Saturday, 23 January 2016

Bhava Guccha 05

ಭಾವ ಗುಚ್ಛ   By  "ತ್ರಿವೇಣಿ ತನಯ" 

ಗುರು ವಂದನ 

ಆಚಾರ್ಯ ಬನ್ನಂಜೆ ಎಲ್ಲರಂತಲ್ಲ,
ಅವರಾಳ ಅಗಲವನು ಬಲ್ಲವನೇ ಬಲ್ಲ,
ಅವರಾಡೋ ಪ್ರತಿ ಮಾತು ಅನುಭವದ ಮುತ್ತು,
ಅದನೊಪ್ಪಿ ಸಾಧನೆಯ ಮೆಟ್ಟಿಲುಗಳ ಹತ್ತು.

ಸಾಮಾನ್ಯ ಅಲ್ಲ ನೀ ಬನ್ನಂಜೆ ಆಚಾರ್ಯ ಗೋವಿಂದ,
ನೀ ಬಂದಿರುವುದೇ ತಿಳಿಸಲು ಮಧ್ವಾಮೃತದ ಆನಂದ,
ಒಳಗಿಳಿದು ಅನುಭವಿಸಿ ಹೇಳುವೆ ವೇದ ಉಪನಿಷತ್ಗಳ ಸಾರ,
ಅನುಮಾನವಿಲ್ಲ ನೀ "ಹೆಬ್ಬಲಸು"ಮನೆತನದ ಕೂಸು ಓ ಧೀರ.

ದಿನ ಮಾಸ ವರ್ಷಗಳಿಂದ ಗುರುಗಳಿಗೆ ಎಂಬತ್ತು,
ತುಂಬಿದೆ ಎಪ್ಪತ್ತು ವರ್ಷಗಳ ಸಾಧನೆಯ ಜ್ಞಾನ ಸಂಪತ್ತು,
ನೈಜಾನುಸಂಧಾನದಿಂದ ಜ್ಞಾನ ಸಿಂಚನಗೈಯುತಿರುವ ಅವಧೂತ,
ಅವರಾಶೀರ್ವಾದ ಮಾರ್ಗದರ್ಶನದಲ್ಲಿರುವ ನಾವೆಲ್ಲ ಪುನೀತ.

ಪೂಜ್ಯ ಬನ್ನಂಜೆಯವರ ಎಂಬತ್ತರ ಸಂಭ್ರಮ,
ತಪ್ಪದೇ ವ್ಯಾಪಿಸಲಿ ಎಲ್ಲೆಡೆಯೂ ಅದರ ಘಮ,
ಮನವರಿಕೆಯಾಗಲದು ಮನುಕುಲದನಾವರಣಕ್ಕೆ ಅವರ ಶ್ರಮ,
ಅವರ ನಡೆ ನುಡಿ ಸಂದೇಶಗಳ ಅಳವಡಿಸಿಕೊಂಡಾಗಲೇ ಸಾರ್ಥಕ ಸಂಭ್ರಮ.

ತಪಸ್ಸದು ಅವತಾರಪುರುಷನ ದಶಕಗಳ ಜ್ಞಾನ ಸಾಧನೆ,
ಹುದುಗಿದೆ ಒಳಗೆ ಮಧ್ವಮತ ವಿಶ್ವಮತವೆಂಬ ಬೋಧನೆ,
"ಸ್ವಭಾವ"ಮರೆಸುವ "ಪ್ರಭಾವ"ದ ಅನೇಕ ಸುಜೀವಿಗಳುಂಟು,
ಅಂಥವರ ಉದ್ಧಾರಕ್ಕೆ ಅನಾವರಣವಾಗಲಿ ಗುರುಗಳ ಜ್ಞಾನದ ಗಂಟು.
(Contributed by Shri Govind Magal)

No comments:

Post a Comment

ಗೋ-ಕುಲ Go-Kula