ಅನೇನ ದೃಷ್ಟೋsಹಮಿತಿ
ಸ್ಮ ದುಷ್ಟೋ ವಿಜ್ಞಾಯ ಬಾಹ್ವೋರ್ಬಲಮಸ್ಯ ಚೋಗ್ರಮ್ ।
ವಿನಿಶ್ಚಯಂ ದೇವತಮಸ್ಯ ಪಶ್ಯನ್ ಪ್ರದುದ್ರುವೇ ಪ್ರಾಣಪರೀಪ್ಸುರಾಶು
॥೮.೧೬೬ ॥
ಇಂದ್ರಜಿತುವಿಗನಿಸಿತು
ರಾಮ ತನ್ನ ನೋಡಿದ,
ದುಷ್ಟರಕ್ಕಸ ರಾಮನ
ಉಗ್ರಬಾಹುಬಲವ ತಿಳಿದ.
ರಾಮನಿಚ್ಛೆ ಕಂಡು
ಪ್ರಾಣಭಯದಿಂದ ತಾ ಓಡಿದ.
ಹಾಹಾಕೃತೇ ಪ್ರದ್ರುತ ಇನ್ದ್ರಶತ್ರೌ ರಘೂತ್ತಮಃ ಶತ್ರುವಿಭೀಷಣತ್ವಾತ್
।
ವಿಭೀಷಣೇತ್ಯೇವ ಸುರೈರಭಿಷ್ಟುತೋ ವಿಜ್ಞಾನಮಸ್ತ್ರಂ ತ್ವಮುಚತ್
ಸ್ವಸೈನ್ಯೇ ॥೮.೧೬೭॥
ನಿಶಾಚರಾಸ್ತ್ರಂ ಹ್ಯಗಮತ್
ಕ್ಷಣೇನ ರಾಮಾಸ್ತ್ರ ವೀರ್ಯ್ಯಾದ್ಧರಯೋ ನದನ್ತಃ ।
ಉತ್ತಸ್ಥುರುಚ್ಚೋರುಗಿರೀನ್ ಪ್ರಗೃಹ್ಯ ಪ್ರಶಂಸಮಾನಾ
ರಘುವೀರಮುಚ್ಚೈಃ॥೮.೧೬೮॥
ಮಾಡುತ್ತಿರಲು
ಯುದ್ಧಭೂಮಿಯಿಂದ ಇಂದ್ರಜಿತು ಪಲಾಯನ,
ಮೇಲಿಂದ ದೇವತೆಗಳು
ಮಾಡಿದರು ಹಾ ಹಾ ಕಾರದ ಘೋಷಣ.
ದೇವತೆಗಳು ಕರೆದರು
ರಾಮನನ್ನು ವಿಭೀಷಣ,
ಶ್ರೀರಾಮಗ್ಯಾವ
ಶತ್ರುಗಳ ಭಯವಿಲ್ಲದ ಕಾರಣ.
ರಾಮ ಬಿಟ್ಟ
ವಿಜ್ಞಾನಾಸ್ತ್ರದಿಂದ ಮಾಯವಾಯ್ತು ಇಂದ್ರಜಿತುವಿನಸ್ತ್ರ,
ಆ ಅಸ್ತ್ರಬಲದಿ
ಉದ್ದೀಪಿತ ಕಪಿವೃಂದಕ್ಕೆ ಬೆಟ್ಟ ಬಂಡೆಗಳಾದವು ಶಸ್ತ್ರ.
ಸುರೈಶ್ಚ ಪುಷ್ಪಂ ವರ್ಷದ್ಭಿರೀಡಿತಸ್ತಸ್ಥೌ ಧನುಷ್ಪಾಣಿರನನ್ತವೀರ್ಯ್ಯಃ
।
ಸ ರಾವಣಸ್ಯಾಥ ಸುತೋ ನಿಕುಮ್ಭಿಲಾಂ ಪುನಃ ಸಮಾಸಾದ್ಯ ಜುಹಾವ
ಪಾವಕಮ್ ॥೮.೧೬೯॥
ಪಾವಕಮ್ ॥೮.೧೬೯॥
ಪುಷ್ಪವೃಷ್ಟಿಯೊಡನೆ
ದೇವತೆಗಳಿಂದ ಮಾಡಲ್ಪಟ್ಟವನಾದ ಸ್ತೋತ್ರ,
ಬಿಲ್ಲು ಹಿಡಿದು
ನಿಂತ ಅಮಿತ ವೀರ್ಯದ ಸರಿಸಾಟಿಯಿಲ್ಲದ ರಾಮಚಂದ್ರ.
ಇತ್ತ ರಾವಣಪುತ್ರ
ಇಂದ್ರಜಿತು ತಲುಪಿದ ನಿಕುಂಭಿಲಾ,
ಅದು ಅವನ ಅಗ್ನಿಯಲಿ
ಹೋಮ ಮಾಡುವ ರಹಸ್ಯಸ್ಥಳ.
ವಿಭೀಷಣೋsಥಾsಹ
ರಘೂತ್ತಮಂ ಪ್ರಭುಂ ವಿಯೋಜಯಾದ್ಯೈವ ವಧಾಯ ದುರ್ಮ್ಮತೇಃ ।
ಕೃತಾಗ್ನಿಪೂಜೋ ನಹಿ ವಧ್ಯ ಏಷ ವರೋ ವಿಧಾತುಃ ಪ್ರಥಿತೋsಸ್ಯ ತಾದೃಶಃ
॥೮.೧೭೦॥
ಇಂದ್ರಜಿತು
ಅಗ್ನಿಪೂಜೆಗೆ ತೆರಳುವುದ ಕಂಡ ವಿಭೀಷಣ,
ರಾಮಗ್ಹೇಳಿದ
ಇಂದ್ರಜಿತುವಿಗೆ ಈಗಲೇ ವಿಧಿಸು ಮರಣ.
ಒಮ್ಮೆ
ಅಗ್ನಿಪೂಜೆಯಾದಮೇಲೆ ಅವನನ್ನು ಕೊಲ್ಲುವುದು ಕಷ್ಟ,
ಅಂಥಾ
ಬ್ರಹ್ಮವರಬಲವಿದೆ ಅವನಿಗೆ ಎಂಬುವುದು ವಿಶಿಷ್ಟ.
ನ ವೈ ವಧಂ ರಾಮ ಇಯೇಷ ತಸ್ಯ ಫಲಾಯಿತಸ್ಯಾsತ್ಮಸಮೀಕ್ಷಣಾತ್
ಪುನಃ ।
ಸತ್ತ್ವೋಜ್ಝಿತೋsಸಾವಪಿ
ಕೂಟಯೋಧೀ ನ ಮೇ ವಧಾರ್ಹೋsಯಮಿತಿ ಸ್ಮ ಸ
ಪ್ರಭುಃ ॥೮.೧೭೧॥
ಪ್ರಭುಃ ॥೮.೧೭೧॥
ತನ್ನನ್ನು ನೋಡಿದ
ತಕ್ಷಣ ಇಂದ್ರಜಿತು ಮಾಡಿದ್ದ ಪಲಾಯನ,
ಶಕ್ತಿಇಲ್ಲದ ಅವಿತು
ಯುದ್ಧ ಮಾಡುವವನ ನಾ ಕೊಲ್ಲುವುದು ಹೀನ.
ನನ್ನಿಂದ ಇವನು
ವಧೆಗೆ ಅರ್ಹನಲ್ಲ,
ಹಾಗಾಗಿ ರಾಮ ತಾ
ಕೊಲ್ಲಬಯಸಲಿಲ್ಲ.
ಸ ಆದಿದೇಶಾವರಜಂ ಜನಾರ್ದ್ದನೋ ಹನೂಮತಾ ಚೈವ ವಿಭೀಷಣೇನ ।
ಸಹೈವ ಸರ್ವೈರಪಿ ವಾನರೇನ್ದ್ರೈರ್ಯ್ಯಯೌ ಮಹಾತ್ಮಾ ಸ ಚ ತದ್ವಧಾಯ
॥೮.೧೭೨॥
ದುಷ್ಟರನ್ನು
ಮರ್ದಿಸುವ ಜನಾರ್ದನನಾದ ಸರ್ವೇಶ,
ಇಂದ್ರಜಿತುವ
ಕೊಲ್ಲಲು ಲಕ್ಷ್ಮಣನಿಗಿತ್ತ ತಾ ಆದೇಶ.
ಹನುಮ
ವಿಭೀಷಣರೊಡಗೂಡಿ ಲಕ್ಷ್ಮಣ ಹೊರಟ,
ಇಂದ್ರಜಿತುವ
ವಧಿಸಲು ಹಿಂಬಾಲಿಸಿತು ಕಪಿಕೂಟ.
ಸ ಜುಹ್ವತಸ್ತಸ್ಯ ಚಕಾರ ವಿಘ್ನಂ ಪ್ಲವಙ್ಗಮೈಃ ಸೋsಥ
ಯುಯುತ್ಸಯಾ ರಥಮ್ ।
ಸಮಾಸ್ಥಿತಃ ಕಾರ್ಮ್ಮುಕಬಾಣಪಾಣಿಃ ಪ್ರತ್ಯುದ್ಯಯೌ ಲಕ್ಷ್ಮಣಮಾಶು
ಗರ್ಜ್ಜನ್ ॥೮.೧೭೩॥
ಗರ್ಜ್ಜನ್ ॥೮.೧೭೩॥
ಲಕ್ಷ್ಮಣ ,ಹೋಮಿಸುತ್ತಿರುವ ಇಂದ್ರಜಿತುವಿಗೆ ಕಪಿಗಳಿಂದ ವಿಘ್ನ ತಂದ,
ಇಂದ್ರಜಿತು ಯುದ್ಧ ಬಯಸಿ ರಥವೇರಿ ಘರ್ಜಿಸುತ್ತಾ ಲಕ್ಷ್ಮಣನ
ಎದುರುಗೊಂಡ.[Contributed by Shri Govind Magal]
No comments:
Post a Comment
ಗೋ-ಕುಲ Go-Kula