ಭಾವ ಗುಚ್ಛ By "ತ್ರಿವೇಣಿ ತನಯ"
ಮುಖವಾಡ
ಸಾಕು ಸಾಕೀ ಮುಖವಾಡದ ಬದುಕು ,
ಕಳಚಲೀ ಮುಖವಾಡ ನಿನ್ನಂತರಂಗವ ಕೆದಕು,
ಕಿತ್ತೆಸೆದು ಮುಖವಾಡ ನಿನ್ನ ನೀ ಕಾಣು ,
ಮುಂದೊಮ್ಮೆ ಕಂಡಾನು ಒಳಗಣ್ಣಿಗೆ ತಾನು .
ಸಂಬಂಧ .
ಯಾರು ಯಾರಿಗೆ ಬಂಧು ಯಾರು ಬಳಗ ,
ಎಲ್ಲರೊಳು ನಿಂತಾಡಿಸುತಿಹ ಅವ ಹಿರಿ ಗೌಳಿಗ,
ಒಪ್ಪಿಕೊ ಇಲ್ಲಿನ ಬಳಗ ದೇಹಸಂಬಂಧದಿಂದ ಎಂದು ,
ಅವಿರತ ಅನವರತ ಇರುವ ಅವ ಆತ್ಮಬಂಧು .
ಹೋಲಿಕೆ
ಎಲ್ಲಿ ನೋಡಿದರೂ ದೋಷಗಳ ಹೋಲಿಕೆ,
ಆಗುವುದೇ ಆದರೆ ಗುಣಗಳದಿಲ್ಲ ಯಾಕೆ ?
ಸೃಷ್ಟಿಯಲ್ಲೇ ಇಲ್ಲ ಏಕತಾನತೆಯ ನೆರಳು,
ಒಪ್ಪಿ ನಡೆಯದ ಜೀವಿಗಳಲ್ಲವೇ ಮರುಳು!
ಆತ್ಮಸಾಕ್ಷಿ
ಮಾಡಿದ್ದು ಸರಿಯೇ ಅಂತರಂಗವ ಕೇಳು,
ನುಡಿದೀತು ಯಾವುದು ಏಳು —ಬೀಳು ,
ಕದವಮುಚ್ಚಿ ಕೂತವಗೆ ಅಂತರಂಗ ಎಲ್ಲಿ ?
ಹುಡುಕಾಟ ಹೊರಗೆ ಇರೆ ಸಿಕ್ಕುವುದು ಇನ್ನೆಲ್ಲಿ?
ಬಂಧನ
ನೀ ತಂದೆ ನಾ ಬಂದೆ ಸಂಶಯವೇ ಇಲ್ಲ ,
ನನಗಿಲ್ಲಿಯ ಕಾರಭಾರ ಬಂಧನವೇ ಎಲ್ಲ ,
ಏನೇ ಕೊಡು ಏನೇ ಬಿಡು ಅಂಟದಂತಿರಿಸು,
ಪರಮ ಕಾರುಣ್ಯ ತೋರಿ ಅಜ್ಞಾನ ಅಳಿಸು.
(Contributed by Shri Govind Magal)
ಮುಖವಾಡ
ಸಾಕು ಸಾಕೀ ಮುಖವಾಡದ ಬದುಕು ,
ಕಳಚಲೀ ಮುಖವಾಡ ನಿನ್ನಂತರಂಗವ ಕೆದಕು,
ಕಿತ್ತೆಸೆದು ಮುಖವಾಡ ನಿನ್ನ ನೀ ಕಾಣು ,
ಮುಂದೊಮ್ಮೆ ಕಂಡಾನು ಒಳಗಣ್ಣಿಗೆ ತಾನು .
ಸಂಬಂಧ .
ಯಾರು ಯಾರಿಗೆ ಬಂಧು ಯಾರು ಬಳಗ ,
ಎಲ್ಲರೊಳು ನಿಂತಾಡಿಸುತಿಹ ಅವ ಹಿರಿ ಗೌಳಿಗ,
ಒಪ್ಪಿಕೊ ಇಲ್ಲಿನ ಬಳಗ ದೇಹಸಂಬಂಧದಿಂದ ಎಂದು ,
ಅವಿರತ ಅನವರತ ಇರುವ ಅವ ಆತ್ಮಬಂಧು .
ಹೋಲಿಕೆ
ಎಲ್ಲಿ ನೋಡಿದರೂ ದೋಷಗಳ ಹೋಲಿಕೆ,
ಆಗುವುದೇ ಆದರೆ ಗುಣಗಳದಿಲ್ಲ ಯಾಕೆ ?
ಸೃಷ್ಟಿಯಲ್ಲೇ ಇಲ್ಲ ಏಕತಾನತೆಯ ನೆರಳು,
ಒಪ್ಪಿ ನಡೆಯದ ಜೀವಿಗಳಲ್ಲವೇ ಮರುಳು!
ಆತ್ಮಸಾಕ್ಷಿ
ಮಾಡಿದ್ದು ಸರಿಯೇ ಅಂತರಂಗವ ಕೇಳು,
ನುಡಿದೀತು ಯಾವುದು ಏಳು —ಬೀಳು ,
ಕದವಮುಚ್ಚಿ ಕೂತವಗೆ ಅಂತರಂಗ ಎಲ್ಲಿ ?
ಹುಡುಕಾಟ ಹೊರಗೆ ಇರೆ ಸಿಕ್ಕುವುದು ಇನ್ನೆಲ್ಲಿ?
ಬಂಧನ
ನೀ ತಂದೆ ನಾ ಬಂದೆ ಸಂಶಯವೇ ಇಲ್ಲ ,
ನನಗಿಲ್ಲಿಯ ಕಾರಭಾರ ಬಂಧನವೇ ಎಲ್ಲ ,
ಏನೇ ಕೊಡು ಏನೇ ಬಿಡು ಅಂಟದಂತಿರಿಸು,
ಪರಮ ಕಾರುಣ್ಯ ತೋರಿ ಅಜ್ಞಾನ ಅಳಿಸು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula