ಶ್ಲೋಕ 2.
ಸ್ಥಂಭಂ ನಿರ್ಭಿದ್ಯನಿರ್ಯನ್ನಿಖಿಲ ಜಗದಘಕ್ಷಾಳನಾಯಾವತೀರ್ಣಂ
ಪೂರ್ಣಂ ಸ್ವರ್ಣೋಪಮಾನದ್ಯುತಿ ವಿಹತತಮಸ್ತೋಮಮಸ್ತಾರಿವರ್ಗಂ |
ಸ್ವಸ್ತಿ ಶ್ರೀಮತ್ ಸಮಸ್ತಶೃತಿಗದಿತಮಹೋ ತನ್ಮಹೋ ನೋ ವಿದಧ್ಯಾತ್ ಪಂಚಾಸ್ಯಂ ಕಂಧರಾಯಾ ಉಪರಿ ಪರಿಗತಂ ದೇವವೃಂದೈರಮಂದೈ: ||
ಪದಚ್ಛೇದ:
ಸ್ಥಂಭಂ. ನಿರ್ಭಿದ್ಯ. ನಿರ್ಯತ್. ನಿಖಿಲ ಜಗತ್ ಅಘ ಕ್ಷಾಳನಾಯ .
(ನಿಖಿಲ ಜಗದಘಕ್ಷಾಳನಾಯ) ಅವತೀರ್ಣಂ. ಪೂರ್ಣಂ. ಸ್ವರ್ಣೋಪಮಾನದ್ಯುತಿವಿಹತ ತಮಸ್ತೋಮಂ. ಅಸ್ತ
ಅರಿವರ್ಗಂ.
ಸ್ವಸ್ತಿ. ಶ್ರೀಮತ್.
ಸಮಸ್ತಶೃತಿಗದಿತಮ್. ಅಹೋ. ತತ್. ಮಹ: ನ:
ವಿದಧ್ಯಾತ್. ಪಂಚಾಸ್ಯಂ. ಕಂಧರಾಯಾ: ಉಪರಿ.
ಪರಿಗತಂ. ದೇವವೃಂದೈ: ಅಮಂದೈ: ||
ಅನ್ವಯಾರ್ಥ:- ಸ್ಥಂಭಂ - ಕಂಬವನ್ನು, ನಿರ್ಭಿದ್ಯ - ಸೀಳಿ, ನಿರ್ಯತ್ -
ಬಂದಂತ: ನಿಖಿಲಜಗದಘಕ್ಷಾಳನಾಯ. - ಎಲ್ಲಾ ಜಗತ್ತಿನ (ಜನರ) ಆಘ - ಪಾಪವನ್ನು ಕ್ಷಾಳನಾಯ -
ತೊಳೆಯಲು,
ಅವತೀರ್ಣಂ - ಇಳಿದುಬಂದ, ಪೂರ್ಣಂ - ಸರ್ವ ಸಂಪೂರ್ಣವಾದ, ಸ್ವರ್ಣೋಪಮಾನದ್ಯುತಿ ವಿಹತತಮಸ್ತೋಮಂ. ಸ್ವರ್ಣೋಪಮಾನ - ಬಂಗಾರದಂತೆ ದ್ಯುತಿ
- ಪ್ರಭೆಯುಳ್ಳ, ವಿಹತ ತಮಸ್ತೋಮಂ - (ತನ್ನ ಜ್ಞಾನದ ಬೆಳಕಿನಿಂದಲೇ) ವಿಹತ ತಮ ಸ್ತೋಮಂ
- ನಾಶಮಾಡಲ್ಪಟ್ಟ ಕತ್ತಲ (ಅಜ್ಞಾನದ/ಅಜ್ಞಾನಿಗಳ)
ರಾಶಿಉಳ್ಳ, ಅಸ್ತ
-ಕಣ್ಮರೆಯಾದ , ಅರಿ ವರ್ಗಂ - ಶತೃಗಳ
ಸಮೂಹ ಉಳ್ಳ, ಸಮಸ್ತ - ಎಲ್ಲಾ, ಶ್ರುತಿ ಗದಿತಂ - ವೇದಗಳಿಂದ ಪ್ರತಿಪಾದ್ಯವಾದ, ಅಮಂದೈ: - ಅಲ್ಪ ಜ್ಞಾನಿಗಳಲ್ಲದ (ಅಪರೋಕ್ಷ ಜ್ಞಾನಿಗಳಾದ) ದೇವ
ವೃಂದೈ: - ದೇವತೆಗಳ ಸಮೂಹದಿಂದ, ಪರಿಗತಂ -
ಸುತ್ತುವರಿಯಲ್ಪಟ್ಟ, ಕಂಧರಾಯಾ:
ಕುತ್ತಿಗೆಯ, ಉಪರಿ - ಮೇಲೆ, ಪಂಚಾಸ್ಯಂ - ಸಿಂಹದ ಮೋರೆ
ಉಳ್ಳ ( ಪಂಚ ಐದಲ್ಲ. ಪಚಿ ವಿಸ್ತಾರೇ- ಪಂಚ- ವಿಶಾಲವಾದ, ಆಸ್ಯಂ - ಮುಖ. ಸಂಸ್ಕೃತದಲ್ಲಿ, ಸಿಂಹಕ್ಕೆ ಆ ಗಾತ್ರದ
ಬೇರೆ ಪ್ರಾಣಿಗಳಿಗಿಂತ ವಿಶಾಲವಾದ ಮುಖ
ಇರುವುದರಿಂದ ಪಂಚಾಸ್ಯ ಎಂದು ಕರೆಯುತ್ತಾರೆ.) ಅಹೋ - ಅತ್ಯದ್ಭುತವಾದ, ಶ್ರೀಮತ್ - ಕಾಂತಿಯುಕ್ತವಾದ (ಲಕ್ಷ್ಮೀ ಸಹಿತವಾದ) ತತ್ ಮಹ: - ಆ ಬಂಗಾರ ಬಣ್ಣದ ಬೆಳಕು, ನ: - ನಮಗೆ, ಸ್ವಸ್ತಿ - ಮಂಗಳವನ್ನು, ಶಾಶ್ವತವಾದ ಆನಂದವನ್ನು, ವಿದಧ್ಯಾತ್ - ನೀಡಲಿ.
ತಾತ್ಪರ್ಯ:
ಸಾಮಾನ್ಯವಾಗಿ ನರಸಿಂಹ ಎಂದರೆ ಎಲ್ಲರೂ ಭಯಾನಕ ಎಂದೇ ಚಿಂತಿಸುತ್ತಾರೆ. ಆದರೆ ಇಲ್ಲಿ, ನರಸಿಂಹ
ಕಂಬ ಸೀಳಿ ಬಂದದ್ದು ಕೊಲ್ಲಲಷ್ಟೇ ಅಲ್ಲ ಬದಲಿಗೆ ಜಗತ್ತಿನ ಪಾಪ ತೊಳೆಯಲು ಎನ್ನುತ್ತಾರೆ.
ತೊಳೆಸಿಕೊಳ್ಳುವ ಯೋಗ ನಮಗಿರಬೇಕಷ್ಟೇ. ಆ ರೂಪವಾದರೋ ಎಂಥದ್ದು ? ನಮ್ಮಂತೆ
ರಕ್ತಮಾಂಸ ತುಂಬಿದ್ದೆ ? ಅಲ್ಲ. ಜಗತ್ತಿನ ಅಜ್ಞಾನವನ್ನೂ, ದುಷ್ಟ
ಶಕ್ತಿಗಳನ್ನು ಕೇವಲ ತನ್ನ ಪ್ರಭೆಯಿಂದಲೇ ನಾಶಮಾಡುವ ಅದ್ಭುತವಾದ ಬೆಳಕಿನ ರೂಪ. ನೆರೆದು ನಿಂತ
ದೇವತೆಗಳಿಂದ ಸ್ತುತ್ಯವಾದ, ವೇದಾದಿ ಸಕಲ ಶಬ್ದಗಳಿಂದ ವಾಚ್ಯವಾದ, ಕುತ್ತಿಗೆಯ
ಮೇಲೆ ಸಿಂಹದ ಮೋರೆಯುಳ್ಳ, ಲಕ್ಷ್ಮೀ ಸಹಿತವಾದ ಆ ಬೆಳಕಿನ ರೂಪ ನಮಗೆ ಮಂಗಳವನ್ನು
ಉಂಟುಮಾಡಲಿ ಎಂಬುದು ಭಾವ.
ಸ್ರಗ್ಧರಾ ಛಂದಸ್ಸಿನಲ್ಲಿರುವ ಈ ಸ್ತೋತ್ರದ ವಿಶೇಷವೆಂದರೆ, ಇದರಿಂದ ವಾಚ್ಯನಾದ ಭಗವಂತನ ಇಂಥದ್ದೇ ರೂಪ ಎಂದು ಒತ್ತಿ ಹೇಳದೆ, ಕುತ್ತಿಗೆಯ ಮೇಲೆ ಸಿಂಹದ ಮೋರೆಯುಳ್ಳ ಬೆಳಕು ಎಂದಷ್ಟೇ ಹೇಳಲಾಗಿದೆ. ನಾವು ದಿನಾ ಧ್ಯಾನಿಸುವ ಸೂರ್ಯಮಂಡಲದಲ್ಲಿರುವ, ಸಹಸ್ರ ಸೂರ್ಯರ ಕಾಂತಿಯನ್ನು ಮೀರಿಸುವ ದೀಪ್ತಿಯ, ಬೆಳಕಿನ ರೂಪದ ನಾರಾಯಣನ ಅನುಸಂಧಾನ ಕೂಡ ಮಾಡಬಹುದು.
.
****
Śloka 2
स्तम्भं
निर्भिद्यनिर्यन्निखिल जगदघक्षाळनायावतीर्णं
पूर्णं
स्वर्णोपमानद्युति विहततमस्तोममस्तारिवर्गं|
स्वस्ति श्रीमत् समस्तशृतिगदितमहो तन्महो नो विदध्यात् पंचास्यं
कन्धराया ऊपरी परिगतं देववृन्दैर्मन्दैः||
Stambhaṁ
nirbhidyaniryannikhila jagadaghakṣāḷanāyāvatīrṇaṁ
pūrṇaṁ svarṇōpamānadyuti vihatatamastōmamastārivargaṁ |
svasti śrīmat samastaśr̥tigaditamahō tanmahō nō vidadhyāt pan̄cāsyaṁ kandharāyā ūparī parigataṁ dēvavr̥ndairamandaiḥ ||
pūrṇaṁ svarṇōpamānadyuti vihatatamastōmamastārivargaṁ |
svasti śrīmat samastaśr̥tigaditamahō tanmahō nō vidadhyāt pan̄cāsyaṁ kandharāyā ūparī parigataṁ dēvavr̥ndairamandaiḥ ||
Padacchēda:
स्तम्भं.निर्भिद्य.निर्यत्.
निखिल जगत् अघ क्षाळनाय (निखिल जगदघक्षाळनाय).अवतीर्णं.
पूर्णं.स्वर्णोपमानद्युतिविहत.तमस्तोमं.अस्त
अरिवर्गं|
स्वस्ति.श्रीमत्.समस्तशृतिगदितम्.अहो.तत्.महः
नः.विदध्यात्.पंचास्यं.कन्धरायाः.ऊपरी.परिगतं. देववृन्दैः अमंदैः||
stambhaṁ . nirbhidya
. niryat’. nikhila jagat’ agha kṣāḷanāya (nikhila jagadaghakṣāḷanāya) . avatīrṇaṁ
. pūrṇaṁ . svarṇōpamānad’yutivihata
. tamastōmaṁ. asta arivargaṁ |
svasti . śrīmat’. samastaśr̥tigaditaṁ . ahō . tat’. mahah . nah . vidadhyāt’. pan̄cāsyaṁ . kandharāyāha . ūparī . parigataṁ . dēvavr̥ndaih amandaiḥ ||
svasti . śrīmat’. samastaśr̥tigaditaṁ . ahō . tat’. mahah . nah . vidadhyāt’. pan̄cāsyaṁ . kandharāyāha . ūparī . parigataṁ . dēvavr̥ndaih amandaiḥ ||
Word meanings: स्तम्भं(stambhaṁ) - of the pillar; निर्भिद्य(nirbhidya)
– split; निर्यत्(niryat’) – appearing; निखिल जगत्(nikhila jagat’) – of the whole world (people); अघ- (sins) क्षाळनाय(kṣāḷanāya) –
to wash; अवतीर्णं (avatīrṇaṁ) -descended; पूर्णं(pūrṇaṁ)
– complete in all respects; स्वर्णोपमान(svarṇōpamāna) – as
that of gold; द्युति(d’yuti) – radiance; विहत
तम स्तोमं (vihata tama stōmaṁ) – sea of darkness that was destroyed (of
ignorance or the ignoramuses); अस्त(asta) – vanishing from
sight; अरिवर्गं(arivargaṁ)-
consisting of the group of enemies; स्वस्ति(svasti)- pious
or everlasting happiness; समस्त(samasta) – all; शृति गदितम्(śr̥ti gaditaṁ) – glorified by the vedas; अहो(ahō) – magnificient; श्रीमत्(śrīmat’)- imbued with radiance(One who carries Lakshmi
with Him); तत् महः(tat’mahah)
– that golden glow; नः(nah)- to us; विदध्यात्(vidadhyāt’)-
bestow; पंचास्यं(pan̄cāsyaṁ) – lion’s face [पंच(pan̄ca)
here should not be construed as five; पचि विस्तारे(pachi vistāre) – पंच(pan̄ca) i.e. expansive, अस्यं(asyaṁ)-
face. As the lion has a wider face vis-à-vis other animals, it is called पंचास्यं(pan̄cāsyaṁ)], कन्धरायाः(kandharāyāha)
– of the neck; ऊपरी(ūparī) – on top; परिगतं(parigataṁ)-
circumscribing; देववृन्दैः(dēvavr̥ndaih) – cluster of
demi-gods; अमंदैः(amandaiḥ) – not of low wisdom i.e., realized
souls
Tātparya: The very thought of Narasimha
instills fear in most people. It is however said that this not so; Narasimha
appeared from the split column not just to exterminate but also to wash away
the sins of this world. We need to be blessed enough have our sins washed. How
should we construe this form of Narasimha then? Is it made of flesh and blood
like us? No! It is instead, a luminous form, that eradicates ignorance, wipes
out the evil forces through its glow. We need to comprehend this as the form of
the divine paeans, that which is in all the sounds resonated from the Vedic
scriptures, a form that depicts a lion’s face above the neckline, which along
with goddess Lakshmi, is a divine luminescence that blesses us.
This specialty of this stotra which is composed in the sragdharā
meter (chandas’), is that God who is praised here, is specifically
emphasised in a form; it brings out a form that adorns a glowing lion’s face
above the neck. This perhaps encapsulates a form that we should conceptualise
as we meditate each day, the form of Narayana, radiating the light of a
thousand suns.
(To be continued …..)
Very good word to word anuvaada and English translation. Dhanyavaadagalu Krishna and Prasad avare
ReplyDelete