Thursday 21 January 2016

Narasimha Stuti 04

ಶ್ಲೋಕ - 4.
ಜ್ವಲತ್ಕನಕಪಿಂಜರಂ ಕಲಿತಭಕ್ತಹೃತ್ಪಂಜರಮ್ 
ಚಿರಂ ಮುದಿತನಿರ್ಜರಂ  ಶೃತಿಮಹಾಟವೀಕುಂಜರಮ್ |
ಭಜೇ ಭುವನಬಂಧುರಂ ಹೃದಿ ನಿಜೇಂದಿರಾ ಮಂದಿರಮ್ 
ಪರಂ ತುರಗಕಂಧರಂ  ದರಧರಂ ನೃಕಂಠೀರವಮ್ ||

ಪದಚ್ಛೇದ:
ಜ್ವಲತ್ ಕನಕಪಿಂಜರಮ್ . ಕಲಿತ ಭಕ್ತ ಹೃತ್ಪಂಜರಮ್ . ಚಿರಮ್ . ಮುದಿತ ನಿರ್ಜರಮ್. ಶೃತಿಮಹಾಟವೀಕುಂಜರಮ್ . ಭಜೇ . ಭುವನಬಂಧುರಮ್ . ಹೃದಿ . ನಿಜ ಇಂದಿರಾ ಮಂದಿರಮ್. ಪರಮ್. ತುರಗಕಂಧರಮ್ ದರ ಧರಮ್ನೃಕಂಠೀರವಮ್ .

ಅನ್ವಯಾರ್ಥ:-
ಜ್ವಲತ್ ಕನಕಪಿಂಜರಂ - ಪುಟಕ್ಕಿಟ್ಟ ಬಂಗಾರದಂತೆ ಹೊಳೆಯುವ ಬಣ್ಣದ,   ಕಲಿತ - ಪಕ್ವಗೊಂಡ, ಭಕ್ತ - ಭಕ್ತರಹೃತ್ಪಂಜರಂ - ಹೃದಯ ಕವಾಟದಲ್ಲಿ (ಸ್ವ ಇಚ್ಛೆ ಯಿಂದಬಂಧಿತನಾದಚಿರಂ - ಶಾಶ್ವತವಾಗಿಮುದಿತ - ಸಂತೋಷ ಗೊಳಿಸಲ್ಪಟ್ಟನಿರ್ಜರಂ - ದೇವತೆಗಳನ್ನುಳ್ಳ,   ಶೃತಿಮಹಾಟವೀಕುಂಜರಂ - ವೇದಗಳೆಂಬ ಮಹಾರಣ್ಯದಲ್ಲಿ ಒಂಟಿಸಲಗದಂತಿರುವಭುವನ - ತ್ರಿಭುವನಗಳಲ್ಲಿ, ಬಂಧುರಂ - ಅತ್ಯಂತ ಸುಂದರನಾದ,   ದರ - ಶ್ರೀ ದೇವಿಯನ್ನುಧರಂ - (ತೊಡೆಯ ಮೇಲೆ ಕೂಡಿಸಿಕೊಂಡಿರುವ) ಹೊತ್ತಿರುವ, ತುರಗ - ಕುದುರೆಕಂಧರಂ - ಮೊಗದವನನ್ನು (ಹಯಗ್ರೀವ ದೇವರು) ಪರಮ್ -ಸರ್ವೋತ್ತಮನಾದಹೃದಿ - ಹೃದಯದಲ್ಲಿ (ವಕ್ಷ ಸ್ಥಳ)  (ನಿಜ - ತನ್ನವಳಾದ),   ಇಂದಿರಾಲಕ್ಷ್ಮೀ ದೇವಿಯ,   ನಿಜ ಮಂದಿರಂ - ಸ್ವಂತ ಮನೆಯುಳ್ಳ,   नृकण्ठीरवं - ನರಸಿಂಹನನ್ನು  ಭಜೇ - ಸ್ತುತಿಸುತ್ತೇನೆ.

ತಾತ್ಪರ್ಯ: ಭಗವಂತನದ್ದು ಅನಂತ ರೂಪ. ಅಂಥಾ ಭಗವಂತನ ಎರಡು ರೂಪಗಳ ಚಿಂತನೆ ಇಲ್ಲಿದೆ.
ಧಗ ಧಗ ಉರಿಯುತ್ತಿರುವ ಪುಟಕ್ಕಿಟ್ಟ ಬಂಗಾರದಂತ: ಹೊಂಬಣ್ಣದ, ಸರ್ವತಂತ್ರ ಸ್ವಾತಂತ್ರನಾದರೂ ಭಕ್ತರ ಹೃದಯದಲ್ಲಿ ಬದ್ಧನಾಗುವ, ಅಲ್ಪರಿಗೆ ಎಟುಕದ ವೇದಾರಣ್ಯದಲ್ಲಿ ತಾನೇತಾನಾಗಿ ಮದ್ದಾನೆಯಂತೆ ಸಂಚರಿಸುವ ವೇದ ವೇದ್ಯನಾದ, ನೋಡಲು ವಿಚಿತ್ರವಾದ ರೂಪ.ಆದರೆ ಮೂಜಗದಲ್ಲೂ ಸಾಟಿಯಿಲ್ಲದ ಸುಂದರ ರೂಪ. ಹೀಗೆ, ದೇವತೆಗಳಿಗೆ ನಿತ್ಯ ಸಂತಸ ಉಣಿಸುವ, ಎದೆಯಲ್ಲಿ ಲಕ್ಷ್ಮೀ  ಮತ್ತು ತೊಡೆಯಲ್ಲಿ ಶ್ರೀದೇವಿಯನ್ನು ಧರಿಸಿದ, ಸರ್ವೋತ್ತಮನಾದ, ಕುದುರೆ ಹಾಗು ಸಿಂಹದ ಮೊಗದ, ಜ್ಞಾನ ಕೊಟ್ಟ  ಹಯಗ್ರೀವ  ಮತ್ತು ಅಭಯ ಕೊಟ್ಟ ನರಸಿಂಹನನ್ನು ಸ್ತುತಿಸುತ್ತೇನೆ.
 ಪೃಥ್ವೀ ಛಂದಸ್ಸಿನಲ್ಲಿರುವ  ಶ್ಲೋಕದ ವಿಶೇಷ ಎಂದರೆ, ಇಲ್ಲಿ (ಅಂಕಂ ಶ್ರಿತಾ ಶ್ರೀ:) ತೊಡೆಯಲ್ಲಿ ಕುಳಿತ ಶ್ರೀ ದೇವೀ ಸಹಿತ ಹಯಗ್ರೀವ ದೇವರು ಮತ್ತು (ವಕ್ಷಸಿ ಲಕ್ಷಣ ಭೂತಾ ಲಕ್ಷ್ಮೀ:) ಎದೆಯಲ್ಲಿ ಅಲಂಕಾರ ಪ್ರಾಯಳಾಗಿ ನೆಲೆಸಿರುವ ಲಕ್ಷ್ಮೀ ಸಹಿತ ನರಸಿಂಹ ದೇವರು, ಎರಡೂ ರೂಪವನ್ನೂ ಸ್ತುತಿಸಲಾಗಿದೆ.
****
Śloka -4
ज्वलत्कनकपिंजरं  कलितभक्तहृत्पंजरम्
चिरं  मुदितनिर्जरं  श्रुतिमहाटवीकुंजरम्  |
भजे भुवनबंधुरं   हृदि   निजेंदिरा  मंदिरम्

परं तुरगकंधरं दरधरं  नृकंठीरवम् ||


jvalatkanakapin̄jaraṁ kalitabhaktahr̥tpan̄jaram 
ciraṁ muditanirjaraṁ śr̥timahāṭavīkun̄jaram|
 
bhajē bhuvanabandhuraṁ hr̥di nijēndirā mandiram
 
paraṁ turagakandharaṁ daradharaṁ nr̥kaṇṭhīravam||

Padacchēda:

ज्वलत् कनकपिंजम् .  कलित भक्त हृत्पंजरम् . चिरम् . मुदित निर्जरम् .  श्रुतिमहाटवीकुंजरम् . 
भजे . भुवनबंधुरम् . हृदि . निज इंदिरा  मंदिरम् . परम् . तुरगकंधम् . दर धरम् . नृकंठीरवम् .
jvalat kanakapin̄jaram . kalita bhakta hr̥tpan̄jaram . ciram . mudita nirjaram . śr̥timahāṭavīkun̄jaram . bhajē . bhuvanabandhuram . hr̥di . nija indirā mandiram. 
param . turagakandharam . dara dharam . nr̥kaṇṭhīravam .


Word meanings:

ज्वलत् कनकपिंजम्(jvalat kanakapin̄jaram) – as lustrous as gold in a furnace;  कलित(kalita) – ripened; भक्त(bhakta) – devotees; हृत्पंजरम्(hr̥tpan̄jaram) – encased in the heart(willingly held captive); चिरम्(ciram) – everlasting; मुदित(mudita) – made happy; निर्जरम्(nirjaram) – consisting of demigods; श्रुतिमहाटवीकुंजरम्(śr̥timahāṭavīkun̄jaram) – like a wild elephant lost in the woods of vedas;   भुवन(bhuvana) – in the three worlds; बंधुरम्(bandhuram) -extremely beautiful; दर(dara) – Shree Devi; धरम्(dharam) – seated on the lap; तुरग(turaga) – horse; कंधम्(kandharam) – countenance (of Lord Hayagrīva) परम्(param) – the best; हृदि(hr̥di) – in the heart (chest) [निज(nija) – belonging to Him); इंदिरा(indirā) – of Lakshmi Devi; निज  मंदिरम्(nija mandiram) – in own house; नृकंठीरवम्(nr̥kaṇṭhīravam) – Narasimha; भजे(bhajē) – eulogized.

Tātparya – Bhagavan has many forms. Two of His forms are presented here for contemplation.
One is like gold that glows in the flames of a furnace. Although he cannot be bound in any manner whatsoever, he encapsulates himself in the hearts of devotees but remains inaccessible to the mean minded. He is like an enraged elephant lost in the woods of the Vedas, but found knowledgeably in it, strange looking but an unparalleled beautiful form, across all the three worlds. One can worship a form here that bestows everlasting happiness upon all demigods, holds Lakshmi in his bosom and has Shree Devi seated on his lap. One can eulogise Him as the supreme One, who has the faces of a horse as well as lion, respectively, as the ever streaming fountain of knowledge in Hayagrīva and as the one who bestows fearlessness in us, as Narasimha.

This speciality of this śloka which is in the prithvi meter(chandas) is that here we see the form of Shree Devi seated on the lap (अंकं श्रिता श्री ankaśrta śrī) of Lord Hayagrīva and (वक्षसि लक्षण भूता लक्ष्मीः / vakṣasi lakṣaṇa bhūtā lakṣmīh) decorating as well as seated in his bosom, dear to Him, is Lakshmi with Narasimha. Both these forms are eulogized here.

No comments:

Post a Comment

ಗೋ-ಕುಲ Go-Kula