ಅಥೋ ನಿಬದ್ಧ್ಯಾsಶು ಹರೀನ್ ಸಲಕ್ಷ್ಮಣಾನ್ ಜಗಾಮ ರಕ್ಷಃ ಸ್ವಪಿತುಃ ಸಕಾಶಮ್ ।
ನನನ್ದ ಚಾಸೌ ಪಿಶಿತಾಶನೇಶ್ವರಃ ಶಶಂಸ ಪುತ್ರಂ ಚ ಕೃತಾತ್ಮಕಾರ್ಯ್ಯಮ್
॥೮.೧೪೩॥
ಇಂದ್ರಜಿತು
ಕಪಿಗಳನ್ನು ಲಕ್ಷ್ಮಣನನ್ನು ಬಂಧಿಸಿದ,
ಬಳಿಕ ತನ್ನ ತಂದೆ
ರಾವಣನ ಬಳಿಗೆ ತೆರಳಿದ.
ಮಾಂಸ ತಿನ್ನುವವರ
ಒಡೆಯ ಸಂತುಷ್ಟನಾದ,
ರಾವಣ ಕಾರ್ಯ
ಸಾಧಿಸಿದ ಮಗನ ಹೊಗಳಿದ.
ಸ ಪಕ್ಷಿರಾಜೋsಥ ಹರೇರ್ನ್ನಿದೇಶಂ ಸ್ಮರಂಸ್ತ್ವರಾವಾನಿಹ ಚಾsಜಗಾಮ ।
ತತ್ಪಕ್ಷವಾತಸ್ಪರ್ಶೇನ ಕೇವಲಂ ವಿನಷ್ಟ ಏಷಾಂ ಸ ಉರಙ್ಗಬನ್ಧಃ ॥೮.೧೪೪॥
ಶ್ರೀಹರಿಯ
ಆದೇಶವನ್ನು ನೆನೆದು ತ್ವರೆಯಿಂದ ಗರುಡನ ಆಗಮನ,
ಅವನ ರೆಕ್ಕೆಯ ಗಾಳಿ
ಸ್ಪರ್ಶಮಾತ್ರದಿಂದ ನಾಗಪಾಶದ ವಿಮೋಚನ.
ಸ ರಾಮಮಾನಮ್ಯ ಪರಾತ್ಮದೈವತಂ ಯಯೌ ಸುಮಾಲ್ಯಾಭರಣಾನುಲೇಪನಃ ।
ಕಪಿಪ್ರವೀರಾಶ್ಚ ತರೂಞ್ಛೆಲಾಶ್ಚ ಪ್ರಗೃಹ್ಯ ನೇದುರ್ಬಲಿನಃ
ಪ್ರಹೃಷ್ಟಾಃ ॥೮.೧೪೫॥
ಮಾಲೆ, ಆಭರಣ, ಗಂಧಲೇಪನಯುಕ್ತನಾದ
ಗರುಡ,
ತನ್ನ ಪರದೇವತೆಯಾದ
ಶ್ರೀರಾಮನ ನಮಿಸಿ ನಡೆದ.
ಬಲತುಂಬಿಕೊಂಡು
ಹರ್ಷಿತವಾದ ಕಪಿಸೇನೆ,
ಮಾಡಿದರು ಮರ
ಬಂಡೆಗಳ ಹಿಡಿದು ಘರ್ಜನೆ.
ಶ್ರುತ್ವಾ ನಿನಾದಂ ಪ್ಲವಗೇಶ್ವರಾಣಾಂ ಪುನಃ ಸಪುತ್ರೋsತ್ರಸದತ್ರ ರಾವಣಃ ।
ಬನ್ಧಾದಮುಷ್ಮಾತ್ ಪ್ರತಿನಿಸ್ಸೃತಾಸ್ತೇ ಕಿಮತ್ರ ಕಾರ್ಯ್ಯಂ ತ್ವಿತಿ
ಚಿನ್ತಯಾನಃ ॥೮.೧೪೬॥
ಕಪಿಗಳ ಗರ್ಜನೆಯ
ಕೇಳಿದ ಕಾರಣ,
ಭಯಗೊಂಡರು
ಇಂದ್ರಜಿತು ರಾವಣ.
ಆಯಿತು ಉಪಾಯಕಾಣದ ವಾತಾವಾರಣ.
No comments:
Post a Comment
ಗೋ-ಕುಲ Go-Kula