Tuesday 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 58-71

ಪ್ರಾತರ್ನ್ನಿರ್ಯ್ಯಾತಯಾಮಾಸ ಸೇನಾಂ ಯುದ್ಧಾಯ ದರ್ಮ್ಮತಿಃ ।

ದಿವ್ಯೌಷಧೇನ ಭೀಷ್ಮಸ್ಯ ಭೂತ್ವಾ ಚ ನಿರುಜಸ್ತತಃ ॥ ೨೫.೫೮ ॥

 

ಭೀಷ್ಮಮಗ್ರೇ ನಿಧಾಯೈವ ಯಯೌ ಯುದ್ಧಾಯ ದಂಸಿತಃ ।

ತತ್ರಾSಸೀದ್ ಯುದ್ಧಮತುಲಂ ಭೀಮಭೀಷ್ಮಾನುಯಾಯಿನಾಮ್ ।

ಪಾಣ್ಡವಾನಾಂ ಕುರೂಣಾಂ ಚ ಶೂರಾಣಾಮನಿವರ್ತ್ತಿನಾಮ್ ॥ ೨೫.೫೯॥

 

ದುರ್ಬುದ್ಧಿಯ ದುರ್ಯೋಧನನಿಗೆ ಭೀಷ್ಮಾಚಾರ್ಯ,

ಮಾಡುತ್ತಾರೆ ಗಾಯ ಮಾಗಿಸುವ ಔಷಧೋಪಚಾರ.

ಭೀಷ್ಮರನ್ನು ಮುಂದಿಟ್ಟುಕೊಂಡು ಸಿದ್ಧನಾದ ದುರ್ಯೋಧನ,

ಯುದ್ಧಕ್ಕೆಂದು ಪ್ರವೇಶಿಸುತ್ತಾನೆ ರಣರಂಗ ಮಾರನೇ ದಿನ.

ಯುದ್ಧದಿಂದ ವಿಮುಖರಾಗದ, ಮಹಾ ಪರಾಕ್ರಮಿಗಳಾದ,

ಪಾಂಡವರಿಗೂ ಕೌರವರಿಗೂ ನಡೆಯಿತು ಸತತ ಯುದ್ಧ.

 

ಧೃಷ್ಟದ್ಯುಮ್ನಸ್ತತ್ರ ಭೀಮಾನುಯಾಯೀ ದುರ್ಯ್ಯೋಧನಸ್ಯಾವರಜೈಃ ಪ್ರಯುದ್ಧ್ಯನ್ ।

ಸಮ್ಮೋಹನಾಸ್ತ್ರೇಣ ವಿಮೋಹಯಿತ್ವಾ ವಿಕರ್ಣ್ಣಪೂರ್ವಾನಹನಚ್ಚ ಸೇನಾಮ್ ॥ ೨೫.೬೦॥

 

ಆ ದಿನದ ಯುದ್ಧದಲ್ಲಿ ಭೀಮಸೇನನನ್ನು ಅನುಸರಿಸಿಕೊಂಡಿದ್ದ ಧೃಷ್ಟದ್ಯುಮ್ನನು,

ವಿಕರ್ಣ ಮುಂತಾದ ದುರ್ಯೋಧನಾನುಜರ ಸಮ್ಮೋಹನಾಸ್ತ್ರದಿಂದ ಮೋಹಗೊಳಿಸುವನು.

ಅಷ್ಟಲ್ಲದೇ ದುರ್ಯೋಧನನ ಸೇನೆಯನ್ನೆಲ್ಲಾ ಸಂಹಾರ ಮಾಡತೊಡಗಿದನು.

 

ತತೋ ದ್ರೋಣಸ್ತಾನ್ ಸಮುತ್ಥಾಪ್ಯ ಸರ್ವಾನ್ ವಿಜ್ಞಾನಾಸ್ತ್ರೇಣಾSಸದತ್ ಪಾರ್ಷತಂ ಚ ।

ತಂ ಭೀಮಸೇನಃ ಸೂತಹೀನಂ ವಿಧಾಯ ವ್ಯದ್ರಾವಯಚ್ಛತ್ರುಗಣಾಞ್ಛರೌಘೈಃ ॥ ೨೫.೬೧॥

 

ದ್ರೋಣಾಚಾರ್ಯರು ಅವರೆಲ್ಲರನ್ನು ಎಬ್ಬಿಸುತ್ತಾರೆ ಬಳಸಿಕೊಂಡು ವಿಜ್ಞಾನಾಸ್ತ್ರ ,

ಧೃಷ್ಟದ್ಯುಮ್ನನ ಬಳಿ ಬಂದ ದ್ರೋಣರನ್ನು

ಸಾರಥಿಹೀನರ ಮಾಡಿ ಓಡಿಸಿದ ವಾಯುಪುತ್ರ.

ತನ್ನ ಬಾಣಗಳಿಂದ ಶತ್ರು ಗಣಗಳ ಗೆಲ್ಲುತ್ತಾ ಹೋಗುತ್ತಾನೆ ಅತಿಬಲವಂತ ಪವನ ಕುಮಾರ.

 

ಅಥಾSಸದತ್ ಕೃತವರ್ಮ್ಮಾ ರಥೇನ ಧೃಷ್ಟದ್ಯುಮ್ನಂ ಸೋSಭ್ಯಯಾತ್ ತಾವುಭೌ ಚ ।

ವವರ್ಷತುಃ ಶರವರ್ಷೈರಥೋಗ್ರೈಸ್ತತ್ರಾಕರೋದ್ ವಿರಥಂ ದ್ರೌಪದಿಸ್ತಮ್ ॥ ೨೫.೬೨॥

 

ಸ್ವಲ್ಪಕಾಲವಾದಮೇಲೆ ಕೃತವರ್ಮ ಧೃಷ್ಟದ್ಯುಮ್ನನಿಗೆ ಎದುರಾದ,

ಅವರಿಬ್ಬರ ಮಧ್ಯೆ ನಡೆಯಿತು ಉಗ್ರ ಬಾಣವೃಷ್ಟಿಯ ಯುದ್ಧ.

ಆ ಯುದ್ಧದಿ ದ್ರುಪದಪುತ್ರ ಧೃಷ್ಟದ್ಯುಮ್ನ ಕೃತವರ್ಮನ ರಥಹೀನ ಮಾಡಿದ.

 

ತಸ್ಮಿನ್ ಜಿತೇ ರಥವೀರೇ ಸ್ವಯಂ ತಂ ದುರ್ಯ್ಯೋಧನಃ ಪಾರ್ಷತಮಾಸಸಾದ ।

ತಂ ಭೀಮಸೇನೋ ವಿರಥಾಯುಧಂ ಚ ಕೃತ್ವಾ ಬಾಣೇನಾಹನಜ್ಜತ್ರುದೇಶೇ ॥ ೨೫.೬೩॥

 

ರಥಿಕರಲ್ಲೇ ಅಗ್ರೇಸರನಾದ ಕೃತವರ್ಮ ಸೋಲುತ್ತಿದ್ದಾಗ,

ಸ್ವಯಂ ದುರ್ಯೋಧನ ಧೃಷ್ಟದ್ಯುಮ್ನಗೆ ಎದುರಾದನಾಗ.

ಆಗ ಭೀಮಸೇನ ಅವನನ್ನು ರಥಹೀನನನ್ನಾಗಿ ಮಾಡಿದ,

ಎದೆ ಕಂಠದ ಮಧ್ಯ ಭಾಗಕ್ಕೆ ಬಾಣದಿ ಜೋರಾಗಿ ಹೊಡೆದ.

 

ವಿಮೂರ್ಚ್ಛಿತಂ ತಂ ರುಧಿರೌಘಮುಚ್ಚೈರ್ವಮನ್ತಮಾಶು ಸ್ವರಥೇ ನಿಧಾಯ ।

ಕೃಪೋ ಯಯೌ ಮಾರುತಿರ್ಧಾರ್ತ್ತರಾಷ್ಟ್ರೀಂ ವ್ಯದ್ರಾವಯತ್ ಪೃತನಾಂ ಬಾಣಪೂಗೈಃ ॥ ೨೫.೬೪॥

 

ರಕ್ತವನ್ನು ಜೋರಾಗಿ ವಾಂತಿ ಮಾಡಿಕೊಳ್ಳುತ್ತಿದ್ದ ಗಾಯಾಳು ದುರ್ಯೋಧನ,

ಕೃಪಾಚಾರ್ಯ ಅವನನ್ನು ರಥಕ್ಕೆ ಹಾಕಿಕೊಂಡು ಮಾಡಿದರು ಪಲಾಯನ.

ಆನಂತರ ಭೀಮ ತನ್ನ ಬಾಣಗಳಿಂದ ಓಡಿಸಿದ ಕೌರವರ ಸೇನೆಯನ್ನ.

 

ಅಥೇನ್ದ್ರಸೂನುಃ ಕೇಶವಪ್ರೇರಿತೇನ ರಥೇನ ಶತ್ರೂನ್ ವಿಧಮಞ್ಛರೌಘೈಃ ।

ರಥಾನ್ ರಣೇ ಪಞ್ಚವಿಂಶತ್ಸಹಸ್ರಾನ್  ನಿನಾಯ ವೈವಸ್ವತಸಾದನಾಯ ॥ ೨೫.೬೫॥

 

ಆನಂತರ ಅರ್ಜುನನು ಕೃಷ್ಣ ಪ್ರೇರಿತ ರಕ್ಷಿತವಾದ ರಥದಲ್ಲಿದ್ದುಕೊಂಡು,

ಶತ್ರುನಾಶ ಮಾಡುತ್ತ ಇಪ್ಪತ್ತೈದು ಸಹಸ್ರ ರಥಿಕರ ಮುಗಿಸಿದ ಕೊಂದು.

 

ತಮನ್ವಯಾದ್ ಯುಯುಧಾನಃ ಸುಧನ್ವಾ ವಿದ್ರಾವಯನ್ ಧಾರ್ತ್ತರಾಷ್ಟ್ರಸ್ಯ ಸೇನಾಮ್ ।

ತಮಭ್ಯಯಾತ್ ಸೌಮದತ್ತಿಸ್ತಯೋಶ್ಚ ಸುಯುದ್ಧಮಾಸೀದತಿಭೈರವಾಸ್ತ್ರಮ್ ॥ ೨೫.೬೬॥

 

ಸಾತ್ಯಕಿ ಯುಯುಧಾನ ಒಳ್ಳೆಯ ಬಿಲ್ಲಿನೊಂದಿಗೆ ಅರ್ಜುನನ ಅನುಸರಿಸಿದ,

ಕೌರವಸೇನೆಯನ್ನೋಡಿಸುತ್ತಿದ್ದ ಸಾತ್ಯಕಿಯನ್ನು ಭೂರಿಶ್ರವಸ್ಸು ಎದುರಾದ.

ಅವರಿಬ್ಬರ ಮಧ್ಯೆ ನಡೆಯಿತು ಅಸ್ತ್ರ ಬಳಕೆಯ ಭಯಂಕರವಾದ ಯುದ್ಧ.

 

ಪುತ್ರಾನ್ ದಶಾಸ್ಯಾSಶು ನಿಹತ್ಯ ವೀರಃ ಸ ಸಾತ್ಯಕೇಃ ಸೌಮದತ್ತಿಃ ಸಕಾಶೇ ।

ಸಮರ್ಪ್ಪಯಾಮಾಸ ಶರೀರದಾರಣೈಃ ಶರೈರುಭೌ ತೌ ವಿರಥೌ ಚ ಚಕ್ರತುಃ ॥ ೨೫.೬೭॥

 

ಸೋಮದತ್ತನ ಮಗನಾದ ಭೂರೀಶ್ರವಸ್ಸು,

ಮುಗಿಸಿದ ಸಾತ್ಯಕಿಯ ಹತ್ತು ಮಕ್ಕಳ ಆಯಸ್ಸು.

ಸಾತ್ಯಕಿ ನೋಡುತ್ತಿರುವಂತೆಯೇ ಅವನ ಮಕ್ಕಳ ಕೊಂದ,

ಸೀಳುವ ಬಾಣಗಳಿಂದ ಸಾತ್ಯಕಿಯನ್ನು ಗಾಯ ಮಾಡಿದ.

ಅವರಿಬ್ಬರ ಆ ಪರಸ್ಪರ ಯುದ್ಧದಲ್ಲಿ,

ರಥ ಮುರಿದವರಾಗಿ ರಥಹೀನರಾದರಲ್ಲಿ.

 

ಅಥಾಸಿಪಾಣಿಂ ಯುಯುಧಾನಮಾಶು ಮಹಾಸಿಹಸ್ತೇನ  ಚ ಸೌಮದತ್ತಿನಾ ।

ಆಸಾದಿತಂ ವೀಕ್ಷ್ಯ ರಥಂ ಸ್ವಕೀಯಮಾರೋಪಯಾಮಾಸ ಸುತೋSನಿಲಸ್ಯ ॥ ೨೫.೬೮॥

 

ಆ ಬಳಿಕ ಖಡ್ಗಧಾರಿಯಾದ ಸಾತ್ಯಕಿಯನ್ನ,

ಮಾಡಿದ ಮಹಾಖಡ್ಗಧಾರಿ ಭೂರಿಶ್ರವ ಆಕ್ರಮಣ.

ಈ ಯುದ್ಧವನ್ನು ಭೀಮಸೇನ ಕಂಡ,

ಸಾತ್ಯಕಿಯನ್ನು ತನ್ನ ರಥಕ್ಕೇರಿಸಿಕೊಂಡ.

 

ಸುಯೋಧನಃ ಸೌಮದತ್ತಿಂ ಸ್ವಕೀಯರಥೇ ವ್ಯವಸ್ಥಾಪ್ಯ ಚ ಭೀಮಸೇನಾತ್ ।

ಅಪಾದ್ರವದ್ ವಾಸವಿರ್ಭೀಷ್ಮಮಾಜೌ ಸಮಾಸಸಾದಾSಶು ಮಹೇನ್ದ್ರಕಲ್ಪಃ ॥ ೨೫.೬೯॥

 

ಸಾತ್ಯಕಿಯ ರಕ್ಷಣೆ ಭೀಮನಿಂದಾಗುವುದ ಕಂಡ ದುರ್ಯೋಧನ,

ಭೂರಿಶ್ರವನ ತನ್ನ ರಥದಲ್ಲಿರಿಸಿಕೊಂಡು ಮಾಡಿದ ಪಲಾಯನ.

ಇನ್ನೊಂದು ಕಡೆ ಇಂದ್ರನಂತಿರುವ ಅರ್ಜುನ,

ಯುದ್ಧದಿ ಎದುರಿಸಿದ ಭೀಷ್ಮಾಚಾರ್ಯರನ್ನ.

 

ಉಭೌ ಚ ತಾವಸ್ತ್ರವಿದಾಂ ಪ್ರಬರ್ಹೌ ಶರೈರ್ಮ್ಮಹಾಶೀವಿಷಸನ್ನಿಕಾಶೈಃ ।

ತತಕ್ಷತುರ್ನ್ನಾಕಸದಾಂ ಸಮಕ್ಷಂ ಮಹಾಬಲೌ ಸಂಯತಿ ಜಾತದರ್ಪ್ಪೌ ॥ ೨೫.೭೦॥

 

ದೇವತೆಗಳೆಲ್ಲಾ ನೋಡುತ್ತಿರುವಾಗ,

ಅಸ್ತ್ರವೇತ್ತರ ಯುದ್ಧ ನಡೆಯಿತಾಗ.

ಮಹಾಬಲರಾದಂಥ ಭೀಷ್ಮಾರ್ಜುನರು,

ಸರ್ಪವಿಷ ಬಾಣಗಳಿಂದ ಕಾದಾಡಿಕೊಂಡರು.

ಪರಸ್ಪರರು ಗಾಯಗೊಂಡ ಯುದ್ಧವದು ಭೀಷಣ,

ಆ ಯುದ್ಧವಾಗುತ್ತಿತ್ತು ಕ್ಷಣಕ್ಷಣಕ್ಕೂ ಬಹಳ ತೀಕ್ಷ್ಣ.

  

ಸ್ವಭಾಹುವೀರ್ಯ್ಯೇಣ ಜೀತಃ ಸ ಭೀಷ್ಮಃ ಕಿರೀಟಿನಾ ಲೋಕಮಹಾರಥೇನ ।

ಸೇನಾಮಪಾಹೃತ್ಯ ಯಯೌ ನಿಶಾಯಾಮಾಸಾದಿತಾಯಾಮಥ ಪಾಣ್ಡವಾಶ್ಚ ॥ ೨೫.೭೧॥

 

ಸರ್ವಲೋಕಶ್ರೇಷ್ಠ ರಥಿಕನಾದ ಅರ್ಜುನನಿಂದ,

ಭೀಷ್ಮರ ಸೋಲಾಗುತ್ತದೆ ಅವನ ಬಾಹುಬಲದಿಂದ.

ಅವರು ಸೇನೆಯನ್ನು ಹಿಂತಿರುಗಿಸಿಕೊಂಡು ಹೋಗುತ್ತಾರೆ,

ಪಾಂಡವರೂ ತಮ್ಮ ಸೇನೆಯನ್ನು ಶಿಬಿರಕ್ಕೆ ಒಯ್ಯುತ್ತಾರೆ.

No comments:

Post a Comment

ಗೋ-ಕುಲ Go-Kula