Tuesday, 24 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 207 - 211


ಸಮ್ಮಾನಯನ್ ರಾಘವಮಾದಿಪೂರುಷಂ ನಿರ್ಯ್ಯಾತಯಾಮಾಸ ರಥಂ ಪುರನ್ದರಃ ।
ಸಹಾಯುಧುಂ ಮಾತಲಿಸಙ್ಗೃಹೀತಂ ಸಮಾರುರೋಹಾsಶು ಸ ಲಕ್ಷ್ಮಣಾಗ್ರಜಃ  ॥೮.೨೦೭॥

ಆದಿಪುರುಷನಾದ ಜಗದ್ಪಿತ ಶ್ರೀರಾಮಚಂದ್ರನ ಗೌರವಿಸುತ್ತಾ,
ಇಂದ್ರ ಕಳುಹಿಸಿದ ಮಾತಲಿ ಸಾರಥ್ಯದ ಶಸ್ತ್ರ ಆಯುಧಯುಕ್ತ ರಥ.
ಲಕ್ಷ್ಮಣನ ಅಣ್ಣನಾದ ಶ್ರೀರಾಮಚಂದ್ರದೇವ  ಅದನ್ನೇರಿ ಕುಳಿತ.

ಆರುಹ್ಯತಂ ರಥವರಂ ಜಗದೇಕನಾಥೋ ಲೋಕಾಭಯಾಯ ರಜನೀಚರನಾಥಮಾಶು ।
ಅಭ್ಯುದ್ಯಯೌ ದಶಶತಾಂಶುರಿವಾನ್ಧಕಾರಂ ಲೋಕಾನಶೇಷತ ಇಮಾನ್ 
ನಿಗಿರನ್ತಮುದ್ಯನ್ ॥೮.೨೦೮॥

ಆ ರಥವನೇರಿದ ಜಗದೊಡೆಯ ಶ್ರೀರಾಮಚಂದ್ರ ,
ಲೋಕದ ಕತ್ತಲು ಕಳೆಯಲು ಬರುವಂತೆ ಸೂರ್ಯ,
ಲೋಕಕಂಟಕನ ಅಳಿಸಲು ಎದುರಿಸಿದ ಈ ಕಾರ್ಯ.

ಆಯಾನ್ತಮೀಕ್ಷ್ಯ ರಜನೀಚರಲೋಕನಾಥಃ ಶಸ್ರ್ತಾಣ್ಯಥಾಸ್ತ್ರಸಹಿತಾನಿ  ಮುಮೋಚ ರಾಮೇ ।
ರಾಮಸ್ತು ತಾನಿ ವಿನಿಹತ್ಯ ನಿಜೈರ್ಮ್ಮಹಾಸ್ತ್ರೈಸ್ತಸ್ಯೋತ್ತಮಾಙ್ಗದಶಕಂ 
ಯುಗಪನ್ನ್ಯಕೃನ್ತತ್  ॥೮.೨೦೯॥

ರಾಮ ಎದುರಿಗೆ ಬರುವುದ ಕಂಡ ನಿಶಾಚರರ ದೊರೆ,
ಪ್ರಯೋಗಿಸಿದ ರಾಮನ ಮೇಲೆ ಅಸ್ತ್ರ ಶಸ್ತ್ರಗಳ ಧಾರೆ.
ಶ್ರೀರಾಮ ಅವುಗಳನ್ನು ತನ್ನ ಮಹಾಸ್ತ್ರಗಳಿಂದ ತಡೆದ,
ರಾವಣನ ಹತ್ತೂತಲೆಗಳ ಏಕಕಾಲಿದಿ ಕತ್ತರಿಸಿ ಹಾಕಿದ.

ಕೃತ್ತಾನಿ ತಾನಿ ಪುನರೇವ ಸಮುತ್ಥಿತಾನಿ ದೃಷ್ಟ್ವಾ ವರಾಚ್ಛತಧೃತೇರ್ಹೃದಯಂ ಬಿಭೇದ ।
ಬಾಣೇನ ವಜ್ರಸುದೃಶೇನ ಸ ಭಿನ್ನಹೃತ್ಕೋ ರಕ್ತಂ ವಮನ್ ನ್ಯಪತದಾಶು 
ಮಹಾವಿಮಾನಾತ್ ॥೮.೨೧೦॥

ಕಡಿದ ತಲೆಗಳು ಪುನಃ ಸೇರುತ್ತಿದ್ದವು ಬ್ರಹ್ಮವರ ಬಲದಿಂದ,
ಶ್ರೀರಾಮ ವಜ್ರಸದೃಶ ಬಾಣದಿಂದ ರಾವಣನೆದೆಯ ಒಡೆದ.
ಎದೆಯೊಡೆದ ರಾವಣ ರಕ್ತ ಕಾರುತ್ತಾ ವಿಮಾನದಿಂದ ಕೆಳಬಿದ್ದ.

ತಸ್ಮಿನ್ ಹತೇ ತ್ರಿಜಗತಾಂ ಪರಮಪ್ರತೀಪೇ ಬ್ರಹ್ಮಾ ಶಿವೇನ ಸಹಿತಃ ಸಹ ಲೋಕಪಾಲೈಃ ।
ಅಭ್ಯೇತ್ಯ ಪಾದಯುಗಳಂ ಜಗದೇಕಭರ್ತ್ತೂ ರಾಮಸ್ಯ ಭಕ್ತಿಭರಿತಃ 
ಶಿರಸಾ ನನಾಮ ॥೮.೨೧೧॥

ಹೀಗಾಯಿತು ಮೂರು ಲೋಕದ ಪರಮ ಶತ್ರುವಾಗಿದ್ದ ರಾವಣನ ಮರಣ,
ಬ್ರಹ್ಮರುದ್ರರು ಲೋಕಪಾಲಕರ ಸಮೇತ ಮಾಡಿದರು ರಾಮಪಾದಕೆ ನಮನ.

No comments:

Post a Comment

ಗೋ-ಕುಲ Go-Kula