ಪುನಶ್ಚ ಹುತ್ವಾ ಸ ಹುತಾಶಮೇವ ರಥಂ ಸಮಾರು̐ಹ್ಯ ಯಯಾವದರ್ಶನಮ್ ।
ವವರ್ಷ ಚಾಸ್ತ್ರಾಣಿ ಮಹಾನ್ತ್ಯಜಸ್ರಂ ವರಾದುಮೇಶಸ್ಯ ತಥಾsಬ್ಜಜಸ್ಯ
॥೮.೧೪೭॥
ಮತ್ತೆ ಅಗ್ನಿಯಲ್ಲಿ
ಅಭಿಚಾರಹೋಮ ಮಾಡಿದ ಮೇಘನಾದ,
ಹೋಮಬಲದ ದಿವ್ಯ
ರಥವನ್ನೇರಿ ಇಂದ್ರಜಿತು ಅದೃಶ್ಯನಾದ.
ಶಿವಬ್ರಹ್ಮವರಬಲದಿಂದ ಸತತ ಮಹಾಸ್ತ್ರಗಳ ಮಳೆಗರೆದ.
ಪುನಶ್ಚ ತಸ್ಯಾಸ್ತ್ರನಿಪೀಡಿತಾಸ್ತೇ ನಿಪೇತುರುರ್ವ್ಯಾಂ ಕಪಯಃ
ಸಲಕ್ಷ್ಮಣಾಃ ।
ಸ್ಪೃಶನ್ತಿ ನಾಸ್ತ್ರಾಣಿ ದುರನ್ತಶಕ್ತಿಂ ತನುಂ ಸಮೀರಸ್ಯ ಹಿ
ಕಾನಿಚಿತ್ ಕ್ವಚಿತ್ ॥೮.೧೪೮॥
ಇಂದ್ರಜಿತ್ತಿನ
ಅಸ್ತ್ರದಿಂದ ಪೀಡಿತರಾದ ಕಪಿಗಳೂ ಲಕ್ಷ್ಮಣನೂ ನೆಲಕ್ಕೊರಗಿದ ನೋಟ,
ಶಕ್ತಿಭಂಡಾರ
ಹನುಮಂತನ ವಜ್ರ ಶರೀರದೆದುರು ನಡೆಯಲಿಲ್ಲ ಯಾವ ಅಸ್ತ್ರಗಳ ಆಟ.
ವಿಜ್ಞಾತುಕಾಮಃ ಪುರಿ ಸಮ್ಪ್ರವೃತ್ತಿಂ ವಿಭೀಷಣಃ ಪೂರ್ವಗತಸ್ತದಾssಗಾತ್ ।
ದದರ್ಶ ಸರ್ವಾನ್ ಪತಿತಾನ್ ಸ ವಾನರಾನ್ ಮರುತ್ಸುತಂ
ತ್ವೇಕಮನಾಕುಲಂ ಚ
॥೮.೧೪೯॥
ಲಂಕೆಯಲ್ಲಿ ನಡೆಯುವ
ವಿದ್ಯಮಾನ,
ತಿಳಿಯಲಲ್ಲಿಗೆ
ಹೋಗಿದ್ದ ವಿಭೀಷಣ.
ಹಾಗಾಗಿ ಅವನಿಗಾಗಲಿಲ್ಲ
ಬಂಧನದ ಕಾಟ,
ಬಂದವನಿಗಾಯಿತು
ಯುದ್ಧರಂಗದ ನೋಟ.
ಕಪಿಗಳೆಲ್ಲಾ ಕೆಳಗೆ
ಬಿದ್ದಿರುವುದನ್ನು ಕಂಡ,
ಹನುಮಗೇನೂ
ಆಗದಿರುವದನ್ನು ಮನಗಂಡ.
ಸ ತಂ ಸಮಾದಾಯ ಯಯೌ ವಿಧಾತೃಜಂ ವಿಮೂರ್ಚ್ಛಿತಂ ಚೋದಕಸೇಕತಸ್ತಮ್ ।
ಆಶ್ವಾಸ್ಯ ಕಿಂ ಜೀವಸಿ ಹೀತ್ಯುವಾಚ ತಥೇತಿ ಸ ಪ್ರಾಹ ಚ ಮನ್ದವಾಕ್ಯಃ
॥೮.೧೫೦॥
ವಿಭೀಷಣ ನಡೆದ ಹನುಮಂತನೊಂದಿಗೆ
ಮೂರ್ಛಿತನಾದ ಜಾಂಬವಂತನತ್ತ,
ನೀರ ಸಿಂಪಡಿಸಿ
ಕೇಳಿದ 'ಬದುಕಿದ್ದೀಯಾ'- ಕ್ಷೀಣದನಿಯಲಿ
ಹೌದೆಂದ ಜಾಂಬವಂತ.
ಊಚೇ ಪುನರ್ಜ್ಜೀವತಿ ಕಿಂ ಹನೂಮಾನ್ ಜೀವಾಃ ಸ್ಮ ಸರ್ವೇsಪಿ ಹಿ
ಜೀವಮಾನೇ ।
ತಸ್ಮಿನ್ ಹತೇ ನಿಹತಾಶ್ಚೈವ
ಸರ್ವ ಇತೀರಿತೇsಸ್ಮೀತ್ಯವದತ್ ಸ
ಮಾರುತಿಃ ॥೮.೧೫೧॥
ಜಾಂಬವಂತ ಕೇಳಿದ
ಹನುಮಂತ ಬದುಕಿರುವ ತಾನೇ,
ಅವನಿದ್ದರೆ ಮಾತ್ರ
ಮೀಟುವುದು ನಮ್ಮ ಉಸಿರ ವೀಣೆ.
ಅವನಾದರೆ ಹತ ; ನಾವೆಲ್ಲರಿದ್ದರೂ ಮೃತ,
ಹನುಮ ನುಡಿದ 'ನಾನಿದ್ದೇನೆ' ಉಸಿರಿನ
ತಾತ.
No comments:
Post a Comment
ಗೋ-ಕುಲ Go-Kula