Friday, 20 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 191 - 196

ಅಥೋ ಮಹಾಪಾರ್ಶ್ವ ಉಪಾಜಗಾಮ ಪ್ರವರ್ಷಮಾಣೋsಸ್ಯ ಶರಾಮ್ಬುಧಾರಾಃ ।
ಪ್ರಸ̐ಹ್ಯ   ಚಾsಚ್ಛಿದ್ಯ ಧನುಃ ಕರಸ್ಥಂ ಸಮಾದದೇ ಖಡ್ಗಮಮುಷ್ಯ ಸೋsಙ್ಗದಃ ॥೮.೧೯೧॥

ನಿಂತಮೇಲೆ ಮಹೋದರನ ಉಸಿರ ನಿನಾದ,
ಮಹಾಪಾರ್ಶ್ವ ಬಾಣಗಳ ಮಳೆಗರೆಯುತ್ತಾ ಬಂದ.
ಅವನ ಬಿಲ್ಲನ್ನು ಕಿತ್ತುಕೊಂಡು ಮುರಿದ ಅಂಗದ,
ಹಾಗೇ ಅವನ ಖಡ್ಗವನ್ನ ಸೆಳೆದುಕೊಂಡವನಾದ.




ನಿಗೃಹ್ಯ  ಕೇಶೇಷು ನಿಪಾತ್ಯ ಭೂತಳೇ  ಚಕರ್ತ್ತ ವಾಮಾಂಸತ ಓದರಂ ಪರಮ್ ।
ಯಥೋಪವೀತಂ ಸ ತಥಾ ದ್ವಿಧಾಕೃತೋ ಮಮಾರ ಮನ್ತ್ರೀ ರಜನೀಚರೇಶಿತುಃ ॥೮.೧೯೨ ॥

ಅಂಗದ ಮಹಾಪಾರ್ಶ್ವನನ್ನು ತಲೆಗೂದಲುಗಳಲ್ಲಿ ಹಿಡಿದ,
ಕೆಡವಿ ಎಡಹೆಗಲಿಂದ ಹೊಟ್ಟೆಯವರೆಗೆ ಖಡ್ಗದಿಂದ ಸೀಳಿದ.
ಹೀಗೆ ಎರಡು ಹೋಳಾಗಿ ರಾವಣನ ಆ ಮಂತ್ರಿ ತಾನು ಮಡಿದ.

ಅಥೈನಮಾಜಗ್ಮತುರುದ್ಯತಾಯುಧೌ ವಿರೂಪನೇತ್ರೋsಪ್ಯಥ ಯೂಪನೇತ್ರಃ ।
ಯಥೈವ ಮೇಘೌ ದಿವಿ ತಿಗ್ಮರಶ್ಮಿಂ ತಥಾ ಸಮಾಚ್ಛಾದಯತಾಂ ಶರೌಘೈಃ ॥೮.೧೯೩ ॥

ಬಳಿಕ ಅಂಗದನಲ್ಲಿಗೆ ವಿರೂಪನೇತ್ರ ಯೂಪನೇತ್ರರ ಆಗಮನ,
ಬಾಣಮೋಡಗಳ ಸುರಿಸಿ ಮಾಡಿದರು ಅಂಗದನ ಆಚ್ಛಾದನ.

ತಾಭ್ಯಾಂ ಸ ಬದ್ಧಃ ಶರಪಞ್ಜರೇಣ ವಿಚೇಷ್ಟಿತುಂ ನಾಶಕದತ್ರ ವೀರಃ ।
ಹರೀಶ್ವರಃ ಶೈಲಮತಿಪ್ರಮಾಣಮುತ್ಪಾಟ್ಯ ಚಿಕ್ಷೇಪ ತಯೋಃ ಶರೀರೇ ॥೮.೧೯೪॥

ವಿರೂಪನೇತ್ರ ಯೂಪನೇತ್ರರ ಶರಪಂಜರದಲ್ಲಿ ಬಂಧಿಯಾದ ಅಂಗದ,
ಬಂಧಿಯಾದ ವೀರ ಅಂಗದ ಚಲಿಸುವುದಕ್ಕೂ ಶಕ್ತಿ ಇಲ್ಲದವನಾದ.
ಸುಗ್ರೀವ ದೊಡ್ಡ ಬೆಟ್ಟ ಕಿತ್ತು ಅವರ ಶರೀರಗಳ ಮೇಲೆ ಎಸೆದ.

ಉಭೌ ಚ ತೌ ತೇನ ವಿಚೂ ರ್ಣ್ಣಿತೌ ರಣೇ ರವೇಃ ಸುತಸ್ಯೋರುಬಲೇರಿತೇನ ।
ನಿಶಾಚರೇಶೋsಥ ಶರೇಣ ಸೂರ್ಯ್ಯಜಂ ಬಿಭೇದ ವಕ್ಷಸ್ಯಪಿ ಸೋsಪತದ್ ಭುವಿ ॥೮.೧೯೫॥

ಸುಗ್ರೀವ ಬಲದಿಂದ ಎಸೆದ ಆ ಬೆಟ್ಟದಡಿ,
ವಿರೂಪನೇತ್ರ ಯೂಪನೇತ್ರರಿಬ್ಬರಾದರು ಪುಡಿ.
ರಾವಣ ಸುಗ್ರೀವನೆಡೆಗೆ ಬಾಣದಿ ಹೊಡೆದ,
ಆ ಹೊಡೆತಕ್ಕೆ ಸುಗ್ರೀವ ತತ್ತರಿಸುತ್ತಾ ಬಿದ್ದ.

ತತಃ ಸ ಸರ್ವಾಂಶ್ಚ ಹರಿಪ್ರವೀರಾನ್ ವಿಧೂಯ ಬಾಣೈರ್ಬಲವಾನ್ ದಶಾನನಃ ।
ಜಗಾಮ ರಾಮಾಭಿಮುಖಸ್ತದೈನಂ ರುರೋಧ ರಾಮಾವರಜಃ ಶರೌಘೈಃ ॥೮.೧೯೬॥

ಬಲಿಷ್ಠ ರಾವಣ ಕಪಿ ವೀರರನ್ನು ಬಾಣಗಳಿಂದ ಓಡಿಸಿದ,
ರಾಮಗೆದುರಾಗಿ ನಡೆದ ರಾವಣನ ಲಕ್ಷ್ಮಣ ಬಾಣದಿ ತಡೆದ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula