ತ್ರಿಂಶತ್ ಸಹಸ್ರಾಣಿ ಮಹೌಘಕಾನಾಮಕ್ಷೋಹಿಣೀನಾಂ ಸಹ ಷಟ್ಸಹಸ್ರಮ್ ।
ಶ್ರಮೇಣ ಸಂಯೋಜಯತಾsಶು ರಾಮಂ
ಸಜ್ಜೋ ಭವಾಮೀತಿ ದಿದೇಶ ರಾವಣಃ ॥೮.೧೭೯॥
ರಾವಣನ ವಿಶೇಷ ಪಡೆಯ
ವಿವರ,
ಮಹೌಘಗಳು ಮೂವತ್ತು
ಸಾವಿರ,
ಅಕ್ಷೋಹಿಣಿಗಳು
ಮೂವತ್ತಾರು ಸಾವಿರ.
ಇಷ್ಟು ಸೈನ್ಯವ
ಯುದ್ಧಭೂಮಿಗೆ ಕಳಿಸಿದ,
ರಾಮಗೆ
ಶ್ರಮವಾಗುವಂತೆ ಮಾಡಲ್ಹೇಳಿದ.
ನಾನು
ಸನ್ನದ್ಧನಾಗುತ್ತೇನೆ ಎಂದು ನುಡಿದ.
ತದಪ್ರದೃಷ್ಯಂ ವರತಃ ಸ್ವಯಮ್ಭುವೋ
ಯುಗಾನ್ತಕಾಲಾರ್ಣ್ಣವಘೂರ್ಣ್ಣಿತೋಪಮಮ್ ।
ಪ್ರಗೃಹ್ಯ ನಾನಾವಿಧಮಸ್ತ್ರಶಸ್ತ್ರಂ ಬಲಂ ಕಪೀಞ್ಛೀಘ್ರತಮಂ ಜಗಾಮ
॥೮.೧೮೦॥
ಅಂತಹಾ ಯಾರಿಂದಲೂ
ನಿಯಂತ್ರಿಸಲಾಗದ,
ಸ್ವಯಂಭುವಿನ
ವಿಶೇಷ ವರಬಲವುಳ್ಳದ್ದಾದ,
ಪ್ರಳಯ ಸಮುದ್ರದಂಥಾ
ಆ ಭಯಂಕರ ರಾವಣ ಪಡೆ,
ವಿವಿಧ ಅಸ್ತ್ರ
ಶಸ್ತ್ರಗಳೊಂದಿಗೆ ಬರುತ್ತಿತ್ತು ಕಪಿಗಳ ಕಡೆ.
ಆಗಚ್ಛಮಾನಂ ತದಪಾರಮೇಯಂ ಬಲಂ ಸುಘೋರಂ ಪ್ರಳಯಾರ್ಣ್ಣವೋಪಮಮ್ ।
ಭಯಾತ್ ಸಮುದ್ವಿಗ್ನವಿಷಣ್ಣಚೇತಸಃ ಕಪಿಪ್ರವೀರಾ ನಿತರಾಂ
ಪ್ರದುದ್ರುವುಃ ॥೮.೧೮೧॥
ಅಸದಳ ಘೋರವಾದ
ಪ್ರಳಯ ಸಮುದ್ರದಂಥ ಸೈನ್ಯದ ನೋಟ,
ಆರಂಭಿಸಿದರಂತೆ
ಕಪಿಗಳೆಲ್ಲಾ ಉದ್ವೇಗ ದುಃಖ ಭಯಗಳಿಂದ ಓಟ.
ವರೋ ಹಿ ದತ್ತೋsಸ್ಯ ಪುರಾ
ಸ್ವಯಮ್ಭುವಾ ಧರಾತಳೇsಲ್ಪೇsಪಿ
ನಿವಾಸಶಕ್ತಿಃ ।
ಅಜೇಯತಾ ಚೇತ್ಯತ ಏವ ಸಾರ್ಕ್ಕಜಾಃ ಪ್ಲವಙ್ಗಮಾ ದ್ರಷ್ಟುಮಪಿ ಸ್ಮ
ನಾಶಕನ್ ॥೮.೧೮೨॥
ಈ ರಾವಣ
ಪಡೆಗಿತ್ತಂತೆ ಬ್ರಹ್ಮದೇವನ ವರಬಲ,
ಬೃಹತ್
ಸೈನ್ಯವಾಗಿದ್ದರೂ ಸಾಕಿತ್ತು ಇದ್ದಷ್ಟೇ ನೆಲ.
ಕಡಿಮೆ
ನೆಲದಲ್ಲಿದ್ದರೂ ಸೈನ್ಯಕ್ಕಿತ್ತು ಅಜೇಯ ಬಲ,
ಸುಗ್ರೀವಾದಿಗಳಿಗೂ ಅದನ ಎದುರಿಸಲಾಗಲಿಲ್ಲ.
No comments:
Post a Comment
ಗೋ-ಕುಲ Go-Kula