Tuesday 17 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 174 - 178

ಉಭೌ ಚ ತಾವಸ್ತ್ರವಿದಾಂ ವರಿಷ್ಠೌ ಶರೈಃ ಶರೀರಾನ್ತಕರೈಸ್ತತಕ್ಷತುಃ ।
ದಿಶಶ್ಚ  ಸರ್ವಾಃ ಪ್ರದಿಶಃ ಶರೋತ್ತಮೈರ್ವಿಧಾಯ ಶಿಕ್ಷಾಸ್ತ್ರಬಲೈರ್ನ್ನಿರನ್ತರಾಃ ॥೮.೧೭೪ ॥

ಲಕ್ಷ್ಮಣ ಇಂದ್ರಜಿತ್ ಇಬ್ಬರೂ ಶ್ರೇಷ್ಠ ಬಿಲ್ಗಾರರು,
ಹಾಗೆಯೇ ಅಸ್ತ್ರವಿದ್ಯೆ ಬಲ್ಲ ಯುದ್ಧ ನಿಪುಣರು.
ಅಭ್ಯಾಸ ಅಸ್ತ್ರಬಲ ಹೊಂದಿದ ಅವರಿಬ್ಬರಿಂದ,
ನಡೆಯಿತು ಶರೀರ ಕತ್ತರಿಸಬಲ್ಲ ಭೀಕರ ಯುದ್ಧ.
ದಿಕ್ಕು ದಿಕ್ಕುಗಳೂ ತುಂಬಿದವು ಬಾಣಗಳಿಂದ.

ಅಸ್ತ್ರಾಣಿ ತಸ್ಯಾಸ್ತ್ರವರೈಃ ಸ ಲಕ್ಷ್ಮಣೋ ನಿವಾರ್ಯ್ಯ ಶತ್ರೋಶ್ಚಲಕುಣ್ಡಲೋಜ್ಜ್ವಲಮ್ ।
ಶಿರಃ ಶರೇಣಾsಶು ಸಮುನ್ಮಮಾಥ ಸುರೈಃ ಪ್ರಸೂನೈರಥ ಚಾಭಿವೃಷ್ಟಃ ॥೮.೧೭೫॥

ಲಕ್ಷ್ಮಣ ಶ್ರೇಷ್ಠ ಅಸ್ತ್ರಗಳಿಂದ ಇಂದ್ರಜಿತುವಿನಸ್ತ್ರಗಳ ತಡೆದ,
ಒಂದು ಬಾಣದಿಂದ ಕುಂಡಲಸಮೇತವಾದ ಅವನ ತಲೆ ತರಿದ.
ಹೀಗಾಯಿತು ದುಷ್ಟರಕ್ಕಸ ಇಂದ್ರಜಿತುವಿನ ಸಂಹಾರ,
ದೇವತೆಗಳು ಸುರಿಸಿದರು ಲಕ್ಷ್ಮಣನ ಮೇಲೆ ಪುಷ್ಪಧಾರ.

ನಿಪಾತಿತೇsಸ್ಮಿನ್ ನಿತರಾಂ ನಿಶಾಚರಾನ್ ಪ್ಲವಙ್ಗಮಾ ಜಘ್ನುರನೇಕಕೋಟಿಶಃ ।
ಹತಾವಶಿಷ್ಟಾಸ್ತು ದಶಾನನಾಯ ಶಶಂಸುರತ್ಯಾಪ್ತಸುತಪ್ರಣಾಶಮ್ ॥೮.೧೭೬॥

ಆಗುತ್ತಿದ್ದಂತೆ ಮಾಯಾವಿ ಇಂದ್ರಜಿತುವಿನ ಮರಣ,
ಕಪಿಗಳು ಮಾಡಿದರು  ಕೋಟಿ ದೈತ್ಯರ ಹನನ.
ಅಳಿದುಳಿದ ದೈತ್ಯರೋಡಿದರು ರಾವಣನ ಹತ್ತಿರ,
ಮಾಡಿದರು ಇಂದ್ರಜಿತುವಿನ ಸಾವಿನ ಸುದ್ದಿ ಬಿತ್ತರ.

ಸ ತನ್ನಿಶಮ್ಯಾಪ್ರಿಯಮುಗ್ರರೂಪಂ ಭೃಷಂ ವಿನಿಶ್ವಸ್ಯ ವಿಲಪ್ಯ ದುಃಖಾತ್ ।
ಸಂಸ್ಥಾಪಯಾಮಾಸ ಮತಿಂ ಪುನಶ್ಚ ಮರಿಷ್ಯ ಇತ್ಯೇವ ವಿನಿಶ್ಚಿತಾರ್ತ್ಥಃ ॥೮.೧೭೭॥

ಅಪ್ರಿಯ ವೇದನೆಯ ಸಂಗತಿಯಿಂದ ರಾವಣನಾದ ದುಃಖತಪ್ತ,
ನಿಟ್ಟುಸಿರಿನೊಡನೆ ಅಳುತ್ತಾ ಅಂದುಕೊಂಡ "ನನ್ನ ಸಾವೂ ಖಚಿತ".

ಮರಣಾಭಿಮುಖಃ ಶೀಘ್ರಂ ರಾವಣೋ ರಣಕರ್ಮ್ಮಣೇ ।
ಸಜ್ಜೀಭವನ್ನನ್ತರೈವ ದಿದೇಶ ಬಲಮೂರ್ಜ್ಜಿತಮ್ ॥೮.೧೭೮॥

ಸಾವಿಗೆ ಅಭಿಮುಖನಾದ ರಾವಣ ಯುದ್ಧಕ್ಕಾಗಿ ಸಜ್ಜಾಗುತ್ತಾ,
ಒಳಗಿದ್ದ ವಿಶೇಷ ಸೈನ್ಯಬಲಕೆ ಹೊರಡಲು ಆದೇಶವಿತ್ತ.

No comments:

Post a Comment

ಗೋ-ಕುಲ Go-Kula