಗ್ರಹದಿ ಮೃತ್ಯು ಜಯಿಸಿ ಮರುಜನ್ಮ ಪಡೆದೆ,
ಗುರುವಾಜ್ಞೆಯ ಶಿರದಿ ಧರಿಸಿ ಭಾರೀ ಸಾಧನೆ ಮಾಡಿದೆ,
ಮನುಜ ಕುಲದ ಉದ್ಧಾರಕೆಂದೇ ಹರಿಕಥಾಮೃತಸಾರ ನೀಡಿದೆ.

ನಮೋ ಭಕ್ತಾಗ್ರೇಸ ಜಗನ್ನಾಥದಾಸಾರ್ಯ,
ಮಧ್ವಾಮೃತವ ಅನುಭವಿಸಿ ಸವಿದ ಆರ್ಯ,
ವಿಜಯದಾಸರ ಅನುಗ್ರಹ ಪಡೆದ ಪುನೀತ,
ಗೋಪಾಲದಾಸರಿಂದ ಆಯುಷ್ಯವೃದ್ಧಿ ಪಡೆದಾತ,
ಸುಖದಿ ಹರಿವ್ಯಾಪಾರವ ಅನುಭವಿಸುತಾ ಬಾಳಿದ ಧೀರ,
ಮುದದಿ ನೀಡಿದೆ ಭಕುತಜನಕೆ ಹರಿಕಥಾಮೃತಸಾರ.


(Contributed by Shri Govind Magal)

Saturday, 26 March 2016

Sāra Saṅgama 06

 ಸಾರ ಸಂಗಮ  by “ತ್ರಿವೇಣಿ ತನಯ


ಛಾಯೆ -ಮಾಯೆ

ಎಲ್ಲೆಲ್ಲೂ ನೋಡಿದರೂ ನಿನ್ನದೇ ಛಾಯೆ,
ಜಗವೆಲ್ಲ ಸುತ್ತಿಹುದು ನಿನ್ನವಳ ಮಾಯೆ,
ನಿಮ್ಮೀರ್ವರ ಮಗನಾಟ-ಅದುವೇ ಉಸಿರಾಟ,
ದೃಢಮಾಡುತೀ ಜ್ಞಾನ ಮುಗಿಸುವೆಂದಿಗೆ "ಚಕ್ರ"ದಾಟ?

ಬೇಡುವ ಬವಣೆ

ಬ್ರಹ್ಮಾಂಡವೇ ಕಾಯವಾದರೂ ಬೇಡುವಾಗಾದ ವಾಮನ,
ಎಂದೂ ವಿಷಯ ಸುಖಗಳ ಬೇಡದಂತಿರಿಸು ಮನ,
ಶರಣಾಗತನಾದ ಬಲಿಯನುದ್ಧರಿಸಿದ ತ್ರಿವಿಕ್ರಮ,
"ನಾನು ನನ್ನದೆಂಬುದ"ಮೆಟ್ಟಿ ಸಲಹು ವೈಕುಂಠ ಧಾಮ.

ತಪ

ದೇಹೇಂದ್ರಿಯ ಮನೋಬುಧ್ಯಾತ್ಮಗಳು ಭಗವದ್ ಅಧೀನ,
ಇದಬಿಟ್ಟು ಅಸ್ವತಂತ್ರ ಜೀವ ತಾ ಮಾಡುವುದ ಏನ,
ಈ ಜ್ಞಾನ ದೃಢವಾಗೆ ಕರ್ಮ ನಿರ್ಲೇಪ,
ಮಥಿಸುತಲೇ ಶರಣಾಗು ಅದೇ ದೊಡ್ಡ ತಪ.

ಇರವು -ಅರಿವು

ಕೋಪವೇನೋ ಎಂಬಂತೆ ಧಗ ಧಗ ಬಿಸಿಲು ಸುರಿವೆ,
ಪಾಪ ಎಂದು ಕರುಣೆತೋರಿ ತಂಪಾದ ಮಳೆ ಹರಿಸುವೆ,
ಬೇಗೆಯಲಿ ಬೇಯಿಸಿ ದಹಿಸುವ ಸೆಖೆಯ ಕೊಡುವೆ,
ಮತ್ತೆ ಕಾರುಣ್ಯದಲಿ ತಂಗಾಳಿಯಾಗಿ ಬರುವೆ.

ಅದ್ಭುತ ಕಲಾಕಾರ

ಏನು ಹೇಳಲಿ ನಿನ್ನ ಅವರ್ಣನೀಯ ವ್ಯಾಪಾರ,
ತಾಳ ತಪ್ಪದಂತೆ ತೂಗುವ ಅದ್ಭುತ ಕಲಾಕಾರ,
ನಾನು ನನ್ನದು ಎಂಬುವವರಿಗೆ ಬದುಕು ದುರ್ಭರ,
ನಿನ್ನರಿವು ಸಿಕ್ಕವರಿಗೆ ಎಲ್ಲವೂ ಹಾಲೋಗರ.


(Contributed by Shri Govind Magal)

Friday, 25 March 2016

Sāra Saṅgama 05


ಸಾರ ಸಂಗಮ  by “ತ್ರಿವೇಣಿ ತನಯ

ಭವದ ತಾಪ -ಜ್ಞಾನ ದೀಪ

ಹಚ್ಚಿಡೋಣ ಒಳಗೆ ಜ್ಞಾನತೃಷೆಯ ದೀಪ,
ಅದೊಂದೇ ಕಳೆಯಬಲ್ಲದು ಭವದ ಈ ತಾಪ,
ಎನ್ನೊಳಗಿರುವವರೆಗೂ ಕಾಪಿಡದನು ವಾಯುದೇವ,
ಗುರು ನಿನ್ನ ಕಾರುಣ್ಯವಿರೆ ಒಲಿವ ಪರಮದೇವ.

ಅಹಂ ಬಲಿ --ಮೈಮನ ಕಾಯುವ ಮಾಲಿ

ಬಾಗಿದ ಬಲಿಯ ಬಾಗಿಲ ಕಾಯ್ದ ಸ್ವಾಮಿ,
ಬಾಗಿದವರ ಮನೆ ಮನ ಕಾಯುವ ಪ್ರೇಮಿ,
ಈ ಮರ್ಮವನರಿತು ಮಾಗುತ ಬಾಗುತ ಬಾಳು,
ನಂಬಿದವರ ಅವನೆಂದು ಕೈ ಬಿಟ್ಟಾನೆ ಹೇಳು.

ಕಾಣದ ಆಟ

ನಂಬಿರುವ ಮೂಲದಿಂದ ಬಾರದಿರುವುದು ಉಂಟು,
ನಂಬದಿರುವ ಎಡೆಯಿಂದ ಒದಗಿ ಬರುವುದೂ ಉಂಟು,
ನೀನಂದು ಕೊಂಡಂತೆ ನಡೆಯದದು ಎಂದೆಂದೂ,
ಎಲ್ಲವನೂ ನಡೆಸುತಿರುವವ ಒಬ್ಬನೇ ಅವ ಆತ್ಮಬಂಧು.

ನಿಯಾಮಕ

ಅದು ಮಾಡು ಇದು ಬಿಡು ಹಾರಾಟ ಸಲ್ಲ,
ಮಾಡುವುದಕೆ ಬಿಡುವುದಕೆ ನೀನೇನೂ ಅಲ್ಲ,
ಹಿಂದಿನದು ಮುಂದಿನದು ನಿನಗೇನೂ ಗೊತ್ತಿಲ್ಲ,
ಸರ್ವ ನಿಯಾಮಕನೊಬ್ಬನೇ ಅವ ಲಕುಮೀನಲ್ಲ.

ಎಲ್ಲ ಬಿಟ್ಟ ಬಲ್ಲವರು

ನಾನು ನನ್ನದೆಂದವರ ಹೆಸರು ಜಗದೊಳಗೆ ಇಲ್ಲ,
ಎಲ್ಲ ಬಿಟ್ಟವರ ಬೃಂದಾವನ ಸ್ಮಾರಕಗಳೇ ತುಂಬಿವೆಯಲ್ಲ,
ಏನಿದರ ಮರ್ಮ ಒಮ್ಮೆಯಾದರೂ ಕಣ್ಮುಚ್ಚಿ ಯೋಚಿಸು,
ಸ್ಥಿರವಲ್ಲವೀ ವ್ಯಾಪಾರ ಮನವ "ಸ್ಥಿರ"ನ ಪಾದದಿ ಕೀಲಿಸು.

(Contributed by Shri Govind Magal)

Thursday, 24 March 2016

Sāra Saṅgama 04

ಸಾರ ಸಂಗಮ  by “ತ್ರಿವೇಣಿ ತನಯ

ಜೀವ ಯೋಗ್ಯತೆ

ಜೀವರಾಶಿಗಳವು ಅನಾದಿಯಿಂದಲೂ ಭಿನ್ನ,
ಅದರಂತೆ ನಡತೆ ಆಚಾರ ವಿಚಾರಗಳೂ ಬಿನ್ನ,
ಜೀವದ ಯೋಗ್ಯತೆಯನರಿತು ವ್ಯವಹರಿಸು,
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸ್ವೀಕರಿಸು.

ಬೇವು ಬೆಲ್ಲ

ಬಾಳೇ ಹಾಗೆ ಬೇವು ನಂತರ ಬೆಲ್ಲ,
ಯಾವುದು ಮೊದಲೋ ಯಾವನು ಬಲ್ಲ,
ಎಲ್ಲದಕೂ ಕಾರಣ ನೀ ತಂದಿಹ ಗಂಟು,
ಕೃಷ್ಣಾರ್ಪಣವೆನುತಿರು ಹಚ್ಚಿಕೊಳ್ಳದೇ ಅಂಟು.

ಬದುಕಿನ ಸೂತ್ರ

ನಿನ್ನನ್ನೇ ನೀ ತಿಳಿಯದವ ಊರನ್ನೇನು ತಿದ್ದುವೆ?
ಆಗಲಾರದ ಕೆಲಸ ಸುಮ್ಮನೇ ಗಾಳಿಯ ಗುದ್ದುವೆ,
ಕಣ್ಮುಚ್ಚಿ ಒಳಗಿಳಿದು ತಿಳಿ ನಿನ್ನದೇನು ಪಾತ್ರ?
ಅದರ ಸುಳಿವು ಸಿಕ್ಕಿತೋ ಬದುಕೆಲ್ಲ ಸುಸೂತ್ರ .

ನಿಜ ಸಂಪತ್ತು

ಲಕ್ಷ್ಮೀ -ಅಲ್ಲ ಬರೀ ಸಂಪತ್ತು ಕನಕ ಧನ,
ಪ್ರಕೃತಿಯಾಗಿ ಎಲ್ಲದರ ಮೂಲ ಇಂಧನ,
ಬೇಡೋಣ ಅವಳಲ್ಲಿ ನಿಜ ಸಂಪತ್ತು ಜ್ಞಾನ,
ಜ್ಞಾನವಿತ್ತು ಕಾಯಿ ತಾಯೇ ನಿನಗೆ ನಮ್ಮ ವಂದನ.

ದೇವರ ಕಾನೂನು -ಕಾಯಿದೆ

ಒಪ್ಪಿದೆ ನೀನು ಮಾಡಿದುದೇ ಕಾನೂನು ಕಾಯ್ದೆ,
ಸಮಯಾಸಮಯ ನೋಡದೇ ಕರಿ ಮಕರಿಗಳ ಕಾಯ್ದೆ,
ಅಕ್ಷಯಾಂಬರವನಿತ್ತು ಸಾಧ್ವಿ ದ್ರೌಪದಿಯ ಕಾಯ್ದೆ,
ನಮ್ಮಂಥವರ ಪಾಲಿಗೆ "ನಿತ್ಯಸಂಸಾರ"ನೇಯ್ದೆ.

(Contributed by Shri Govind Magal)

Wednesday, 23 March 2016

Sāra Saṅgama 03

ಸಾರ ಸಂಗಮ  by “ತ್ರಿವೇಣಿ ತನಯ

ದೈವಪ್ರಜ್ಞೆ

ಏನೇ ಬರಲಿ ನಿನ್ನಲ್ಲಿ ಮನವಿರಲಿ ರಾಮ,
ನಿಯಾಮಕ ನೀನೆಂದು ದೃಢ ಮಾಡು ಶ್ಯಾಮ,
ಮನ ನಿನ್ನ ತಾತನಲ್ಲಿಟ್ಟಿರು ಕೈಲಾಸವಾಸ,
ದೈವಪ್ರಜ್ಞೆಯಲಿ ಸಾಗಿರಲಿ ಜೀವನ ಪ್ರವಾಸ.

ಎಚ್ಚರದ ಬಾಳು

ನೂರೆಂಟು ಬರುತಿರಲಿ ಸಂಸಾರದೇಳು ಬೀಳು,
ತುಡಿತವದು ತಪ್ಪದಿರಲಿ ಅಧ್ಯಾತ್ಮದ ಗೀಳು,
ಗುರುಗಳ ಪ್ರವಚನದ ನೂತನ ಹೋಳು,
ಭ್ರಮೆ ಹೊಸಕಿ ಮೈಮುರಿದು ಎಚ್ಚರದಿ ಬಾಳು.

ವೈರಾಗ್ಯ

ಇರದಿರೆ ಮಾನಸಿಕ ಆರೋಗ್ಯ,
ಹತ್ತಿರ ಬರದದು ನಿಜ ವೈರಾಗ್ಯ,
ಬಿಡದಿರು ಬಿಡದಿರು ಸಜ್ಜನರ ಸಂಗ,
ತಿಳಿಯಾದೀತು ಮುಂದೊಮ್ಮೆ ಅಂತರಂಗ.

ಕಾಣೋದು -ಕಾಣದ್ದು

ಕಾಣದ್ದು ತಿಳಿಯದ್ದು ಇಲ್ಲವೆನಬೇಡ,
ಗಂಧ ಗಾಳಿ ಶಾಖವವು ಕಾಣಿಸವು ನೋಡ,
ಅನೇಕ ಸಂಗತಿಗಳು ಅನುಭವಕ್ಕಷ್ಟೇ ಗೋಚರ,
ಅನುಭವಿಸಲಾಗದಿರೆ ಅದು ನಮ್ಮ "ಗ್ರಹಚಾರ".

ಅಗೋಚರ ವ್ಯಾಪ್ತ -ಅನಂತ

ನಮ್ಮ ಅರಿವಿನ ವ್ಯಾಪ್ತಿಗೆ ಸಿಗದವ ಪರಮಾತ್ಮ,
ಸರ್ವ ಜಡ ಜೀವಗಳಿಗೂ ಅವನೇ "ಅಂತರಾತ್ಮ"
ನಮ್ಮ ನೋಟ ಬುದ್ಧಿ ಆಚರಣೆ ಎಲ್ಲವೂ ಸೀಮಿತ,
ಅದಕೆಂದೇ ಯೋಗ್ಯತಾನುಸಾರ "ತಳಮಳ"ಅನವರತ.


(Contributed by Shri Govind Magal)

Tuesday, 22 March 2016

Sāra Saṅgama 02

ಸಾರ ಸಂಗಮ  by “ತ್ರಿವೇಣಿ ತನಯ


ಪ್ರಕೃತಿಯ ನಿತ್ಯ ಪೂಜೆ

ಪ್ರಕೃತಿಯ ಎಲ್ಲಾ ಚಟುವಟಿಕೆಗಳೂ ಭಗವದಾರಾಧನೆ,
ತಾಯಿ ಶ್ರದ್ಧೆಯಲಿ ನಡೆಸಿಹಳದನು ಪದ್ಮವದನೆ,
ಜಗದ ಉಸಿರು ಎಲ್ಲರ ಉಸಿರಾಡಿಸುವ ವಾಯುದೇವ,
ಪ್ರತಿ ಉಸಿರಾಟವನ್ನೂ ಜಪವೆಂದು ಮಾಡಿ ತಂದೆಗರ್ಪಿಸುವ.

ಸೂರ್ಯ ಚಂದ್ರರ ಶಾಖ ಬೆಳಕು ಅವನಿಗೆ ಆರತಿ,
ಇಂದ್ರ ಸುರಿಸುವ ಮಳೆಯದು ಅಭಿಷೇಕದ ರೀತಿ,
ಗಿಡ ಮರ ಪ್ರಾಣಿಪಕ್ಷಿಯ ಕಲರವವೂ ವೇದ ಮಂತ್ರ,
ಇದ ಮರೆತು ಜೀವಿಸುವ ಮನುಜ ಬಾಳದು ಅತಂತ್ರ.

ಮಾನವನ ವಿಕೃತಿ

ಬೆಳಕ ಕೊಡುವ ಸೂರ್ಯ ಚಂದ್ರ ಕೇಳುವರೇ ಕರ?
ಕೃತಜ್ಞತೆ ಇಲ್ಲದ ನಮ್ಮಲ್ಲಿ ಎಲ್ಲದಕ್ಕೂ ಬರ,
ಸರ್ವನಿಯಾಮಕನವನು ಕೇಳಿದನೇ ಸುಂಕ?
ಸ್ಮರಿಸಿ ವಂದಿಸಲೂ ನಮಗೇನೋ ಬಿಂಕ.

ಬೇಡದೇ ಏನೆಲ್ಲಾ ಕೊಡುವಳು ತಾಯಿ ಪ್ರಕೃತಿ,
ದುರಾಸೆಯ ಮಾನವನದು ಎಲ್ಲಾ ಬೇಕೆನ್ನುವ ವಿಕೃತಿ,
ಅರಳಿದ ಹೂವು ಬೇಕು ಆಡಿಸಲು ಕಾಡ ಹಾವೂ ಬೇಕು,
ಬೆಕ್ಕು ನಾಯಿ ಬೇಕು ಕಾಡಾನೆಯ ತಂದು ಆಡಿಸಬೇಕು.

ಹರಿವ ನೀರಿಗೆ ಕಟ್ಟೆ ಪ್ರತಿ ನೀನೇನದಕೆ ಕೊಟ್ಟೆ,
ಬೀಸುವ ಗಾಳಿಗೂ ಅಡ್ಡ ಬೃಹತ್ ಚಕ್ರಗಳನಿಟ್ಟೆ,
ಬಳಸಿಕೊ ಎಲ್ಲಾ -ವಿವೇಚನೆಯಿಲ್ಲದ ಆಟವದು ಸಲ್ಲ,
ಸಮತೋಲನ ತಪ್ಪಿದರೆ ಬುಡಮೇಲಾಗುವುದು ಎಲ್ಲ.


(Contributed by Shri Govind Magal)

Monday, 21 March 2016

Sāra Saṅgama 01

ಸಾರ ಸಂಗಮ  by “ತ್ರಿವೇಣಿ ತನಯ

ಶಾಂತಿ --ಭ್ರಾಂತಿ

ಜೊತೆಗಿರುವವರು ನೀಡಲಾರರು ಮನ ಶಾಂತಿ,
ಸಂಸಾರದಲಿ ನೆಮ್ಮದಿಯೆನ್ನುವುದು ಬರೀ ಭ್ರಾಂತಿ,
ಕಣ್ಮುಚ್ಚಿ ಕೂತಾಗ ಆಗುವ ಅನುಭವ ಬಾಚಿಕೋ,
ಏನೇ ಬೇಕಿದ್ದರೂ ಕಾಣದವನನ್ನೇ ಕೇಳಿಕೋ.

ಯಾರು ಕಾರಣ -ಅವನೇ ಸಂಕರ್ಷಣ

ಸೂರ್ಯನಲಿ ಬಿಸಿಬೆಳಕ ಇಟ್ಟವನ್ಯಾರು,
ಚಂದ್ರನಿಗೆ ತಂಬೆಳಕ ಕೊಟ್ಟವನ್ಯಾರು,
ಹೊಳೆವ ನಕ್ಷತ್ರಗಳಿಗೆ ಬೆಳಕಿತ್ತವನ್ಯಾರು,
ಅಮಾವಾಸ್ಯೆ ರಾತ್ರಿಗೆ ಕಾರ್ಗತ್ತಲ ಬಿಟ್ಟವನ್ಯಾರು .

ಅರಳುವ ಹೂವಲ್ಲಿ ಚಲುವನ್ನು ಇಟ್ಟವನ್ಯಾರು,
ಕೆರಳಿದ ಹಾವಲ್ಲಿ ರೋಷವನು ಕೊಟ್ಟವನ್ಯಾರು,
ಎಳೆಮಗುವ ಮೊಗದಲ್ಲಿ ನಗುವ ಬಿತ್ತಿದವನ್ಯಾರು,
ಹುಣ್ಣಿಮೆರಾತ್ರಿಯ ಸೊಬಗನ್ನು ಹರಿಸಿದವನ್ಯಾರು.

ಮೊಟ್ಟೆಯಲಿ ಕೋಳಿಯನು ಇಟ್ಟವನ್ಯಾರು,
ಚಿಟ್ಟೆರೆಕ್ಕೆಯಲಿ ಬಣ್ಣಗಳ ಬಿಟ್ಟವನ್ಯಾರು,
ಹೊಟ್ಟೆಯಲಿ ಹಸಿವನ್ನು ಹುಟ್ಟಿಸಿದವನ್ಯಾರು,
ರಟ್ಟೆಯಲಿ ಶಕ್ತಿಯನು ಕಟ್ಟಿದವನ್ಯಾರು.

ಕರ್ಮ ಕಳೆಯಲು ಭೂಮಿಗೆ ಬಿಟ್ಟವನ್ಯಾರು,
ನೋವು ನಲಿವುಗಳಿಂದ ಕರ್ಮ ಸುಡುವವನ್ಯಾರು,
ನೀನಾವುದನೂ ಹೊರದೆ ಅವನ ಮೇಲೇ ಹೇರು,
ಪಾತ್ರ ಪೋಷಣೆ ಮುಗಿಸಿ ಅವನ ಪಾದ ಸೇರು.

(Contributed by Shri Govind Magal)

Sunday, 20 March 2016

Bhava Guccha 51

ಭಾವ ಗುಚ್ಛ  by “ತ್ರಿವೇಣಿ ತನಯ

ಬುದ್ಢಾವತಾರ

ದೇವದ್ವೇಷಿಗಳಾದ ಅಸುರರಿಗೆ ತೋರಿದಮೋಹಾವತಾರ,
ದೇವತೆಗಳಿಗೆ "ಪ್ರಶಾಂತವಿದ್ಯೆ"ಯ ಕೊಟ್ಟ ಮಹಾ ಅವತಾರ,
ಕ್ಷಣಿಕ ಶೂನ್ಯ ನಶ್ವರ ಎಂದು "ಅಶಾಶ್ವತತೆ"ತೋರಿದವತಾರ,
ಪಾಷಂಡಿಗಳು ತಮಗೆ ತೋಚಿದಂತೆ ತಿಳಿದ ಮೋಹಾವತಾರ.

ಕಲ್ಕ್ಯಾವತಾರ

ಕುದುರೆ ಏರಿ ಖಡ್ಗ ಹಿಡಿದು ಕಾಣಿಸಿಕೊಂಡಾವತಾರ,
ಧರ್ಮಗ್ಲಾನಿಯಾಗಿ ಅಧರ್ಮ ಮೆರೆದಾಗ ಬಂದ ಅವತಾರ,
ದುರುಳರನು ದೈತ್ಯರನು ಕರ್ಮಭ್ರಷ್ಟರನು ತರಿದವತಾರ,
ದಾನವರ ತರಿದು ಮಾನವತ್ವ ಧರ್ಮ ಉಳಿಸಿದ ಕಲ್ಕ್ಯಾವತಾರ.

ಹತ್ತಾವತಾರದಲಿ ಮೆರೆದವನೇ,
ಹೊತ್ಹೊತ್ತಿಗೆ ಸುಜನರ ಕಾಯ್ವವನೇ,
ಕತ್ತಲೋಡಿಸಿ ಬೆಳಕ ತಂದವನೇ,
ಇತ್ತಲೂ ನೋಡೊಮ್ಮೆ ಭಕುತ ಬಾಂಧವನೇ.

ಮಂಗಲಮ್ ಜಯ ಮಂಗಲಮ್,
ಮಂಗಲಮ್ ಜಯ ಮಂಗಲಮ್,

ಮಂಗಲಮ್ ಮಧುಸೂದನಗೆ,
ಮಂಗಲಮ್ ಮಹಾ ಮಾಧವಗೆ,
ಮಂಗಲಮ್ ದಶಾವತಾರನಿಗೆ,
ಮಂಗಲಮ್ ಅನಂತಾವತಾರನಿಗೆ.

ಮಂಗಲಮ್ ಜಯ ಮಂಗಲಮ್,
ಮಂಗಲಮ್ ಜಯ ಮಂಗಲಮ್.

(Contributed by Shri Govind Magal)

Saturday, 19 March 2016

Bhava Guccha 50

ಭಾವ ಗುಚ್ಛ  by “ತ್ರಿವೇಣಿ ತನಯ

ಕೃಷ್ಣಾವತಾರ

ದುಷ್ಟಶಿಕ್ಷಣಕೆ ಶಿಷ್ಟರಕ್ಷಣಕೆ ದ್ವಾಪರಾಂತ್ಯದಲಿ ಕೃಷ್ಣಾವತಾರ,
ಕೂಸಿರುವಾಗಲೇ ಮಾಡಿದ ಅನೇಕ ರಾಕ್ಷಸರ ಸಂಹಾರ,
ಒಂದೊಂದು ನಡೆಯಲ್ಲೂ ನಿಲುಕಿಗೇ ಸಿಗದೆ ತೋರಿದ ವ್ಯಾಪಾರ,
ತಾಯಿಗೆ ಬಾಯಲ್ಲೇ ಬ್ರಹ್ಮಾಂಡ ತೋರಿದ ಭಾರೀ ಪೋರ.

ಇಂದ್ರನ ಜಂಭಮುರಿದು ಗೋವರ್ಧನ ಗಿರಿಯನೆತ್ತಿದ ಗೋವಿಂದ,
ಕೊಳಲನೂದುತ ಗೋವಕಾಯುತ ಗೋಪಿಯರಿಗಿತ್ತ ಆನಂದ,
ಹಿಂಸಿಸುವ ಕಂಸಾದಿಗಳ ಸವರಿ ಅನೇಕ ರಕ್ಕಸರ ತರಿದ ಮುರಾರಿ,
ಭಾರತ ಯುದ್ಧದಿ ಸಾರಥ್ಯವಹಿಸಿ ಅರ್ಜುನಗೆ ಗೀತೆ ಕೊಟ್ಟ ಶೌರಿ.

ಸಂಧಾನದಲಿ ಕದನದಲಿ ಸ್ನೇಹದಲಿ ಪ್ರೀತಿಯಲಿ ಎಲ್ಲಿಲ್ಲ ಅವನ ಮಹಿಮೆ,
ಜೀವನದ ಮುತ್ಸದ್ದಿತನವನು ಕ್ಷಣ ಕ್ಷಣಕೂ ತೋರಿದ ಗರಿಮೆ,
ಬದುಕು ಧರ್ಮಗಳ ದರ್ಶನ ಮಾಡಿಸಿದ ಮೊದಲ ಮನೋವಿಜ್ಞಾನಿ,
ತನಗೆ ತಾನೇ ಶಪಥತೊಟ್ಟ ಅವತರಿಸುವೆ ಧರ್ಮಕ್ಕಾದಾಗ ಗ್ಲಾನಿ.

ಭೀಮಾಭಿರಕ್ಷಿತ ಸೈನ್ಯವ ಪೋಷಿಸಿ ಜಯವ ತಂದಿತ್ತೆ,
ಮಧ್ವಾಭಿರಕ್ಷಿತ ಸೈನ್ಯದ ರಕ್ಷಣವೂ ನಿನ್ನದೇ ಮತ್ತೆ,
ನಿನ್ನ ನಂಬಿದವರ ನೀನೆಂದೂ ಕೈ ಬಿಟ್ಟಿಲ್ಲ ಕೃಷ್ಣ,
ಭಕುತ ಜನರ ಎದೆಯಲಿ ನೆಲೆಸಿ ಕಳೆ ಭವದ ಉಷ್ಣ .


(Contributed by Shri Govind Magal)

Significance of Phalguna Masa Shukla Paksha Ekadashi – Aamalaki Ekadashi


As narrated by Sree Krishna Paramathma to Yudhishtira

Dharmaraja,

Phalguna Masa Shukla Paksha Ekadashi is called AAMALAKI Ekadashi..Observance of this Ekadashi ( Complete fasting, without even drinking water) and keeping jagaran under the sacred AMLA tree, will help to get punya equivalent to giving as dhana of one thousand cows.

Once upon a time, King Mandhatha requested Saint Vasishta to explain him regarding the origin of AMLA tree as well as how it attained sacredness .

During PRALAYA, the entire universe was destroyed. MAHA VISHNU while going to his abode to decide the recreation of the universe, spit. The spit was shining like moon and the place where it fell was converted into a GOOSEBERRY tree (AMLA tree) with plenty of branches and leaves filled with AMLAS. Thereafter, MAHAVISHNU created BRAHMA ,  other DEITIES (Devas)and the rest of the populace.

BRAHMA reached the AMLA tree and started thinking about the origin of the tree. He heard an etherial voice (Ashareera vani) which said “ This tree is very much liked by MAHA VISHNU. Mere thinking of this tree will fetch the thinker the punya equivalent to performing a godhana. Touching this tree and eating AMLA will be beneficial. MAHA VISHNU, BRAHMA and RUDRA reside in the  trunk of AMLA tree. All the other DEITIES (Devas) reside in the branches of the tree, VASOOS reside in the leaves, MARUTHS reside in the flowers and PRAJESHWARAS reside in the AMLAS.  This tree is to be worshipped by all Vishnu Bhakthaas.”

The saints present there at that time started wondering about the source of the etherial voice suspecting whether it is a divine voice or someone else’s. The voice informed them that it belongs to MAHA VISHNU. The saints were very happy and started praying MAHA VISHNU. As per the request of the saints, MAHA VISHNU told them about the observance of a sacred , not- too- difficult- to follow and very much beneficial vrata.

MAHA VISHNU said :  Phalguna Masa Shukla Paksha Ekadashi is very sacred. Observance of this Ekadashi ( Complete fasting, without even drinking water) and keeping jagaran under the sacred AMLA tree will help to get  punya equivalent to giving as dhana of one thousand cows. It will help to get rid of the consequences of all the bad deeds performed earlier (“papaas”)

When requested by the saints the procedure for performance of the vrata, MAHA VISHNU said:
1. Pray Bhagavantha early in the morning seeking His help in the successful culmination of the fast.
2. Brush teeth and finish bathing.
3. Don’t converse with people of questionable character & undesirable behaviour
4. Take bath in a river applying mrithika
5. Go to AMLA tree, keep a kalasha with pancharatna. Keep umbrella, footwear and new cloth along with it.
6. Decorate the kalasha with flowers. Keep diyas (Deepas) around the kalasha.
7. In a vessel, spread puffed paddy (ARALU), keep the golden idol of Parashurama ( if affordable) in it and perform pooja
8. Perform arghya pradaana (Like Janmaashtami)
9. In the night, keep jagaran accompanied by vadhya ghosha, music, dance and devotional songs.
10. Perform pradakshina to AMLA tree ( 28 or 108 times)
11. On Dwadashi morning, perform pooja with mangala harathi.
12. Perform pooja to brahmins and give Parashurama idol as dhaana
13. Touch the AMLA tree, perform pradakshina and feed Brahmins.
14. Take food along with family.

By doing as mentioned above, the punya attained will be more than the punya attained by performing all theertha snanas and all yagnas.

MAHA VISHNU disappeared after saying as above.

All the saints performed the vrata and were immensely benefitted.



Courtesy: Sath Katha Sagara – Sadachara Taranga 3 ,– Aithareya Shodhana Prakasha Peetha,  Bangaluru – Translated version from Kannada for the benefit of interested Samaj Bhandhvas- For internal use only)

(Contributed by Shri Ramdas)