ತದಾ ದಶಾಸ್ಯೋsನ್ತಕದಣ್ಡಕಲ್ಪಾಂ ಮಯಾಯ ದತ್ತಾಂ ಕಮಲೋದ್ಭವೇನ ।
ಮಯಾದ್ ಗೃಹೀತಾಂ ಚ ವಿವಾಹಕಾಲೇ ಪ್ರಗೃಹ್ಯ ಶಕ್ತಿಂ ವಿಸಸರ್ಜ್ಜ
ಲಕ್ಷ್ಮಣೇ ॥೮.೧೯೭॥
ಬ್ರಹ್ಮ
ಮಯಾಸುರಗಿತ್ತಿದ್ದ ಯಮದಂಡದಂಥಾ ಶಕ್ತ್ಯಾಯುಧ,
ಮಯಪುತ್ರಿಯೊಂದಿಗಿನ
ಮದುವೆಯಲ್ಲಿ ರಾವಣ ಅದ ಪಡೆದಿದ್ದ.
ಮಾವ ಮಗಳೊಂದಿಗೆ
ಅಳಿಯ ರಾವಣಗೆ ಉಡುಗೊರೆಯಾಗಿತ್ತಿದ್ದ,
ಅದೇ ಶಕ್ತ್ಯಾಯುಧವ
ರಾವಣ ಲಕ್ಷ್ಮಣನ ಮೇಲೆ ಪ್ರಯೋಗಿಸಿದ.
ತಯಾ ಸ ವೀರಃ
ಸುವಿದಾರಿತೋರಾಃ ಪಪಾತ ಭೂಮೌ ಸುಭೃಶಂ ವಿಮೂರ್ಚ್ಛಿತಃ ।
ಮರುತ್ಸುತಃ ಶೈಲಮತಿಪ್ರಮಾಣಂ ಚಿಕ್ಷೇಪ ರಕ್ಷಃಪತಿವಕ್ಷಸಿ ದ್ರುತಮ್
॥೮.೧೯೮॥
ಶಕ್ತ್ಯಾಯುಧದ
ಹೊಡೆತದಿಂದ ಎದೆಯೊಡದ ಲಕ್ಷ್ಮಣ,
ಬಹಳ ಮೂರ್ಛಿತನಾಗಿ ಧರಾಶಾಯಿಯಾದ ಆ ಕ್ಷಣ.
ಹನುಮನೆಸೆದ
ಹಿರಿಬೆಟ್ಟ ಸೇರಿತು ರಾವಣನೆದೆಯ ತಾಣ.
ತೇನಾತಿಗಾಢಂ ವ್ಯಥಿತೋ ದಶಾನನೋ ಮುಖೈರ್ವಮನ್ ಶೋಣಿತಪೂರಮಾಶು ।
ತದನ್ತರೇಣ ಪ್ರತಿಗೃಹ್ಯ ಲಕ್ಷ್ಮಣಂ ಜಗಾಮ ಶಕ್ತ್ಯಾ ಸಹ ರಾಮಸನ್ನಿಧಿಮ್
॥೮.೧೯೯॥
ರಾವಣನ ಮುಖಗಳಿಂದ
ರಕ್ತಪ್ರವಾಹ,
ರಕ್ತಕಾರಿಕೊಳ್ಳುತ್ತಾ
ರಾವಣನುಂಡ ನೋವ.
ಅದೇ ವೇಳೆಗೆ ವೀರ
ಹನುಮಂತ,
ಲಕ್ಷ್ಮಣನನ್ನು
ಶಕ್ತ್ಯಾಯುಧ ಸಮೇತ,
ಹೊತ್ತು ನಡೆದ
ಶ್ರೀರಾಮಸನ್ನಿಧಿಯತ್ತ.
ಸುಮುದ್ಬಬರ್ಹಾಥ ಚ ತಾಂ ಸ ರಾಘವೋ ದಿದೇಶ ಚ ಪ್ರಾಣವರಾತ್ಮಜಂ ಪುನಃ ।
ಪ್ರಭುಃ ಸಮಾನೇತುಮಥೋ ವರೌಷಧೀಃ ಸ ಚಾsನಿನಾಯಾsಶು ಗಿರಿಂ
ಪುನಸ್ತಮ್ ॥೮.೨೦೦॥
ಶಕ್ತ್ಯಾಯುಧವ
ಕಿತ್ತಿಹಾಕಿದ ಪ್ರಭು ಶ್ರೀರಾಮ,
ಸಂಜೀವಿನಿಗಾಗಿ
ಹನುಮನ ಕಳುಹಿದ ನೇಮ.
ಔಷಧಿಗಾಗಿ
ಕಳುಹಿಸಲ್ಪಟ್ಟ ವೀರ ಹನುಮ,
ಕ್ಷಣದಲ್ಲಿ ಬೆಟ್ಟ
ತಂದಿಟ್ಟನಾ ಶಕ್ತಿಯುಕ್ತಿಧಾಮ.
ತದ್ಗನ್ಧಮಾತ್ರೇಣ ಸಮುತ್ಥಿತೋsಸೌ
ಸೌಮಿತ್ರಿರಾತ್ತೋರುಬಲಶ್ಚ ಪೂರ್ವವತ್ ।
ಶಶಂಸ ಚಾsಶ್ಲಿಷ್ಯ ಮರುತ್ಸುತಂ ಪ್ರಭುಃ ಸ ರಾಘವೋsಗಣ್ಯಗುಣಾರ್ಣ್ಣವಃ
ಸ್ಮಯನ್ ॥೮.೨೦೧॥
ಲಕ್ಷ್ಮಣನ
ಎಚ್ಚರಿಸಿತು ಆ ಬೆಟ್ಟದ ಪರಿಮಳ,
ಮುಂಚಿನಂತೆ
ಲಕ್ಷ್ಮಣ ಪಡೆದ ಮಹಾಬಲ.
ಅಸಂಖ್ಯ
ಗುಣಸಾಗರನಾದ ಪ್ರಭು ಶ್ರೀರಘುನಂದನ,
ನಗುತ್ತಾ ಕೊಂಡಾಡುತ್ತಾ ಹನುಮಂತನಿಗಿತ್ತ ಆಲಿಂಗನ.
No comments:
Post a Comment
ಗೋ-ಕುಲ Go-Kula