Friday, 22 January 2016

Bhav Guccha 04

ಭಾವ ಗುಚ್ಛ  By  "ತ್ರಿವೇಣಿ ತನಯ"


ವೇಳೆ-ಸಾಧನೆ 

ಕೊಡುವುದಕೆ ಕಲಿವುದಕೆ ಅನ್ನದಿರು ನಾಳೆ,
ಯಾರಿಗೆ ಗೊತ್ತು ನಿನಗೆಷ್ಟಿದೆಯೋ ವೇಳೆ,
ಏನೇ ಕೊಡು ಏನೇ ಮಾಡು ಪ್ರದರ್ಶನಕೆ ಅಲ್ಲ,
ಆತ್ಮೋದ್ಧಾರವೆಂದರೂ ಹರಿಪ್ರೀತಿಗಾಗಿ ಎಲ್ಲಾ.

ಯಾರಿಗೆ ಗೊತ್ತು ಎಷ್ಟೆಂದು ವಿಧಿ ಇತ್ತಿರುವ ಬಾಳು,
ಬಿಡುಗಡೆಗಾಗಿ ದಾಟಲೇಬೇಕೀ ಸಂಸಾರದ ಗೋಳು,
ದುಗುಡ ದುಮ್ಮಾನವೇಕೆ ನೀ ನಾಟಕದ ಆಳು,
ನಿನ್ನ ಪಾತ್ರವ ಮುಗಿಸಿ ಕೈ ತೊಳೆದು ಏಳು.

ಏನನ್ನೂ ದೂರದಿರು ಯಾರನ್ನೂ ದೂರದಿರು,
ಮನಹದವ ಮಾಡುತಲಿ ಸಮಯಕ್ಕೆ ಕಾದಿರು,
ಹಾಕುತ ಹರಿನಾಮದ ನೀರು ಆರು ಕಳೆಗಳ ಕೀಳು,
ಮೃದುವಾಗದ ಹೊಲದಲ್ಲಿ ಬೀಜ ಮೊಳೆತೀತೆ ಹೇಳು.

ನಿಷ್ಕಪಟ ನಿರ್ಮತ್ಸರ ನೇರ ಮನಸು,
ಬೇಡುವೆನದನೆ ಜನ್ಮಾಂತರಕ್ಕಿತ್ತು ಹರಸು,
ಅದೊಂದಿರಲು ಏನು ಮಾಡಿಯಾವು ಸಾಂಸಾರಿಕ ವೇದನೆ,
ನಿನ್ನ ಸೃಷ್ಟಿ ವೈಚಿತ್ರವ ಒಪ್ಪಿ ಅಪ್ಪುವುದಲ್ಲವೇ ಸಾಧನೆ?

ಬದುಕಿನಲ್ಲಿ ಅಲ್ಲ ಸಾಧನೆ,
ಬದುಕೇ ಆಗಬೇಕು ಸಾಧನೆ,
ಇದೇ ತತ್ವವಾದದ ಮರ್,
ಅರಿತು ಬದುಕಿದರೆ ಕಳೆದೀತು ಕರ್ಮ.
(Contributed by Shri Govind Magal)

No comments:

Post a Comment

ಗೋ-ಕುಲ Go-Kula