Sunday 29 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 235 - 238

ದತ್ತೋ ವರೋ ನ ಮನುಜಾನ್ ಪ್ರತಿ ವಾನರಾಂಶ್ಚ ಧಾತ್ರಾsಸ್ಯ ತೇನ ವಿಜಿತೋ ಯುಧಿ ವಾಲಿನೈಷಃ ।
ಅಬ್ಜೋದ್ಭವಸ್ಯ ವರಮಾಶ್ವಭಿಭೂಯ ರಕ್ಷೋಜಿಗ್ಯೇ ತ್ವಹಂ ರಣಮುಖೇ ಬಲಿಮಾಹ್ವಯನ್ತಮ್  ॥೮.೨೩೫॥

ಬ್ರಹ್ಮ ರಾವಣನಿಗಿತ್ತಿದ್ದ ಅಜೇಯತ್ವದ ವರ,
ಅಜೇಯತ್ವಕ್ಕೆ ಹೊರತಾದದ್ದು ಕಪಿ ಮತ್ತು ನರ.
ಹೀಗಾಗಿಯೇ ಕಪಿ ವಾಲಿಯಿಂದಾದ ರಾವಣ ಪರಾಜಿತ,
ದತ್ತಾತ್ರಯವರಬಲದ ಕಾರ್ತವೀರ್ಯಾರ್ಜುನನಿಂದಲೂ ಸೋತ.
ಬಲಿಚಕ್ರವರ್ತಿಯನ್ನೇ ಯುದ್ಧಕ್ಕೆ ಕರೆದ ರಾವಣನಾತ,
ನಾನು ಮಾತ್ರ ಬ್ರಹ್ಮವರ ಮೀರಿ ಅವನನ್ನು ಸೋಲಿಸಿದಾತ.

ಬಲೇ  ರ್ದ್ದ್ವಾರಸ್ಥೋsಹಂ ವರಮಸ್ಮೈ ಸಮ್ಪ್ರದಾಯ ಪೂರ್ವಂ ತು ।
ತೇನ ಮಯಾ ರಕ್ಷೋsಸ್ತಂ ಯೋಜನಮಯುತಂ ಪದಾಙ್ಗುಲ್ಯಾ   ॥೮.೨೩೬॥

ಶ್ರೀರಾಮಚಂದ್ರ ಹೇಳುತ್ತಾನೆ ಮುಂದುವರೆದು,
ಹೇಗೆ ತಾನು ರಾವಣನ ಶಿಕ್ಷಿಸಿದ್ದು ಬಲಿಯ ಪೊರೆದು.
ಹಿಂದೆ ಬಲಿಗೆ ವರವಿದ್ದ ಕಾಲ ,
ನಾನೇ ಕಾಯುತ್ತಿದ್ದೆ ಅವನ ಬಾಗಿಲ.
ರಾವಣನ ತಳ್ಳಿದ್ದೆ ನನ್ನ ಕಾಲ ಬೆರಳಿಂದ,
ಹತ್ತುಸಾವಿರ ಯೋಜನ ದೂರಕ್ಕೆಸೆಯಲ್ಪಟ್ಟಿದ್ದ.

ಪುನಶ್ಚ ಯುದ್ಧಾಯ ಸಮಾಹ್ವಯನ್ತಂ ನ್ಯಪಾತಯಂ ರಾವಣಮೇಕಮುಷ್ಟಿನಾ ।
ಮಹಾಬಲೋsಹಂ ಕಪಿಲಾಖ್ಯರೂಪಸ್ತ್ರಿಕೋಟಿರೂಪಃ ಪವನಶ್ಚ ಮೇ ಸುತಃ ॥೮.೨೩೭॥

ಪುನಃ ಯುದ್ಧಕ್ಕೆ ಕರೆಯುತ್ತಿದ್ದ ಆ ರಾವಣ,
ಕೆಡವಿತವನ ನನ್ನ ಕಪಿಲರೂಪಿ ಮುಷ್ಠಿ ತಾಡನ.
ನನ್ನ ಪುತ್ರ ವಾಯುವಿಗಲ್ಲಿ ಮೂರುಕೋಟಿ ರೂಪ,
(ಅವನೊಂದೇ ಮುಷ್ಠಿಯಿಂದ ರಾವಣ ಬಿದ್ದ ಪಾಪ. )

ಆವಾಂ ಸ್ವಶಕ್ತ್ಯಾ ಜಯಿನಾವಿತಿ ಸ್ಮ ಶಿವೋ ವರಾನ್ಮೇsಜಯದೇನಮೇವಮ್ ।
ಜ್ಞಾತ್ವಾ ಸುರಾಜೇಯಮಿಮಂ ಹಿ ವವ್ರೇ ಹರೋ ಜಯೇಯಾಹಮಮುಂ 
ದಶಾನನಮ್  ॥೮.೨೩೮॥

ನಾನು ಹನುಮ ಸ್ವಾಭಾವಿಕ ಶಕ್ತಿಯಿಂದ ರಾವಣನನ್ನು ಗೆದ್ದದ್ದು,
ಸದಾಶಿವ ನನ್ನ ವರಬಲದಿಂದ ಅವನ ಗೆಲ್ಲಲು ಸಾಧ್ಯಾವಾದದ್ದು.
ದೇವತೆಗಳು ರಾವಣನನ್ನು ಜಯಿಸಲು ಸಾಧ್ಯವಿಲ್ಲ ಎಂದು ಶಿವ ತಿಳಿದಿದ್ದ,
ಹಾಗಾಗೇ ಅವನ ಗೆಲ್ಲುವ ವರ ನನ್ನಿಂದ ಪಡೆದು ರಾವಣನ ಸೋಲಿಸಿದ್ದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula