ಭಾವ ಗುಚ್ಛ by “ತ್ರಿವೇಣಿ
ತನಯ”
ಪ್ರೇಕ್ಷಕ
ನಾನು ನನ್ನದೆಂಬುದೇ ಎಲ್ಲ
ನೋವಿಗೂ ಮೂಲ,
ಅದು ಹರಿದು ದೂರಾಗುತಲಿರೆ ಮನಸು
ಪ್ರಫುಲ್ಲ,
ಮಾಗಿದ ಮನವರ್ಪಿಸು
ಹರಿಪಾದದಲ್ಲಿ,
ಮುಂದಿನದವನ ಕೆಲಸ ಬರೀ
ಪ್ರೇಕ್ಷಕ ನೀನಿಲ್ಲಿ .
ಅಂತರಂಗದ ಕೀಲಿ
ಕೇಳುತಾ ತಿಳಿ ಮಾಡುತಾ ಕಲಿ,
ಕೇಳುತಾ ಮಾಡುತಾ ಬಿಚ್ಚು
ಅಂತರಂಗದಗುಳಿ,
ಅಂತರಂಗವ ಬೆದಕು ಹುಡುಕು
ತಾಳ್ಮೆ ತಾಳಿ,
ಅಲ್ಲೇ ಇದೆ ಒಳ-ತಿಳಿಗಣ್ಣುಗಳ
ಕೀಲಿ.
ಇರವು -ಅರಿವು
ಪರಮ ಪಾವನ ನೀನು ಓ ವ್ಯೋಮಕೇಶ,
ಹರಿಯ ಪ್ರಿಯ ಮೊಮ್ಮಗನಲ್ಲವೇ
ತತ್ಪುರುಷ,
ನಿನ್ನ
"ಇರವಿನಅರಿವಿ"ರೆ ಮನವದು ಸೊಗಸು,
ಸತತ ಆ ಅರಿವಿತ್ತು ರಾಮನಾಮ
ನುಡಿಸು.
ಮೌನ
ತೂಕವಿಲ್ಲದ ಮಾತು,
ಮನದಗಡಿಗೆಯ ತೂತು,
ಇರಲಿ ಸದ್ಭಾವದಲೆಯ ಮೌನ,
ಅದಕಿದೆ ಎಲ್ಲೆಲ್ಲೂ ಸಮ್ಮಾನ.
ಜೀವ ಸ್ವಭಾವ
ನಡೆದಿದೆ ಜಗದೊಳು ಜೀವಸ್ವಭಾವಗಳ
ಮೆರೆವಣಿಗೆ,
ಪ್ರಕಟವಾಗುತಲಿವೆ ಅವು
ಹೇಗಿವೆಯೋ ಹಾಗೆ,
ಅದಲ್ಲವೇ ತತ್ವವಾದದ ಸ್ವಭಾವ
ವಿಕಾಸವಾದ,
ಸೇರುವರವರವರ ಗತಿ ತಮ ಮಧ್ಯಮ
ಉತ್ತಮ ಹರಿಪಾದ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula