Monday 30 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 239 - 243

ಅತಃ ಸ್ವಭಾವಾಜ್ಜಯಿನಾವಹಂ ಚ ವಾಯುಶ್ಚ ವಾಯುರ್ಹನುಮಾನ್ ಸ ಏಷಃ ।
ಅಮುಷ್ಯ ಹೇತೋಸ್ತು ಪುರಾ ಹಿ ವಾಯುನಾ ಶಿವೇನ್ದ್ರಪೂರ್ವಾ ಅಪಿ ಕಾಷ್ಠವತ್ 
ಕೃತಾಃ ॥೮.೨೩೯॥

ಸ್ವಾಭಾವಿಕ ಶಕ್ತಿಯಿಂದ ರಾವಣನ ಗೆದ್ದವರು ಇಬ್ಬರೆ,
ಹನುಮ ರಾಮರಾಗಿ ಬಂದ ಪ್ರಾಣ ನಾರಾಯಣರೆ.
ಹನುಮನ ನಿಮಿತ್ತ ವಾಯು,ಶಿವ ಇಂದ್ರಾದಿಗಳ ಉಸಿರ ನಿಲ್ಲಿಸಿದ್ದ,
ಅಪ್ಪ ಮುಖ್ಯಪ್ರಾಣದೇವ ದೇವತೆಗಳನ್ನೆಲ್ಲ ಕಡ್ಡಿಯಂತೆ ಮಾಡಿದ್ದ.




ಅತೋ ಹನೂಮಾನ್ ಪದಮೇತು ಧಾತುರ್ಮ್ಮದಾಜ್ಞಯಾ ಸೃಷ್ಟ್ಯವನಾದಿ ಕರ್ಮ್ಮ ।
ಮೋಕ್ಷಂ ಚ ಲೋಕಸ್ಯ ಸದೈವ ಕುರ್ವನ್ ಮುಕ್ತಶ್ಚ ಮುಕ್ತಾನ್ ಸುಖಯನ್ 
ಪ್ರವರ್ತ್ತತಾಮ್ ॥೮.೨೪೦॥

ನನ್ನಾಜ್ಞೆಯಂತೆ ಹನುಮ ಹೊಂದಲಿ ಬ್ರಹ್ಮ ಪದವಿ,
ಸೃಷ್ಟಿಸ್ಥಿತ್ಯಾದಿ ಮಾಡುತ್ತ ಕೊಡುತಿರಲಿ ಮೋಕ್ಷದ ಸವಿ.
ಹನುಮ ತಾನೂ ಆಗಿರಲಿ ಮುಕ್ತ,
ಮಾಡಲಿ ಮುಕ್ತರಿಗೆ ಸಂತಸ ಅಭಿವ್ಯಕ್ತ.

ಭೋಗಾಶ್ಚ ಯೇ ಯಾನಿ ಚ ಕರ್ಮ್ಮಜಾತಾನ್ಯನಾದ್ಯನನ್ತಾನಿ ಮಮೇಹ ಸನ್ತಿ ।
ಮದಾಜ್ಞಯಾ ತಾನ್ಯಖಿಲಾನಿ ಸನ್ತಿ ಧಾತುಃ ಪದೇ ತತ್ ಸಹಭೋಗನಾಮ ॥೮.೨೪೧॥

ಲೋಕದಲ್ಲಿ ನನ್ನ ಅಧೀನದಲ್ಲಿರುವ ಅನಾದಿ ಅನಂತವಾದ ಪುಣ್ಯಕರ್ಮ,
ಅವೆಲ್ಲಾ ನನ್ನಾಜ್ಞೆಯಿಂದ ಬ್ರಹ್ಮ ಪದವಿಗೂ ಲಭ್ಯವಾಗಿರುವಂತೆ ಮರ್ಮ
ಹಾಗೇ ಆ ಕರ್ಮಫಲವಾದ ಸುಖಭೋಗ,
ಅವಿಷ್ಟಕ್ಕೂ ಬ್ರಹ್ಮ ಪದವಿಗೂ ಇದೆ ಸಹಭಾಗ.
ಅದಕ್ಕೇ ಕರೆಯುವ ಹೆಸರು  "ಸಹಭೋಗ"

ಏತಾದೃಶಂ ಮೇ ಸಹಭೋಜನಂ ತೇ ಮಯಾ ಪ್ರದತ್ತಂ ಹನುಮನ್ ಸದೈವ ।
ಇತೀರಿತಸ್ತಂ ಹನುಮಾನ್ ಪ್ರಣಮ್ಯ ಜಗಾದ ವಾಕ್ಯಂ ಸ್ಥಿರಭಕ್ತಿನಮ್ರಃ ॥೮.೨೪೨॥

ಹನುಮಂತ, ಈ ತೆರನಾದ ನನ್ನ ಸಹಭೋಗ ಸದಾ ನಿನಗೆ ನೀಡುತ್ತೇನೆ,
ರಾಮನ ಮಾತ ಕೇಳಿದ ಹನುಮ ನಮಿಸಿ ಅಚಲ  ಭಕ್ತಿಯಿಂದ ಹೇಳುತ್ತಾನೆ.




ಕೋ ನ್ವೀಶ ತೇ ಪಾದಸರೋಜಭಾಜಾಂ ಸುದುರ್ಲ್ಲಭೋsರ್ತ್ಥೇಷು ಚತುರ್ಷ್ವಪೀಹ ।
ತಥಾsಪಿ ನಾಹಂ ಪ್ರವೃಣೋಮಿ ಭೂಮನ್ 
ಭವತ್ಪದಾಮ್ಭೋಜನಿಷೇವಣಾದೃತೇ ॥೮.೨೪೩॥

ಪ್ರಭು ನಿನ್ನ ಚರಣ ಕಮಲ ಸೇವಿಪ ಭಕ್ತರಿಗೆಲ್ಲಾ,
ಚತುರ್ವಿಧ ಪುರುಷಾರ್ಥಗಳ್ಯಾವೂ ದುರ್ಲಭವಲ್ಲ.
ಆದರೂ ,ಗುಣಪೂರ್ಣನಾದ ಶ್ರೀರಾಮ,
ನಿನ್ನ ಪಾದಸೇವೆ ಬಿಟ್ಟು ಬೇರಿಲ್ಲೆನಗೆ ಕಾಮ.

No comments:

Post a Comment

ಗೋ-ಕುಲ Go-Kula