ಶ್ಲೋಕ - 7.
ನರಕೇಸರಿಣಂ ಧಿಕೃತ
ಹಿರಣ್ಯ ಕರಿಣಂ
ಚ ಸೂಕರಿಣಮ್
|
ತೋಷಿತಬುಧಜನಹರಿಣಂ ವರಿನಂ
ದರಿಣಂ ಸ್ಮರಾಮಿ
ಮಂದರಿಣಮ್ ||
ಪದಚ್ಚೇದ
ನರಕೇಸರಿಣಮ್ . ಧಿಕೃತ ಹಿರಣ್ಯ ಕರಿಣಮ್ . ಚ . ಸೂಕರಿಣಮ್ . ತೋಷಿತಬುಧಜನಹರಿಣಮ್ . ವರಿನಮ್ . ದರಿಣಮ್ . ಸ್ಮರಾಮಿ . ಮಂದರಿಣಮ್ .
ಅನ್ವಯಾರ್ಥ:
ಧಿಕೃತ - ವಧಿಸಲ್ಪಟ್ಟ, ಹಿರಣ್ಯ ಕರಿಣಂ - ಹಿರಣ್ಯ ಕಶಿಪು ಎಂಬ ಆನೆಯುಳ್ಳ, ಕೇಸರೀ - ಸಿಂಹ. ನರಕೇಸರಿಣಂ - ನರಸಿಂಹನನ್ನು, ಚ - ಮತ್ತು, ಸೂಕರಿಣಂ - ವರಾಹನನ್ನು, ತೋಷಿತ- ಸಂತುಷ್ಟರಾದ, ಬುಧಜನ - ಜ್ಞಾನಿಗಳುಳ್ಳ, , ಹರಿಣಂ - ಶ್ರೀ ಹರಿಯನ್ನು, ವರಿನಂ - (ಯದಸುಪ್ತಿಗತೋವರಿನಸ್ಸುಖವಾನ್ ಸುಖರೂಪಿಣಮಾಹುರತೋನಿಗಮಾ:) ವ: - ಜ್ಞಾನ, ಇನ
- ಒಡೆಯ. ನಿದ್ರೆಯಲ್ಲೂ ಜ್ಞಾನದ ಹ್ರಾಸ ಇಲ್ಲದ ಪೂರ್ಣಜ್ಞಾನರೂಪನನ್ನು, ದರಿಣಂ - ಶಂಖವನ್ನು ಹಿಡಿದವನನ್ನು, ಮಂದರಿಣಂ - ಮಂದರ ಪರ್ವತವನ್ನು ಧರಿಸಿದ ಕೂರ್ಮನನ್ನು, ಸ್ಮರಾಮಿ - ಮನಸ್ಸಿನಲ್ಲಿ ಚಿಂತಿಸುತ್ತೇನೆ.
ತಾತ್ಪರ್ಯ:
ಹಿರಣ್ಯಾಕ್ಷನನ್ನು ಕೊಂದ ವರಾಹನನ್ನು, ಹಿರಣ್ಯ ಕಶಿಪುವನ್ನು ಕೊಂದ ನರಸಿಂಹನನ್ನು, ಜ್ಞಾನಿಗಳಾದ ಜನರನ್ನು ಸಂತೋಷ ಪಡಿಸಿದ ಹರಿಯನ್ನು, ನಿದ್ರೆಯಲ್ಲೂ ಜ್ಞಾನದ ಹ್ರಾಸ ಇಲ್ಲದ ಪೂರ್ಣಜ್ಞಾನರೂಪನನ್ನು, ಶಂಖವನ್ನು ಹಿಡಿದ, ಮಂದರಧಾರಿ ಕೂರ್ಮನನ್ನು (ಮಂದರಧಾರಿ - ಗೋವರ್ಧನ ಧಾರಿ ಕೃಷ್ಣನನ್ನು ಕೂಡಾ) ಮನಸ್ಸಿನಲ್ಲಿ ಚಿಂತಿಸುತ್ತೇನೆ.
ಆರ್ಯಾ ವೃತ್ತದಲ್ಲಿರುವ (ಮಾತ್ರಾ ಛಂದಸ್ಸು) ಈ ಶ್ಲೋಕದಲ್ಲಿ ಹಲವಾರು ಭಗವದ್ರೂಪಗಳ ಚಿಂತನೆ ಇದೆ.
ಮತ್ತು ಅತ್ಯಂತ ಚಮತ್ಕಾರಿಕವಾದ, ಪದಜೋಡಣೆಯ ವ್ಯತ್ಯಾಸದೊಂದಿಗೆ ವಿವಿಧ ಅರ್ಥಗಳನ್ನು ಹೊರಡಿಸುವ ಪದಪುಂಜಗಳಿವೆ. ಕೇವಲ ಹಿರಣ್ಯ ಎಂಬ ಶಬ್ದದಿಂದ ಹಿರಣ್ಯಾಕ್ಷ ಹಿರಣ್ಯ ಕಶಿಪು ಎಂಬ ಎರಡು ಅರ್ಥ ಹೊರಡಿಸುವ ಜಾಣ್ಮೆ ಇದೆ. ಆನೆಯನ್ನು ಸಿಂಹ ಕೊಲ್ಲುವುದು ರೂಡಿ. ಆದರೆ, ಈ ಹಿರಣ್ಯಕನೆಂಬ ಆನೆಯನ್ನು ಹಂದಿ (ವರಾಹ) ಕೊಂದಿದ್ದು ಆಶ್ಚರ್ಯ !! ಹಾಗೆಯೇ ಇನ್ನೊಂದು ಅದ್ಭುತವೆಂದರೆ, ಹರಿಣ ಎಂದರೆ ಜಿಂಕೆ. ಇಲ್ಲಿ, ಬುಧಜನರೆಂಬ ಜಿಂಕೆ. ಈ ಜಿಂಕೆಯನ್ನು ಸಂತೋಷಪಡಿಸಿದ್ದು ನರ ರೂಪದ ಸಿಂಹ. ಲೋಕದಲ್ಲಿ, ಸಿಂಹವೆಂದರೆ ಜಿಂಕೆಗಳಿಗೆ ಜೀವಭಯ. ಆದರೆ ಈ ಅರೆ ಸಿಂಹ ಎಂದರೆ ಬುಧರೆಂಬ ಜಿಂಕೆಗಳಿಗೆ ಆಪ್ಯಾಯಮಾನ. ಇಂಥ ವೈರುಧ್ಯಗಳ ಆಭಾಸವನ್ನು ಮಾಡುವ ಚಮತ್ಕಾರವಂತೂ ಅನ್ಯಾದೃಷ.
****
Śloka - 7
नरकेसरिणं धिकृत हिरण्य करिणं च सूकरिणम् |
तोषितबुधजनहरिणं वरिनं दरिणं स्मरामि मंदरिणम् ||
narakēsariṇaṁ dhikr̥ta hiraṇya
kariṇaṁ ca sūkariṇam |
tōṣitabudhajanahariṇaṁ varinaṁ dariṇaṁ smarāmi mandariṇam ||
tōṣitabudhajanahariṇaṁ varinaṁ dariṇaṁ smarāmi mandariṇam ||
Padacchēda:
नरकेसरिणम् . धिकृत हिरण्य करिणम् . च . सूकरिणम् .
तोषितबुधजनहरिणम्
. वैरिनम् . दरिणम् . स्मरामि . मन्दरिणम् .
narakēsariṇam . dhikr̥ta hiraṇya kariṇam . ca . sūkariṇam .
tōṣitabudhajanahariṇam . varinam . dariṇam . smarāmi . mandariṇam .
tōṣitabudhajanahariṇam . varinam . dariṇam . smarāmi . mandariṇam .
Word Meanings:
धिकृत(dhikr̥ta) – egoistic हिरण्य करिणम्(hiraṇya
kariṇam) –
existed an elephant named Hiraṇya Kaśipu; . केसरि(kēsari) – lion नरकेसरिणम्(narakēsariṇam) – Narasimha; च(ca) – also; बुधजन(budhajana) – the knowledgeable ones; हरिणम्(hariṇam) – Shri Hari; वरिनम्(varinam) – (यदसुप्तिगतोवरिनस्सुखवान् सुखरुपीणमाहुरतोनिगमाः - Yadasuptigatōvarinas'sukhavān
sukharūpiṇamāhuratōnigamā) – वः(vaha) – Knowledge; इन(ina) – Master, even in sleep, with no decrement
whatsoever in knowledge; दरिणम्(dariṇam) – bearing the conch(śankha); सूकरिणम्(sūkariṇam) – Varāha; तोषित(tōṣita)
– satiated; मन्दरिणम्(mandariṇam) – one who carried
the mandara mountain on his back as Kūrma; स्मरामि(smarāmi)
– mentally contemplated.
Tātparya:
Let us
mentally contemplate on Varāha who killed Hiraṇyakashipu; on Narasimha who killed Hiraṇyākśa;
Hari who brings joy to the knowledgeable ones; the form of Pūrṇagnyāna, the one
who holds a conch (śankha) and blesses us with
non-decremental knowledge even in sleep; Kūrma, the one who bears the mandara
mountain on his back (mandaradhāri – is also Lord Kṛṣṇa who lifted and held the
Gōverdhana hill).
This śloka which is structured in the āryā format (mātrā
chandas) brings to fore, the many forms of Bhagavan, for our contemplation.
Also, the way many of the words are formed, the clusters yield an amazing array
of interpretations. For instance, the
mere use of ‘Hiraṇyā,’ subtly yields both Hiraṇyākśa
& Hiraṇyakashipu, derivatives. It
is normal to expect a lion to kill an elephant, but
here, it is a boar(Varāha) that kills an egoistic elephant that is Hiraṇyakashipu.
Another amazing thing here is that, Hiraṇ means a deer. Here it is a deer named
budhajana. This deer found joy in a human like lion!
While the deer normally dreads the very sight of a lion in this world, out here
is depicted the imagery of deer named budhajana being endeared by the semi-lion
form. Unseen wonders are packed in these seemingly antithetical expressions!
No comments:
Post a Comment
ಗೋ-ಕುಲ Go-Kula