Saturday, 23 January 2016

Narasimha Stuti 06

ಶ್ಲೋಕ - 6.

ಯದುತ್ಸಂಗಾಸಂಗಾ ಜಗದುದಯಭಂಗಾಬ್ಧಿತನಯಾ
ಯದುದ್ಗೀತಾಗೀತಾ ವಿಷಯ ವಿಷಭೀತಾವನಕರೀ |
ಸುಧೀ ಮುದ್ರಾ ಭದ್ರಾ ದುರಿತಗಣ ವಿದ್ರಾವಣಕರೀ
ನಮಸ್ತಸ್ಮೈಕಸ್ಮೈಚಿದಮರಪುಷೇ ಸಿಂಹವಪುಷೇ ||

ಪದಚ್ಛೇದ :-

ಯತ್. ಉತ್ಸಂಗ . ಆಸಂಗಾ . ಜಗತ್ ಉದಯ ಭಂಗಾ . ಅಬ್ಧಿ ತನಯಾ .
ಯತ್ . ಉದ್ಗೀತಾ . ಗೀತಾ . ವಿಷಯ ವಿಷ ಭೀತಾ ಅವನಕರೀ . ಸುಧೀಮುದ್ರಾ ಭದ್ರಾ ದುರಿತಗಣ ವಿದ್ರಾವಣಕರೀ . ನಮ: . ತಸ್ಮೈ . ಕಸ್ಮೈಚಿತ್ . ಅಮರ ಪುಷೇ . ಸಿಂಹ ವಪುಷೇ  .

ಅನ್ವಯಾರ್ಥ :- ಯತ್ - ಯಾರ, ಉತ್ಸಂಗ - ತೊಡೆಯಲ್ಲಿ,   ಜಗತ್ - ಚರಾಚರ ಜಗತ್ತಿನ, ಉದಯ ಭಂಗಾ - ಸೃಷ್ಟಿ ಲಯಾದಿಗಳನ್ನು ಮಾಡುವ, ಅಬ್ಧಿ ತನಯಾ - ಸಮುದ್ರ ರಾಜನ ಮಗಳಾದ ಶ್ರೀ ದೇವಿಯು, ಆಸಂಗಾ - ಕುಳಿತಿರುವಳೋಯತ್-ಯಾರಿಂದ, ವಿಷಯ ವಿಷ  ಭೀತಾ - ಸಂಸಾರ ವಿಷಯವೆಂಬ ವಿಷದಿಂದ ಬೆದರಿದವರನ್ನು,   ಅವನಕರೀ - ಮೇಲಕ್ಕೆತ್ತುವ ( ಉದ್ಧಾರ ಮಾಡುವ) ಗೀತಾ - ಭಗವದ್ಗೀತೆಯು, ಉದ್ಗೀತಾ - ಹಾಡಲ್ಪಟ್ಟಿತೋ, ಯಾರ, ಸುಧೀ - ಜ್ಞಾನ, ಭದ್ರ - ಅಭಯ, ಮುದ್ರಾ - ಮುದ್ರೆಯು, ದುರಿತ ಗಣ - ಕಷ್ಟ ಕೋಟಲೆಗಳ ಗುಂಪನ್ನು, ವಿದ್ರಾವಣಕರೀ - ಕರಗಿಸಿ ಬಿಡುತ್ತದೆಯೋ, ತಸ್ಮೈ - ಅಂಥಾ, ಅಮರ ಪುಷೇ - ದೇವತಗಳನ್ನೂ ಪೋಷಿಸುವ, ಕಸ್ಮೈಚಿತ್ - ಇದಮಿತ್ಥಂ ಎಂದು ಹೇಳಲಾಗದ ಯಾವುದೋ ಒಂದು, ಸಿಂಹ ವಪುಷೇ - ಸಿಂಹದ ಶರೀರ ಉಳ್ಳವನಿಗೆ, ನಮ: ಕಾಯ ವಾಕ್ಪೂರ್ವಕ ನಮಸ್ಕಾರ.

ತಾತ್ಪರ್ಯ:-

ಯಾರ ತೊಡೆಯಲ್ಲಿ, ಜಗತ್ತಿನ ಸೃಷ್ಟಿ  ಸ್ಥಿತಿ ಪ್ರಳಯ ಸರ್ಗ ಮಹಾವಿಭೂತಿ ವೃತ್ತಿ ಪ್ರಕಾಶ ನಿಯಮಾವೃತಿ ಬಂಧ ಮೋಕ್ಷ ಎಂಬ ಎಲ್ಲವನ್ನು ಮಾಡುವ ಸಮುದ್ರ ರಾಜನ ಕುವರಿ ಕುಳಿತಿಹಳೋ, (ಲಕ್ಷ್ಮೀ ನಾರಾಯಣಯಾರು ತನ್ಮಾತ್ರಾ ರೂಪದ ಐಹಿಕ ವಿಷಯಗಳ ವಿಷಜಾಲದಲ್ಲಿ ಸಿಕ್ಕಿ ಒದ್ದಾಡುವವರ ಉದ್ಧಾರ ಮಾಡುವ ಹಾಡನ್ನು ಹಾಡಿದನೋ, ( ಗೀತಾಚಾರ್ಯ ಶ್ರೀ ಕೃಷ್ಣ) ಯಾರ ಮಂಗಳಕರವಾದ ಜ್ಞಾನ ಮುದ್ರೆ ಸಕಲ ದುರಿತಗಳ ರಾಶಿಯನ್ನು ಕರಗಿಸಿಬಿಡುವುದೋ, (ಹಯಗ್ರೀವಯಾರು ದೇವತೆಗಳನ್ನೂ ಪೋಷಿಸಿ ಕಾಯುವರೋ, (ಉಪೇಂದ್ರಅಂಥಾ ಯಾವುದೋ ಒಂದು ಸಿಂಹದ ರೂಪಕ್ಕೆ (ನರಸಿಂಹ) ನಮಸ್ಕಾರ.

ಶಿಖರಿಣೀ ವೃತ್ತ/ ಛಂದಸ್ಸಿನಲ್ಲಿರುವ ಶ್ಲೋಕವಂತೂ ಅಚ್ಚರಿಗಳ ಆಗರ.
ಅಘಟಿತ ಘಟನಾ ಸಮರ್ಥನಾದ ಭಗವಂತನ ಲೀಲೆಗಳನ್ನು ಅರಿಯಲಾರದೆ, ಯಾವ ರೂಪವನ್ನೂ ಸರಿಯಾಗಿ ಕಣ್ತುಂಬಿಕೊಳ್ಳಲಾರದೆ, ಇಂಥದ್ದೇ ವ್ಯಕ್ತಿಯೋ ಶಕ್ತಿಯೋ ಎಂದು ಅಂದಾಜಿಸಲಾರದೆ  ಒದ್ದಾಡುವ ಭಕ್ತನ ಅವಸ್ಥೆ ನಿಜಕ್ಕೂ ವಿಸ್ಮಯಾವಹ.

ಇಂಥಾ ಸ್ತೋತ್ರದ ಅರ್ಥ ಚಿಂತನೆ ಮಾಡುವ ನಮ್ಮ ಭಾಗ್ಯವೇ ಭಾಗ್ಯ.

ಶ್ಲೋಕದ ಒಂದೊಂದೂ ವಿಶೇಷಣ ಒಂದೊಂದು ಗ್ರಂಥಕ್ಕೆ ವಿಷಯ ಒದಗಿಸುವಷ್ಟು ಅರ್ಥಗರ್ಭಿತ. ಶ್ಲೋಕದ ಒಂದೊಂದು  ಶಬ್ದದ ಅರ್ಥಗಳ ಆಳಕ್ಕೆ ಹೋಗುತ್ತಿದ್ದರೆ ಆನಂದವೇ ಆನಂದಸ್ವಲ್ಪಮಟ್ಟಿಗೆ ಸಂಸ್ಕೃತ ಕಲಿತ ನನ್ನಂಥವನಿಗೆ  ಮಟ್ಟಿಗಿನ ಸ್ಫೂರ್ತಿ ದೊರಕುತ್ತಿದೆ ಎಂದರೆ, ಇಂಥ: ಆಚಾರ್ಯರ ಇತರ ಕೃತಿಗಳ ಹರವನ್ನು ಆಳವನ್ನು ಸ್ವಲ್ಪ ಮಟ್ಟಿಗೆ ತಿಳಿಯುವುದಕ್ಕಾಗಿಯಾದರೋ ಇನ್ನೂ ಹೆಚ್ಚಿನ  ಸಂಸ್ಕೃತ ಅಧ್ಯಯನ ಮಾಡುವ ಬಗ್ಗೆ ಇಂದೇ ಎಲ್ಲರೂ ಚಿಂತಿಸೋಣ.
****
Śloka 6

यदुत्संगासंगा जगदुदयभंगाब्धितनया 
यदुद्गीतागीता विषय विषभीतावनकरी  |
सुधी मुद्रा भद्रा दुरितगण  विद्रावणकरी
नमस्तस्मैकस्मैचिदमरपुषे सिंहवपुषे ||

yadutsaṅgāsaṅgā jagadudayabhaṅgābdhitanayā 
yadudgītāgītā viṣaya viṣabhītāvanakarī |
sudhī mudrā bhadrā duritagaṇa vidrāvaṇakarī 
namastasmaikasmaicidamarapuṣē sinhavapuṣē ||

Padacchēda:

यत् . उत्संग . असंगा . जगत् उदय भंगा . अब्धि तनया . यत् . उद्गीता . गीता .
विषय विष भीता अवनकरी . सुधीमुद्रा भद्रा दुरितगण  विद्रावणकरी. नमः  . तस्मै . कस्मै चित् . अमर पुषे . सिंह वपुषे.

yat. utsaṅga. āsaṅgā. jagat udaya bhaṅgā. abdhi tanayā.
yat. udgītā. gītā. viṣaya viṣa bhītā avanakarī. sudhīmudrā bhadrā duritagaṇa vidrāvaṇakarī. namah . yasmai. kasmaicit. amara puṣē. sinha vapuṣē.

Word meanings:

यत्(yat) – whose; उत्संग(utsaṅga) – on lap; जगत्(jagat) - animate/ inanimate world;  उदय भंगा(udaya bhaṅgā) – the act of creation, cessation etc.,  अब्धि तनया(abdhi tanayā) – Śrī Dēvi the daughter of samudra raja; असंगा(āsaṅgā) – she who is seated; यत्(yat) – from who; विषय विष भीता(viṣaya viṣa bhītā) – those who are in dread, from the poison of worldly matters;  अवनकरी(avanakarī) - uplifting गीता(gītā) – pertaining to Bhagavad Gītā;  उद्गीता(udgītā) – sung; सुधी(sudhī) – knowledge; भद्रा(bhadrā) – fearlessness;  
. मुद्रा(mudra) – mudra (a hand position depicting/ conjoining fingers in the pose); दुरितगण(duritagaṇa) – a bunching of tribulations;   विद्रावणकरी(vidrāvaṇakarī) – that which melts away; तस्मै(tasmai) – such a one; अमर पुषे(amara puṣē) – nourishes the demigods; कस्मैचित्(kasmaicit) – it has been stated to be any such one सिंह वपुषे(sinha vapuṣē) – one with a lion’s body; नमः(namah) – pay obeisance through body and speech.

Tātparya:

On whose lap is seated, the world’s creation, sustenance, annihilation, metamorphosis, presence, potence, luminosity, causation, binding, liberation etc.,  (Lakśmī Nārayaṇa), He (Gītacarya Śrī Kṛśṇa) who has sung the song, that leads to liberation and progress, of those who are reeling under the sway of the sensual elements, whose auspicious knowledge melts away our pile of problems (Hayagrīva), He (Upēndra) who nourishes and protects the demigods, obeisance to one such form that appears to us in a lion like countenance (Narasiṅha)

This śloka which is in the śikhariṇī meter (chandas), is an amazing realm in itself!

The devotee who is not able to discern the dexterity of Bhagavan in the manifested / unmanifested, the devotee who trundles along without being able to decipher definitively as to what sort of a person or power that this is, truly, the plight of such a one is nothing but mystical!
It is indeed our fortune that we have been provided with an opportunity to contemplate on a Stotra of this order here.

The śloka’s has several special facets and each one opens out like a scriptural text in itself, replete with meaning. And, as one delves deeper into the meaning of each word here, the joy is unlimited. And this, if I may say so, is to one like me, despite my Sanskrit knowledge being nascent. Let us reflect on the vast sea of happiness that awaits those of us who would be willing to walk the extra mile to learn better Sanskrit and read other similar works of our Acharyaru – may we begin soon!

No comments:

Post a Comment

ಗೋ-ಕುಲ Go-Kula