ಶ್ಲೋಕ 3.
ಉಗ್ರಂ ವ್ಯಗ್ರೇಂದ್ರಲೋಕಾಭಯದಮರಿದರಾದ್ಯಾಯುಧೋದಗ್ರಬಾಹುಮ್
ರುದ್ರಂ ರುದ್ರೇಂದ್ರಮುಖ್ಯಾಮರಗಣವಿನುತಂ ಭದ್ರ ವಿಜ್ಞಾನ ಮುದ್ರಮ್ |
ವೀರಂ ವೀರಾಸನಸ್ಥಂ ಭವಭಯ ಹರಣಂ ದಾರಣಂ ದಾರುಣಾನಾಮ್
ರೂಕ್ಷಂ ತ್ರ್ಯಕ್ಷಂ ಮಹೇಕ್ಷಂ ಕ್ಷಪಿತ ದುರಿತಮಕ್ಷೋಭಣೀಯಂ ದಿದೃಕ್ಷೇ ||
ಪದಚ್ಛೇದ:
ಉಗ್ರಮ್ . ವ್ಯಗ್ರ ಇಂದ್ರಲೋಕ ಅಭಯದಮ್. ಅರಿ ದರಾದಿ ಆಯುಧ ಉದಗ್ರ ಬಾಹುಮ್. ರುದ್ರಮ್. ರುದ್ರ ಇಂದ್ರ ಮುಖ್ಯ ಅಮರಗಣ ವಿನುತಮ್. ಭದ್ರ ವಿಜ್ಞಾನ ಮುದ್ರಮ್. ವೀರಮ್. ವೀರಾಸನಸ್ಥಮ್. ಭವ ಭಯ ಹರಣಮ್. ದಾರಣಮ್. ದಾರುಣಾನಾಮ್. ರೂಕ್ಷಮ್. ತ್ರ್ಯಕ್ಷಮ್. ಮಹೇಕ್ಷಮ್. ಕ್ಷಪಿತ ದುರಿತಮ್. ಅಕ್ಷೋಭಣೀಯಮ್. ದಿದೃಕ್ಷೇ.
ಅನ್ವಯಾರ್ಥ:
ಉಗ್ರಮ್ - ಭಯಾನಕವಾದ ರೂಪವುಳ್ಳ, ವ್ಯಗ್ರ - ದಾನವರ ಆಕ್ರಮಣದಿಂದ ಉಲ್ಲೋಲ ಕಲ್ಲೋಲವಾದ, ಇಂದ್ರಲೋಕ - ಇಂದ್ರಲೋಕಕ್ಕೆ (ಇಂದ್ರಲೋಕದ ದೇವತೆಗಳು ಮೊದಲಾದವರಿಗೆ) ಅಭಯದಮ್ - ಅಭಯ ಕೊಟ್ಟ, ಅರಿ - ಸುದರ್ಶನಚಕ್ರ, ದರ - ಲಕ್ಷ್ಮೀ ಸ್ವರೂಪವಾದ ಪಾಂಚಜನ್ಯವೆಂಬ ಶಂಖ, ಆದಿ - ಮೊದಲಾದ, ಆಯುಧ - ಆಯುಧಗಳನ್ನು, ಉದಗ್ರ - ಎತ್ತಿ ಹಿಡಿದಿರುವ, ಬಾಹುಮ್ - ತೋಳುಗಳುಳ್ಳ, ರುದ್ರೇಂದ್ರ ಮುಖ್ಯ - ರುದ್ರದೇವರು ಮತ್ತು ದೇವೇಂದ್ರರನ್ನು ಮುಖ್ಯರಾಗಿ ಉಳ್ಳ, ಅಮರಗಣ - ದೇವತೆಗಳ ಸಮೂಹದಿಂದ, ವಿನುತಂ - ವಿಶೇಷವಾಗಿ ಶರಣುಹೊಂದಿ ಸ್ತುತಿಸಲ್ಪಟ್ಟ, ಮಂಗಳಕರವಾದ , ವಿಜ್ಞಾನ ಮುದ್ರಮ್ - ಜ್ಞಾನ
ಮುದ್ರೆಯನ್ನು ತೋರುತ್ತಿರುವ, ವೀರಮ್ - ಸಕಲ ಶಕ್ತಿ ಸ್ವರೂಪನಾದ, ವೀರಾಸನಸ್ಥಮ್ - ವೀರಾಸನದಲ್ಲಿ ಮಂಡಿತನಾದ, ಭವ ಭಯ - ಈ ಸಂಸಾರಚಕ್ರದ ಭಯವನ್ನು, ಹರಣಮ್ - ಹೋಗಲಾಡಿಸುವ, ದಾರುಣಾನಾಮ್ - ದುಷ್ಟರ (ದುಷ್ಟರನ್ನು)ದಾರಣಮ್ - ಕೂರುಗುರುಗಳ ಪ್ರಭೆಯಿಂದಲೇ ಸೀಳಿಬಿಡುವ, ರೂಕ್ಷಮ್ - (ದುಷ್ಟರಿಗೆ) ಬಹಳ ಕಟೋರನಾದ, ಮಹೇಕ್ಷಮ್ (ಮಹಾ ಈಕ್ಷಮ್) ಮಹಾ ಜ್ಞಾನಮಯನಾದ, ಕ್ಷಪಿತ ದುರಿತಮ್ - (ನಾಶ ಮಾಡಲ್ಪಟ್ಟ ದುರಿತಗಳನ್ನುಳ್ಳ) ಅನಿಷ್ಟವನ್ನು ನಾಶಮಾಡಿದಂತ:, ಅಕ್ಷೋಭಣೀಯಮ್ - ಯಾರಿಂದಲೂ ವಿಚಲಿತನಾಗದ ತ್ರ್ಯಕ್ಷಮ್ - ಮುಕ್ಕಣ್ಣನಾದ, ರುದ್ರಮ್ - ರುದ್ರನಾಮಕ ನರಸಿಂಹನನ್ನು ( ರುಜಂ ದ್ರವಣತೋ ಯಸ್ಮಾತ್ ರುದ್ರಸ್ತಸ್ಮಾತ್ ಜನಾರ್ದನ: ಭವರೋಗವನ್ನು ಕರಗಿಸುವ ಜನಾರ್ದನನೆ ನಿಜವಾದ ರುದ್ರ. ಜನ - ಹಟ್ಟನ್ನು, ಅರ್ದನ - ನಾಶ ಮಾಡುವವನು.) ದಿದೃಕ್ಷೇ - ನೋಡಲು ಬಯಸುತ್ತೇನೆ. (ದ್ರಷ್ಟುಂ ಇಚ್ಛಾ ದಿದೃಕ್ಷಾ);
ತಾತ್ಪರ್ಯ: ಈ ಶ್ಲೋಕದಲ್ಲಿ ಭಗವಂತನ
ವೈವಿಧ್ಯತೆಗಳನ್ನು ಚಿಂತಿಸಲಾಗಿದೆ.
ಭಗವಂತ ಉಗ್ರರೂಪಿ. ಆದರೆ ಮಾಡಿದ್ದೇನು? ಅಸುರರ
ದಾಳಿಯಿಂದ ಕೆಂಗೆಟ್ಟ ದೇವತೆಗಳಿಗೆ ಅಭಯ ಕೊಟ್ಟ.
ಅಂದರೆ ಅಸುರರಿಗೆ ಮಾತ್ರ ಉಗ್ರ ಅಷ್ಟೇ ಹೊರತು
ಎಲ್ಲರಿಗೂ ಅಲ್ಲ. ಮತ್ತೆ ಇಲ್ಲಿ ಭಗವಂತನ ಗುಣಗಳ ಅನುಸಂಧಾನ. ನಾನು ಭಗವಂತನನ್ನು ನೋಡಬೇಕು. ಎಂಥ ಭಗವಂತ? ಕೈಲಿ ಧರ್ಮದ ಪ್ರತೀಕವಾದ ಚಕ್ರ ಮತ್ತು ಮತ್ತು
ಅರ್ಥ/ಜ್ಞಾನಗಳ ಪ್ರತೀಕವಾದ ಶಂಖ ಮೊದಲಾದ ಆಯುಧಗಳನ್ನು
ಎತ್ತಿ ಹಿಡಿದವನು.ವಾಸ್ತವವಾಗಿ ಅವನಿಗೆ ಯಾವ ಆಯುಧವೂ ಬೇಡ.ಕೇವಲ ನಮ್ಮ ಅನುಸಂಧಾನಕ್ಕೆ ಬೇಕಷ್ಟೇ.
ಮತ್ತೆ ಅವನು ರುದ್ರನೂ ಹೌದು ಮತ್ತು ರುದ್ರ
ಇಂದ್ರಾದಿಗಳಿಗಿಂತ ಮುಖ್ಯನೂ ಹೌದು ಮತ್ತು ಮುಕ್ಕಣ್ಣ ಕೂಡ. ಇದು ಹೇಗೆ ? ಅಂದರೆ, ಭಗವಂತನೇ
ರುದ್ರನಲ್ಲಿ ರುದ್ರರೂಪದಲ್ಲಿ ಇರುವುದರಿಂದ ರುದ್ರದೇವರಿಗೆ ರುದ್ರತ್ತ್ವ ಬಂತು ಆದ್ದರಿಂದ.
ಹೀಗೆ, ಕರುಣಾಳುವಾದ, ಜ್ಞಾನ ಮುದ್ರೆಯನ್ನು ತೋರುವ ಉಗ್ರರೂಪದ, ಎಲ್ಲ
ದೇವತೆಗಳಿಂದ ನಮಸ್ಕರಿಸಲ್ಪಡುವ, ಜ್ಞಾನ ಸ್ವರೂಪನಾಗಿ ಬೆಳಗುವ, ಶಕ್ತಿಸ್ವರೂಪನಾಗಿ
ವೀರಾಸನದಲ್ಲಿ ಕುಳಿತ ನರಸಿಂಹನನ್ನು ನೋಡ ಬಯಸುವೆ ಎಂದು ಭಾವ.
ಸ್ರಗ್ಧರಾ ಛಂದಸ್ಸಿನಲ್ಲಿರುವ ಈ ಶ್ಲೋಕದಲ್ಲಿ ಕೂಡ ನರಸಿಂಹದೇವರನ್ನು ನೇರವಾಗಿ ಹೆಸರಿಸದೆ ಸೂಚ್ಯವಾಗಿ ರುದ್ರ ಶಬ್ದವಾಚ್ಯ ನರಸಿಂಹ ಎಂದು ಪರೋಕ್ಷವಾಗಿ ತೋರಿಸಲಾಗಿದೆ. ಹಾಗೆಯೇ ಇಲ್ಲಿ, ಸಾಮೂಹಿಕವಾದ ಉಪಾಸನೆಯ ಬದಲು ಪ್ರತಿಯೊಬ್ಬ ಭಕ್ತನ ಪ್ರತ್ಯೇಕ ಉಪಾಸನೆಯನ್ನು "ದಿದೃಕ್ಷೇ " ಎಂಬ ಉತ್ತಮ ಪುರುಷ ಏಕವಚನ ಪ್ರಯೋಗದಿಂದ ಸೂಚಿಸಲಾಗಿದೆ.
ಮುಂದುವರೆಯುತ್ತದೆ....
****
śloka 03
उग्रं व्यग्रेन्द्रलोकाभयदमरिदराद्यायुधोदग्रबाहुं रुद्रं
रुद्रेन्द्रमुख्यामरगणविनुतं भद्र विज्ञान मुद्रं |
वीरं वीरासनस्थं भवभय हरणं दारणं दारुणानाम्
रूक्षं त्र्यक्षं महेक्षम क्षपित दुरितमक्षोभणीयं दिदृक्षे ||
ugraṁ
vyagrēndralōkābhayadamaridarādyāyudhōdagrabāhuṁ rudram rudrēndramukhyāmaragaṇavinutaṁ
bhadra vijñāna mudram |
vīraṁ vīrāsanasthaṁ bhavabhaya haraṇaṁ dāraṇaṁ dāruṇānām
rūkṣaṁ tryakṣaṁ mahēkṣaṁ kṣapita duritamakṣōbhaṇīyaṁ didr̥kṣē ||
vīraṁ vīrāsanasthaṁ bhavabhaya haraṇaṁ dāraṇaṁ dāruṇānām
rūkṣaṁ tryakṣaṁ mahēkṣaṁ kṣapita duritamakṣōbhaṇīyaṁ didr̥kṣē ||
Padacchēda:
उग्रं . व्यग्र इन्द्रलोक अभयदं . अरि दरादि आयुध उदग्र बाहुम् . रुद्रं.
रुद्र इन्द्र मुख्य अमरगण विनुतं . भद्र विज्ञान मुद्रम् .
वीरम् . वीरासनस्थं . भव भय हरणं . दारणं.दारुणानाम्.
रूक्षं . त्र्यक्षं . महेक्षं . क्षपित दुरितं अक्षोभणीयं दिदृक्षे.
ugram . vyagra
. indralōka abhayadam . ari darādi āyudha
udagra bāhum . rudram . rudra indra mukhya amaragaṇa vinutam . bhadra vijñāna
mudram .
vīram . vīrāsanastham . bhava bhaya haraṇam . dāraṇam . dāruṇānām .
rūkṣam . tryakṣam . mahēkṣam . kṣapita duritam akṣōbhaṇīyam . didr̥kṣē .
vīram . vīrāsanastham . bhava bhaya haraṇam . dāraṇam . dāruṇānām .
rūkṣam . tryakṣam . mahēkṣam . kṣapita duritam akṣōbhaṇīyam . didr̥kṣē .
Word Meanings:
उग्रं(ugram) – ferocious; व्यग्र(vyagra) – chaos created by the invasion
of demons; इन्द्रलोक(indralōka) –
pertaining to the world of Indra(occupied by demi-gods lead by Indra); अभयदं(abhayadam) – granting fearlessness; अरि(ari) – the Sudarshan Chakra; दर(dara) – the conch named pāncajanya in the form of Lakshmi; आदि(ādi)- primordial; आयुध(āyudha) – weapons; उदग्र(udagra) – holding
aloft; बाहुम्(bāhum) – with shoulders; रुद्रेन्द्र मुख्य(rudrēndra mukhya) – primarily, of the gods Rudra and Devendra;
अमरगण(amaragaṇa) – the group of demigods; विनुतं(vinutam) – eulogy through exclusive surrender; भद्र(bhadra) – (displaying) auspicious विज्ञान `मुद्रम् (vijñāna mudram) - vijñāna mudras; वीरम्(vīram) – an embodiment of strength; वीरासनस्थम्(vīrāsanastham) – seated in vīrāsana; भव भय(bhava bhaya) –
fear stemming from birth and death cycles; हरणम्(haraṇaṁ) – One who
removes; दारुणानाम्(dāruṇānām) –the
wicked ones; दारणम्(dāraṇaṁ) – rip
apart with the nail of His little finger; रूक्षम्(rūkṣaṁ) – harsh
(to the wicked); महेक्षम् (mahēkṣam)(महा ईक्षम् / maha īkṣam) – an
aura of vast knowledge; क्षपित दुरितम्(kśapita duritam) – destruction of woes; अक्षोभणीयम्(akṣōbhaṇīyam) –
undisturbed by anyone or anything; त्र्यक्षम्(tryakṣam)
tri-eyed; रुद्रम्(rudraṁ) – the Rudra called Narasimha; (रुजं द्रवणतो यस्मात् रुद्रस्तस्मात् जनार्दनः/Rujaṁ dravaṇatō yasmāt rudrastasmāt janārdanah – as he
dissolves as worldly afflictions/ or cures us of all bodily ailments, Narasimha
is the real Rudra; जन/Jana – the ones who are born; अर्दनः/ardanah – He exterminates); दिदृक्षे(didr̥kṣē) (दृष्टुं इच्छा दिदृक्षा /Draṣṭuṁ icchā didr̥kṣā) – longing to see him.
Tatparya: In this śloka, the diverse splendours of Bhagavan is brought into contemplation.
Bhagavan here is depicted in a ferocious form but what does that do? He is
red-eyed in anger but bears down only on the demons while bestowing
fearlessness in the demigods at the same time.
In other words,
he is terrifying only to the wicked and not all. How do we contemplate this
form? ‘I yearn to see Him,’ but what form of Bhagavan?
Holding in his
hands, weapons which in turn are the symbols of righteousness (dharma) in one
hand viz., chakra(disc) and knowledge/ wealth viz., conch(shanka) in the other.
Although he holds them aloft, he needs no weapons for any purpose to protect
us, but this form is for sheer contemplation.
He is also the
form of Rudra. He is above, Rudra – Indra and tri-eyed too. How is that
possible? What this implies is that it is Bhagavan Himself that is within
Rudradevaru in the Rudra form; it is thus Rudra acquired the nature of this
form.
In
this śloka
which is in sragdharā chandas, Lord Narasimha is depicted transcendentally, in
the Rudra form; He is benevolent, embodiment of knowledge and
fearlessness in the ferocious form and is eulogized by all the divine forms.
In the same way, instead of a group
communion for worship, every individual devotee’s worship is addressed through
the first person singular ‘दिदृक्षे(didr̥kṣē)’ term.
No comments:
Post a Comment
ಗೋ-ಕುಲ Go-Kula