ಅಮೋಘಶೂಲಂ ಪ್ರಪತತ್ ತದೀಕ್ಷ್ಯ ರವೇಃ ಸುತಸ್ಯೋಪರಿ ಮಾರುತಾತ್ಮಜಃ ।
ಪ್ರಗೃಹ್ಯ ಜಾನೌ ಪ್ರಣಿಧಾಯ ಶೀಘ್ರಂ ಬಭಞ್ಜ ತಂ ಪ್ರೇಕ್ಷ್ಯ ನನಾದ
ಚೋಚ್ಚೈಃ ॥೮.೧೧೮॥
ಚೋಚ್ಚೈಃ ॥೮.೧೧೮॥
ವ್ಯರ್ಥವಾಗದ ಶೂಲ ಸುಗ್ರೀವನ ಮೇಲೆ ಬೀಳುವುದ ಹನುಮ
ನೋಡಿದ,
ತಕ್ಷಣವೇ ಅದನ್ನ
ಹಿಡಿದು ಮೊಣಕಾಲ ಮೇಲೆ ಇರಿಸಿಕೊಂಡು ಮುರಿದ.
ಕುಂಭಕರ್ಣನ ನೋಡುತ್ತಾ
ಗಟ್ಟಿಯಾಗಿ ಒಮ್ಮೆ ಘರ್ಜನೆ ಮಾಡಿದ.
ಅಥೈನಮಾವೃತ್ಯ ಜಘಾನ ಮುಷ್ಟಿನಾ ಸ ರಾಕ್ಷಸೋ ವಾಯುಸುತಂ ಸ್ತನಾನ್ತರೇ ।
ಜಗರ್ಜ್ಜ ತೇನಾಭಿಹತೋ ಹನೂಮಾನಚಿನ್ತಯಂಸ್ತತ್ ಪ್ರಜಹಾರ
ಚೈನಮ್ ॥೮.೧೧೯॥
ಚೈನಮ್ ॥೮.೧೧೯॥
ಇದ್ದಕ್ಕಿದ್ದಂತೆ
ಹನುಮಂತ ಎದುರಾದದ್ದನ್ನ ಕಂಡ ಕುಂಭಕರ್ಣ,
ಕಿರುಚುತ್ತ ತನ್ನ
ಮುಷ್ಠಿಯಿಂದ ವಾಯುಪುತ್ರನೆದೆಗೆ ಕೊಟ್ಟ ತಾಡನ.
ಅದರಿಂದ ಹುನುಮಂತ
ಆಗಲಿಲ್ಲ ಕೊಂಚವೂ ವಿಚಲಿತ,
ಕುಂಭಕರ್ಣನ ಏಟ
ಗಮನಿಸದೇ ಅವನಿಗೇ ಕೊಟ್ಟ ಹೊಡೆತ.
ತಳೇನ ವಕ್ಷಸ್ಯಭಿತಾಡಿತೋ ರುಷಾ ಹನೂಮತಾ ಮೋಹಮವಾಪ ರಾಕ್ಷಸಃ ।
ಪುನಶ್ಚ ಸಙ್ಜ್ಞಾಂ ಸಮವಾಪ್ಯ ಶೀಘ್ರಂ ಯಯೌ ಸ ಯತ್ರೈವ
ರಘುಪ್ರವೀರಃ ॥೮.೧೨೦॥
ರಘುಪ್ರವೀರಃ ॥೮.೧೨೦॥
ಹನುಮಂತನ ಕೈಯಿಂದ
ಎದೆಗೆ ಬಿದ್ದ ಹೊಡೆತಕ್ಕೆ ರಕ್ಕಸ ಮೂರ್ಛೆಹೋದ,
ಎಚ್ಚರಗೊಂಡ
ಕುಂಭಕರ್ಣ ತಾನು ರಾಮಚಂದ್ರ ಇದ್ದಲ್ಲಿಗೆ ನಡೆದ.
ವಿಚಿನ್ತಯಾಮಾಸ ತತೋ ಹನೂಮನ್ ಮಯೈವ ಹನ್ತುಂ ಸಮರೇ ಹಿ ಶಕ್ಯಃ ।
ಅಸೌ ತಥಾsಪ್ಯೇನಮಹಂ ನ ಹನ್ಮಿ ಯಶೋ
ಹಿ ರಾಮಸ್ಯ ದೃಢಂ
ಪ್ರಕಾಶಯನ್ ॥೧.೧೨೧॥
ಪ್ರಕಾಶಯನ್ ॥೧.೧೨೧॥
ಅನನ್ಯವಧ್ಯಂ ತಮಿಮಂ ನಿಹತ್ಯ ಸ್ವಯಂ ಸ ರಾಮೋ ಯಶ ಆಹರೇತ ।
ದತ್ತೋ ವರೋ ದ್ವಾರಪಯೋಃ ಸ್ವಯಂ ಚ ಜನಾರ್ದ್ದನೇನೈವ
ಪುರಾತತಶ್ಚ ॥೮.೧೨೨॥
ಪುರಾತತಶ್ಚ ॥೮.೧೨೨॥
ಹನುಮಂತನಲ್ಲಿ ಹೀಗೆ
ಸುಳಿದ ಯೋಚನೆ,
ಇವನನ್ನು
ಕೊಲ್ಲಬಲ್ಲೆ ನಿರಾಯಾಸ ನಾನೇ.
ರಾಮನ ಯಶಸ್ಸು
ಪ್ರಕಾಶಿಸಬೇಕಿದೆ ತಾನೆ,
ನಾ ಕೊಲ್ಲುವುದಿಲ್ಲ
ಗತಿಗಾಣಿಸಲಿ ಶ್ರೀರಾಮನೇ.
ಬೇರ್ಯಾರೂ
ಕೊಲ್ಲಲಾಗದ ಮಹಾರಾಕ್ಷಸ,
ಇವನ ಕೊಂದಾಗಲಿ
ರಾಮನ ಕೀರ್ತಿ ಪ್ರಕಾಶ.
ನಾರಾಯಣನ
ದ್ವಾರಪಾಲಕರಾಗಿದ್ದಾರೆ ಶಾಪಗ್ರಸ್ತ,
ಅವನೇ ಸೇವಕರಿಗಿತ್ತಿದ್ದಾನೆ
ವರದ ಅಭಯಹಸ್ತ.
ನಾ ಕೊಲ್ಲದಿರಲು
ಇವುಗಳೆಲ್ಲ ಕಾರಣ,
ಶ್ರೀರಾಮನಿಂದಲೇ
ಬರಲಿ ಅವರ ಮರಣ.
ಮಯೈವ ವದ್ಧ್ಯೌ ಭವತಂ ತ್ರಿಜನ್ಮಸು ಪ್ರವೃದ್ಧವೀರ್ಯ್ಯಾವಿತಿ ಕೇಶವೇನ
।
ಉಕ್ತಂ ಮಮೈವೈಷ ಯದಪ್ಯನುಗ್ರಹಂ ವಧೇsಸ್ಯ ಕುರ್ಯ್ಯಾನ್ನತು
ಮೇ ಸ
ಧರ್ಮ್ಮಃ ॥೮.೧೨೩॥
ಇತಿ ಸ್ಮ ಸಞ್ಚಿನ್ತ್ಯ ಕಪೀಶಯುಕ್ತೋ ಜಗಾಮ ಯತ್ರೈವ ಕಪಿಪ್ರವೀರಾಃ ।
ಸ ಕುಮ್ಭಕ ರ್ಣ್ಣೋsಖಿಲವಾನರಾಂಸ್ತು
ಪ್ರಭಕ್ಷಯನ್
ರಾಮಮುಪಾಜಗಾಮ ॥೮.೧೨೪॥
ರಾಮಮುಪಾಜಗಾಮ ॥೮.೧೨೪॥
ಜಯ ವಿಜಯರಿಗೆ
ನಾರಾಯಣ ಕೊಟ್ಟಿದ್ದ ಶಾಪ ವಿಮೋಚನಾದ್ವಾರ,
ಮೂರು ಜನ್ಮಗಳಲ್ಲಿ
ಅತಿ ಬಲಿಷ್ಠರಾದ ನೀವಾಗುವಿರಿ ನನ್ನಿಂದಲೇ
ಸಂಹಾರ.
ಹನುಮ
ಸ್ಮರಿಸಿಕೊಳ್ಳುತ್ತಾನೆ ಹೀಗೆ,
ಮಗಗೆ ಗೊತ್ತಾಗದೇ
ತಂದೆಯ ಬಗೆ.
ನಾನವನ ಕೊಂದರೂ
ಅನುಗ್ರಹಿಸುವ ಕೇಶವನದೇ ಸಂಕಲ್ಪ ವ್ಯಾಪಾರ.
ಸತ್ಯಸಂಕಲ್ಪನ
ಯೋಜನೆಯ ಅನುಷ್ಠಾನವೇ ಮಹಾ ಸಾಧನಾಕಾರ್ಯ.
ನಾನವನ ಕೊಲ್ಲುವುದು
ಧರ್ಮವಲ್ಲವೆಂದುಕೊಂಡ ಹನುಮಂತ,
ಸುಗ್ರೀವನ
ಕೂಡಿಕೊಂಡು ನಡೆದ ಬೇರೆ ಕಪಿಗಳಿರುವತ್ತ.
ಕುಂಭಕರ್ಣ ರಾಮನೆಡೆ ನಡೆದ ಎದುರಾದ ಕಪಿಗಳ ತಿನ್ನುತ್ತ.[Contributed by Shri Govind Magal]
No comments:
Post a Comment
ಗೋ-ಕುಲ Go-Kula