ಸ ದೇವಗನ್ಧರ್ವಮಹರ್ಷಿಸತ್ತಮೈರಭಿಷ್ಟುತೋ ರಾಮಕರೋಪಗೂಹಿತಃ ।
ಪುನರ್ಗ್ಗಿರಿಂ ತಂ
ಶತಯೋಜನೋಚ್ಛ್ರಿತಂ ನ್ಯಪಾತಯತ್ ಸಂಸ್ಥಿತ ಏವ
ತತ್ರ ಚ ॥೮.೧೫೯॥
ದೇವತೆಗಳು, ಗಂಧರ್ವರು, ಮಹರ್ಷಿಗಳಿಂದ ಹನುಮನ ಗುಣಗಾನ,
ಶ್ರೀರಾಮಚಂದ್ರ
ಹನುಮಗೆ ಕೊಟ್ಟ ಅನುಗ್ರಹದ ಅದ್ಭುತ ಆಲಿಂಗನ.
ಹನುಮಂತನಿಂದ
ಎಸೆಯಲ್ಪಟ್ಟ ಆ ಬೆಟ್ಟ ಸೇರಿತು ಅದರ ಸ್ವಸ್ಥಾನ.
ಸ ಪೂರ್ವವನ್ಮಾರುತಿವೇಗಚೋದಿತೋ ನಿರನ್ತರಂ ಶ್ಲಿಷ್ಟತರೋsತ್ರ
ಚಾಭವತ್ ।
ಪುನಶ್ಚ ಸರ್ವೇ ತರುಶೈಲಹಸ್ತಾ ರಣಾಯ ಚೋತ್ತಸ್ಥುರಲಂ ನದನ್ತಃ ॥೮.೧೬೦॥
ಪುನಶ್ಚ ತಾನ್ ಪ್ರೇಕ್ಷ್ಯ ಸಮುತ್ಥಿತಾನ್ ಕಪೀನ್ ಭಯಂ ಮಹಚ್ಛಕ್ರಜಿತಂ
ವಿವೇಶ ।
ಸ ಪೂರ್ವವದ್ಧವ್ಯವಹೇ ಸಮರ್ಚ್ಚ್ಯ ಶಿವಂ ತಥಾsದರ್ಶನಮೇವ
ಜಗ್ಮಿವಾನ್ ॥೮.೧೬೧॥
ಮಾರುತಿ
ಉಗ್ರವೇಗದಿಂದ ಎಸೆದ ಆ ಬೆಟ್ಟ ಸೇರಿತದರ ಸ್ವಸ್ಥಾನ,
ಮತ್ತೆ ಮೇಲೆದ್ದ
ಕಪಿಗಳ ಕಂಡ ಇಂದ್ರಜಿತುಗಾಯಿತು ಭಯದ ಕಂಪನ.
ಪೂರೈಸಿ
ಅಗ್ನಿಯಲ್ಲಿ ಶಿವಪೂಜೆ ಯುದ್ಧಕ್ಕಾಗಿ ಅವನಾದ ಅಂತರ್ಧಾನ.
ವರಾಶ್ರಯೇಣಾಜಗಿರೀಶಯೋಸ್ತಥಾ ಪುನರ್ಮ್ಮಹಾಸ್ತ್ರೈಃ ಸ ಬಬನ್ಧ ತಾನ್
ಕಪೀನ್ ।
ಅಥಾsಹ ರಾಮಸ್ಯ ಮನೋsನುಸಾರತಃ
ಪುರಾsಸ್ತ್ರಮೇವಾನುಸರನ್ ಸ ಲಕ್ಷ್ಮಣಃ ॥೮.೧೬೨॥
ಪಿತಾಮಹಾಸ್ತ್ರೇಣ ನಿಹನ್ಮಿ ದುರ್ಮ್ಮತಿಂ ತವಾsಜ್ಞಯಾ
ಶಕ್ರಜಿತಂ ಸಬಾನ್ಧವಮ್ ।
ಇತೀರಿತೇ ತೇನ ಸ ಚಾsಹ ರಾಘವೋ
ಭಯಾದದೃಶ್ಯೇ ನ ವಿಮೋಕ್ತುಮರ್ಹಸಿ ॥೮.೧೬೩॥
ಬ್ರಹ್ಮ-ರುದ್ರರ
ವರಬಲದಿಂದ ಇಂದ್ರಜಿತು ಮಾಡಿದ ಮತ್ತೆ ಕಪಿಗಳ ಬಂಧನ,
ರಾಮನ ಕುರಿತು
ಹೇಳುತ್ತಾನೆ ಅವನಿಚ್ಛೆಯಂತೆ ವಿಶೇಷಾಸ್ತ್ರ ಬಳಸದ ಲಕ್ಷ್ಮಣ.
ನೀನೊಪ್ಪಿಗೆ
ಕೊಟ್ಟರೆ ಬ್ರಹ್ಮಾಸ್ತ್ರದಿ ಮಾಡುವೆ ಇಂದ್ರಜಿತುವಿನ ಸಂಹಾರ,
ರಾಮ
ನುಡಿದ-ಕಳ್ಳನಂತವಿತು ಕಾದುತ್ತಿರುವವಗೆ ಬ್ರಹ್ಮಾಸ್ತ್ರ ಬಳಕೆ ಅಪಚಾರ.
ನ ಸೋಢುಮೀಶೋsಸಿ ಯದಿ
ತ್ವಮೇತದಸ್ತ್ರಂ ತದಾsಹಂ ಶರಮಾತ್ರಕೇಣ ।
ಅದೃಶ್ಯಮಪ್ಯಾಶು ನಿಹನ್ಮಿ ಸನ್ತಂ ರಸಾತಳೇsಥಾಪಿ ಹಿ
ಸತ್ಯಲೋಕೇ ॥೮.೧೬೪॥
ಒಂದು ವೇಳೆ ನಿನಗೆ
ಆಗಿದ್ದರೆ ಆ ಕಾರ್ಯ ಅಸಾಧ್ಯ,
ಸಾಮಾನ್ಯ ಬಾಣದಿ
ಅವನೆಲ್ಲಡಗಿದ್ದರೂ ನಾ ಮಾಡುವೆನವನ ವಧ.
ಇತಿ ಸ್ಮ ವೀನ್ದ್ರಸ್ಯ ಹನೂಮತಶ್ಚ ಬಲಪ್ರಕಾಶಾಯ ಪುರಾ ಪ್ರಭುಃ ಸ್ವಯಮ್
।
ಸಮ್ಮಾನಯಿತ್ವಾsಸ್ತ್ರಮಮುಷ್ಯ
ರಾಮೋ ದುರನ್ತಶಕ್ತಿಃ ಶರಮಾದದೇsಥ ॥೮.೧೬೫॥
ಅಮಿತಶಕ್ತಿಯ
ಶ್ರೀರಾಮಚಂದ್ರನಾಗಿದ್ದರೂ ಸರ್ವಸಮರ್ಥ,
ಗರುಡ ಹನುಮರ
ಬಲಪ್ರಕಾಶಕ್ಕೆ ಅನುವು ಕೊಟ್ಟಿದ್ದನಾತ.
ಅದಕೆಂದೇ
ಇಂದ್ರಜಿತನ ಅಸ್ತ್ರಕ್ಕೆ ತೋರಿದ್ದ ಕೊಂಚ ಗೌರವ,
ಸಮಯಕ್ಕನುಗುಣವಾಗಿ
ಬಾಣವೆತ್ತಿಕೊಂಡ ಸರ್ವಜ್ಞ ರಾಘವ.
ಅನೇನ ದೃಷ್ಟೋsಹಮಿತಿ
ಸ್ಮ ದುಷ್ಟೋ ವಿಜ್ಞಾಯ ಬಾಹ್ವೋರ್ಬಲಮಸ್ಯ ಚೋಗ್ರಮ್ ।
ವಿನಿಶ್ಚಯಂ ದೇವತಮಸ್ಯ ಪಶ್ಯನ್ ಪ್ರದುದ್ರುವೇ ಪ್ರಾಣಪರೀಪ್ಸುರಾಶು
॥೮.೧೬೬ ॥
ಇಂದ್ರಜಿತುವಿಗನಿಸಿತು
ರಾಮ ತನ್ನ ನೋಡಿದ,
ದುಷ್ಟರಕ್ಕಸ ರಾಮನ
ಉಗ್ರಬಾಹುಬಲವ ತಿಳಿದ.
ರಾಮನಿಚ್ಛೆ ಕಂಡು ಪ್ರಾಣಭಯದಿಂದ ತಾ ಓಡಿದ.
No comments:
Post a Comment
ಗೋ-ಕುಲ Go-Kula