Friday 27 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 224 - 229

ಅಥೋ ಗಿರೇರಾನಯನಾತ್ ಪರಸ್ತಾದ್ ಯೇ ವಾನರಾ ರಾವಣಬಾಣಪೀಡಿತಾಃ ।
ತಾರಾಪಿತಾ ತಾನ್ ನಿರುಜಶ್ಚಕಾರ ಸುಷೇಣನಾಮಾ ಭಿಷಜಾಂ 
ವರಿಷ್ಠಃ   ॥೮.೨೨೪॥

ಹನುಮಂತ ಗಂಧಮಾದನಗಿರಿ ತಂದು ಸೇರಿಸಿದಮೇಲದರ ತಾಣ ,
ಎಷ್ಟೋ ಕಪಿಗಳ ಮಾಡಿತ್ತು ಅಸ್ವಸ್ಥ ರಾವಣ ಬಿಟ್ಟಂತಹಾ ಬಾಣ.
ವೈದ್ಯರಲ್ಲೇ ವೈದ್ಯನಾದ ತಾರಾಳ ತಂದೆಯಾದ  ಸುಷೇಣ,
ರಾಮಾಜ್ಞೆಯಂತೆ ಮಾಡಿದ ಅವರಿಗೆ ಆರೋಗ್ಯ ಪ್ರದಾನ.

ತದಾ ಮೃತಾನ್ ರಾಘವ ಆನಿನಾಯ ಯಮಕ್ಷಯಾದ್ ದೇವಗಣಾಂಶ್ಚ ಸರ್ವಶಃ ।
ಸಮನ್ವಜಾನಾತ್ ಪಿತರಂ ಚ ತತ್ರ ಸಮಾಗತಂ ಗನ್ತುಮಿಯೇಷ 
ಚಾಥ   ॥೮.೨೨೫॥

ಬಹು ದೊಡ್ಡ ಕಪಿಸಮೂಹವನ್ನೇ ಕೊಂದಿತ್ತು ರಾವಣನ ಬಾಣ,
ಯಮನಮನೆಯಿಂದ ಜೀವಂತ ತರಿಸಿದರವರ ರಾಮ ಆ ಕ್ಷಣ.
ಬಂದಿದ್ದರಲ್ಲಿಗೆ ಬ್ರಹ್ಮಾದಿದೇವತೆಗಳೊಂದಿಗೆ ಮೃತ ಜೀವರೂ ಕೂಡಾ,
ತಂದೆ ದಶರಥ ಇತರರನ್ನೂ ಕಳಿಸುತ್ತಾ; ಅಯೋಧ್ಯೆಗೆ ತೆರಳಲು ಬಯಸಿದ.

ವಿಭೀಷಣೇನಾರ್ಪ್ಪಿತಮಾರುರೋಹ ಸ ಪುಷ್ಪಕಂ ತತ್ಸಹಿತಃ ಸವಾನರಃ ।
ಪುರೀಂ ಜಗಾಮಾsಶು ನಿಜಾಮಯೋಧ್ಯಾಂ ಪುರೋ ಹನೂಮನ್ತಮಥ 
ನ್ನ್ಯಯೋಜಯತ್  ॥೮.೨೨೬॥

ಏರಿದ ರಾಮ ವಿಭೀಷಣನಿಂದ ಕೊಡಲ್ಪಟ್ಟ ಪುಷ್ಪಕ ವಿಮಾನ,
ವಿಭೀಷಣ ಕಪಿಗಳ ಸಮೇತ ಮಾಡಿದ ಅಯೋಧ್ಯಾ ಯಾನ.
ಮುಂಚೆ ಹನುಮನ ಅಯೋಧ್ಯೆಗೆ ಕಳಿಸಿದ ತಿಳಿಸಲು ತನ್ನಾಗಮನ.

ದದರ್ಶ ಚಾಸೌ ಭರತಂ ಹುತಾಶನಂ ಪ್ರವೇಷ್ಟು ಕಾಮಂ ಜಗದೀಶ್ವರಸ್ಯ ।
ಅದರ್ಶನಾತ್ ತಂ ವಿನಿವಾರ್ಯ್ಯ ರಾಮಂ ಸಮಾಗತಂ ಚಾಸ್ಯ ಶಶಂಸ 
ಮಾರುತಿಃ ॥೮.೨೨೭॥

ಇತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಕಾಯುತ್ತಿದ್ದ ಭರತ,
ರಾಮನ ಕಾಣದೇ ಅಗ್ನಿಪ್ರವೇಶಕ್ಕೆ ಅಣಿಯಾಗುತ್ತಿದ್ದ ಆತ.
ರಾಮನಾಗಮನದ ಸುದ್ದಿ ತಿಳಿಸುತ್ತಾ ತಡೆದನವನ ಹನುಮಂತ.

ಶ್ರುತ್ವಾ ಪ್ರಮೋದೋರುಭರಃ ಸ ತೇನ ಸಹೈವ ಪೌರೈಃ ಸಹಿತಃ ಸಮಾತೃಕಃ ।
ಶತ್ರುಘ್ನಯುಕ್ತೋsಭಿಸಮೇತ್ಯ ರಾಘವಂ ನನಾಮ 
ಬಾಷ್ಪಾಕುಲಲೋಚನಾನನಃ ॥೮.೨೨೮ ॥

ಕೇಳಿ ಆನಂದಿಯಾದ ಭರತ ರಾಮಚಂದ್ರ ಬಂದಿರುವ ವಿಚಾರ,
ಕೂಡಿಕೊಂಡು ತಾಯಂದಿರು ತಮ್ಮ ಮೊದಲಾದ ತನ್ನೆಲ್ಲಾ ಪರಿವಾರ,
ರಾಮನ ಎದಿರುಗೊಂಡು ಮಾಡಿದ ಆನಂದಭಾಷ್ಪ ಕೂಡಿದ ನಮಸ್ಕಾರ.

ಉತ್ಥಾಪ್ಯ ತಂ ರಘುಪತಿಃ ಸಸ್ವಜೇ ಪ್ರಣಯಾನ್ವಿತಃ ।
ಶತ್ರುಘ್ನಂ ಚ ತದನ್ಯೇಷು ಪ್ರತಿಪೇದೇ ಯಥಾವಯಃ ॥೮.೨೨೯॥

ಕಾಲಿಗೆ ಬಿದ್ದ ಭರತ ಶತ್ರುಘ್ನರ ಆಲಿಂಗಿಸಿದ ಶ್ರೀರಾಮ,
ಇತರರನ್ನು ವಯಸ್ಸಿಗನುಗುಣವಾಗಿ ಎದುರಾದ ನೇಮ. 

No comments:

Post a Comment

ಗೋ-ಕುಲ Go-Kula