Tuesday, 31 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 244 - 248

ತ್ವಮೇವ ಸಾಕ್ಷಾತ್ ಪರಮಸ್ವತನ್ತ್ರಸ್ತ್ವಮೇವ ಸಾಕ್ಷಾದಖಿಲೋರುಶಕ್ತಿಃ ।
ತ್ವಮೇವ ಚಾಗಣ್ಯಗುಣಾರ್ಣ್ಣವಃ ಸದಾ 
ರಮಾವಿರಿಞ್ಚಾದಿಭಿರಪ್ಯಶೇಷೈಃ   ॥೮.೨೪೪॥
ಸಮೇತ್ಯ ಸರ್ವೇsಪಿ ಸದಾ ವದನ್ತೋsಪ್ಯನನ್ತಕಾಲಾಚ್ಚ ನವೈ ಸಮಾಪ್ನುಯುಃ ।
ಗುಣಾಂಸ್ತ್ವದೀಯಾನ್ ಪರಿಪೂರ್ಣ್ಣಸೌಖ್ಯಜ್ಞಾನಾತ್ಮಕಸ್ತ್ವಂ ಹಿ 
ಸದಾsತಿಶುದ್ಧಃ  ॥೮.೨೪೫॥

ನೀನೇ ಸರ್ವೋತ್ತಮ ಸ್ವತಂತ್ರ ಪೂರ್ಣಶಕ್ತಿಯ ಮೂಲಆಗರ,
ಲಕ್ಷ್ಮೀ ಬ್ರಹ್ಮಾದಿಗಳೆಲ್ಲರಿಂದಲೂ ಎಣಿಸಲಾಗದ ಗುಣಸಾಗರ.
ನಿನ್ನ ಶಕ್ತಿ ಹೊರಗಿಂದ ಇನ್ನೊಬ್ಬರಿಂದ ಬರುವುದಲ್ಲ,
ನೀನೇ ಶಕ್ತಿ ಮತ್ತು ಸಕಲ ಗುಣರಾಶಿಯ ಮೂಲ.
ಎಲ್ಲಾ ಮಾಡುತ್ತಿದ್ದರೂ ನಿನ್ನ ಗುಣಗಳ ವರ್ಣನೆ,
ಯಾರೂ ಎಂದೂ ಕಾಣಲಾರರದಕೊಂದು ಕೊನೆ.
ನೀನು ಪರಿಪೂರ್ಣ ಸುಖ ಜ್ಞಾನ ಸ್ವರೂಪ,
ಸದಾ ಶುದ್ಧವಾದ ಆರದ ಜ್ಞಾನಾನಂದ ದೀಪ.

ಯಸ್ತೇ ಕಥಾಸೇವಕ ಏವ ಸರ್ವದಾ ಸದಾರತಿಸ್ತ್ವಯ್ಯಚಲೈಕಭಕ್ತಿಃ ।
ಸ ಜೀವಮಾನೋ ನ ಪರಃ ಕಥಞ್ಚಿತ್ ತಜ್ಜೀವನಂ 
ಮೇsಸ್ತ್ವಧಿಕಂ ಸಮಸ್ತಾತ್  ॥೮.೨೪೬॥

ಯಾರು ನಿನ್ನ ಶಾಸ್ತ್ರ ಶ್ರವಣಾದಿಗಳಲ್ಲಿ ನಿರತ,
ಉತ್ತಮ ಭಕ್ತನಾಗಿ ನಿನ್ನೊಡನೆ ವಿಹಾರದಿ ರತ.
ಅದೇ ನಿಜವಾದ ಜೀವಂತ ಬಾಳು,
ಬೇರೆ ಇನ್ಯಾವುದೂ ಬಾಳಲ್ಲ ಕೇಳು.
ಶಿರದ ಮೇಲಿರಲಿ ನಿನ್ನನುಗ್ರಹದ ಧೂಳು.

ಪ್ರವರ್ದ್ಧತಾಂ ಭಕ್ತಿರಲಂ ಕ್ಷಣೇಕ್ಷಣೇ ತ್ವಯೀಶ ಮೇ ಹ್ರಾಸವಿವರ್ಜ್ಜಿತಾ ಸದಾ ।
ಅನುಗ್ರಹಸ್ತೇ ಮಯಿ ಚೈವಮೇವ ನಿರೌಪಧೌ ತೌ ಮಮ ಸರ್ವಕಾಮಃ   ॥೮.೨೪೭॥

ಪ್ರಭೂ ಎಂದೂ ಕುಂದದಿರಲಿ ನಿನ್ನಲ್ಲಿ ಎನ್ನ ಭಕ್ತಿ,
ಕ್ಷಣ ಕ್ಷಣ ಬೆಳೆಯುತ್ತಾ ಆಗುತ್ತಿರಲದರ ಅಭಿವ್ಯಕ್ತಿ.
ನಿನ್ನಲ್ಲೆನ್ನ ಭಕ್ತಿ ,ನನ್ನಲ್ಲಿ ನಿನ್ನನುಗ್ರಹ ಎರಡು ಬೇಕು,
ನಿರುಪಾಧಿಕವಾದ ಈ ಎರಡು ಪುರುಷಾರ್ಥ ಸಾಕು.

ಇತೀರಿತಸ್ತಸ್ಯ ದದೌ ಸ ತದ್ ದ್ವಯಂ ಪದಂ ವಿಧಾತುಃ ಸಕಲೈಶ್ಚ ಶೋಭನಮ್ ।
ಸಮಾಶ್ಲಿಷಚ್ಚೈನಮಥಾsರ್ದ್ರಯಾ ಧಿಯಾ ಯಥೋಚಿತಂ 
ಸರ್ವಜನಾನಪೂಜಯತ್  ॥೮.೨೪೮॥

ರಾಮ ಕೇಳಿದ ಹನುಮಂತನ ಕೋರಿಕೆ,
ಅನುಗ್ರಹಿಸಿದ ಮಗನ ಎರಡೂ ಬೇಡಿಕೆ.
ಬ್ರಹ್ಮಪದವಿ ಜೊತೆಗಿತ್ತ ಸಕಲ ಜೀವರ ಪುಣ್ಯ ಫಲದ ಭಾಗ,
ಯಥೋಚಿತ ಎಲ್ಲರನ್ನಾದರಿಸಿ ಹನುಮಗಿತ್ತ ಆಲಿಂಗನದ ಯೋಗ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ ಅಷ್ಟಮೋsಧ್ಯಾಯಃ ॥

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯಾನುವಾದ,
ಶ್ರೀರಾಮಚರಿತೆಯೆಂಬ ಎಂಟನೇ ಅಧ್ಯಾಯ,
ಹದಿನೆಂಟರ ಬಂಟಗರ್ಪಿಸಿದ ಧನ್ಯತಾ ಭಾವ.

Monday, 30 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 239 - 243

ಅತಃ ಸ್ವಭಾವಾಜ್ಜಯಿನಾವಹಂ ಚ ವಾಯುಶ್ಚ ವಾಯುರ್ಹನುಮಾನ್ ಸ ಏಷಃ ।
ಅಮುಷ್ಯ ಹೇತೋಸ್ತು ಪುರಾ ಹಿ ವಾಯುನಾ ಶಿವೇನ್ದ್ರಪೂರ್ವಾ ಅಪಿ ಕಾಷ್ಠವತ್ 
ಕೃತಾಃ ॥೮.೨೩೯॥

ಸ್ವಾಭಾವಿಕ ಶಕ್ತಿಯಿಂದ ರಾವಣನ ಗೆದ್ದವರು ಇಬ್ಬರೆ,
ಹನುಮ ರಾಮರಾಗಿ ಬಂದ ಪ್ರಾಣ ನಾರಾಯಣರೆ.
ಹನುಮನ ನಿಮಿತ್ತ ವಾಯು,ಶಿವ ಇಂದ್ರಾದಿಗಳ ಉಸಿರ ನಿಲ್ಲಿಸಿದ್ದ,
ಅಪ್ಪ ಮುಖ್ಯಪ್ರಾಣದೇವ ದೇವತೆಗಳನ್ನೆಲ್ಲ ಕಡ್ಡಿಯಂತೆ ಮಾಡಿದ್ದ.




ಅತೋ ಹನೂಮಾನ್ ಪದಮೇತು ಧಾತುರ್ಮ್ಮದಾಜ್ಞಯಾ ಸೃಷ್ಟ್ಯವನಾದಿ ಕರ್ಮ್ಮ ।
ಮೋಕ್ಷಂ ಚ ಲೋಕಸ್ಯ ಸದೈವ ಕುರ್ವನ್ ಮುಕ್ತಶ್ಚ ಮುಕ್ತಾನ್ ಸುಖಯನ್ 
ಪ್ರವರ್ತ್ತತಾಮ್ ॥೮.೨೪೦॥

ನನ್ನಾಜ್ಞೆಯಂತೆ ಹನುಮ ಹೊಂದಲಿ ಬ್ರಹ್ಮ ಪದವಿ,
ಸೃಷ್ಟಿಸ್ಥಿತ್ಯಾದಿ ಮಾಡುತ್ತ ಕೊಡುತಿರಲಿ ಮೋಕ್ಷದ ಸವಿ.
ಹನುಮ ತಾನೂ ಆಗಿರಲಿ ಮುಕ್ತ,
ಮಾಡಲಿ ಮುಕ್ತರಿಗೆ ಸಂತಸ ಅಭಿವ್ಯಕ್ತ.

ಭೋಗಾಶ್ಚ ಯೇ ಯಾನಿ ಚ ಕರ್ಮ್ಮಜಾತಾನ್ಯನಾದ್ಯನನ್ತಾನಿ ಮಮೇಹ ಸನ್ತಿ ।
ಮದಾಜ್ಞಯಾ ತಾನ್ಯಖಿಲಾನಿ ಸನ್ತಿ ಧಾತುಃ ಪದೇ ತತ್ ಸಹಭೋಗನಾಮ ॥೮.೨೪೧॥

ಲೋಕದಲ್ಲಿ ನನ್ನ ಅಧೀನದಲ್ಲಿರುವ ಅನಾದಿ ಅನಂತವಾದ ಪುಣ್ಯಕರ್ಮ,
ಅವೆಲ್ಲಾ ನನ್ನಾಜ್ಞೆಯಿಂದ ಬ್ರಹ್ಮ ಪದವಿಗೂ ಲಭ್ಯವಾಗಿರುವಂತೆ ಮರ್ಮ
ಹಾಗೇ ಆ ಕರ್ಮಫಲವಾದ ಸುಖಭೋಗ,
ಅವಿಷ್ಟಕ್ಕೂ ಬ್ರಹ್ಮ ಪದವಿಗೂ ಇದೆ ಸಹಭಾಗ.
ಅದಕ್ಕೇ ಕರೆಯುವ ಹೆಸರು  "ಸಹಭೋಗ"

ಏತಾದೃಶಂ ಮೇ ಸಹಭೋಜನಂ ತೇ ಮಯಾ ಪ್ರದತ್ತಂ ಹನುಮನ್ ಸದೈವ ।
ಇತೀರಿತಸ್ತಂ ಹನುಮಾನ್ ಪ್ರಣಮ್ಯ ಜಗಾದ ವಾಕ್ಯಂ ಸ್ಥಿರಭಕ್ತಿನಮ್ರಃ ॥೮.೨೪೨॥

ಹನುಮಂತ, ಈ ತೆರನಾದ ನನ್ನ ಸಹಭೋಗ ಸದಾ ನಿನಗೆ ನೀಡುತ್ತೇನೆ,
ರಾಮನ ಮಾತ ಕೇಳಿದ ಹನುಮ ನಮಿಸಿ ಅಚಲ  ಭಕ್ತಿಯಿಂದ ಹೇಳುತ್ತಾನೆ.




ಕೋ ನ್ವೀಶ ತೇ ಪಾದಸರೋಜಭಾಜಾಂ ಸುದುರ್ಲ್ಲಭೋsರ್ತ್ಥೇಷು ಚತುರ್ಷ್ವಪೀಹ ।
ತಥಾsಪಿ ನಾಹಂ ಪ್ರವೃಣೋಮಿ ಭೂಮನ್ 
ಭವತ್ಪದಾಮ್ಭೋಜನಿಷೇವಣಾದೃತೇ ॥೮.೨೪೩॥

ಪ್ರಭು ನಿನ್ನ ಚರಣ ಕಮಲ ಸೇವಿಪ ಭಕ್ತರಿಗೆಲ್ಲಾ,
ಚತುರ್ವಿಧ ಪುರುಷಾರ್ಥಗಳ್ಯಾವೂ ದುರ್ಲಭವಲ್ಲ.
ಆದರೂ ,ಗುಣಪೂರ್ಣನಾದ ಶ್ರೀರಾಮ,
ನಿನ್ನ ಪಾದಸೇವೆ ಬಿಟ್ಟು ಬೇರಿಲ್ಲೆನಗೆ ಕಾಮ.

Sunday, 29 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 235 - 238

ದತ್ತೋ ವರೋ ನ ಮನುಜಾನ್ ಪ್ರತಿ ವಾನರಾಂಶ್ಚ ಧಾತ್ರಾsಸ್ಯ ತೇನ ವಿಜಿತೋ ಯುಧಿ ವಾಲಿನೈಷಃ ।
ಅಬ್ಜೋದ್ಭವಸ್ಯ ವರಮಾಶ್ವಭಿಭೂಯ ರಕ್ಷೋಜಿಗ್ಯೇ ತ್ವಹಂ ರಣಮುಖೇ ಬಲಿಮಾಹ್ವಯನ್ತಮ್  ॥೮.೨೩೫॥

ಬ್ರಹ್ಮ ರಾವಣನಿಗಿತ್ತಿದ್ದ ಅಜೇಯತ್ವದ ವರ,
ಅಜೇಯತ್ವಕ್ಕೆ ಹೊರತಾದದ್ದು ಕಪಿ ಮತ್ತು ನರ.
ಹೀಗಾಗಿಯೇ ಕಪಿ ವಾಲಿಯಿಂದಾದ ರಾವಣ ಪರಾಜಿತ,
ದತ್ತಾತ್ರಯವರಬಲದ ಕಾರ್ತವೀರ್ಯಾರ್ಜುನನಿಂದಲೂ ಸೋತ.
ಬಲಿಚಕ್ರವರ್ತಿಯನ್ನೇ ಯುದ್ಧಕ್ಕೆ ಕರೆದ ರಾವಣನಾತ,
ನಾನು ಮಾತ್ರ ಬ್ರಹ್ಮವರ ಮೀರಿ ಅವನನ್ನು ಸೋಲಿಸಿದಾತ.

ಬಲೇ  ರ್ದ್ದ್ವಾರಸ್ಥೋsಹಂ ವರಮಸ್ಮೈ ಸಮ್ಪ್ರದಾಯ ಪೂರ್ವಂ ತು ।
ತೇನ ಮಯಾ ರಕ್ಷೋsಸ್ತಂ ಯೋಜನಮಯುತಂ ಪದಾಙ್ಗುಲ್ಯಾ   ॥೮.೨೩೬॥

ಶ್ರೀರಾಮಚಂದ್ರ ಹೇಳುತ್ತಾನೆ ಮುಂದುವರೆದು,
ಹೇಗೆ ತಾನು ರಾವಣನ ಶಿಕ್ಷಿಸಿದ್ದು ಬಲಿಯ ಪೊರೆದು.
ಹಿಂದೆ ಬಲಿಗೆ ವರವಿದ್ದ ಕಾಲ ,
ನಾನೇ ಕಾಯುತ್ತಿದ್ದೆ ಅವನ ಬಾಗಿಲ.
ರಾವಣನ ತಳ್ಳಿದ್ದೆ ನನ್ನ ಕಾಲ ಬೆರಳಿಂದ,
ಹತ್ತುಸಾವಿರ ಯೋಜನ ದೂರಕ್ಕೆಸೆಯಲ್ಪಟ್ಟಿದ್ದ.

ಪುನಶ್ಚ ಯುದ್ಧಾಯ ಸಮಾಹ್ವಯನ್ತಂ ನ್ಯಪಾತಯಂ ರಾವಣಮೇಕಮುಷ್ಟಿನಾ ।
ಮಹಾಬಲೋsಹಂ ಕಪಿಲಾಖ್ಯರೂಪಸ್ತ್ರಿಕೋಟಿರೂಪಃ ಪವನಶ್ಚ ಮೇ ಸುತಃ ॥೮.೨೩೭॥

ಪುನಃ ಯುದ್ಧಕ್ಕೆ ಕರೆಯುತ್ತಿದ್ದ ಆ ರಾವಣ,
ಕೆಡವಿತವನ ನನ್ನ ಕಪಿಲರೂಪಿ ಮುಷ್ಠಿ ತಾಡನ.
ನನ್ನ ಪುತ್ರ ವಾಯುವಿಗಲ್ಲಿ ಮೂರುಕೋಟಿ ರೂಪ,
(ಅವನೊಂದೇ ಮುಷ್ಠಿಯಿಂದ ರಾವಣ ಬಿದ್ದ ಪಾಪ. )

ಆವಾಂ ಸ್ವಶಕ್ತ್ಯಾ ಜಯಿನಾವಿತಿ ಸ್ಮ ಶಿವೋ ವರಾನ್ಮೇsಜಯದೇನಮೇವಮ್ ।
ಜ್ಞಾತ್ವಾ ಸುರಾಜೇಯಮಿಮಂ ಹಿ ವವ್ರೇ ಹರೋ ಜಯೇಯಾಹಮಮುಂ 
ದಶಾನನಮ್  ॥೮.೨೩೮॥

ನಾನು ಹನುಮ ಸ್ವಾಭಾವಿಕ ಶಕ್ತಿಯಿಂದ ರಾವಣನನ್ನು ಗೆದ್ದದ್ದು,
ಸದಾಶಿವ ನನ್ನ ವರಬಲದಿಂದ ಅವನ ಗೆಲ್ಲಲು ಸಾಧ್ಯಾವಾದದ್ದು.
ದೇವತೆಗಳು ರಾವಣನನ್ನು ಜಯಿಸಲು ಸಾಧ್ಯವಿಲ್ಲ ಎಂದು ಶಿವ ತಿಳಿದಿದ್ದ,
ಹಾಗಾಗೇ ಅವನ ಗೆಲ್ಲುವ ವರ ನನ್ನಿಂದ ಪಡೆದು ರಾವಣನ ಸೋಲಿಸಿದ್ದ.
[Contributed by Shri Govind Magal]

Saturday, 28 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 230 - 234

ಪುರೀಂ ಪ್ರವಿಶ್ಯ ಮುನಿಭಿಃ  ಸಾಮ್ರಾಜ್ಯೇ ಚಾಭಿಷೇಚಿತಃ ।
ಯಥೋಚಿತಂ ಚ ಸಮ್ಮಾನ್ಯ ಸರ್ವಾನಾಹೇದಮೀಶ್ವರಃ ॥೮.೨೩೦॥

ಪ್ರಭು ಶ್ರೀರಾಮಚಂದ್ರ ಅಯೋಧ್ಯಾ ನಗರವ ಹೊಕ್ಕ,
ಅಗಸ್ತ್ಯಾದಿ ಮುನಿಗಳಿಂದಾಯಿತು ರಾಜ್ಯಾಭಿಷೇಕ.
ಎಲ್ಲರನ್ನೂ ಯಥೋಚಿತವಾಗಿ ಸನ್ಮಾನಿಸುತ್ತಾನೆ,
ಎಲ್ಲರ ಕುರಿತು ಈ ರೀತಿಯಾಗಿ ಹೇಳುತ್ತಾನೆ.

ಸರ್ವೈರ್ಭವದ್ಭಿಃ ಸುಕೃತಂ ವಿಧಾಯ ದೇಹಂ ಮನೋವಾಕ್ಸಹಿತಂ ಮದೀಯಮ್ ।
ಏತಾವದೇವಾಖಿಲಸದ್ವಿಧೇಯಂ ಯತ್ ಕಾಯವಾಕ್ಚಿತ್ತಭವಂ 
ಮದರ್ಚ್ಚನಮ್ ॥೮.೨೩೧॥

ನೀವೆಲ್ಲಾ ಮಾಡಿದ್ದೀರಿ ನಿಮ್ಮ ತನು ಮನ ಮಾತಿನ ಅರ್ಪಣೆ,
ಉತ್ತಮವದು ; ಅದೇ ಸಜ್ಜನರೆಲ್ಲಾ ಮಾಡಬೇಕಾದ ಸಾಧನೆ.

ಮುಕ್ತಿಪ್ರದಾನಾತ್ ಪ್ರತಿಕರ್ತ್ತೃತಾ ಮೇ ಸರ್ವಸ್ಯ ಚಾಥೋ ಭವತಾಂ ಭವೇತ ।
ಹನೂಮತೋ ನ ಪ್ರತಿಕರ್ತ್ತೃತಾ ಸ್ಯಾತ್ ಸ್ವಭಾವಭಕ್ತಸ್ಯ ನಿರೌಪಧಂ ಮೇ ॥೮.೨೩೨॥

ನಿಮ್ಮಗಳ ಸುಕೃತಕ್ಕೆ ಮೋಕ್ಷವೇ ಸರಿಯಾದ ಪ್ರತಿಫಲ,
ಕಾಮನೆಯಿರದ ಸಹಜಭಕ್ತ ಹನುಮನಿಗದು ಪ್ರತಿಫಲವಲ್ಲ.
ಅವನಿಗೆ ಏನು ಕೊಟ್ಟರೂ ಕಡಿಮೆ,
ಅದವನ ನಿರ್ವ್ಯಾಜ ಭಕ್ತಿಯ ಹಿರಿಮೆ.


ಮದ್ಭಕ್ತೌ ಜ್ಞಾನಪೂರ್ತ್ತಾವನುಪಧಿಕಬಲಪ್ರೋನ್ನತೌ ಸ್ಥೈರ್ಯ್ಯಧೈರ್ಯ್ಯ
ಸ್ವಾಭಾವ್ಯಾದಿಕ್ಯತೇಜಃ ಸುಮತಿದಮಶಮೇಷ್ವಸ್ಯ ತುಲ್ಯೋ ನ ಕಶ್ಚಿತ್ ।
ಶೇಷೋ ರುದ್ರಃ ಸುಪರ್ಣ್ಣೋsಪ್ಯುರುಗುಣಸಮಿತೌ ನೋಸಹರ್ಸ್ರಾಂಶತುಲ್ಯಾ
ಅಸ್ಯೇತ್ಯಸ್ಮಾನ್ಮದೈಶಂ ಪದಮಹಮಮುನಾ ಸಾರ್ದ್ಧಮೇವೋಪಭೋಕ್ಷ್ಯೇ ॥೮.೨೩೩॥

ಭಕ್ತಿ ಜ್ಞಾನ ಬಲ ಸ್ಥೈರ್ಯ ಧೈರ್ಯ ಜೀವೋತ್ತಮತ್ವದ ತೇಜಸ್ಸು,
ಸದ್ಬುದ್ಧಿ ಇಂದ್ರಿಯನಿಗ್ರಹ ನಿಷ್ಠೆ ಸಮರಿಲ್ಲದವನದಂಥ ಓಜಸ್ಸು.
ಶೇಷ ಶಿವ ಗರುಡರೂ ಕೂಡಾ ಆಗಲಾರರು ಇವನ ಸಾವಿರದ ಒಂದಂಶಕ್ಕೂ ಸಮ,
ಅದಕೇ ವಿಶೇಷ ಸನ್ನಿಧಾನಯುಕ್ತ ಸಹಭೋಗ ಪದವಿಯ ಅವನಿಗೀವುದೇ ನನ್ನ ನೇಮ.

ಪೂರ್ವಂ ಜಿಗಾಯ ಭುವನಂ ದಶಕನ್ಧರೋsಸಾವಬ್ಜೋದ್ಭವಸ್ಯ ವರತೋ ನತು ತಂ ಕದಾಚಿತ್ ।
ಕಶ್ಚಿಜ್ಜಿಗಾಯ ಪುರುಹೂತಸುತಃ ಕಪಿತ್ವಾದ್ ವಿಷ್ಣೋರ್ವರಾದಜಯದರ್ಜ್ಜುನ ಏವ 
ಚೈನಮ್ ॥೮.೨೩೪॥

ಈ ಹಿಂದೆ ರಾವಣ ಬ್ರಹ್ಮವರದಿಂದ ಪ್ರಪಂಚವನ್ನೇ ಗೆದ್ದವ,
ಹೀಗಾಗಿ ಅವನಿಗಾಗಲಿಲ್ಲ ಎಂದೂ ಯಾರಿಂದಲೂ ಪರಾಭವ.
ಕಪಿಯಾದ ವಾಲಿ ವಿಷ್ಣುವರಬಲದ ಕಾರ್ತವೀರ್ಯಾರ್ಜುನ,
ಇವರಿಬ್ಬರಿಂದ ಮಾತ್ರ ಉಂಡಿದ್ದ ಪರಾಭವದ ನೋವನ್ನ.
ವರಬೇಡುವಾಗಾಗಿತ್ತು ಕಪಿ ನರರ ಉಪೇಕ್ಷೆ,
ಅದರನುಸಾರವಾಗೇ ಆಗಿತ್ತವನಿಗೆ ತಕ್ಕ ಶಿಕ್ಷೆ.
[Contributed by Shri Govind Magal]

Friday, 27 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 224 - 229

ಅಥೋ ಗಿರೇರಾನಯನಾತ್ ಪರಸ್ತಾದ್ ಯೇ ವಾನರಾ ರಾವಣಬಾಣಪೀಡಿತಾಃ ।
ತಾರಾಪಿತಾ ತಾನ್ ನಿರುಜಶ್ಚಕಾರ ಸುಷೇಣನಾಮಾ ಭಿಷಜಾಂ 
ವರಿಷ್ಠಃ   ॥೮.೨೨೪॥

ಹನುಮಂತ ಗಂಧಮಾದನಗಿರಿ ತಂದು ಸೇರಿಸಿದಮೇಲದರ ತಾಣ ,
ಎಷ್ಟೋ ಕಪಿಗಳ ಮಾಡಿತ್ತು ಅಸ್ವಸ್ಥ ರಾವಣ ಬಿಟ್ಟಂತಹಾ ಬಾಣ.
ವೈದ್ಯರಲ್ಲೇ ವೈದ್ಯನಾದ ತಾರಾಳ ತಂದೆಯಾದ  ಸುಷೇಣ,
ರಾಮಾಜ್ಞೆಯಂತೆ ಮಾಡಿದ ಅವರಿಗೆ ಆರೋಗ್ಯ ಪ್ರದಾನ.

ತದಾ ಮೃತಾನ್ ರಾಘವ ಆನಿನಾಯ ಯಮಕ್ಷಯಾದ್ ದೇವಗಣಾಂಶ್ಚ ಸರ್ವಶಃ ।
ಸಮನ್ವಜಾನಾತ್ ಪಿತರಂ ಚ ತತ್ರ ಸಮಾಗತಂ ಗನ್ತುಮಿಯೇಷ 
ಚಾಥ   ॥೮.೨೨೫॥

ಬಹು ದೊಡ್ಡ ಕಪಿಸಮೂಹವನ್ನೇ ಕೊಂದಿತ್ತು ರಾವಣನ ಬಾಣ,
ಯಮನಮನೆಯಿಂದ ಜೀವಂತ ತರಿಸಿದರವರ ರಾಮ ಆ ಕ್ಷಣ.
ಬಂದಿದ್ದರಲ್ಲಿಗೆ ಬ್ರಹ್ಮಾದಿದೇವತೆಗಳೊಂದಿಗೆ ಮೃತ ಜೀವರೂ ಕೂಡಾ,
ತಂದೆ ದಶರಥ ಇತರರನ್ನೂ ಕಳಿಸುತ್ತಾ; ಅಯೋಧ್ಯೆಗೆ ತೆರಳಲು ಬಯಸಿದ.

ವಿಭೀಷಣೇನಾರ್ಪ್ಪಿತಮಾರುರೋಹ ಸ ಪುಷ್ಪಕಂ ತತ್ಸಹಿತಃ ಸವಾನರಃ ।
ಪುರೀಂ ಜಗಾಮಾsಶು ನಿಜಾಮಯೋಧ್ಯಾಂ ಪುರೋ ಹನೂಮನ್ತಮಥ 
ನ್ನ್ಯಯೋಜಯತ್  ॥೮.೨೨೬॥

ಏರಿದ ರಾಮ ವಿಭೀಷಣನಿಂದ ಕೊಡಲ್ಪಟ್ಟ ಪುಷ್ಪಕ ವಿಮಾನ,
ವಿಭೀಷಣ ಕಪಿಗಳ ಸಮೇತ ಮಾಡಿದ ಅಯೋಧ್ಯಾ ಯಾನ.
ಮುಂಚೆ ಹನುಮನ ಅಯೋಧ್ಯೆಗೆ ಕಳಿಸಿದ ತಿಳಿಸಲು ತನ್ನಾಗಮನ.

ದದರ್ಶ ಚಾಸೌ ಭರತಂ ಹುತಾಶನಂ ಪ್ರವೇಷ್ಟು ಕಾಮಂ ಜಗದೀಶ್ವರಸ್ಯ ।
ಅದರ್ಶನಾತ್ ತಂ ವಿನಿವಾರ್ಯ್ಯ ರಾಮಂ ಸಮಾಗತಂ ಚಾಸ್ಯ ಶಶಂಸ 
ಮಾರುತಿಃ ॥೮.೨೨೭॥

ಇತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಕಾಯುತ್ತಿದ್ದ ಭರತ,
ರಾಮನ ಕಾಣದೇ ಅಗ್ನಿಪ್ರವೇಶಕ್ಕೆ ಅಣಿಯಾಗುತ್ತಿದ್ದ ಆತ.
ರಾಮನಾಗಮನದ ಸುದ್ದಿ ತಿಳಿಸುತ್ತಾ ತಡೆದನವನ ಹನುಮಂತ.

ಶ್ರುತ್ವಾ ಪ್ರಮೋದೋರುಭರಃ ಸ ತೇನ ಸಹೈವ ಪೌರೈಃ ಸಹಿತಃ ಸಮಾತೃಕಃ ।
ಶತ್ರುಘ್ನಯುಕ್ತೋsಭಿಸಮೇತ್ಯ ರಾಘವಂ ನನಾಮ 
ಬಾಷ್ಪಾಕುಲಲೋಚನಾನನಃ ॥೮.೨೨೮ ॥

ಕೇಳಿ ಆನಂದಿಯಾದ ಭರತ ರಾಮಚಂದ್ರ ಬಂದಿರುವ ವಿಚಾರ,
ಕೂಡಿಕೊಂಡು ತಾಯಂದಿರು ತಮ್ಮ ಮೊದಲಾದ ತನ್ನೆಲ್ಲಾ ಪರಿವಾರ,
ರಾಮನ ಎದಿರುಗೊಂಡು ಮಾಡಿದ ಆನಂದಭಾಷ್ಪ ಕೂಡಿದ ನಮಸ್ಕಾರ.

ಉತ್ಥಾಪ್ಯ ತಂ ರಘುಪತಿಃ ಸಸ್ವಜೇ ಪ್ರಣಯಾನ್ವಿತಃ ।
ಶತ್ರುಘ್ನಂ ಚ ತದನ್ಯೇಷು ಪ್ರತಿಪೇದೇ ಯಥಾವಯಃ ॥೮.೨೨೯॥

ಕಾಲಿಗೆ ಬಿದ್ದ ಭರತ ಶತ್ರುಘ್ನರ ಆಲಿಂಗಿಸಿದ ಶ್ರೀರಾಮ,
ಇತರರನ್ನು ವಯಸ್ಸಿಗನುಗುಣವಾಗಿ ಎದುರಾದ ನೇಮ. 

Thursday, 26 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 218 - 223


ಇತೀರಿತೇ ತ್ವಬ್ಜಭವೇನ ಶೂಲೀ ಸಮಾಹ್ವಯದ್ ರಾಘವಮಾಹವಾಯ ।
ವರಂ ಮದೀಯಂ ತ್ವಗಣಯ್ಯ ರಕ್ಷೋ ಹತಂ ತ್ವಯಾ ತೇನ ರಣಾಯ 
ಮೇಹಿ ॥೮.೨೧೮ ॥

ಹೀಗೆ ಬ್ರಹ್ಮನಿಂದ ನಡೆದಿರಲು ಭಗವಂತನ ಗುಣಗಾನ,
ಸದಾಶಿವ ರಾಮನಿಗೀಯುತ್ತಾನೆ ಯುದ್ಧದ ಆಹ್ವಾನ.
ಲೆಕ್ಕಿಸಲಿಲ್ಲ ನೀನು ನನ್ನ ವರ,
ಮಾಡಿದೆ ರಾವಣನ ಸಂಹಾರ.
ಸ್ವೀಕರಿಸು ನನ್ನ ಸಮರಾಹ್ವಾನ,
ಬಾ ನಾವಿಬ್ಬರೂ ಯುದ್ಧ ಮಾಡೋಣ.

ಇತೀರಿತೇsಸ್ತ್ವಿತ್ಯಭಿಧಾಯ ರಾಘವೋ ಧನುಃ ಪ್ರಗೃಹ್ಯಾsಶು ಶರಂ ಚ ಸನ್ದಧೇ ।
ವಿಕೃಷ್ಯಮಾಣೇ ಚಲಿತಾ ವಸುನ್ಧರಾ ಪಪಾತ ರುದ್ರೋsಪಿ 
ಧರಾಪ್ರಕಮ್ಪತಃ ॥೮.೨೧೯॥

ಈ ರೀತಿ ಹೇಳುತ್ತಿರಲು ರುದ್ರ,
ಆಗಲಿ ಎಂದ ಶ್ರೀರಾಮಚಂದ್ರ.
ಶ್ರೀರಾಮ ಬಿಲ್ಲಿಗೆ ಹೂಡಿದ ಬಾಣವನ್ನ,
ನೇಣ ಎಳೆಯಲಾಯಿತು ಭೂಕಂಪನ.
ಆಗ ಆ ಭೂಕಂಪನದಿಂದ,
ರುದ್ರ ಕೂಡಾ ತಾ ಕೆಳಗೆ ಬಿದ್ದ.

ಅಥೋತ್ಥಿತಶ್ಚಾsಸುರಭಾವವರ್ಜ್ಜಿತಃ ಕ್ಷಮಸ್ವ ದೇವೇತಿ ನನಾಮ ಪಾದಯೋಃ ।
ಉವಾಚ ಚ ತ್ವದ್ವಶಗೋsಸ್ಮಿ ಸರ್ವದಾ ಪ್ರಸೀದ ಮೇ ತ್ವದ್ವಿಷಯಂ ಮನಃ 
ಕುರು ॥೮.೨೨೦ ॥

ಬಿದ್ದ ರುದ್ರಗೆ ಕಳೆಯಿತು ಕವಿದಿದ್ದ ಅಸುರ ಭಾವ,
ರಾಮಪಾದಕ್ಕೆರಗಿ ಬೇಡಿದ ನನ್ನ ರಕ್ಷಿಸು ಓ ದೇವ.
ನಾನು ಯಾವಾಗಲೂ ನಿನ್ನ ಅಧೀನ,
ಪ್ರಸನ್ನನಾಗಿ ನಿನ್ನಲ್ಲೇ ನೆಡು ನನ್ನ ಮನ.

ಅಥೇನ್ದ್ರಮುಖ್ಯಾಶ್ಚ ತಮೂಚಿರೇ ಸುರಾಸ್ತ್ವಯಾsವಿತಾಃ ಸ್ಮೋsದ್ಯ ನಿಶಾಚರಾದ್ 
ವಯಮ್ ।
ತಥೈವ ಸರ್ವಾಪದ ಏವ  ನಸ್ತ್ವಂ ಪ್ರಪಾಹಿ ಸರ್ವೇ ಭವದೀಯಕಾಃ ಸ್ಮ ॥೮.೨೨೧॥

ಹೀಗೆ ನಡೆದಿರಲು ಸದಾಶಿವನ ಪ್ರಾರ್ಥನಾ ಅರಿಕೆ,
ಇಂದ್ರಾದಿದೇವತೆಗಳಿಂದ ಶ್ರೀರಾಮನಲ್ಲಿ ಕೋರಿಕೆ.
ನಿನ್ನಿಂದಾಗಿ ಸಿಕ್ಕಿದೆ ರಾವಣ ಹಿಂಸೆಯಿಂದ ಮುಕ್ತಿ,
ಮುಂದಿನಾಪತ್ತುಗಳಿಂದ ರಕ್ಷಿಪುದೂ ನಿನ್ನದೇ ಶಕ್ತಿ.
ಸದಾ ಇರಲಿ ನಿನ್ನನುಗ್ರಹ ಮತ್ತು ರಕ್ಷಣ,
ನಾವೆಲ್ಲಾ ನಿನ್ನ ಭಕ್ತವೃಂದವಾದ ಕಾರಣ.

ಸೀತಾಕೃತಿಂ ತಾಮಥ ತತ್ರ ಚಾsಗತಾಂ ದಿವ್ಯಚ್ಛಲೇನ ಪ್ರಣಿಧಾಯ ಪಾವಕೇ ।
ಕೈಲಾಸತಸ್ತಾಂ ಪುನರೇವ ಚಾsಗತಾಂ 
ಸೀತಾಮಗೃಹ್ಣಾದ್ಧುತಭುಕ್ಸಮರ್ಪ್ಪಿತಾಮ್ ॥೮.೨೨೨॥

ರಾವಣನ ಅಧೀನದಲ್ಲಿದ್ದು ವಾಪಸಾಗಿದ್ದ ಸೀತಾಕೃತಿ,
ರಾಮಾಜ್ಞೆಯಿಂದ ಒಳಗಾದಳು ಅಗ್ನಿಪರೀಕ್ಷೆಯ ಗತಿ.
ಸೀತಾಕೃತಿಗೆ ಮಾಡಿಸಿದರು ಅಗ್ನಿಪ್ರವೇಶ ಪರೀಕ್ಷೆಯ  ಕಾರ್ಯ,
ಅಗ್ನಿ ಕೈಲಾಸದಲ್ಲಿದ್ದ ಸೀತೆಯ ಶ್ರೀರಾಮಗೊಪ್ಪಿಸೋ ವ್ಯಾಪಾರ.




ಜಾನನ್ ಗಿರೀಶಾಲಯಗಾಂ ಸ ಸೀತಾಂ ಸಮಗ್ರಹೀತ್ ಪಾವಕಸಂಪ್ರದತ್ತಾಮ್ ।
ಮುಮೋದ ಸಮ್ಪ್ರಾಪ್ಯ ಚ ತಾಂ ಸ ರಾಮಃ ಸಾ ಚೈವ ದೇವೀ ಭಗವನ್ತಮಾಪ್ಯ ॥೮.೨೨೩॥

ಸೀತೆ ಕೈಲಾಸದಲ್ಲಿದ್ದದ್ದ ತಿಳಿದಿದ್ದ ಶ್ರೀರಾಮಚಂದ್ರ,
ಅಗ್ನಿ ಒಪ್ಪಿಸಿದ ಸೀತೆಯ ಸ್ವೀಕರಿಸಿದ ಗುಣಸಾಂದ್ರ.
ಲೋಕದ ದೃಷ್ಟಿಗೆ ಸೀತಾರಾಮರ ಸಂತಸದ ಸಮಾಗಮ,
ವಿಯೋಗವೇ ಇರದ ಜಗದ್ಮಾತಾಪಿತರ ನಟನಾ ನಿಯಮ.
[Contributed by Shri Govind Magal]