Thursday, 19 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 183 - 190

ಪ್ರಗೃಹ್ಯ ರಾಮೋsಥ ಧನುಃ ಶರಾಂಶ್ಚ ಸಮನ್ತತಸ್ತಾನವಧೀಚ್ಛರೌಘೈಃ ।
ಸ ಏವ ಸರ್ವತ್ರ ಚ ದೃಶ್ಯಮಾನೋ ವಿದಿಕ್ಷು ದಿಕ್ಷು ಪ್ರಜಹಾರ ಸರ್ವಶಃ ॥೮.೧೮೩॥

ಶ್ರೀರಾಮ ಬಿಲ್ಲು ಬಾಣಗಳ ಹಿಡಿದು ಮಾಡಿದ ರಾಕ್ಷಸ ಸಂಹಾರ,
ಎಲ್ಲೆಡೆ ಅವನೇ ಅವನಾಗಿ ಮಾಡಿದ ದಿಕ್ಕುದಿಕ್ಕುಗಳಲಿ ಪ್ರಹಾರ.
ಎಲ್ಲೆಲ್ಲೂ ತಾನೇ ತಾನಾದ ಶ್ರೀರಾಮ,
ಮಾಡಿದ ರಕ್ಕಸರ  ಮಾರಣ ಹೋಮ.

ಕ್ಷಣೇನ ಸರ್ವಾಂಶ್ಚ ನಿಹತ್ಯ ರಾಘವಃ ಪ್ಲವಙ್ಗಮಾನಾಮೃಷಭೈಃ ಸಪೂಜಿತಃ ।
ಅಭೀಷ್ಟುತಃ ಸರ್ವಸುರೋತ್ತಮೈರ್ಮ್ಮುದಾ ಭೃಶಂ ಪ್ರಸೂನೋತ್ಕರವರ್ಷಿಭಿಃ 
ಪ್ರಭುಃ ॥೮.೧೮೪॥

ಕ್ಷಣದಲ್ಲಿ ಶ್ರೀರಾಮನಿಂದಾದರು ಎಲ್ಲಾ ರಕ್ಕಸರೂ ಹತ,
ಕಪಿಶ್ರೇಷ್ಠರಿಂದ ಶ್ರೀರಾಮಚಂದ್ರ ಆಗುತ್ತಾನೆ ಪೂಜಿತ.
ದೇವತೆಗಳು ಕರೆದ ಹೂಮಳೆಯಲಿ ಮಿಂದ ಜಗದ ತಾತ.

ಅಥಾsಯಯೌ ಸರ್ವನಿಶಾಚರೇಶ್ವರೋ ಹತಾವಶಿಷ್ಟೇನ ಬಲೇನ ಸಂವೃತಃ ।
ವಿಮಾನಮಾರುಹ್ಯ ಚ ಪುಷ್ಪಕಂ ತ್ವರನ್ ಶರೀರನಾಶಾಯ 
ಮಹಾಯುಧೋದ್ಧತಃ ॥೮.೧೮೫॥

ಎಲ್ಲಾ ರಾಕ್ಷಸರ ಅಧಿಪತಿಯಾದ ರಾಜ ರಾವಣನು,
ಉಳಿದಸೈನ್ಯದೊಂದಿಗೆ ಹಿರಿಆಯುಧಗಳ ಹಿಡಿದ ತಾನು.
ಏರಿ ಹೊರಟ ರಾವಣ  ಪುಷ್ಪಕ ವಿಮಾನವ,
ಧಾವಿಸಿ ಬಂದ ಮಾಡಿಕೊಳ್ಳಲು ದೇಹನಾಶವ.




ವಿರೂಪನೇತ್ರೋsಥ ಚ ಯೂಪನೇತ್ರಸ್ತಥಾ ಮಹಾಪಾರ್ಶವಮಹೋದರೌ ಚ ।
ಯಯುಸ್ತಮಾವೃತ್ಯ ಸಹೈವ ಮನ್ತ್ರಿಣೋ ಮೃತಿಂ ಪುರೋಧಾಯ ರಣಾಯ 
ಯಾನ್ತಮ್ ॥೮.೧೮೬॥

ಮರಣ ನಿಶ್ಚಿತವೆಂದುಕೊಂಡೇ ಯುದ್ಧಕ್ಕೆ ಹೊರಟ ಮಹಾ  ರಕ್ಕಸನಾದ  ರಾವಣ,
ಅನುಸರಿಸಿತು ವಿರೂಪನೇತ್ರ, ಯೂಪನೇತ್ರ, ಮಹಾಪಾರ್ಶ, ಮಹೋದರ ಮಂತ್ರಿಗಣ.

ಅಥಾಸ್ಯ ಸೈನ್ಯಾನಿ ನಿಜಘ್ನುರೋಜಸಾ ಸಮನ್ತತಃ ಶೈಲಶಿಲಾಭಿವೃಷ್ಟಿಭಿಃ ।
ಪ್ಲಙ್ಗಮಾಸ್ತಾನಭಿವೀಕ್ಷ್ಯ ವೀರ್ಯ್ಯವಾನ್ ಸಸಾರ ವೇಗೇನ ಮಹೋದರೋ ರುಷಾ ॥೮.೧೮೭॥

ಕಪಿಗಳಿಗೆ ಬೆಟ್ಟ ಬಂಡೆಗಳಾದವು ಆಯುಧ,
ನಡೆಯಿತು ಅಳಿದುಳಿದ ರಾವಣಸೈನ್ಯದ ವಧ.
ಕೋಪದಿಂದ  ಮಹೋದರ ವೇಗದಿ ಧಾವಿಸಿದ.

ವೀಕ್ಷ್ಯಾತಿಕಾಯಂ ತಮಭಿದ್ರವನ್ತಂ ಸ ಕುಮ್ಭಕ ರ್ಣ್ಣೋsಯಮಿತಿ ಬ್ರುವನ್ತಃ ।
ಪ್ರದುದ್ರುವುರ್ವಾನರವೀರಸಙ್ಘಾಸ್ತಮಾಸಸಾದಾsಶು ಸುತೋsಥ ವಾಲಿನಃ ॥೮.೧೮೮॥

ದೈತ್ಯ ದೇಹದ ಮಹೋದರ ಬರುವ ನೋಟ,
ಕುಂಭಕರ್ಣನೆಂದು ಭಾವಿಸಿದ ಕಪಿಗಳ ಓಟ.
ವಾಲಿಸುತ ಅಂಗದ ಅವನನೆದುರಿಸಿದ ಆಟ.

ವದನ್ ಸ ತಿಷ್ಠಧ್ವಮಿತಿ ಸ್ಮ ವೀರೋ ವಿಭೀಷಿಕಾಮಾತ್ರಮಿದಂ ನ ಯಾತ ।
ಇತೀರಯನ್ನಗ್ರತ ಏಷ ಪುಪ್ಲುವೇ  ಮಹೋದರಸ್ಯೇನ್ದ್ರಸುತಾತ್ಮಜೋ ಬಲೀ ॥೮.೧೮೯॥

ಇದು ಕೇವಲ ಬಿದಿರಿನ ಬೊಂಬೆ ತರ,
ಶಕ್ತಿ ಇರದ ಇದಕೆ ಹೆದರಿ ಓಡದಿರಿ ಈ ಥರ.
ಎನ್ನುತ್ತಾ ಧೈರ್ಯ ತುಂಬಿದ ಅಂಗದ,
ಜಿಗಿದು ಬಂದು ಮಹೋದರನೆದುರಾದ.

ಅಥೋ ಶರಾನಾಶು ವಿಮುಞ್ಚಮಾನಂ ಶಿರಃ ಪರಾಮೃಶ್ಯ ನಿಪಾತ್ಯ ಭೂತಳೇ ।
ಮಮರ್ದ್ದ ಪದ್ಭ್ಯಾಮಭವದ್ ಗತಾಸುರ್ಮ್ಮಹೋದರೋ ವಾಲಿಸುತೇನ 
ಚೂರ್ಣ್ಣಿತಃ ॥೮.೧೯೦॥

ಮಹೋದರ ಬಾಣಗಳ ಬಿಡುತ್ತಿದ್ದ,
ಅಂಗದ ಅವನ ತಲೆ ಹಿಡಿದು ಕೆಡವಿದ.
ಕಾಲಿಂದ ತುಳಿಯುತ್ತಾ ಅವನ ಪುಡಿಗೈದ,
ಅಂಗದನಿಂದ ಮಹೋದರ ಹೀಗೆ ಮಡಿದ.


No comments:

Post a Comment

ಗೋ-ಕುಲ Go-Kula