Sunday 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 13-22

 

ತತಃ ಸಹೈವ ಯದುಭಿಃ ಕೃಷ್ಣಂ ದ್ವಾರವತೀಂ ಗತಮ್ ।

ಯುದ್ಧಸಾಹಾಯ್ಯಮಿಚ್ಛನ್ತೌ ಧಾರ್ತ್ತರಾಷ್ಟ್ರಧನಞ್ಜಯೌ ॥೨೪.೧೩॥

 

ಯುಗಪದ್ ಯಯತುಸ್ತತ್ರ ವೇಗೇನಾಜಯದರ್ಜ್ಜುನಮ್ ।

ದುರ್ಯ್ಯೋಧನಃ ಶಿರಸ್ಥಾನ ಆಸೀನೋSಭೂದ್ಧರೇಸ್ತದಾ ॥೨೪.೧೪॥

 

ದರ್ಪ್ಪಾನ್ನಾಹಂ ರಾಜರಾಜ ಉಪಾಸ್ಯೇ ಪಾದಯೋರಿತಿ ।

ತಯೋರಾಗಮನಂ ಪೂರ್ವಂ ಜ್ಞಾತ್ವೈವ ಹಿ ಹರಿಃ ಪ್ರಭುಃ ॥೨೪.೧೫॥

 

 

ಅಸುಪ್ತಃ ಸುಪ್ತವಚ್ಛಿಶ್ಯೇ ತತ್ರಾತಿಷ್ಠದ್ ಧನಞ್ಜಯಃ ।

ಪ್ರಣಮ್ಯ ಪಾದಯೋಃ ಪ್ರಹ್ವೋ ಭಕ್ತ್ಯುದ್ರೇಕಾತ್ ಕೃತಾಞ್ಜಲಿಃ ॥೨೪.೧೬॥

 

ಆನಂತರ, ಶ್ರೀಕೃಷ್ಣ ಯಾದವರೊಂದಿಗೆ ತನ್ನ ದ್ವಾರಕೆಯಲ್ಲಿ ಬೀಡುಬಿಟ್ಟಿದ್ದ ಸಮಯ,

ಒಂದೇ ಕಾಲದಲ್ಲಿ ದುರ್ಯೋಧನಾರ್ಜುನರು ಅವನಲ್ಲಿಗೆ ಬಂದರು ಬಯಸಿ ಯುದ್ಧ ಸಹಾಯ.

ದುರ್ಯೋಧನನದು ಅರ್ಜುನನ ಮೀರಿದ ವೇಗ,

ಹಾಗಾಗಿ ಮೊದಲು ತಲಪುತ್ತಾನೆ ಕೃಷ್ಣನ ಜಾಗ.

ದುರ್ಯೋಧನಗೆ ತಾನು ಚಕ್ರವರ್ತಿ ಕಾಲ ಬಳಿ ಕೂಡಲಾರೆನೆಂಬ ದರ್ಪ,

ಹಾಗಾಗಿ ಕೃಷ್ಣನ ತಲೆ ಕಡೆಗಿನ ಆಸನದಲ್ಲಿ ಕುಳಿತ ಅಹಂಕಾರದ ಕೌರವ ನೃಪ.

 

ಸರ್ವಸಮರ್ಥ ಸರ್ವಜ್ಞ ಕೃಷ್ಣಗೆ ಅರಿವಿತ್ತು ಇವರ ಬರುವಿಕೆ,

ಶ್ರೀಕೃಷ್ಣ ನಿದ್ರೆ ಮಾಡುವವನಂತೆ ಮಲಗಿದ್ದೊಂದು ತೋರಿಕೆ.

ಅರ್ಜುನ ಶ್ರೀಕೃಷ್ಣನ ಕಾಲುಗಳಿಗೆ ಬಾಗಿ ನಮಸ್ಕರಿಸಿದ,

ಭಕ್ತಿಯಿಂದ ಕೈಜೋಡಿಸಿಕೊಂಡು ಅವನ ಕಾಲಬಳಿ ನಿಂದ.

 

ತಮೈಕ್ಷತ್ ಪ್ರಥಮಂ ದೇವೋ ಜಾನನ್ನಪಿ ಸುಯೋಧನಮ್ ।

ಸ್ವಾಗತಂ ಫಲ್ಗುನೇತ್ಯುಕ್ತೇ ಪೂರ್ವಮಾಗಾಮಹಂ ತ್ವಿತಿ ॥೨೪.೧೭॥

 

ಆಹ ದುರ್ಯ್ಯೋಧನಸ್ತಂ ಚ ಸ್ವಾಗತೇನಾಭ್ಯಪೂಜಯತ್ ।

ತಯೋರಾಗಮನೇ ಹೇತುಂ ಶ್ರುತ್ವಾ ಪ್ರಾಹ ಜನಾರ್ದ್ದನಃ ॥೨೪.೧೮॥

 

ಗುಣಸಾಗರ ಕೃಷ್ಣಗೆ ದುರ್ಯೋಧನನಿರುವುದೂ ತಿಳಿದಿತ್ತು,

ಮೊದಲು ಕಂಡ ಅರ್ಜುನಗ್ಹೇಳಿದ ಸ್ವಾಗತಿಸುವ ಮಾತು.

ನಾನು ಮೊದಲು ಬಂದದ್ದು ಎನ್ನುತ್ತಾನೆ ದುರ್ಯೋಧನ,

ಅವನನ್ನೂ ಸ್ವಾಗತಿಸಿ ಬಂದ ಕಾರಣ ಕೇಳಿ ಹೇಳುತ್ತಾನೆ ಕೃಷ್ಣ.

 

ಏಕಃ ಪೂರ್ವಾಗತೋSತ್ರಾನ್ಯಃ ಪೂರ್ವದೃಷ್ಟೋ ಮಯಾ ಯತಃ ।

ಸಮಂ ಕರಿಷ್ಯೇ ಯುವಯೋರೇಕತ್ರಾಹಂ ನಿರಾಯುಧಃ ॥೨೪.೧೯॥

 

ಅನ್ಯತ್ರ ದಶಲಕ್ಷಂ ಮೇ ಪುತ್ರಾಃ ಶೂರಾಃ ಪದಾತಯಃ ।

ಇತ್ಯುಕ್ತೇ ಫಲ್ಗುನಃ ಕೃಷ್ಣಂ ವವ್ರೇ ತದ್ಭಕ್ತಿಮಾನ್ ಯತಃ ॥೨೪.೨೦॥

 

ಒಬ್ಬ (ದುರ್ಯೋಧನ) ಮೊದಲು ಬಂದಿದ್ದಾನೆ,

ಒಬ್ಬನನ್ನು(ಅರ್ಜುನ)ನಾ ಮೊದಲು ನೋಡಿದ್ದೇನೆ.

ಹಾಗಾಗಿ ನಿಮ್ಮಿಬ್ಬರಿಗೂ ಸಮವಾಗಿ ನನ್ನನ್ನು ಹಂಚುತ್ತೇನೆ,

ಒಂದುಕಡೆಗೆ ನಿರಾಯುಧನಾಗಿರುವ ನಾನು ಇರುತ್ತೇನೆ,

ಇನ್ನೊಂದು ಕಡೆಗೆ ನನ್ನ ಹತ್ತು ಲಕ್ಷ ಶೂರ ಮಕ್ಕಳ ಸೇನೆ.

ಭಗವದ್ಭಕ್ತನಾದ ಅರ್ಜುನ ಆರಿಸಿಕೊಂಡದ್ದು ಕೃಷ್ಣನನ್ನೇ.

 

ಅನ್ಯಸ್ತತ್ರಾಭಕ್ತಿಮತ್ತ್ವಾದ್ ವವ್ರೇ ಗೋಪಾನ್ ಪ್ರಯುದ್ಧ್ಯತಃ ।

ಪಾರ್ತ್ಥನಾಮೇವ ಸಾಹಾಯ್ಯಂ ಕರಿಷ್ಯನ್ನಪಿ ಕೇಶವಃ ॥೨೪.೨೧॥

 

ತಸ್ಯಾಭಕ್ತಿಂ ದರ್ಶಯಿತುಂ ಚಕ್ರೇ ಸಮವದೀಶ್ವರಃ ।

ತತಃ ಪಾರ್ತ್ಥೇನ ಸಹಿತಃ ಪಾಣ್ಡವಾನ್ ಕೇಶವೋ ಯಯೌ ॥೨೪.೨೨॥

 

ಭಕ್ತಿಯಿರದ ದುರ್ಯೋಧನ ಬೇಡಿದ್ದು ಗೋಪಾಲಕರ ಸೇನೆ,

ಪಾಂಡವಪಕ್ಷಪಾತಿ ಕೃಷ್ಣ ತೋರುತ್ತಾನೆ ಸಮಾನತೆಯ ನಟನೆ.

ಲೋಕಕ್ಕೆ ತೋರಿಸಬೇಕಿತ್ತು ದುರ್ಯೋಧನನ ಭಕ್ತಿಹೀನತೆ,

ತನ್ನನ್ನು ತೋರಿಕೊಂಡ ಗೋಪಾಲಕರ ಸೈನ್ಯಕ್ಕೆ ಸಮವೆಂಬಂತೆ.

ಮುಂದೆ ಕೃಷ್ಣ ಅರ್ಜುನನೊಂದಿಗೆ ಪಾಂಡವರಲ್ಲಿಗೆ ಹೋದ ಕತೆ.

No comments:

Post a Comment

ಗೋ-ಕುಲ Go-Kula