Saturday 28 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 230 - 234

ಪುರೀಂ ಪ್ರವಿಶ್ಯ ಮುನಿಭಿಃ  ಸಾಮ್ರಾಜ್ಯೇ ಚಾಭಿಷೇಚಿತಃ ।
ಯಥೋಚಿತಂ ಚ ಸಮ್ಮಾನ್ಯ ಸರ್ವಾನಾಹೇದಮೀಶ್ವರಃ ॥೮.೨೩೦॥

ಪ್ರಭು ಶ್ರೀರಾಮಚಂದ್ರ ಅಯೋಧ್ಯಾ ನಗರವ ಹೊಕ್ಕ,
ಅಗಸ್ತ್ಯಾದಿ ಮುನಿಗಳಿಂದಾಯಿತು ರಾಜ್ಯಾಭಿಷೇಕ.
ಎಲ್ಲರನ್ನೂ ಯಥೋಚಿತವಾಗಿ ಸನ್ಮಾನಿಸುತ್ತಾನೆ,
ಎಲ್ಲರ ಕುರಿತು ಈ ರೀತಿಯಾಗಿ ಹೇಳುತ್ತಾನೆ.

ಸರ್ವೈರ್ಭವದ್ಭಿಃ ಸುಕೃತಂ ವಿಧಾಯ ದೇಹಂ ಮನೋವಾಕ್ಸಹಿತಂ ಮದೀಯಮ್ ।
ಏತಾವದೇವಾಖಿಲಸದ್ವಿಧೇಯಂ ಯತ್ ಕಾಯವಾಕ್ಚಿತ್ತಭವಂ 
ಮದರ್ಚ್ಚನಮ್ ॥೮.೨೩೧॥

ನೀವೆಲ್ಲಾ ಮಾಡಿದ್ದೀರಿ ನಿಮ್ಮ ತನು ಮನ ಮಾತಿನ ಅರ್ಪಣೆ,
ಉತ್ತಮವದು ; ಅದೇ ಸಜ್ಜನರೆಲ್ಲಾ ಮಾಡಬೇಕಾದ ಸಾಧನೆ.

ಮುಕ್ತಿಪ್ರದಾನಾತ್ ಪ್ರತಿಕರ್ತ್ತೃತಾ ಮೇ ಸರ್ವಸ್ಯ ಚಾಥೋ ಭವತಾಂ ಭವೇತ ।
ಹನೂಮತೋ ನ ಪ್ರತಿಕರ್ತ್ತೃತಾ ಸ್ಯಾತ್ ಸ್ವಭಾವಭಕ್ತಸ್ಯ ನಿರೌಪಧಂ ಮೇ ॥೮.೨೩೨॥

ನಿಮ್ಮಗಳ ಸುಕೃತಕ್ಕೆ ಮೋಕ್ಷವೇ ಸರಿಯಾದ ಪ್ರತಿಫಲ,
ಕಾಮನೆಯಿರದ ಸಹಜಭಕ್ತ ಹನುಮನಿಗದು ಪ್ರತಿಫಲವಲ್ಲ.
ಅವನಿಗೆ ಏನು ಕೊಟ್ಟರೂ ಕಡಿಮೆ,
ಅದವನ ನಿರ್ವ್ಯಾಜ ಭಕ್ತಿಯ ಹಿರಿಮೆ.


ಮದ್ಭಕ್ತೌ ಜ್ಞಾನಪೂರ್ತ್ತಾವನುಪಧಿಕಬಲಪ್ರೋನ್ನತೌ ಸ್ಥೈರ್ಯ್ಯಧೈರ್ಯ್ಯ
ಸ್ವಾಭಾವ್ಯಾದಿಕ್ಯತೇಜಃ ಸುಮತಿದಮಶಮೇಷ್ವಸ್ಯ ತುಲ್ಯೋ ನ ಕಶ್ಚಿತ್ ।
ಶೇಷೋ ರುದ್ರಃ ಸುಪರ್ಣ್ಣೋsಪ್ಯುರುಗುಣಸಮಿತೌ ನೋಸಹರ್ಸ್ರಾಂಶತುಲ್ಯಾ
ಅಸ್ಯೇತ್ಯಸ್ಮಾನ್ಮದೈಶಂ ಪದಮಹಮಮುನಾ ಸಾರ್ದ್ಧಮೇವೋಪಭೋಕ್ಷ್ಯೇ ॥೮.೨೩೩॥

ಭಕ್ತಿ ಜ್ಞಾನ ಬಲ ಸ್ಥೈರ್ಯ ಧೈರ್ಯ ಜೀವೋತ್ತಮತ್ವದ ತೇಜಸ್ಸು,
ಸದ್ಬುದ್ಧಿ ಇಂದ್ರಿಯನಿಗ್ರಹ ನಿಷ್ಠೆ ಸಮರಿಲ್ಲದವನದಂಥ ಓಜಸ್ಸು.
ಶೇಷ ಶಿವ ಗರುಡರೂ ಕೂಡಾ ಆಗಲಾರರು ಇವನ ಸಾವಿರದ ಒಂದಂಶಕ್ಕೂ ಸಮ,
ಅದಕೇ ವಿಶೇಷ ಸನ್ನಿಧಾನಯುಕ್ತ ಸಹಭೋಗ ಪದವಿಯ ಅವನಿಗೀವುದೇ ನನ್ನ ನೇಮ.

ಪೂರ್ವಂ ಜಿಗಾಯ ಭುವನಂ ದಶಕನ್ಧರೋsಸಾವಬ್ಜೋದ್ಭವಸ್ಯ ವರತೋ ನತು ತಂ ಕದಾಚಿತ್ ।
ಕಶ್ಚಿಜ್ಜಿಗಾಯ ಪುರುಹೂತಸುತಃ ಕಪಿತ್ವಾದ್ ವಿಷ್ಣೋರ್ವರಾದಜಯದರ್ಜ್ಜುನ ಏವ 
ಚೈನಮ್ ॥೮.೨೩೪॥

ಈ ಹಿಂದೆ ರಾವಣ ಬ್ರಹ್ಮವರದಿಂದ ಪ್ರಪಂಚವನ್ನೇ ಗೆದ್ದವ,
ಹೀಗಾಗಿ ಅವನಿಗಾಗಲಿಲ್ಲ ಎಂದೂ ಯಾರಿಂದಲೂ ಪರಾಭವ.
ಕಪಿಯಾದ ವಾಲಿ ವಿಷ್ಣುವರಬಲದ ಕಾರ್ತವೀರ್ಯಾರ್ಜುನ,
ಇವರಿಬ್ಬರಿಂದ ಮಾತ್ರ ಉಂಡಿದ್ದ ಪರಾಭವದ ನೋವನ್ನ.
ವರಬೇಡುವಾಗಾಗಿತ್ತು ಕಪಿ ನರರ ಉಪೇಕ್ಷೆ,
ಅದರನುಸಾರವಾಗೇ ಆಗಿತ್ತವನಿಗೆ ತಕ್ಕ ಶಿಕ್ಷೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula