ಇತೀರಿತೇ ತ್ವಬ್ಜಭವೇನ ಶೂಲೀ ಸಮಾಹ್ವಯದ್ ರಾಘವಮಾಹವಾಯ ।
ವರಂ ಮದೀಯಂ ತ್ವಗಣಯ್ಯ ರಕ್ಷೋ ಹತಂ ತ್ವಯಾ ತೇನ ರಣಾಯ
ಮೇಹಿ ॥೮.೨೧೮ ॥
ಹೀಗೆ ಬ್ರಹ್ಮನಿಂದ
ನಡೆದಿರಲು ಭಗವಂತನ ಗುಣಗಾನ,
ಸದಾಶಿವ
ರಾಮನಿಗೀಯುತ್ತಾನೆ ಯುದ್ಧದ ಆಹ್ವಾನ.
ಲೆಕ್ಕಿಸಲಿಲ್ಲ
ನೀನು ನನ್ನ ವರ,
ಮಾಡಿದೆ ರಾವಣನ
ಸಂಹಾರ.
ಸ್ವೀಕರಿಸು ನನ್ನ
ಸಮರಾಹ್ವಾನ,
ಬಾ ನಾವಿಬ್ಬರೂ
ಯುದ್ಧ ಮಾಡೋಣ.
ಇತೀರಿತೇsಸ್ತ್ವಿತ್ಯಭಿಧಾಯ ರಾಘವೋ
ಧನುಃ ಪ್ರಗೃಹ್ಯಾsಶು ಶರಂ ಚ ಸನ್ದಧೇ ।
ವಿಕೃಷ್ಯಮಾಣೇ ಚಲಿತಾ ವಸುನ್ಧರಾ ಪಪಾತ ರುದ್ರೋsಪಿ
ಧರಾಪ್ರಕಮ್ಪತಃ ॥೮.೨೧೯॥
ಈ ರೀತಿ
ಹೇಳುತ್ತಿರಲು ರುದ್ರ,
ಆಗಲಿ ಎಂದ
ಶ್ರೀರಾಮಚಂದ್ರ.
ಶ್ರೀರಾಮ ಬಿಲ್ಲಿಗೆ
ಹೂಡಿದ ಬಾಣವನ್ನ,
ನೇಣ ಎಳೆಯಲಾಯಿತು
ಭೂಕಂಪನ.
ಆಗ ಆ ಭೂಕಂಪನದಿಂದ,
ರುದ್ರ ಕೂಡಾ ತಾ
ಕೆಳಗೆ ಬಿದ್ದ.
ಅಥೋತ್ಥಿತಶ್ಚಾsಸುರಭಾವವರ್ಜ್ಜಿತಃ
ಕ್ಷಮಸ್ವ ದೇವೇತಿ ನನಾಮ ಪಾದಯೋಃ ।
ಉವಾಚ ಚ ತ್ವದ್ವಶಗೋsಸ್ಮಿ
ಸರ್ವದಾ ಪ್ರಸೀದ ಮೇ ತ್ವದ್ವಿಷಯಂ ಮನಃ
ಕುರು ॥೮.೨೨೦ ॥
ಬಿದ್ದ ರುದ್ರಗೆ
ಕಳೆಯಿತು ಕವಿದಿದ್ದ ಅಸುರ ಭಾವ,
ರಾಮಪಾದಕ್ಕೆರಗಿ
ಬೇಡಿದ ನನ್ನ ರಕ್ಷಿಸು ಓ ದೇವ.
ನಾನು ಯಾವಾಗಲೂ
ನಿನ್ನ ಅಧೀನ,
ಪ್ರಸನ್ನನಾಗಿ
ನಿನ್ನಲ್ಲೇ ನೆಡು ನನ್ನ ಮನ.
ಅಥೇನ್ದ್ರಮುಖ್ಯಾಶ್ಚ ತಮೂಚಿರೇ ಸುರಾಸ್ತ್ವಯಾsವಿತಾಃ
ಸ್ಮೋsದ್ಯ ನಿಶಾಚರಾದ್
ವಯಮ್ ।
ತಥೈವ ಸರ್ವಾಪದ ಏವ
ನಸ್ತ್ವಂ ಪ್ರಪಾಹಿ ಸರ್ವೇ ಭವದೀಯಕಾಃ ಸ್ಮ ॥೮.೨೨೧॥
ಹೀಗೆ ನಡೆದಿರಲು
ಸದಾಶಿವನ ಪ್ರಾರ್ಥನಾ ಅರಿಕೆ,
ಇಂದ್ರಾದಿದೇವತೆಗಳಿಂದ
ಶ್ರೀರಾಮನಲ್ಲಿ ಕೋರಿಕೆ.
ನಿನ್ನಿಂದಾಗಿ
ಸಿಕ್ಕಿದೆ ರಾವಣ ಹಿಂಸೆಯಿಂದ ಮುಕ್ತಿ,
ಮುಂದಿನಾಪತ್ತುಗಳಿಂದ
ರಕ್ಷಿಪುದೂ ನಿನ್ನದೇ ಶಕ್ತಿ.
ಸದಾ ಇರಲಿ
ನಿನ್ನನುಗ್ರಹ ಮತ್ತು ರಕ್ಷಣ,
ನಾವೆಲ್ಲಾ ನಿನ್ನ
ಭಕ್ತವೃಂದವಾದ ಕಾರಣ.
ಸೀತಾಕೃತಿಂ ತಾಮಥ ತತ್ರ ಚಾsಗತಾಂ
ದಿವ್ಯಚ್ಛಲೇನ ಪ್ರಣಿಧಾಯ ಪಾವಕೇ ।
ಕೈಲಾಸತಸ್ತಾಂ ಪುನರೇವ ಚಾsಗತಾಂ
ಸೀತಾಮಗೃಹ್ಣಾದ್ಧುತಭುಕ್ಸಮರ್ಪ್ಪಿತಾಮ್ ॥೮.೨೨೨॥
ರಾವಣನ
ಅಧೀನದಲ್ಲಿದ್ದು ವಾಪಸಾಗಿದ್ದ ಸೀತಾಕೃತಿ,
ರಾಮಾಜ್ಞೆಯಿಂದ
ಒಳಗಾದಳು ಅಗ್ನಿಪರೀಕ್ಷೆಯ ಗತಿ.
ಸೀತಾಕೃತಿಗೆ
ಮಾಡಿಸಿದರು ಅಗ್ನಿಪ್ರವೇಶ ಪರೀಕ್ಷೆಯ ಕಾರ್ಯ,
ಅಗ್ನಿ ಕೈಲಾಸದಲ್ಲಿದ್ದ
ಸೀತೆಯ ಶ್ರೀರಾಮಗೊಪ್ಪಿಸೋ ವ್ಯಾಪಾರ.
ಜಾನನ್ ಗಿರೀಶಾಲಯಗಾಂ ಸ ಸೀತಾಂ ಸಮಗ್ರಹೀತ್ ಪಾವಕಸಂಪ್ರದತ್ತಾಮ್ ।
ಮುಮೋದ ಸಮ್ಪ್ರಾಪ್ಯ ಚ ತಾಂ ಸ ರಾಮಃ ಸಾ ಚೈವ ದೇವೀ ಭಗವನ್ತಮಾಪ್ಯ
॥೮.೨೨೩॥
ಸೀತೆ
ಕೈಲಾಸದಲ್ಲಿದ್ದದ್ದ ತಿಳಿದಿದ್ದ ಶ್ರೀರಾಮಚಂದ್ರ,
ಅಗ್ನಿ ಒಪ್ಪಿಸಿದ
ಸೀತೆಯ ಸ್ವೀಕರಿಸಿದ ಗುಣಸಾಂದ್ರ.
ಲೋಕದ ದೃಷ್ಟಿಗೆ
ಸೀತಾರಾಮರ ಸಂತಸದ ಸಮಾಗಮ,
ವಿಯೋಗವೇ ಇರದ
ಜಗದ್ಮಾತಾಪಿತರ ನಟನಾ ನಿಯಮ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula