Tuesday, 30 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 162 - 168


 (ಮೊದಲು ಮುಖ್ಯಪ್ರಾಣ ಆನಂತರ ಭಾರತೀದೇವಿ ನಂತರ ಬಲರಾಮ,
ಇದನ್ನೇ ದೃಢಗೊಳಿಸುತ್ತಾರೆ ಆಚಾರ್ಯರು ಹೇಳಿ ತಾರತಮ್ಯದ ನೇಮ).
 ಯಸ್ಯಾಧಿಕೋ ಬಲೇ ನಾಸ್ತಿ ಭೀಮಸೇನಮೃತೇ ಕ್ವಚಿತ್ ।
ನ ವಿಜ್ಞಾನೇ ನಚ ಜ್ಞಾನ ಏಷ ರಾಮಃ ಸ ಲಾಙ್ಗಲೀ  ॥೨.೧೬೨॥

ಯಸ್ಯ ನ ಪ್ರತಿಯೋದ್ಧಾsಸ್ತಿ ಭೀಮಮೇಕಮೃತೇ ಕ್ವಚಿತ್ ।
ಅನ್ವಿಷ್ಯಾಪಿ ತ್ರಿಲೋಕೇಷು ಸ ಏಷ ಮುಸಲಾಯುಧಃ  ॥೨.೧೬೩॥
ಭಗವದ್ ವಿಜ್ಞಾನ ಜ್ಞಾನ ಬಲ ಎಲ್ಲದರಲ್ಲಿ,
ಭೀಮಸೇನಗೆ ಸಮ ಇನ್ನೊಬ್ಬ ಇಲ್ಲ ಅಲ್ಲಿ.
ಅವನ ನಂತರದ ಸ್ಥಾನ ಪಡೆದವನು (ಬಲರಾಮ)ಶೇಷ,
ಇಂತಹ ಸೂಕ್ಷ್ಮದ ತಾರತಮ್ಯದ ನೀತಿಗಳು ಆಚಾರ್ಯರ ವಿಶೇಷ.
ತಥಾ ಯುದಿಷ್ಠಿರೇಣೈವ ಭೀಮಾಯ ಸಮುದೀರಿತಮ್ ।
ಅನುಜ್ಞಾತೋ ರೌಹಿಣೇಯಾತ್ ತ್ವಯಾ ಚೈವಾಪರಾಜಿತ ।
ಸರ್ವವಿದ್ಯಾಸು ಬೀಭತ್ಸುಃ ಕೃಷ್ಣೇನ ಚ ಮಹಾತ್ಮನಾ  ॥೨.೧೬೪॥
ಅನ್ವೇಷ ರೌಹಿಣೇಯಂ ಚ ತ್ವಾಂ ಚ ಭೀಮಾಪರಾಜಿತಮ್ ।
ವೀರ್ಯೇ ಶೌರ್ಯೇsಪಿವಾ ನಾನ್ಯಸ್ತೃತೀಯಃ ಫಲ್ಗುನಾದೃತೇ ॥೨.೧೬೫॥
ವನಪರ್ವದಲ್ಲಿ ಧರ್ಮರಾಜ ಭೀಮಗೆ ಹೇಳುತ್ತಾನೆ,
ನೀನು ಬಲಭದ್ರನ ನಂತರ ಅರ್ಜುನ ಪರಿಣಿತನಿದ್ದಾನೆ.
ಭೀಮ ಬಲರಾಮನಿಗಿಂತ ಅರ್ಜುನನ ಸ್ಥಾನ ಕೊಂಚ ಕೆಳಗೆ,
ಅವರಿಬ್ಬರ ನಂತರ ಸವ್ಯಸಾಚಿಗೆ ಸಮರಿಲ್ಲ ಸಮಸ್ತ  ಸೈನ್ಯದೊಳಗೆ.
ತಥೈವ ದ್ರೌಪದೀವಾಕ್ಯಂ ವಾಸುದೇವಂ ಪ್ರತೀರಿತಮ್ ।
ಅಧಿಜ್ಯಮಪಿ ಯತ್ ಕರ್ತುಂ ಶಕ್ಯತೇ ನೈವ ಗಾಣ್ಡಿವಮ್ ।
ಅನ್ಯತ್ರ ಭೀಮಪಾರ್ಥಾಭ್ಯಾಂ ಭವತಶ್ಚ ಜನಾರ್ದನ ॥೨.೧೬೬॥
ವನಪರ್ವದಲ್ಲಿ ದ್ರೌಪದಿ ಶ್ರೀಕೃಷ್ಣಗೆ ಹೇಳುವ ಮಾತು,
ನೀನು ಭೀಮಾರ್ಜುನರನ್ನು ಬಿಟ್ಟರೆ ಯಾರಿಗಿದೆ ಗಾಂಡೀವ ಎತ್ತುವ ತಾಕತ್ತು.
ತಥೈವಾನ್ಯತ್ರ ವಚನಂ ಕೃಷ್ಣದ್ವೈಪಾಯನೇರಿತಮ್ ।
ದ್ವಾವೇವ ಪುರುಷೌ ಲೋಕೇ ವಾಸುದೇವಾದನನ್ತರೌ ।
ಭೀಮಸ್ತು ಪ್ರಥಮಸ್ತತ್ರ ದ್ವಿತೀಯೋ ದ್ರೌಣಿರೇವ ಚ ॥೨.೧೬೭॥
ಭಾರತದಲ್ಲಿ ವೇದವ್ಯಾಸರೇ ಮಾಡಿದ ಪ್ರಸ್ತಾಪ,
ಶ್ರೀಕೃಷ್ಣನ ನಂತರದ ವೀರಪುರುಷರು ಇಬ್ಬರಪ್ಪ.
ಮೊದಲನೆಯವ ಭೀಮ,
ಎರಡನೆಯವ ಅಶ್ವತ್ಥಾಮ.
(ಮೂಲದಲ್ಲಿ ಅರ್ಜುನ ಇಂದ್ರ,
ಮೂಲದಲ್ಲಿ ಅಶ್ವತ್ಥಾಮ ರುದ್ರ.
ತಾರತಮ್ಯದಲ್ಲಿ ಎಂದೂ ರುದ್ರನೇ ಮೇಲು,
ಆದರೂ ತೋರಿದ್ದುಂಟು ರುದ್ರಗಾದಂತೆ ಸೋಲು).
ಅಕ್ಷಯಾವಿಷುಧೀ ದಿವ್ಯೇ ಧ್ವಜೋ ವಾನರಲಕ್ಷಣಃ
ಗಾಣ್ಡೀವಂ ಧನುಷಾಂ ಶ್ರೇಷ್ಠಂ ತೇನ ದ್ರೌಣೇರ್ವರೋsರ್ಜುನಃ ॥೨.೧೬೮॥
ಎಂದೂ ಖಾಲಿಯಾಗದ ಬತ್ತಳಿಕೆ,
ಹನುಮಂತ ಕೂತಿರುವ ಪತಾಕೆ,
ಶ್ರೇಷ್ಠ ಧನುಸ್ಸು ಗಾಂಡೀವದ ಇರುವಿಕೆ,
ಇವೆಲ್ಲಾ ಅರ್ಜುನಗೆ ಕೊಟ್ಟವು ಹೆಗ್ಗಳಿಕೆ.
(ಮುಖ್ಯವಾಗಿ ಸಾತ್ವಿಕ ಗುಣ ಕೃಷ್ಣನ ಸಾರಥ್ಯ,
ಲಭ್ಯವಾಯ್ತು  ರಕ್ಷಣೆ ಇಹ ಪರದಲ್ಲಿ ಆತಿಥ್ಯ).
[Contributed by Shri Govind Magal]

Sunday, 28 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2:157 - 161


ವಚನಂ ವಾಸುದೇವಸ್ಯ ತಥೋದ್ಯೋಗಗತಂ ಪರಮ್ ।
ಯತ್ ಕಿಞ್ಚಾsತ್ಮನಿ ಕಲ್ಯಾಣಂ ಸಮ್ಭಾವಯಸಿ ಪಾಣ್ಡವ ।
ಸಹಸ್ರಗುಣಮಪ್ಯೇತತ್ ತ್ವಯಿ ಸಮ್ಭಾವಯಾಮ್ಯಹಮ್ ॥೨.೧೫೭॥

ಯಾದೃಶೇ ಚ ಕುಲೇ ಜಾತಃ ಸರ್ವರಾಜಾಭಿಪೂಜಿತೇ ।
ಯಾದೃಶಾನಿ ಚ ಕರ್ಮಾಣಿ ಭೀಮ ತ್ವಮಸಿ ತಾದೃಶಃ ॥೨.೧೫೮॥

ಅಸ್ಮಿನ್ ಯುದ್ಧೇ ಭೀಮಸೇನ ತ್ವಯಿ ಭಾರಃ ಸಮಾಹಿತಃ ।
ಧೂರರ್ಜುನೇನ ವೋಢವ್ಯಾ ವೋಢವ್ಯಾ ಇತರೋ ಜನಃ ।
ಉಕ್ತಂ ಪುರಾಣೇ ಬ್ರಹ್ಮಾಣ್ಡೇ ಬ್ರಹ್ಮಣಾ ನಾರದಾಯ ಚ ॥೨.೧೫೯॥

ಉದ್ಯೋಗಪರ್ವದಲ್ಲಿ ಶ್ರೀಕೃಷ್ಣನ ಮಾತು,
ಗಮನಾರ್ಹವಾದದ್ದದು ಭೀಮನ ಕುರಿತು.
ನಿನ್ನಲ್ಲಿರುವ ಸದ್ಗುಣಗಳ ಭಂಡಾರ,
ಸಾವಿರಪಟ್ಟು ಮಿಗಿಲದು ಎನ್ನ ಪ್ರಕಾರ.

ಯಾರ ಮಗ ಯಾವ ಕುಲ ಏನೇನು ನಿನ್ನ ಕಾರ್ಯ,
ನಿನ್ನೆತ್ತರದ ಕೆಲಸಗಳೇ ಮಾಪಗಳವು ಗಮನಾರ್ಹ.
ನಿನ್ನ ಕೆಲಸ ಕಾರ್ಯಗಳೆಂದೂ ತಾರಕ,
ಅದೇ ನಿನ್ನ ವ್ಯಕ್ತಿತ್ವಕ್ಕಾಗುತ್ತದೆ ನಿರ್ಣಾಯಕ.
ಅರ್ಜುನ ಯುದ್ಧದ ನೊಗ ಹೊತ್ತ ಸೈನಿಕ,
ನೀನೇ ಪ್ರತಿಕ್ಷಣ ಪ್ರತಿಯೊಂದರ ಪಾಲಕ.

ಯಸ್ಯಾಃ ಪ್ರಸಾದಾತ್ ಪರಮಂ ವಿದನ್ತಿ  ‘ಶೇಷಃ ಸುಪರ್ಣೋ ಗಿರಿಶಃ ಸುರೇನ್ದ್ರಃ ।
ಮಾತಾ ಚ ಯೈಷಾಂ ಪ್ರಥಮೈವ ಭಾರತೀ ‘ಸಾ ದ್ರೌಪದೀ ನಾಮ ಬಭೂವ ಭೂಮೌ ॥೨.೧೬೦॥

ಯಾ ಮಾರುತಾದ್ ಗರ್ಭಮಧತ್ತ ಪೂರ್ವಂ ‘ಶೇಷಂ ಸುಪರ್ಣಂ ಗಿರಿಶಂ ಸುರೇನ್ದ್ರಮ್ ।
ಚತುರ್ಮುಖಾಭಾಂಶ್ಚತುರಃ ಕುಮಾರಾನ್ ‘ಸಾ ದ್ರೌಪದೀ ನಾಮ ಬಭೂವ ಭೂಮೌ’ ॥೨.೧೬೧॥

ಬ್ರಹ್ಮಾಂಡ ಪುರಾಣದಲ್ಲಿ ಹೇಳಿದ ವಚನ,
ತಿಳಿಸುತ್ತದೆ ದ್ರೌಪದೀದೇವಿಯ ಸ್ಥಾನ ಮಾನ.
ಯಾರ ಅನುಗ್ರಹದಿ ಶೇಷ ಗರುಡ ಸದಾಶಿವ ಇಂದ್ರ,
ಪಡೆಯುವರು ಹರಿಮಹಾತ್ಮೆಯ ದಿವ್ಯ ಜ್ಞಾನ ಲಾಂದ್ರ.
ತಾಯಿ ಭಾರತಿಯೇ ಆಕೆ ಇವರಿಗೆಲ್ಲಾ ತೋರಿದ್ದು ಹಾದಿ,
ಇವರೆಲ್ಲರ ಹೆತ್ತ ಭಾರತಿಯೇ ಭೂಮಿಯಲ್ಲಾದಳು ದ್ರೌಪದಿ.
[Contributed by Shri Govind Magal]

Saturday, 27 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 153 - 156

ತಥಾ ಯುದಿಷ್ಠಿರೇಣಾಪಿ ಭೀಮಂ ಪ್ರತಿ ಸಮೀರಿತಮ್ ।
ಧರ್ಮಶ್ಚಾರ್ಥಶ್ಚ ಕಾಮಶ್ಚ ಮೋಕ್ಷಶ್ಚೈವ ಯಶೋ ಧ್ರುವಮ್ ।
ತ್ವಯ್ಯಾಯತ್ತಮಿದಂ ಸರ್ವಂ ಸರ್ವಲೋಕಸ್ಯ ಭಾರತ ॥೨.೧೫೩॥

ಹಾಗೇ ಧರ್ಮಜ ಭೀಮಗೆ ಹೇಳಿದ ಮಾತು ಸೆಳೆಯುತ್ತದೆ ಗಮನ,
ಧರ್ಮ ಅರ್ಥ ಕಾಮ ಮೋಕ್ಷ ಕೀರ್ತಿ ಇವೆಲ್ಲಾ ಎಲ್ಲೆಡೆಯೂ ನಿನ್ನಧೀನ.
ನಿನ್ನನುಗ್ರಹದಿಂದ ಇತರರಿಗಾಗುತ್ತದೆ ಅದು ಪ್ರದಾನ.

ವಿರಾಟಪರ್ವಗಂ ಚಾಪಿ ವಚೋ ದುರ್ಯೋಧನಸ್ಯ ಹಿ ।
ವೀರಾಣಾಂ ಶಾಸ್ತ್ರವಿಧುಷಾಂ ಕೃತಿನಾಂ ತತ್ತ್ವನಿರ್ಣಯೇ
ಸತ್ತ್ವೇ ಬಾಹುಬಲೇ ಧೈರ್ಯೇ ಪ್ರಾಣೇ ಶಾರೀರಸಮ್ಭವೇ ॥೨.೧೫೪॥

ಸಾಮ್ಪ್ರತಂ ಮಾನುಷೇ ಲೋಕೇ ಸದೈತ್ಯನರರಾಕ್ಷಸೇ ।
ಚತ್ವಾರಃ ಪ್ರಾಣಿನಾಂ ಶ್ರೇಷ್ಠಾಃ ಸಮ್ಪೂರ್ಣಬಲಪೌರುಷಾಃ ॥೨.೧೫೫॥

ಭೀಮಶ್ಚ ಬಲಭದ್ರಶ್ಚ ಮದ್ರರಾಜಶ್ಚ ವೀರ್ಯವಾನ್ ।
ಚತುರ್ಥಃ ಕೀಚಕಸ್ತೇಷಾಂ ಪಞ್ಚಮಂ ನಾನುಶುಶ್ರುಮಃ ।
ಅನ್ಯೋನ್ಯಾನನ್ತರಬಲಾಃ ಕ್ರಮಾದೇವ ಪ್ರಕೀರ್ತಿತಾಃ ॥೨.೧೫೬॥

ವಿರಾಟಪರ್ವದಲ್ಲಿ ಭೀಮನ ಕುರಿತು ದುರ್ಯೋಧನನ ವಚನ,
ಸಿದ್ಧಪಡಿಸುತ್ತದೆ ಭೀಮಸೇನ ಎಂಥಾ ಬಲವಂತ-ಪ್ರಧಾನ.
ಯುದ್ಧ ಶಾಸ್ತ್ರ ಸಂದಿಗ್ಧದಲ್ಲಿ ನಿರ್ಣಯ ಮಾನಸಿಕ ಸ್ಥೈರ್ಯ,
ಸತ್ವ ಬಾಹುಬಲ ಪೌರುಷ ಅಸಾಮಾನ್ಯ ಅದ್ಭುತ ಧೈರ್ಯ,
ದಾನವ ಮಾನವ ರಾಕ್ಷಸ ಲೋಕಗಳಲ್ಲಿ  ಎಲ್ಲಾ,
ಭೀಮ ಬಲಭದ್ರ ಶಲ್ಯ ಕೀಚಕನಲ್ಲದೆ ಐದನೆಯವನಿಲ್ಲ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 148 - 152


ಅಶ್ವಮೇಧಃ ಕ್ರತುಶ್ರೇಷ್ಠೋ ಜ್ಯೋತಿಃಶ್ರೇಷ್ಠೋ ದಿವಾಕರಃ ।
ಬ್ರಾಹ್ಮಣೋ ದ್ವಿಪದಾಂ ಶ್ರೇಷ್ಠೋ ದೇವಶ್ರೇಷ್ಠಸ್ತು ಮಾರುತಃ ॥೨.೧೪೮॥

ಯಜ್ಞಗಳಲ್ಲಿಯೇ ಅಶ್ವಮೇಧವದು ಶ್ರೇಷ್ಠ,
ಬೆಳಕುಗಳಲ್ಲಿಯೇ ಸೂರ್ಯನವ ಶ್ರೇಷ್ಠ.
ಮನುಷ್ಯರಲ್ಲಿ ಶ್ರೇಷ್ಠ ಬ್ರಹ್ಮಜ್ಞಾನಿಯಾದ ಬ್ರಾಹ್ಮಣ,
ದೇವತೆಗಳಲ್ಲಿ ಶ್ರೇಷ್ಠನಾದವ ಅವ ಮುಖ್ಯಪ್ರಾಣ.

ಬಲಮಿನ್ದ್ರಸ್ಯ ಗಿರಿಶೋ ಗಿರಿಶಸ್ಯ ಬಲಂ ಮರುತ್ ।
ಬಲಂ ತಸ್ಯ ಹರಿಃ ಸಾಕ್ಷಾನ್ನ ಹರೇರ್ಬಲಮನ್ಯತಃ  ॥೨.೧೪೯॥

ಇಂದ್ರನಿಗಿಂತ ಬಲವಂತ (ಗಿರೀಶ)ತತ್ಪುರುಷ,
ಗಿರೀಶಗಿಂತ ಬಲವಂತನವ ಮುಖ್ಯಪ್ರಾಣೇಶ.
ಮುಖ್ಯಪ್ರಾಣನಿಗಿಂತ ಬಲವಂತನವ ಶ್ರೀಶ.
ಹರಿಗೆ ಸಮ-ಮಿಗಿಲು ಅಂತ ಇನ್ನೊಬ್ಬನಿಲ್ಲ,
ನಂತರದ ಸ್ಥಾನ ಮುಖ್ಯಪ್ರಾಣನೆಂಬ ಮಲ್ಲ.

ವಾಯುರ್ಭೀಮೋ ಭೀಮನಾದೋ ಮಹೌಜಾಃ ಸರ್ವೇಷಾಂ ಚ ಪ್ರಾಣಿನಾಂ ಪ್ರಾಣಭೂತಃ ।
ಅನಾವೃತ್ತಿರ್ದೇಹಿನಾಂ ದೇಹಪಾತೇ ತಸ್ಮಾದ್ ವಾಯುರ್ದೇವದೇವೋ ವಿಶಿಷ್ಟಃ ॥೨.೧೫೦॥
ಮುಖ್ಯಪ್ರಾಣನು ದುರ್ಜನರಿಗೆ ಭಯಂಕರ,
ಭಾರೀ ಘರ್ಜನೆಯ ಶಕ್ತಿಶಾಲಿ ಅಪ್ರತಿಮವೀರ.
ಎಲ್ಲರಿಗೂ ಉಸಿರನೀವ ಜೀವದಾತ-ಮಹಿಮಾವಂತ,
ಅವ ಹೊರನಡೆದರೆ ಎಲ್ಲ ದೇಹಿಗಳ ದೇಹಪಾತ,
ದೇವತೆಗಳಲ್ಲಿ ಹಿರಿಯ ಶ್ರೇಷ್ಠ ಮುಖ್ಯಪ್ರಾಣನಾತ.

ತತ್ತ್ವಜ್ಞಾನೇ ವಿಷ್ಣುಭಕ್ತೌ ಧೈರ್ಯೇ ಸ್ಥೈರ್ಯೇ ಪರಾಕ್ರಮೇ ।
ವೇಗೇ ಚ ಲಾಘವೇ ಚೈವ ಪ್ರಲಾಪಸ್ಯ ಚ ವರ್ಜನೇ ॥೨.೧೫೧॥

ಭೀಮಸೇನಸಮೋ ನಾಸ್ತಿ ಸೇನಯೋರುಭಯೋರಪಿ ।
ಪಾಞ್ಡಿತ್ಯೇಚ ಪಟುತ್ವೇ ಚ ಶೂರತ್ವೇ ಚ ಬಲೇsಪಿ ಚ ॥೨.೧೫೨॥

ತತ್ವಜ್ಞಾನ ವಿಷ್ಣುಭಕ್ತಿ ಧೈರ್ಯ ಸ್ಥೈರ್ಯ ಪರಾಕ್ರಮ,
ವೇಗದಿ ನಿಪುಣ ಪ್ರಲಾಪಹೀನ ಭೀಮನಿಗಾರಿಲ್ಲ ಸಮ.
ಭೀಮಸೇನಗೆ ಸಮನಾದವ ಎರಡೂ ಸೈನ್ಯದಲ್ಲಿ ಯಾರೂ ಇಲ್ಲ,
ಅವ ಪಾಂಡಿತ್ಯ ಪಟುತ್ವ ಸಾಮರ್ಥ್ಯ ಶೂರತನ ಬಲದ ಮೂಲ.
[Contributed by Shri Govind Magal]

Thursday, 25 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 142 - 147

ವಾಯುರ್ಹಿ ಬ್ರಹ್ಮತಾಮೇತಿ ತಸ್ಮಾತ್ ಬ್ರಹ್ಮೈವ ಸ ಸ್ಮೃತಃ ।
ನ ಬ್ರಹ್ಮಸದೃಶಃ ಕಶ್ಚಿಚ್ಛಿವಾದಿಷು ಕಥಞ್ಚನ’ ॥೨.೧೪೨॥

ಜ್ಞಾನೇ ವಿರಾಗೇ ಹರಿಭಕ್ತಿಭಾವೇ ಧೃತಿಸ್ಥಿತಿಪ್ರಾಣಬಲೇಷು ಯೋಗೇ ।
ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ ಕಶ್ಚನೈವ’ ॥೨.೧೪೩॥

ಮುಖ್ಯಪ್ರಾಣನೇ ಮುಂದಿನ ಕಲ್ಪದಲ್ಲಾಗುತ್ತಾನೆ ಅವ ಬ್ರಹ್ಮ.
ಶಿವ ಮೊದಲಾದವರಲ್ಲಿ ಆ ಜ್ಞಾನ ಇಲ್ಲವೆಂದೇ ಅದು ಮರ್ಮ.

ಜ್ಞಾನ ವೈರಾಗ್ಯ ವಿಷ್ಣುಭಕ್ತಿಯ ಭಾವದಲ್ಲಿ,
ಧೈರ್ಯ ಸ್ಥಿರತೆ ಪೌರುಷ ಬಲ ಯೋಗದಲ್ಲಿ,
ಬುದ್ಧಿಯಲ್ಲಿ ಹನುಮಂತಗೆ ಸಮಾನನಾದ ಮತ್ತೊಬ್ಬನಿಲ್ಲ.
ಪವಮಾನಗೆ ಸಮಾನ ಯಾರೂ ಯಾವಕಾಲದಲ್ಲೂ ಎಲ್ಲೂ ಇಲ್ಲ.

ಬಳಿತ್ಥಾ ತದ್ ವಪುಷೇ ಧಾಯಿ ದರ್ಶತಂ ದೇವಸ್ಯ ಭರ್ಗಃ ಸಹಸೋ ಯತೋ ಜನಿ ।
ಯದೀಮುಪಹ್ವರತೇ ಸಾಧತೇ ಮತಿರ್ ಋತಸ್ಯ ಧೇನ ಅನಯನ್ತ ಸಸ್ರುತಃ ॥೨.೧೪೪॥

ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆ ಶಯೇ ದ್ವಿತೀಯಮಾ ಸಪ್ತಶಿವಾಸು ಮಾತೃಷು ।
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ॥೨.೧೪೫॥

ಸರ್ವಶಕ್ತ ಸರ್ವಜ್ಞ ಭಗವಂತನ ಮುಖ್ಯಪ್ರಾಣ ಹೊರುವ.
ಜನ್ಮದಾತ ಶ್ರೀಹರಿಯ ಪದತಲದಲ್ಲಿ ಸದಾ ಬಾಗಿ ನಿಂತಿರುವ.
ರಾಮರೂಪಿ ಹರಿಯ ಪ್ರೇಮಸಂದೇಶವ ತಾಯಿ ಸೀತೆಗೆ ತಲುಪಿಸುವವ.
ಜಗದ್ ಮಾತಾಪಿತರ ಸೇವೆಯಲ್ಲಿ ಬದ್ಧನಾದ ಹನುಮಂತನಾಗಿರುವ.

ಇವನ ಎರಡನೇ ಅವತಾರವೇ ಭೀಮಸೇನ ರೂಪ.
ಶತ್ರುಸೈನ್ಯ ಪುಡಿಮಾಡಿದ ಬಂಡಿ ಅನ್ನವನ್ನುಂಡ   ಭೂಪ.
ಏಳುಶಾಸ್ತ್ರ ಮಾತೆಯರ ಮಡಿಲಲ್ಲಿ ಮಲಗಿರುವ ಕೂಸು.
ಮೂರನೇ ಅವತಾರ ಮಧ್ವರಾಗಿ ನೀಡಿದ್ದು ವೇದಸಾರದ ಹಾಸು.

ನಿರ್ಯದೀಂ ಬುದ್ನಾನ್ಮಹಿಷಸ್ಯ ವರ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ।
ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ ॥೨.೧೪೬॥

ಪ್ರ ಯತ್ ಪಿತುಃ ಪರಮಾನ್ನೀಯತೇ ಪರ್ಯಾ ಪೃಕ್ಷುಧೋ ವೀರುಧೋ ದಂಸು ರೋಹತಿ ।
ಉಭಾ ಯದಸ್ಯ ಜನುಷಂ ಯದಿನ್ವತ ಆದಿದ್ ಯವಿಷ್ಠೋ ಅಭವದ್ ಘೃಣಾ ಶುಚಿಃ’ ॥೨.೧೪೭॥

ತೆರೆದಾಗ ಜ್ಞಾನಶ್ರೇಷ್ಠ ಮುಖ್ಯಪ್ರಾಣನ ಅನುಗ್ರಹದ ದ್ವಾರ,
ಜ್ಞಾನಿಗಳಿಗಾಗುತ್ತದೆ ಪರಮಾತ್ಮನ ಗುಣಗಳ ನೈಜ ಸಾಕಾರ.
ಸಜ್ಜನರ ಸರಿದಾರಿಗೆ ನಡೆಯಬೇಕಾದ ಭಗವತ್ ಚಿಂತನ,
ವಾಯು ಮಾಡುತ್ತಾನೆ ನಮ್ಮ ಹೃತ್ಕಮಲದಲ್ಲಿ ತತ್ವ ಮಂಥನ.

ಯಾವ ಮಧ್ವರೆಂಬ ಈ ಜ್ಞಾನಾವತಾರ,
ನಾರಾಯಣನಿಂದ ಜಗಕ್ಕಾಗಿದೆ ಸಾಕಾರ.
ಯಾವುದೇ ದುರ್ವಾದಿಗಳ ಕ್ಷುದ್ರ ಪ್ರಶ್ನೆ-ದುರ್ವಾದ,
ಆಗಿ ಬಿಸುಡಲ್ಪಡುತ್ತದೆ ಅವನ ಜ್ಞಾನದವಡೆಯಲ್ಲಿ ಛೇದ.
ಲಕ್ಷ್ಮೀ ನಾರಾಯಣರ ಗುಣ ತೋರಿಸುವ ಈ ರೂಪ,
ಸಜ್ಜನರಲ್ಲಿ ದಯಹೊಂದಿ ಬೆಳಗಿಸುವ ಜ್ಞಾನ ದೀಪ.

(ಹೀಗೆ ಋಗ್ವೇದದಲ್ಲಿ ಬಂದ ಮೂರು ಅವತಾರಗಳ ವರ್ಣನೆ,
ತನ್ಮೂಲಕ ಬಂದ ರಾಮಾಯಣ ಭಾರತಗಳ ವಿಶೇಷ ಚಿಂತನೆ.
ವೇದಮುಖೇನ ಇತಿಹಾಸ ಪುರಾಣಗಳ ನೋಡುವ ನೋಟ,
ಅದ್ವಿತೀಯ ಮಧ್ವಾಚಾರ್ಯರೇ ಗ್ರಂಥದಲ್ಲಿ ಕೊಟ್ಟ ಪಾಠ).
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 139 - 141

ಏವಮಧ್ಯಾತ್ಮನಿಷ್ಠಂ ಹಿ ಭಾರತಂ ಸರ್ವಮುಚ್ಯತೇ ।
ದುರ್ವಿಜ್ಞೇಯಮತಃ ಸರ್ವೈರ್ಭಾರತಂ ತು ಸುರೈರಪಿ ॥೨.೧೩೯॥

ಸ್ವಯಂ ವ್ಯಾಸೋ ಹಿ ತದ್ ವೇದ ಬ್ರಹ್ಮಾ ವಾ ತತ್ ಪ್ರಸಾದತಃ ।
ತಥಾsಪಿ ವಿಷ್ಣುಪರತಾ ಭಾರತೇ ಸಾರಸಙ್ಗ್ರಹಃ’ ॥೨.೧೪೦॥

ಇತ್ಯಾದಿವ್ಯಾಸವಾಕ್ಯೈಸ್ತು ವಿಷ್ಣೋತ್ಕರ್ಷೋsವಗಮ್ಯತೇ ।
ವಾಯ್ವಾದೀನಾಂ ಕ್ರಮಶ್ಚೈವ  ತದ್ವಾಕ್ಯೈರೇವ ಚಿನ್ತ್ಯತೇ ॥೨.೧೪೧॥

ಇಡೀ ಮಹಾಭಾರತವದು ಅಧ್ಯಾತ್ಮನಿಷ್ಠ ಗ್ರಂಥ.
ಧರ್ಮಾದಿ ಹತ್ತು ಗುಣಗಳುಳ್ಳವರಿಗೆ ಆಗುತ್ತದೆ ಅರ್ಥ.
ಎಲ್ಲಾ ದೇವತೆಗಳೂ ಅದನ್ನ ಪೂರ್ಣ ತಿಳಿಯಲು ಅಸಮರ್ಥ.

ಪೂರ್ಣ ಬಲ್ಲವರೊಬ್ಬರೇ ಅವರು ಸ್ವಯಂ ವೇದವ್ಯಾಸ.
ಅವರನುಗ್ರಹದಿಂದ ತಿಳಿದ ಬ್ರಹ್ಮದೇವ ವ್ಯಾಸರ ದಾಸ.

ಒಟ್ಟಿನಲ್ಲಿ ಮಹಾಭಾರತದ ತಿರುಳು ವಿಷ್ಣು ಸರ್ವೋತ್ತಮತ್ವ.
ಹಾಗೇ ಪ್ರಾಣನ ಹಿರಿಮೆ, ತಾರತಮ್ಯೋಕ್ತ ಜ್ಞಾನದ ತತ್ವ.

ಇವೆಲ್ಲವನ್ನೂ ತಿಳಿಸಿರುವುದು ವೇದವ್ಯಾಸರ ವಾಕ್ಯಗಳ ಸತ್ವ.
[Contributed by Shri Govind Magal]

Tuesday, 23 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 134 - 138

 ‘ಭಕ್ತಿರ್ಜ್ಞಾನಂ ಸ ವೈರಾಗ್ಯಂ ಪ್ರಜ್ಞಾಮೇಧಾ ಧೃತಿಃ ಸ್ಥಿತಿಃ ।
‘ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ ॥೨.೧೩೪॥

‘ಏತದ್ದಶಾತ್ಮಕೋ ವಾಯುಸ್ತಸ್ಮಾದ್ ಭಿಮಸ್ತದಾತ್ಮಕಃ ।
‘ಸರ್ವವಿದ್ಯಾ ದ್ರೌಪದೀ ತು ಯಸ್ಮಾತ್ ಸೈವ ಸರಸ್ವತೀ ॥೨.೧೩೫॥

ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ,
ಇವಿಷ್ಟೂ ಗುಣಗಳು ಪ್ರತಿನಿಧಿಸುತ್ತವೆ ಭೀಮಸೇನನ ವ್ಯಕ್ತಿತ್ವದ ಎತ್ತರ ಮತ್ತು ಆಳ.

ಭೀಮಸೇನ ಅವಿಷ್ಟೂ ಗುಣಗಳ ಹೊಂದಿದಾತ,
ಅವನ ಸತಿ ದ್ರೌಪದೀದೇವಿ ಆಕೆ ವೇದಮಾತ.

‘ಅಜ್ಞಾನಾದಿಸ್ವರೂಪಸ್ತು ಕಲಿರ್ದುರ್ಯೋಧನಃ ಸ್ಮೃತಃ ।
‘ವಿಪರೀತಂ ತು ಯಜ್ಜ್ಞಾನಂ ದುಃಶಾಸನ ಇತೀರಿತಃ ॥೨.೧೩೬॥

‘ನಾಸ್ತಿಕ್ಯಂ ಶಕುನಿರ್ನಾಮ ಸರ್ವದೋಷಾತ್ಮಕಾಃ ಪರೇ ।
‘ಧಾರ್ತರಾಷ್ಟ್ರಾಸ್ವಹಙ್ಕಾರೋ ದ್ರೌಣೀ ರುದ್ರಾತ್ಮಕೋ ಯತಃ ॥೨.೧೩೭॥

‘ದ್ರೋಣಾದ್ಯಾ ಇನ್ದ್ರಿಯಾಣ್ಯೇವ ಪಾಪಾನ್ಯನ್ಯೇ ತು ಸೈನಿಕಾಃ ।
‘ಪಾಣ್ಡವೇಯಾಶ್ಚ ಪುಣ್ಯಾನಿ ತೇಷಾಂ ವಿಷ್ಣುರ್ನಿಯೋಜಕಃ ॥೨.೧೩೮॥

ಅಜ್ಞಾನಾದಿಸ್ವರೂಪ ಕಲಿ ಅವ ದುರ್ಯೋಧನ.
ವಿಪರೀತಜ್ಞಾನದ ಪ್ರತಿನಿಧಿ ಅವ ದುಶ್ಯಾಸನ.
ಶಕುನಿ ಅವನು  ನಾಸ್ತಿಕ್ಯದ ಅಭಿಮಾನಿ.
ಧೃತರಾಷ್ಟ್ರಪುತ್ರರಷ್ಟೂ ಒಂದೊಂದು ದೋಷದ ಗನಿ.
ಅಶ್ವತ್ಥಾಮ "ನಾನು ದೇಹ "ಎಂಬ ಪ್ರಜ್ಞೆಯ ದನಿ.

ದ್ರೋಣಾದಿಗಳೆಲ್ಲಾ ಇಂದ್ರಿಯಗಳ ಸಂಕೇತ,
ಕೌರವನ ಸೈನಿಕರೆಲ್ಲಾ ಪಾಪ ಪೂರಿತ.
ಪಾಂಡವ ಸೈನಿಕರೆಲ್ಲಾ ಪುಣ್ಯ ಪ್ರೇರಿತ.

ವಿಷ್ಣುವೇ ಎರಡಕ್ಕೂ ನಿಯಾಮಕನಾತ.
[Contributed by Shri Govind Magal]

Monday, 22 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 129 - 133

ತಸ್ಮಾದ್ ಯೋ ಮಹಿಮಾ ವಿಷ್ಣೋಃ ಸರ್ವಶಾಸ್ತ್ರೋದಿತಃ ಸ ಹಿ ।
ನಾನ್ಯದಿತ್ಯೇಷ ಶಾಸ್ತ್ರಾಣಾಂ ನಿರ್ಣಯಃ ಸಮುದಾಹೃತಃ ।
ಭಾರತಾರ್ಥಸ್ತ್ರಿಧಾ ಪ್ರೋಕ್ತಃ ಸ್ವಯಂ ಭಗವತೈವ ಹಿ ॥೨.೧೨೯॥

ಮನ್ವಾದಿ ಕೇಚಿತ್ ಬ್ರುವತೇ ಹ್ಯಾಸ್ತೀಕಾದಿ ತಥಾ ಪರೇ ।
ತಥೋಪರಿಚರಾದ್ಯನ್ಯೇ ಭಾರತಂ ಪರಿಚಕ್ಷತೇ ॥೨.೧೩೦॥

ಆ ಕಾರಣದಿಂದ ಎಲ್ಲಾ ಶಾಸ್ತ್ರಗಳಲ್ಲಿ ಹೇಳಿದ ಪ್ರಮೇಯ,
ಮಹಾಮಹಿಮಾವಂತನಾದ ವಿಷ್ಣು ಒಬ್ಬನೇ ಅಪ್ರಮೇಯ.
ಅದಕ್ಕೆ ತದ್ವಿರುದ್ಧವಾದದ್ದೆಲ್ಲವೂ ಅಲ್ಲ ಸ್ವೀಕಾರಾರ್ಹ,
ಮೂರು ಬಗೆಯಲ್ಲಿ ಹೇಳಲ್ಪಟ್ಟಿದೆ ಭಾರತದ ಆಂತರ್ಯ.

ಕೆಲವರ ಪ್ರಕಾರ ಭಾರತ ಮನುವಿನ ಕಥೆಯಿಂದ ಆರಂಭ,
ಮತ್ತೆ ಕೆಲವರ ಪ್ರಕಾರ ಆಸ್ತೀಕನ ಕಥೆಯಿಂದ ಪ್ರಾರಂಭ,
ಉಳಿದವರಿಗೆ ಉಪರಿಚರ ವಸು ಕಥೆಯಿಂದ ಆರಂಭ.

‘ಸಕೃಷ್ಣಾನ್ ಪಾಣ್ಡವಾನ್ ಗೃಹ್ಯ ಯೋsಯಮರ್ಥಃ ಪ್ರವರ್ತತೇ ।
‘ಪ್ರಾತಿಲೋಮ್ಯಾದಿವೈಚಿತ್ರ್ಯಾತ್ ತಮಾಸ್ತೀಕಂ ಪ್ರಚಕ್ಷತೇ ॥೨.೧೩೧॥

‘ಧರ್ಮೋ ಭಕ್ತ್ಯಾದಿದಶಕಃ ಶ್ರುತಾದಿಃ ಶೀಲವೈನಯೌ ।
‘ಸಬ್ರಹ್ಮಕಾಸ್ತು ತೇ ಯತ್ರ ಮನ್ವಾದಿಂ ತಂ ವಿದುರ್ಬುಧಾಃ ॥೨.೧೩೨॥

‘ನಾರಾಯಣಸ್ಯ ನಾಮಾನಿ ಸರ್ವಾಣಿ ವಚನಾನಿ ತು ।
‘ತತ್ಸಾಮರ್ಥ್ಯಾಭಿಧಾಯೀನಿ ತಮೌಪರಿಚರಂ ವಿದುಃ ॥೨.೧೩೩॥

ಕೃಷ್ಣ ಮೊದಲಾದ ಪಾಂಡವರ ಭೂಮಿಕೆ,
ಘಟನೆಗಳ ಹಿಂದು ಮುಂದು ಹಿಂದಾಗಿ ಹೋಲಿಕೆ.
ಈ ಶೈಲಿಯ ಐತಿಹಾಸಿಕ ಅರ್ಥ ಕೊಡುವುದು ಆಸ್ತೀಕ ಕಥೆಯೆಂಬ ವಾದ,
ಅಧ್ಯಯನ ಮಾಡುವವರಿಗೆ ಕೊಡುವುದು ದೈವಭಕ್ತ ಪಾಂಡವರ ಕಥಾನಾದ.

ಧರ್ಮ ಭಕ್ತಿ ಮುಂತಾದ ಹತ್ತು ಗುಣಗಳ ಕಾಣುವಿಕೆ,
ಶ್ರವಣ ಶೀಲ ವಿನಯ ವೇದ ವಿದ್ಯೆಗಳ ಪ್ರತಿಪಾದಿಸುವಿಕೆ,
ಮೇಲಿನ ರೀತಿಯ ಕಥೆ ಹೇಳುವುದು ಮನ್ವಾದಿಗಳು ಎಂಬ ತಿಳುವಳಿಕೆ.

ಇಲ್ಲಿ ಹೇಳುವುದೆಲ್ಲವೂ ನಾರಾಯಣ ನಾಮ,
ಧ್ವನಿಸುತ್ತದೆ ನಾರಾಯಣನವ ಗುಣಧಾಮ,
ಹೀಗೆ ಹೇಳುವ ಕಥೆ ಉಪರಿಚರಾದಿಗಳ ನೇಮ.

(ಮಹಾಭಾರತದಲ್ಲಿನ ಪ್ರಮುಖ ಏಳು ಪಾತ್ರ,
ತಿಳಿಸುತ್ತದೆ ತಾರತಮ್ಯೋಕ್ತ ಗುಣಗಳ ಸೂತ್ರ.
ಹದಿನಾರು ಜೀವನ್ಮೌಲ್ಯಗಳೊಂದಿಗೆ ಜೀವ,
ಒಲಿಸಿಕೊಳ್ಳಬೇಕು ಹದಿನೇಳನೇ ವೇದವಿದ್ಯೆಯ ಭಾವ.
ಹದಿನೇಳನೇ ವೇದವಿದ್ಯೆಯದು ಲಕ್ಷ್ಮೀ ಕೊಡುವ ಸತ್ವ,

ಹದಿನೆಂಟರ ಬಂಟನವ ಶ್ರಿಹರಿಯೆಂಬುದೇ ಮುಖ್ಯ ತತ್ವ).
[Contributed by Shri Govind Magal]