ತದಾ ಪಪಾತ ಸೂರ್ಯಜಸ್ತತಾಡ ಚಾಙ್ಗದಂ ರುಷಾ ।
ಸಜಾಮ್ಬವನ್ತಮಾಶು ತೌ ನಿಪೇತತುಸ್ತಳಾಹತೌ ॥೮.೧೧೧॥
ಕುಂಭಕರ್ಣನ ಆ
ಹೊಡೆತಕ್ಕೆ ಸುಗ್ರೀವ ನೆಲಕ್ಕೆ ಬಿದ್ದ,
ರಕ್ಕಸ ಸಿಟ್ಟಿನಿಂದ
ಜಾಂಬವಂತ ಅಂಗದಗೂ ಹೊಡೆದ.
ಬಿದ್ದರಿಬ್ಬರೂ
ಕೆಳಗೆ ತಿಂದು ಕುಂಭಕರ್ಣನ ಅಂಗೈ ಏಟಿನ ಸ್ವಾದ.
ಅಥ ಪ್ರಗೃಹ್ಯ ಭಾಸ್ಕರಿಂ ಯಯೌ ಸ ರಾಕ್ಷಸೋ ಬಲೀ ।
ಜಗಾಮ ಚಾನು ಮಾರುತಿಃ ಸುಸೂಕ್ಷ್ಮಮಕ್ಷಿಕೋಪಮಃ ॥೮.೧೧೨॥
ಆನಂತರ ಕುಂಭಕರ್ಣ
ಸುಗ್ರೀವನ ಹಿಡಿದು ಮುಂದೆ ತೆರಳಿದ,
ಆಗ ಹನುಮ ನೊಣ ಸದೃಶ
ರೂಪದಿಂದ ಅವನ ಹಿಂಬಾಲಿಸಿದ.
ಯದೈನಮೇಷ ಬಾಧತೇ ತದಾ ವಿಮೋಚಯಾಮ್ಯಹಮ್ ।
ಯದಿ ಸ್ಮ ಶಕ್ಯತೇsಸ್ಯ ತು ಸ್ವಮೋಚನಾಯ ತದ್ ವರಮ್ ॥೮.೧೧೩॥
ಒಂದು ವೇಳೆ ಕುಂಭಕರ್ಣ ಸುಗ್ರೀವಗಿತ್ತರೆ ಪೀಡೆ ವಿಪರೀತ,
ಆಗ ನಾನವನ
ಬಿಡಿಸುವೆ ಎಂದುಕೊಂಡ ತಾನು ಹನುಮಂತ.
ಬದಲಾಗಿ ಅವನನ್ನವನೇ
ರಕ್ಷಿಸಿಕೊಳ್ಳಲು ಆದರೆ ಸುಗ್ರೀವ ಶಕ್ತ,
ಒಳ್ಳೆಯದೆಂದುಕೊಳ್ಳುತ್ತಾ
ಅವನನುಸರಿಸಿದ ತಾ ವಾಯುಸುತ.
ಇತಿ ವ್ರಜತ್ಯನು ಸ್ಮ ತಂ ಮರುತ್ಸುತೇ ನಿಶಾಚರಃ ।
ಪುರಂ ವಿವೇಶ ಚಾ ರ್ಚ್ಚಿತಃ ಸ್ವಬನ್ಧುಭಿಃ ಸಮಸ್ತಶಃ ॥೮.೧೧೪॥
ಈ ರೀತಿ ಹನುಮಂತ
ಅನುಸರಿಸುತ್ತಾ ತಾ ನಡೆದ,
ಕುಂಭಕರ್ಣನು ಲಂಕಾ
ಪಟ್ಟಣ ಪ್ರವೇಶವ ಮಾಡಿದ.
ಗೌರವಿಸಲ್ಪಟ್ಟವನಾದನಾತ
ರಾಕ್ಷಸ ಬಂಧುಗಳಿಂದ.
ತುಹಿನಸಲಿಲಮಾಲ್ಯೈಃ ಸರ್ವತೋsಭಿಪ್ರವೃಷ್ಟೇ
ರಜನಿಚರವರೇsಸ್ಮಿನ್ಸ್ತೇನ
ಸಿಕ್ತಃ ಕಪೀಶಃ ।
ವಿಗತಸಕಲಯುದ್ಧಗ್ಲಾನಿರಾ ವಞ್ಚಯಿತ್ವಾ ರಜನಿಚರವರಂ ತಂ ತಸ್ಯ ನಾಸಾಂ
ದದಂಶ ॥೮.೧೧೫॥
ತಂಪಾದ ನೀರು ತಂಪು
ಹೂಮಾಲೆಗಳಿಂದ,
ಕುಂಭಕರ್ಣನ
ಸ್ವಾಗತಿಸಿತು ರಾಕ್ಷಸ ವೃಂದ.
ಸುಗ್ರೀವನಿಗಾಗಲು
ತಂಪುನೀರ ಹನಿಗಳ ಸ್ಪರ್ಶ,
ಯುದ್ಧಶ್ರಮ ನೀಗಿ
ಸುಗ್ರೀವಗಾಯ್ತು ಕೊಂಚ ಹರ್ಷ.
ತಪ್ಪಿಸಿಕೊಂಡ
ಕುಂಭಕರ್ಣನ ಹಿಡಿತದಿಂದಾಗ,
ವೀರ ಸುಗ್ರೀವ
ಕಚ್ಚಿದ ಕುಂಭಕರ್ಣನ ಮೂಗ .
ಕರಾಭ್ಯಾಮಥ ಕರ್ಣ್ಣೌ ಚ ನಾಸಿಕಾಂ ದಶನೈರಪಿ ।
ಸಞ್ಛಿದ್ಯ ಕ್ಷಿಪ್ರಮೇವಾಸಾವುತ್ಪಪಾತ ಹರೀಶ್ವರಃ ॥೮.೧೧೬॥
ಸುಗ್ರೀವ
ಕೈಗಳಿಂದ ಕುಂಭಕರ್ಣನ ಕಿವಿ ಹಿಂಡಿದ,
ಹಲ್ಲುಗಳಿಂದ ದೈತ್ಯ
ರಕ್ಕಸನ ಮೂಗ ತಾ ಕಚ್ಚಿದ.
ಇಷ್ಟೆಲ್ಲಾ
ಮಾಡುತ್ತಲೇ ಸುಗ್ರೀವ ಮೇಲೆ ಹಾರಿದ.
ತಳೇನ ಚೈನಂ ನಿಜಘಾನ ರಾಕ್ಷಸಃ ಪಿಪೇಷ ಭೂಮೌ ಪತಿತಂ ತತೋsಪಿ ।
ಸಮುದ್ಗತೋsಸೌ ವಿವರೇsಙ್ಗುಲೀನಾಂ ಜಘಾನ ಶೂಲೇನ ಪುನಃ ಸ ರಾಕ್ಷಸಃ ॥೮.೧೧೭॥
ಕುಂಭಕರ್ಣ ಕೊಟ್ಟ
ಕೈತಳದಿಂದ ಸುಗ್ರೀವಗೆ ಹೊಡೆತ,
ಕೆಳಗೆ ಬಿದ್ದ
ಸುಗ್ರೀವಗೆ ಕುಂಭಕರ್ಣನ ಕಾಲೊತ್ತಿನ ಹಿಡಿತ.
ಬೆರಳ ಮಧ್ಯದಿಂದ
ಸುಗ್ರೀವನ ಮೇಲೇರುವ ಪ್ರಯತ್ನ,
ಕುಂಭಕರ್ಣ ಅನುವಾದ ಅವನಿಗೀಯಲು ಶೂಲದ ತಾಡನ.
No comments:
Post a Comment
ಗೋ-ಕುಲ Go-Kula