Sunday, 22 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 202 - 206

ಪ್ರಾಕ್ಷಿಪತ್ ತಂ ಗಿರಿವರಂ ಲಙ್ಕಾಸ್ಥಃ ಸನ್ ಸ ಮಾರುತಿಃ ।
ಅರ್ದ್ಧಲಕ್ಷೇ ಯೋಜನಾನಾಂ ಯತ್ರಾಸೌ ಪೂರ್ವಸಂಸ್ಥಿತಃ ॥೮.೨೦೨॥
ತದ್ಬಾಹುವೇಗಾತ್ ಸಂಶ್ಲೇಷಂ ಪ್ರಾಪ ಪೂರ್ವವದೇವ ಸಃ ।
ಮೃತಾಶ್ಚ ಯೇ ಪ್ಲವಙ್ಗಾಸ್ತು ತದ್ಗನ್ಧಾತ್ ತೇsಪಿ ಜೀವಿತಾಃ ॥೮.೨೦೩॥

ಆ ಬೆಟ್ಟವಿದ್ದ ದೂರ ಲಂಕೆಯಿಂದ ಐವತ್ತು ಸಾವಿರ ಯೋಜನ,
ಬಲವಂತ ಹನುಮ ಅದನ ಎಸೆದ ಸೇರುವಂತದರ ಸ್ವಸ್ಥಾನ.
ಹನುಮಂತನ ಬಾಹುಬಲದ ವೇಗ,
ಸಂಜೀವಪರ್ವತವ ಸೇರಿಸಿತದರ ಜಾಗ.
ಹಿಂದೆ ಮೃತವಾಗಿದ್ದ ಕಪಿವೃಂದ,
ಬದುಕಿತು ಬೆಟ್ಟದ ಗಾಳಿಯಿಂದ.

ರಾಮಾಜ್ಞಯಾ ಹಿ ರಕ್ಷಾಂಸಿ ಹರಯೋsಬ್ಧಾವವಾಕ್ಷಿಪನ್ ।
ನೋಜ್ಜೀವಿತಾಸ್ತತಸ್ತೇ ತು ವಾನರಾ ನಿರುಜೋsಭವನ್ ॥೮.೨೦೪॥

ಶ್ರೀರಾಮಚಂದ್ರ ದೇವರ ಆಜ್ಞಾನುಸಾರ,
ಕಪಿಗಳೆಸೆದಿದ್ದರು ಸಮುದ್ರಕೆ ಸತ್ತ ರಾಕ್ಷಸರ.
ಹಾಗಾಗಿ ಸಂಜೀವನದ ಗಾಳಿಯಿಂದ ರಾಕ್ಷಸರಿಗಾಗಲಿಲ್ಲ ಮರುಹುಟ್ಟು,
ಕಪಿಗಳು ಮಾತ್ರ ಮತ್ತೆ ಹುಟ್ಟಿ ನೋವಿಲ್ಲದ ಆರೋಗ್ಯವ ಪಡೆದ ಗುಟ್ಟು.

ಛಿನ್ನಪ್ರರೋಹಿಣಶ್ಚೈವ ವಿಶಲ್ಯಾಃ ಪೂರ್ವವರ್ಣ್ಣಿನಃ ।
ಔಷಧೀನಾಂ ಪ್ರಭಾವೇನ ಸರ್ವೇsಪಿ ಹರಯೋsಭವನ್ ॥೮.೨೦೫॥

ದಿವ್ಯೌಷಧದ ಪ್ರಭಾವ ಮತ್ತು ಸಂಗ,
ಮತ್ತೆ ಬೆಳೆದವು ಮುರಿದ ಅಂಗಾಂಗ.
ಕೀಳಲ್ಪಟ್ಟವು ದೇಹದೊಳಗೆ ಸಿಕ್ಕ ಬಾಣ,
ಮರಳಿತು ಕಲೆ ಇರದ ಹಿಂದಿನ ದೇಹಬಣ್ಣ.
ಪಡೆಯಿತು ಕಪಿವೃಂದ ಆರೋಗ್ಯದ ತ್ರಾಣ.

ಅಥಾsಸಸಾದೋತ್ತಮಪೂರುಷಂ ಪ್ರಭುಂ ವಿಮಾನಗೋ ರಾವಣ ಆಯುಧೌಘಾನ್ ।
ಪ್ರವರ್ಷಮಾಣೋ ರಘುವಂಶನಾಥಂ ತಮಾತ್ತಧನ್ವಾsಭಿಯಯೌ ಚ ರಾಮಃ ॥೮.೨೦೬॥

ಹೀಗೆ ಚೇತರಿಸಿಕೊಂಡು ಎದ್ದು ನಿಂತಿತು ಎಲ್ಲಾ ಕಪಿವೃಂದ,
ರಾಮನ ಮೇಲೆ ಬಾಣಾಯುಧಗಳೆಸೆಯುತ್ತಾ ರಾವಣ ಬಂದ.
ಧನುರ್ಧಾರಿ ಶ್ರೀರಾಮಚಂದ್ರ ರಾವಣನಿಗೆ ಎದುರಾದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula