Sunday, 8 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 137 - 142

ಸ ಆತ್ತಧನ್ವಾ ಸಶರೋ ರಥೇನ ವಿಯತ್ ಸಮಾರುಹ್ಯ ಯಯಾವದರ್ಶನಮ್ ।
ಸ ನಾಗಪಾಶೈರ್ವರತಃ ಶಿವಸ್ಯ ಬಬನ್ಧ ಸರ್ವಾನ್ ಕಪಿವೀರಸಙ್ಘಾನ್ ॥೮.೧೩೭॥

ಇಂದ್ರಜಿತ್ತು ಧನುಸ್ಸು ಬಾಣಗಳ ಧರಿಸಿದ,
ರಥಸಮೇತ ಆಕಾಶಕ್ಕೇರಿ ಅದೃಶ್ಯನಾದ.
ಶಿವವರಬಲದಿ ಸರ್ಪಾಸ್ತ್ರದಿಂದ ಕಪಿಗಳ ಬಂಧಿಸಿದ.

ಪುರಾsವತಾರಾಯ ಯದಾ ಸ ವಿಷ್ಣು ರ್ದ್ದಿದೇಶ ಸರ್ವಾಂಸ್ತ್ರಿದಶಾಂಸ್ತದೈವ ।
ಮಮಾಪಿ ಸೇವಾ ಭವತೇ ಪ್ರಯೋಜ್ಯೈತ್ಯೇವಂ ಗರುತ್ಮಾನವದದ್ ವೃಷಾಕಪಿಮ್ ॥೮.೧೩೮॥

ಹಿಂದೆ ಶ್ರೀವಿಷ್ಣು ರಾಮಾವತಾರ ಮಾಡುವ ಮುನ್ನ,
ಭುವಿಯಲ್ಲಿ ಅವತರಿಸಲು ದೇವತೆಗಳಿಗಿತ್ತಿದ್ದ ಆಜ್ಞಾ.
ಗರುಡನೂ ಸೇವಾವಕಾಶ ಬೇಡಿದ್ದ ವೃಷಾಕಪಿ ರೂಪವನ್ನ.




ತಮಾಹ ವಿಷ್ಣುರ್ನ್ನ ಭುವಿ ಪ್ರಜಾತಿಮುಪೈಹಿ ಸೇವಾಂ ತವ ಚಾನ್ಯಥಾsಹಮ್ ।
ಆದಾಸ್ಯ ಏವಾತ್ರ ಯಥಾ ಯಶಃ ಸ್ಯಾದ್ ಧರ್ಮ್ಮಶ್ಚ ಕರ್ತ್ತವ್ಯಕೃದೇವ ಚ ಸ್ಯಾಃ ॥೮.೧೩೯॥

ಭುವಿಯಲ್ಲಿ ನಿನ್ನ ಅವತಾರ ಬೇಡವೆಂದ ಶ್ರೀಹರಿ,
ಬೇರೆಯೇ ಉಂಟು ನಿನ್ನ ಸೇವಾ ಸ್ವೀಕರಿಸುವ ಪರಿ.
ಲಭಿಸುತ್ತದದರಿಂದ ನಿನಗೆ ಯಶಸ್ಸು ಪುಣ್ಯಗಳ ಗರಿ.

ವರೇಣ ಶರ್ವಸ್ಯ ಹಿ ರಾವಣಾತ್ಮಜೋ ಯದಾ ನಿಬಧ್ನಾತಿ ಕಪೀನ್ ಸ ಲಕ್ಷ್ಮಣಾನ್ ।
ಉರಙ್ಗಪಾಶೇನ ತದಾ ತ್ವಮೇವ ಸಮೇತ್ಯ ಸರ್ವಾನಪಿ ಮೋಚಯಸ್ವ ॥ ೮.೧೪೦ ॥

ಯಾವಾಗ ಇಂದ್ರಜಿತು ವಿಶೇಷ ರುದ್ರವರಬಲದ ಮುಖೇನ,
ಮಾಡುತ್ತಾನೆ ಲಕ್ಷ್ಮಣಇತರ ಕಪಿಗಳ ಸರ್ಪಾಸ್ತ್ರದಿ ಬಂಧನ,
ನೀ ಬಂದು ಮಾಡಿಸಬೇಕು ಸರ್ಪಬಂಧನದಿಂದ ವಿಮೋಚನ.

ಅಹಂ ಸಮರ್ತ್ಥೋsಪಿ ಸ ಲಕ್ಷ್ಮಣಶ್ಚ ತಥಾ ಹನೂಮಾನ್ ನ ವಿಮೋಚಯಾಮಃ ।
ತವ ಪ್ರಿಯಾರ್ತ್ಥಂ ಗರುಡೈಷ ಏವ ಕೃತಸ್ತವಾsದೇಶ ಇಮಂ ಕುರುಷ್ವ ॥ ೮.೧೪೧ ॥

ಬಿಡಿಸಲು ನಾನು ಲಕ್ಷ್ಮಣ ಹನುಮಂತ ಮೂವರಿದ್ದರೂ ಸಮರ್ಥ,
ಬಿಡಿಸಲ್ಲ ನಾವು ; ನಿನಗೇ ಮೀಸಲಿಟ್ಟ ಕಾರ್ಯವದು ಭಗವದ್ ಸೇವಾರ್ಥ.

ತದೇತದುಕ್ತಂ ಹಿ ಪುರಾssತ್ಮನಾ ಯತ್ ತತೋ ಹಿ ರಾಮೋ ನ ಮುಮೋಚ ಕಞ್ಚನ ।
ನ ಲಕ್ಷ್ಮಣೋ ನೈವ ಚ ಮಾರುತಾತ್ಮಜಃ ಸ ಚೈವ ಜಾನಾತಿ ಹಿ ದೇವಗುಹ್ಯಮ್ ॥೮.೧೪೨ ॥
ಹಿಂದೆ ತನ್ನಿಂದಲೇ ಗರುಡಗೆ ಕೊಡಲ್ಪಟ್ಟ ಆದೇಶ,
ಕಾರಣ ಮೂವರಲ್ಯಾರೂ ಬಿಡಿಸಲಿಲ್ಲ ಸರ್ಪಪಾಶ.
ರಾಮನೊಂದಿಗೆ ಅವರಿಬ್ಬರಿಗೂ ತಿಳಿದಿತ್ತು ದೇವರಹಸ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula