Tuesday, 3 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 105 -110


ಪ್ರಾಕಾರಮಾಲಙ್ಘ್ಯ    ಪಞ್ಚಯೋಜನಂ ಯದಾ ಯಯೌ ಶೂಲವರಾಯುಧೋ ರಣಮ್ ।
ಕಪಿಪ್ರವೀರಾ ಅಖಿಲಾಃ ಪ್ರದುದ್ರುವುರ್ಭಯಾದತೀತ್ಯೈವ ಚ ಸೇತುಮಾಶು ॥೮.೧೦೫॥

ದೈತ್ಯ ಕುಂಭಕರ್ಣ ಹಿಡಿದ ಶ್ರೇಷ್ಠ ಶೂಲಾಯುಧ,
ಐದುಯೋಜನ ಎತ್ತರದ ಕೋಟೆಗೋಡೆ ದಾಟಿದ.
ನಿರಾಯಾಸವಾಗಿ ರಣರಂಗಕ್ಕೆ ಕುಂಭಕರ್ಣನ ಆಗಮನ,
ಭಯಗ್ರಸ್ತ ಕಪಿಗಳು ಮಾಡಿದರು ಸೇತು ದಾಟಿ ಪಲಾಯನ.

ಶತವಲಿಪನಸಾಖ್ಯೌ ತತ್ರ ವಸ್ವಂಶಭೂತೌ ಪವನಗಣವರಾಂಶೌ ಶ್ವೇತಸಮ್ಪಾತಿನೌ ಚ ।
ನಿರ್ಋತಿತನುಮಥೋಗ್ರಂ ದುರ್ಮ್ಮುಖಂ ಕೇಸರೀತಿ ಪ್ರವರಮಥ ಮರುತ್ಸು ಪ್ರಾಸ್ಯದೇತಾನ್ ಮುಖೇ ಸಃ ॥೮.೧೦೬॥

ವಸುಗಳ ಅಂಶಭೂತರಾದ ಶತವಲಿ-ಪನಸರನ್ನು,
ಮರುದ್ಗಣ ಅಂಶಭೂತ ಶ್ವೇತ ಸಂಪಾತಿಗಳನ್ನು,
ನಿಋತಿಯ ಅವತಾರನಾದ ಉಗ್ರ ದುರ್ಮುಖನನ್ನು,
ಮರುತ್ತುಗಳಲ್ಲಿ ಹಿರಿಯನಾದ ವೀರ ಕೇಸರೀಯನ್ನು,
ಕುಂಭಕರ್ಣ ಬಾಯೊಳಗೆ ಹಾಕಿಕೊಂಡು ನುಗ್ಗಿದನು.

  ರಜನಿಚರವರೋsಸೌ ಕುಮ್ಭಕರ್ಣ್ಣಃ ಪ್ರತಾಪೀ ಕುಮುದಮಪಿ ಜಯನ್ತಂ ಪಾಣಿನಾ ಸಮ್ಪಿಪೇಷ ।
  ನಳಮಥ ಚ ಗಜಾದೀನ್ ಪಞ್ಚ ನೀಲಂ ಸತಾರಂ ಗಿರಿವರತರುಹಸ್ತಾನ್ ಮುಷ್ಟಿನಾsಪಾತಯಚ್ಛ ॥೮.೧೦೭॥

ಪ್ರತಾಪಿ ರಕ್ಕಸ ಆ ಕುಂಭಕರ್ಣನ ಕೈಯಲ್ಲಿ,
ಕುಮುದ ಜಯಂತ ಕಪಿಗಳು ಪುಡಿಯಾದರಲ್ಲಿ.
ನಳ ಗಜ ಮೊದಲಾದ ಶಕ್ತಿಯುತರಾದ ಐವರು,
ನೀಲ ತಾರ ಬೆಟ್ಟ ಮರಗಳ ಹಿಡಿದವರಾಗಿದ್ದರೂ,
ಮಹಾರಕ್ಕಸನ ಮುಷ್ಠಿಪ್ರಹಾರಕ್ಕೆ ಕೆಳಗೆ ಬಿದ್ದರು.

ಅಥಾಙ್ಗದಶ್ಚ ಜಾಮ್ಬವಾನಿನಾತ್ಮಜಶ್ಚ ವಾನರೈಃ ।
ನಿಜಘ್ನಿರೇ ನಿಶಾಚರಂ ಸವೃಕ್ಷಶೈಲಸಾನುಭಿಃ ॥೮.೧೦೮॥

ಆನಂತರ ಜಾಂಬವಂತ ಸೂರ್ಯಪುತ್ರ ಸುಗ್ರೀವ ಅಂಗದ,
ಇತರ ಕಪಿಗಳಿಂದ ಕೂಡಿದವರಿಗೆ ಮರಬಂಡೆಗಳಾದವು ಆಯುಧ.
ಎಲ್ಲ ಸೇರಿ ಕುಂಭಕರ್ಣಗೆ ಕೊಟ್ಟರು ಹೊಡೆತದ ಬಾಧ.

ವಿಚೂರ್ಣ್ಣಿತಾಶ್ಚ ಪರ್ವತಾಸ್ತನೌ ನಿಶಾಚರಸ್ಯತೇ ।
ಬಭೂವ ಕಾಚನ ವ್ಯಥಾ ನಚಾಸ್ಯ ಬಾಹುಷಾಳಿನಃ ॥೮.೧೦೯॥

ಕುಂಭಕರ್ಣನೆಡೆಗೆ ಎಸೆದ ಪರ್ವತಗಳೆಲ್ಲಾ ಪುಡಿ ಪುಡಿಯಾದವು ವ್ಯರ್ಥ,
ಯಾವ ವ್ಯಥೆಯಾಗದ ಬಲವಂತ ಬಾಹುಶಾಲಿಗಿತ್ತು ಮಣಿಸುವ ಸಾಮರ್ಥ್ಯ.

ಅಥಾಪರಂ ಮಹಾಚಲಂ ಪ್ರಗೃಹ್ಯ ಭಾಸ್ಕರಾತ್ಮಜಃ ।
ಮುಮೋಚ ರಾಕ್ಷಸೇsಥ ತಂ ಪ್ರಗೃಹ್ಯ ತಂ ಜಘಾನ ಸಃ ॥೮.೧೧೦॥

ಸೂರ್ಯಪುತ್ರ  ಸುಗ್ರೀವನಿಂದ ರಕ್ಕಸನ ಮೇಲೆ ಇನ್ನೊಂದು ಬೆಟ್ಟದ ಎಸೆತ,
ಕುಂಭಕರ್ಣ ಕೊಟ್ಟ ಅದೇ ಬೆಟ್ಟದಿಂದ ಹಿಂತಿರುಗಿ ಸುಗ್ರೀವಗೇ ಹೊಡೆತ.

No comments:

Post a Comment

ಗೋ-ಕುಲ Go-Kula