Monday 18 January 2016

Narasimha Stuti 01

Introduction

|| ಶ್ರೀ ಗುರುಭ್ಯೋ ನಮ: ಹರಿ: ಓಂ||

ನಮ್ಮ ಆಚಾರ್ಯರ ನರಸಿಂಹ ಸ್ತುತಿಗೆ ಸ್ವಲ್ಪವಾದರೋ ಅರ್ಥ ಚಿಂತನೆ ಮಾಡಿ ಅದನ್ನು ಬಳಗದೊಂದಿಗೆ ಹಂಚಿಕೊಳ್ಳುವ ತವಕ. ಅದರೇನೋ ಅಳುಕು. ನನಗೆ ಆ ಯೋಗ್ಯತೆ ಇದೆಯೇ ? ಇಷ್ಟೆಲ್ಲಾ ತಿಳಿದವರು ಇಲ್ಲಿರುವಾಗ ನನ್ನದೇನು ಹೆಚ್ಚುಗಾರಿಕೆ? ಆದರೂ ಏನೋ ಹುಚ್ಚು. ಗುರುಗಳ ಆಶೀರ್ವಾದ ಇದ್ದರೆ ಆಗಬಹುದೋ ಏನೋ ಎಂಬ ಆಸೆ. ಸ್ವತ: ಆಚಾರ್ಯರ ಮಾತಿನಲ್ಲೇ ಸ್ತುತಿಯ ಅರ್ಥ ಕೇಳಿದಮೇಲಂತೂ ತಡೆಯುವುದು ತುಂಬಾ ಕಷ್ಟವಾಗುತ್ತಿದೆ. ಅದಕ್ಕಾಗಿಯೇ ಶುರು ಮಾಡುತ್ತಿದ್ದೇನೆ. ಈ ಬಾಲಕನ ಪೆದ್ದುತನವನ್ನು ತಿದ್ದಿ ಒಪ್ಪಿಕೊಳ್ಳುವಿರೆಂದು ನಂಬಿಕೆ ಇದೆ.
"ಕ್ಷಾಮ್ಯಂತು ಮೇ ಹಂತ ಮುಹುರ್ಮಹಾಂತ: "
ಆಚಾರ್ಯರೇ ಹೇಳಿದಂತೆ ಇದು ಅವರು ರಚಿಸಿದ್ದಲ್ಲ. ಪ್ರಾಣ ನಾರಾಯಣರು ಒಳಗಿದ್ದು ಸ್ವತಹ ರಚಿಸಿದ್ದು, ಇವರು ಬರೆದದ್ದು.
ನಮ್ಮ ಜೀವಿತಾವಧಿಯಲ್ಲೇ ಇಂಥ: ಸ್ಫುರಣ ಶಕ್ತಿಯುಳ್ಳ ತಪಸ್ವಿಗಳೊಬ್ಬರು ನಮ್ಮೊಂದಿಗಿರುವುದು ನಮ್ಮ ಪುಣ್ಯವೇ ಸರಿ.
                                                            ****
It has been my sincere desire to share with the Balaga, a succinct commentary on the Narasimha Stuti, a composition of our Acharyaru. There is however some unknown hesitation within me, as I set out to attempt it. Do I have the merit to take up the work? When there are so many knowledgeable Bandhus here, would I be able to step up to the plate? The craving to move forward, somehow does not let me stay inert. There is within me, a fond hope that with the blessings of our Gurugalu, this would crystalise into reality. Having heard the meaning of this stuti in Acharyaru’s own words, I am unable to hold myself back from sharing it. I am hence proceeding with the exercise, with the fervent hope that should I err anywhere, you would all be around to guide me in correcting my steps and to help move on track.
‘क्षामयंतु मे हंत मुहुर्महांतः kṣāmyantu mē hanta muhur’mahāntah”
As stated by Acharyaru, this is not his composition. He has ascribed this to be the work of the indwelling forces of ‘प्राण नारायण - prāṇa nārāyaṇaru.’ He was a mere instrument, in writing it.
It is indeed our singular fortune and blessing, that we have in our proximity, a tapasvi with such inspirational insights.
                             
(Content contributed by Shri B R Krishna, translation into English by Shri Prasad BS)

You may access the complete Śloka at : Narasimha Stuti pdf
To chant this Śloka - Narasimha Stuti Chanting mp3
                                                              ****
ಸ್ತುತಿ:
ಮೊದಲಿಗೆ, ಯಜುರ್ವೇದೀಯ ಶಾಂತಿ ಮಂತ್ರದ ಪಡಿಯಚ್ಚಿನಂಥ  ಶ್ಲೋಕ.

ಅಸ್ಯ ಶ್ರೀ ನೃಸಿಂಹಾಷ್ಟಕಸ್ಯ ಸ್ತೋತ್ರಸ್ಯ  ಶ್ರೀ ಬನ್ನಂಜೆ ಗೋವಿಂದಾಚಾರ್ಯ ಋಷಿ:  ಅಸ್ತು ಇತ್ಯಸ್ಯ ಪ್ರಥಮಸ್ಯ ಅನುಷ್ಟುಪ್ ಛಂದ:, ಸ್ಥಂಭಂ ಚ ಉಗ್ರಂ ಇತಿ ದ್ವಯೋ: ಸ್ರಗ್ಧರಾ ಛಂದ: .  ಜ್ವಲತ್ಕನಕ ಇತ್ಯಸ್ಯ ಪೃಥ್ವೀ ಛಂದ:,  ಜಗನ್ನಿಧಾನ  ಇತ್ಯಸ್ಯ ಅನುಷ್ಟುಪ್ ಛಂದ:, ಯದುತ್ಸಂಗಾ ಇತ್ಯಸ್ಯಾ: ಶಿಖರಿಣೀ ವೃತ್ತಂ,  ನರಕೇಸರಿಣಮಿತ್ಯಸ್ಯ ಆರ್ಯಾ ವೃತ್ತಂ.  ಇಮಮಾಚಾರ್ಯೇತ್ಯಸ್ಯ ಅನುಷ್ಟುಪ್ ಛಂದ: ,  ರುದ್ರಾಂತರ್ಗತ, ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹೋ ದೇವತಾ,   ಶ್ರೀ ನೃಸಿಂಹಾಷ್ಟಕಸ್ಯ ಅರ್ಥ ಚಿಂತನೇ / ಪಾರಾಯಣೇ ವಿನಿಯೋಗ: ||

ಶ್ಲೋಕ 1.
ಅಸ್ತು ತೇಜಸ್ವಿನೋಧೀತಂ. ಅಸ್ತು ಚ ಬ್ರಹ್ಮವರ್ಚಸಂ. ಸಂಪಾದಯೇಮಹಿ ಸಹಸ್ಸಹವೀರ್ಯಂ ಕೃಷೀಮಹಿ ||
ಪದಚ್ಛೇದ: ಅಸ್ತು.ತೇಜಸ್ವೀ. ನ: ಅಧೀತಂ. ಅಸ್ತು. ಚ.ಬ್ರಹ್ಮವರ್ಚಸಂ. ಸಂಪಾದಯೇಮಹಿ. ಸಹ: ಸಹ. ವೀರ್ಯಂ.  ಕೃಷೀಮಹಿ.

ಅನ್ವಯಾರ್ಥ:- ನ: - ನಮ್ಮ, ಅಧೀತಂ - ಅಧ್ಯಯನಮಾಡಲ್ಪಟ್ಟ ವಿದ್ಯೆಯು, ತೇಜಸ್ವೀ ಅಸ್ತು - ಪ್ರಭಾಶಾಲಿಯಾಗಲಿ.
ಬ್ರಹ್ಮವರ್ಚಸಂ ಚ ಅಸ್ತು- ಬ್ರಹ್ಮ ವರ್ಚಸ್ಸನ್ನು ಉಳ್ಳದ್ದಾಗಲಿ. ಸಹ: (ಸಹಸ್) ಯಾರಿಗೂ ತಲೆಮಣಿಯದಂತ: ಆತ್ಮಶಕ್ತಿಯನ್ನು, ಸಂಪಾದಯೇಮಹಿ- ಗಳಿಸಿಕೊಳ್ಳೋಣ. ಸಹ  - ಎಲ್ಲರೊಂದಿಗೆ  ಕೂಡಿ, ವೀರ್ಯಂ - ಶಕ್ತಿಯನ್ನು, ಕೃಷೀಮಹಿ.- ಬೆಳೆಸಿಕೊಳ್ಳೋಣ.

ಉಪನಿಷತ್ತಿನಲ್ಲಿ ದ್ವಿವಚನದಲ್ಲಿರುವ (ಗುರು ಮತ್ತು ಶಿಷ್ಯ) ಇಚ್ಚೆಗಳೆಲ್ಲ, ಅನುಷ್ಟುಪ್ ಛಂದಸ್ಸಿನಲ್ಲಿರುವ   ಈ ಶ್ಲೋಕದಲ್ಲಿ  ಬಹುವಚನದಲ್ಲಿದೆ. ನಮ್ಮಂಥ ಅಲ್ಪರನ್ನೂ ಕೂಡ ಶಿಷ್ಯ ವಾತ್ಸಲ್ಯದಿಂದ ತಮ್ಮೊಟ್ಟಿಗೆ ಉದ್ಧಾರ ಮಾಡುವ ಆಚಾರ್ಯರ ಕರುಣೆ ಇಲ್ಲಿ ಕಾಣಿಸುತ್ತದೆ. ನಮ್ಮ ಆಚಾರ್ಯರ ಇಚ್ಛಾ ಶಕ್ತಿಯಿಂದ ಇದೆಲ್ಲವೂ ಕೈಗೂಡಲೆಂದು ಪ್ರಾಣ ನಾರಾಯಣರನ್ನು ಬೇಡಿಕೊಳ್ಳೋಣ.
                                                                ****
Stuti :
We commence with a ‘śnti mantra’ in the Yajurveda template –

अस्य श्री नृसिंहाष्टकस्य  स्तोत्रस्य श्री बन्नन्जे गोविंदाचार्य ऋषिः, अस्तु इत्यस्य प्रथमस्य अनुष्टुप छन्दः, स्तम्भं च उग्रं इति द्वयोः स्रग्धरा छन्दः, ज्वलत्कनका  इत्यस्य पृथ्वी छन्दः, जगन्निधाना इत्यस्य अनुष्टुप छन्दः, यदूतसंगा इत्यस्याः शिखरिणी वृत्तं, नरकेसरिणमित्यस्य आर्या वृत्तं, इममाचार्येत्यस्य अनुष्टुप छन्दः, रुद्रांतर्गत, श्री भारती रमण मुख्यप्राणान्तर्गत श्री लक्ष्मी नृसिँहो देवता,
श्री नृसिंहाष्टकस्य अर्थ चिन्तने/ पारायणे विनियोगः||

asya śrī nr̥sinhāṣṭakasya stōtrasya śrī bannan̄je gōvindācārya r̥ṣi: 
astu ityasya prathamasya anuṣṭup chandah, sthambhaṁ ca ugraṁ iti dvayōh, sragdharā chandah, jvalatkanaka ityasya pr̥thvī chandah, jagannidhāna ityasya anuṣṭup chandah, yadutsaṅgā ityasyāh śikhariṇī vr̥ttaṁ, narakēsariṇamityasya āryā vr̥ttaṁ. 
imamācāryētyasya anuṣṭup chandah,  rudrāntargata, śrī bhāratī ramaṇa mukhyaprāṇāntargata śrī lakṣmī nr̥sinhō dēvatā, śrī nr̥sinhāṣṭakasya artha cintanē / pārāyaṇē viniyōgah ||

Śloka 1
अस्तु तेजस्विनोधीतं.अस्तु च ब्रह्मवर्चसं.सम्पादयेमहि सहस्सहवीर्यं कृषीमहि||
astu tējasvinōdhītaṁ. astu ca brahmavarcasaṁ. Sampādayēmahi sahas'sahavīryaṁ kr̥ṣīmahi

पदच्छेद: अस्तु तेजस्वी. नः अधीतं. अस्तु च ब्रह्मवर्चसं. सम्पादयेमहि सहः सह.वीर्यं कृषीमहि|
Padacchēda: astu tējasvī nah adhītaṁ. astu ca brahmavarcasaṁ. sampādayēmahi sahah saha.vīryaṁ kr̥ṣīmahi

Word meanings: नः(nah) – our; अधीतं (adhītaṁ) - subject under study; तेजस्वी अस्तु (tējasvī astu) may it be luminous;  ब्रह्मवर्चसं च अस्तु (brahmavarcasaṁ ca astu) – may it also have the Brahma’s radiance;  सहः (सहस्) [sahah(sahas)] – empowerment in the soul, not to bow down to anyone; सम्पादयेमहि (sampādayēmahi) – may we gain; सह(Sah) – together with others; वीर्यं (vīryaṁ) - strength;  कृषीमहि (kr̥ṣīmahi) – cultivate.

All that is wished for in dual numbers (teacher and the student) in the upaniśad śloka, is stated here in plural. Out of love for his students, our Acharyaru, it can be seen here, sets out to carry with him, even those who are lowly placed, like us, in his endeavour towards progress. Let us all pray to ‘प्राण नारायण - prāṇa nārāyaṇaru,’ that may all this succeed, as per the wishes of our Acharyaru.

(to be continued....)


1 comment:

  1. Dhanyavaadagalu Krishna for a lucid explanation of shanti mantra

    ReplyDelete

ಗೋ-ಕುಲ Go-Kula