Saturday 7 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 132 - 136


ಯೋಜನಾನಾಂ ತ್ರಿಲಕ್ಷಂ ಹಿ ಕುಮ್ಭಕರ್ಣ್ಣೋವ್ಯವರ್ದ್ಧತ ।
ಪೂರ್ವಂ ಪಶ್ಚಾತ್ ಸಞ್ಚುಕೋಚ ಲಙ್ಕಾಯಾಮುಷಿತುಂ ಸ್ವಯಮ್ ॥೮.೧೩೨॥

ಹಿಂದೆ ಕುಂಭಕರ್ಣ ಬೆಳೆದಿದ್ದ ಮೂರು ಲಕ್ಷ ಯೋಜನ ಪರ್ಯಂತ,
ಲಂಕಾವಾಸಕ್ಕೋಸ್ಕರವಾಗಿ ದೇಹ ಮಾಡಿಕೊಂಡಿದ್ದ ಸಂಕುಚಿತ.




ಸ ತು ಸ್ವಭಾವಮಾಪನ್ನೋ ಮ್ರಿಯಮಾಣೋ ವ್ಯವರ್ದ್ಧತ ।
ತೇನಾಸ್ಮಿನ್ ಪತಿತೇ ತ್ವಬ್ದಿರವರ್ದ್ಧದಧಿಕಂ ತದಾ ॥೮.೧೩೩॥

ಸಾವಿಗೆ ಮುನ್ನ ಕುಂಭಕರ್ಣ ಹೊಂದಿದ ತನ್ನ ಪೂರ್ವ ಸ್ವಭಾವ,
ಹಾಗಾಗಿ ಸತ್ತು ಬಿದ್ದಾಗ ತೋರಿದ ತನ್ನ ಸಹಜ ದೈತ್ಯ ದೇಹ.
ಆ ಕಾರಣವೇ ಅವ ಬೀಳುತ್ತಿದ್ದಂತೆ ಉಕ್ಕೇರಿಸಿತು ಸಮುದ್ರವ.

ಅಥಾಪರೇ ಯೇ ರಜನೀಚರಾಸ್ತದಾ ಕಪಿಪ್ರವೀರೈರ್ನ್ನಿಹತಾಶ್ಚ ಸರ್ವಶಃ ।
ಹತಾವಶಿಷ್ಟಾಸ್ತ್ವರಿತಾಃ ಪ್ರದುದ್ರುವುರ್ಭ್ರಾತುರ್ವಧಂ ಚೋಚುರುಪೇತ್ಯ 
ರಾವಣಮ್ ॥೮.೧೩೪॥

ಈ ರೀತಿ ಕುಂಭಕರ್ಣನ ಮರಣದ ನಂತರ,
ಮಿಕ್ಕ ರಕ್ಕಸರಾದರು ಕಪಿಗಳಿಂದ ಸಂಹಾರ.
ಅಳಿದುಳಿದ ರಕ್ಕಸರೋಡಿದರು ರಾವಣನಲ್ಲಿಗೆ,
ಅವನಿಗರುಹಿದರು ತಮ್ಮ ಕುಂಭಕರ್ಣ ಸತ್ತ ಬಗೆ.

ನ ದುಃಖತಪ್ತೋ ನಿಪಪಾತ ಮೂ ರ್ಚ್ಛಿತೋ ನಿರಾಶಕಶ್ಚಾಭವದಾತ್ಮಜೀವಿತೇ ।
ತಮಾಹ ಪುತ್ರಸ್ತ್ರಿದಶೇಶಶತ್ರುರ್ನ್ನಿಯುಙ್ಕ್ಷ್ವ ಮಾಂ ಶತ್ರುವಧಾಯ ಮಾಚಿರಮ್ ॥೮.೧೩೫॥

ರಾವಣ ತಮ್ಮನ ಸಾವಿನ ವಾರ್ತೆ ಕೇಳಿದ,
ಬಲು ದುಃಖದಿಂದ ಮೂರ್ಛಿತನಾಗಿ ಬಿದ್ದ.
ಬದುಕುವ ಆಸೆಯನ್ನೇ ಕಳೆದುಕೊಂಡ ರಾವಣನ ಕುರಿತು,
ಶತ್ರುವಿನ ವಧೆಗಾಗಿ ನನ್ನ ಕಳಿಸೆಂದ ಮಗ ಇಂದ್ರಜಿತು.





ಮಯಾ ಗೃಹೀತಸ್ತ್ರಿದಶೇಶ್ವರಃ ಪುರಾ ವಿಷೀದಸೇ ಕಿಂ ನರರಾಜಪುತ್ರತಃ ।
ಸ ಏವಮುಕ್ತ್ವಾಪ್ರಜುಹಾವ ಪಾವಕಂ ಶಿವಂ ಸಮಭ್ಯರ್ಚ್ಚ್ಯ ಸಮಾರುಹದ್ 
ರಥಮ್ ॥೮.೧೩೬ ॥

ಹಿಂದೆ ದೇವತೆಗಳ ಒಡೆಯ ಇಂದ್ರನೇ ನನ್ನಿಂದ ಸೆರೆಯಾಗಿದ್ದ,
ಮಾನವರಾಜ ಪುತ್ರ ರಾಮ ; ದುಃಖವೆಲ್ಲಿ ನಮಗೆ ಅವನಿಂದ.
ಇಂದ್ರಜಿತು ಮಾಡಿದ ಅಭಿಚಾರ ಮಂತ್ರಗಳಿಂದ ಅಗ್ನಿಹೋತ್ರ,
ಶಿವನನ್ನು ವಿಶೇಷವಾಗಿ ಆರಾಧಿಸಿ ರಥವನೇರಿದ ರಾವಣಪುತ್ರ.

No comments:

Post a Comment

ಗೋ-ಕುಲ Go-Kula