ನರಸಿಂಹ ಸ್ತುತಿ
ಶ್ಲೋಕ - 5.
ಜಗನ್ನಿಧಾನ ಪಿಠರಂ
ನೃಹರೇರ್ಜಠರಂ ನುಮ:
|
ಯನ್ನಾಭಿಕುಹರೋದ್ಭೂತಸ್ತನಯೋ
ಹಂಸವಾಹನ: ||
ಪದಚ್ಛೇದ::-
ಜಗತ್ ನಿಧಾನ ಪಿಠರಮ್ . ನೃಹರೇ: . ಜಠರಮ್ . ನುಮ: . ಯತ್ . ನಾಭಿಕುಹರ ಉದ್ಭೂತ: . ತನಯ: . ಹಂಸವಾಹನ: .
ಅನ್ವಯಾರ್ಥ:-
ಹಂಸವಾಹನ: - ಹಂಸವಾಹನನಾದ ಚತುರ್ಮುಖ ಬ್ರಹ್ಮನು, ಯತ್
- ಯಾರ, ನಾಭಿಕುಹರ ಉದ್ಭೂತ: - ಹೊಕ್ಕುಳಲ್ಲಿ ಮೂಡಿದ ಕಮಲದಲ್ಲಿ ಹುಟ್ಟಿದ, ತನಯ: - ಮಗನೋ ಅಂತ: ಜಗತ್ ನಿಧಾನ, ಪಿಠರಮ್ - ಲೋಕವನ್ನು ಧರಿಸಿದ ಪೆಟ್ಟಿಗೆಯಾದ, ನೃಹರೇ: - ನರಸಿಂಹನ, ಜಠರಮ್ - ಹೊಟ್ಟೆಯನ್ನು, ನುಮ:
ಕಾಯ ವಾಕ್ ಮನಸ್ಸುಗಳಿಂದ ಸ್ತುತಿಸಿ ನಮಿಸೋಣ.
ತಾತ್ಪರ್ಯ:
ಬಯಲು
ಆಲಯದೊಳಗೊ ಆಲಯವು ಬಯಲೊಳಗೊ, ನೀ ದೇಹದೊಳಗೊ ನಿನ್ನೊಳು ದೇಹವೋ
ಎಂಬಂತೆ, ಅಣೊರಣೀಯಾನ್
ಮಹತೋ ಮಹೀಯಾನ್ ಎನ್ನಿಸಿಕೊಂಡ ಭಗವಂತ ಎಲ್ಲದರೊಳಗೆ ತಾನಿದ್ದು, ತನ್ನೊಳಗೆ ಎಲ್ಲವನ್ನೂ ಇಟ್ಟುಕೊಂಡ ಅಚಿಂತ್ಯ ಶಕ್ತಿ. ಅಂಥ ಭಗವಆಂತನ,
ಸ್ವಲ್ಪ
ವಿಶಿಷ್ಟ ಉಪಾಸನೆ ಇಲ್ಲಿದೆ.
ಜಗತ್ತಿನ ಅಪ್ಪನಾದ, ಬ್ರಹಮಾಂಡ ಶರೀರಿ ಹಂಸವಾಹನ ಚತುರ್ಮುಖ, ಯಾವ ಹೊಕ್ಕುಳ
ಕಮಲದಲ್ಲಿ ಜನಿಸಿದ ಮಗನೊ,
ಅಂಥಾ, ಜಗತ್ತನ್ನು
ತನ್ನೊಳಗಿಟ್ಟುಕೊಂಡ ಪೆಟ್ಟಿಗೆಯಾದ ನರಸಿಂಹನ ಉದರವನ್ನು ಸ್ತುತಿಸೋಣ.
ಇದನ್ನೇ ಆಚಾರ್ಯ ಮಧ್ವರು, ತನುತ್ವೇ ಅಪಿ ಅಖಿಲಂ ಭರಂ - ತೆಳ್ಳಗಿದ್ದರೂ ಎಲ್ಲವನ್ನೂ ಒಳಗೊಂಡದ್ದು, ಅನಂತಮಂತವದಿವ
ಭುಜಓರಂತರಂ ಗತಮ್ - ಅನಂತವಾಗಿದ್ದರೂ ಕೂಡಾ ಸಾಂತವೊ ಎಂಬಂತೆ ಎರಡು ಭುಜಗಳ ಮಧ್ಯೆ ಸೇರಿದೆ
ಎಂಬುದಾಗಿ ವರ್ಣಿಸಿದ್ದಾರೆ.
ಅನುಷ್ಟುಪ್ ಛಂದಸ್ಸಿನಲ್ಲಿರುವ ಈ ಶ್ಲೋಕದಲ್ಲಿ ನೇರವಾಗಿ ನರಸಿಂಹನನ್ನೇ ಸ್ತುತಿಸಲಾಗಿದೆ.
ಹಂಸವಾಹನ: ಎಂಬ ಶಬ್ದವನ್ನು ಒಡೆದು ಸ್ವಲ್ಪ ಒಳಹೊಕ್ಕರೆ, ಇನ್ನೂ ವಿಶೇಷ ಅರ್ಥಗಳು ಸಿಗುತ್ತವೆ.
ಹಂಸ.
ವಾಹ. ನ:
ನ:
- ನಮಗೆ, ಹಂಸ - ಹಂಸನಾಮಕ ಭಗವಂತನನ್ನು / ಹಂಸನಾಮಕ ಭಗವಂತನಿಂದ ಉಪದಿಷ್ಟವಾದ ವೇದಗಳನ್ನು, ವಾಹ - ತಂದವ. ಅಂದರೆ ಚತುರ್ಮುಖ ಬ್ರಹ್ಮದೇವರು.
ನ:
- ನಮ್ಮನ್ನು, ಹಂಸ - ಹಂಸ ಜಪದಿಂದ ಶುದ್ಧಿಮಾಡಿ, ವಾಹ - ಭಗವಂತನೆಡೆಗೆ ಒಯ್ಯುವವರು. ಅಂದರೆ ವಾಯುದೇವರು.
ಬ್ರಹ್ಮ ವಾಯುಗಳಿಬ್ಬರೂ ಭಗವಂತನ ಸಾಕ್ಷಾತ್ ಮಕ್ಕಳು ಎಂಬ ಮಾತಿಗೆ ಪೂರಕವಾಗಿ ಈ ಅನುಸಂಧಾನ.
****
Śloka - 5
जगन्निधान पिठरं
नृहरेर्जठरं
नुमः |
यन्नाभिकुहरोद्भूतस्तनयो हंसवाहनः||
jagannidhāna piṭharaṁ
nr̥harērjaṭharaṁ numah |
yannābhikuharōdbhūtastanayō hansavāhanah ||
yannābhikuharōdbhūtastanayō hansavāhanah ||
Padacchēda:
जगत् निधान पिठरम् . नृहरेः . जठरम् . नुमः . यत् . नाभिकुहर . उद्भूतः . तनयः . हंसवाहनः.
Jagat nidhāna
piṭharam . nr̥harēh . jaṭharam . numah . yat . nābhikuhar . udbhūtah . tanayah
. hansavāhanah .
Word meanings:
हंसवाहनः (hansavāhanah) - Caturmukha Brahma whose vehicle is the
hansa (swan);
यत्(yat) – who; नाभिकुहर उद्भूतः(nābhikuhar udbhūtah) –
born in the navel stemming lotus; तनयः(tanayah)
– as son; जगत् निधान पिठरम् (jagat nidhāna piṭharam) – the box that encases this
world; nr̥harēh(नृहरेः) –
Narasimha’s jaṭharam(जठरम्) - stomach नुमः(numah) – worshipping through
our speech, body and mind.
Tātparya:
‘Abode as the field and the field too as the abode; like
You are within the body and the body is within you,’ one who is both
infinitesimally minute and infinitely large, Bhagavan is an unimaginable force
Who resides within all beings and shelters all beings in Him.
The worship of such Bhagavan is in this śloka.
Let us eulogise Narasimha’s midriff that encapsulated the
cosmos, and from which navel thereon, stemmed a lotus in which Caturmukha Brahma, as son, was born.
Acharya Madhva has said this too - तनुत्वे अपि अखिलं भरम्(tanutvē api akhilaṁ bharam) - though slim, everything held within;
अनंतमंतवदिव भुजाोरंतरं गतम् (anantamantavadiva bhuja'ōrantaraṁ gatam) –
although infinite, looking definably held within the bounds of two shoulders;
is how, he describes it.
This śloka
which is in the anuśtup
meter, directly eulogises Narasimha.
हंसवाहनः (hansavāhanah)
– if we split this word to its etymological roots, we can derive a more special
meaning here.
हंस .वाह. नः
(hansa. vāha . nah)
नः (nah)
– our’s; हंस(hansa) – hansa named Bhagavan / Vedas were imparted
through this form of hansa of Bhagavan, वाह(vāha) – disseminated.
नः (nah) – let us; हंस(hansa) – be purified by the
hansa japa, वाह(vāha) – and led to Bhagavan (by vāyu devaru).
One should contemplate on this śloka with the backdrop that Brahma- Vāyu are the direct progeny of Bhagavan.
No comments:
Post a Comment
ಗೋ-ಕುಲ Go-Kula