ತತಃ ಪರೇದ್ಯುಃ ಪುನರೇವ
ಭೀಮಭೀಷ್ಮೌ ಪುರಸ್ಕೃತ್ಯ ಸಮೀಯತುಸ್ತೇ ।
ಸೇನೇ ತದಾ
ಸಾರಥಿಹೀನಮಾಶು ಭೀಷ್ಮಂ ಕೃತ್ವಾ ಮಾರುತಿರಭ್ಯಗಾತ್ ಪರಾನ್ ॥ ೨೫.೭೨॥
ಮರುದಿನ ಮತ್ತೆ ಭೀಮ
ಭೀಷ್ಮರನ್ನು ಮುಂದಿಟ್ಟುಕೊಂಡು ಪಾಂಡವ ಕೌರವರ ಯುದ್ಧ,
ಆಗ ಭೀಮಸೇನ ಕೂಡಲೇ
ಭೀಷ್ಮರನ್ನು ರಥಹೀನ ಮಾಡಿ ಶತ್ರುಗಳನ್ನು ಎದುರಿಸಿದ.
ನಿಪಾತಿತಾಸ್ತೇನ
ರಥೇಭವಾಜಿನಃ ಪ್ರದುದ್ರುವುಶ್ಚಾವಶಿಷ್ಟಾಃ ಸಮಸ್ತಾಃ ।
ದುರ್ಯ್ಯೋಧನಾದ್ಯೇಷು
ಪರಾಜಿತೇಷು ಭೀಷ್ಮದ್ರೋಣದ್ರೌಣಿಪುರಸ್ಸರೇಷು ॥ ೨೫.೭೩॥
ರಥ, ಆನೆ, ಕುದುರೆಗಳು, ಅವುಗಳಲ್ಲಿರುವ ವೀರರು,
ಎಲ್ಲರೂ ಭೀಮಸೇನನಿಂದ
ಕೆಡವಲ್ಪಟ್ಟು ಹತರಾದರು.
ಸೋಲುತ್ತಿದ್ದಾಗ ಭೀಷ್ಮ
ದ್ರೋಣ ಅಶ್ವತ್ಥಾಮ ದುರ್ಯೋಧನ,
ಮಾಡಿದರು ಉಳಿದವರೆಲ್ಲಾ
ರಣರಂಗದಿಂದ ಪಲಾಯನ.
ಮಹಾಗಜಸ್ಥೋ ಭಗದತ್ತ
ಆಗಾದಾಯನ್ ಬಾಣಂ ಭೀಮಸೇನೇSಮುಚಚ್ಚ
।
ತೇನಾತಿವಿದ್ಧೇ
ಭೀಮಸೇನೇSಸ್ಯ ಪುತ್ರ
ಉದ್ಯಚ್ಛಮಾನಂ ಪಿತರಂ ನಿವಾರ್ಯ್ಯ ॥ ೨೫.೭೪॥
ಘಟೋತ್ಕಚೋSಭ್ಯದ್ರವದಾಶು ವೀರಃ ಸ್ವಮಾಯಯಾ
ಹಸ್ತಿಚತುಷ್ಟಯಸ್ಥಃ ।
ಸ ವೈಷ್ಣವಾಸ್ತ್ರಂ
ಭಗದತ್ತಸಂಸ್ಥಂ ವಿಜ್ಞಾಯ ವಿಷ್ಣೋರ್ವರತೋ ವಿಶೇಷತಃ ॥ ೨೫.೭೫॥
ಅಮೋಘಮನ್ಯತ್ರ
ಹರೇರ್ಮ್ಮರುತ್ಸುತಃ ಪುತ್ರೇ ಯಾತೇ ನ ಸ್ವಯಮಭ್ಯಧಾವತ್ ।
ಅನುಗ್ರಹಾದಭ್ಯಧಿಕಾದವದ್ಧ್ಯಂ
ಜಾನನ್ನಪಿ ಸ್ವಂ ವಾಸುದೇವಸ್ಯ ನಿತ್ಯಮ್ ॥ ೨೫.೭೬॥
ತದ್ಭಕ್ತಿವೈಶೇಷ್ಯತ ಏವ
ತಸ್ಯ ಸತ್ಯಂ ವಾಕ್ಯಂ ಕರ್ತ್ತುಮರಿಂ ನಚಾಯಾತ್ ।
ಯದಾ ಸ್ವಪುತ್ರೇಣ ಜಿತೋ
ಭವೇತ್ ಸ ಕಿಮ್ವಾತ್ಮನೇತ್ಯೇವ ತದಾ ಪ್ರವೇತ್ತುಮ್ ॥ ೨೫.೭೭॥
ಆಗ ಮಹಾಗಜವನ್ನೇರಿದ್ದ
ಭಗದತ್ತ ಬಂದ,
ಬರುತ್ತಲೇ ಭೀಮನ ಮೇಲೆ
ಬಾಣಗಳನ್ನೆಸೆದ.
ಭಗದತ್ತನಿಂದ ಭೀಮ
ಉಗ್ರವಾಗಿ ಹೊಡೆಸಿಕೊಂಡ,
ಭೀಮಪುತ್ರ ಘಟೋತ್ಕಚ
ಭಗದತ್ತನ ಮೇಲೇರಿ ಬಂದ.
ತಂದೆಯ ತಡೆದ
ಘಟೋತ್ಕಚನು , ತನ್ನ ಮಾಯೆಯಿಂದ,
ನಾಕು ರೂಪ ಧರಿಸಿ ನಾಕು
ಆನೆಗಳೇರಿ ಅವನಿಗೆದುರಾದ.
ಭೀಮಗೆ ಗೊತ್ತಿತ್ತು
ಭಗದತ್ತನಲ್ಲಿದ್ದ ನಾರಾಯಣಾಸ್ತ್ರದ ಹಿರಿಮೆ,
ಅವಧ್ಯನಾಗಿದ್ದರೂ, ಲೋಕಕೆ ತೋರಿದ ಹರಿಚಿತ್ತದ ಮಹಿಮೆ.
ಒಂದುವೇಳೆ
ಘಟೋತ್ಕಚನಿಂದ ಸೋತುಹೋದರೆ ಭಗದತ್ತ,
ಆಗವನು ತನ್ನಿಂದಲೂ
ಸೋಲುವನೆಂಬುದು ಕೈಮುತ್ಯ ಸತ್ಯ.
ಸ ವಿಸ್ಮೃತಾಸ್ತ್ರಸ್ತು
ಯದಾ ಭವೇತ ತದಾ ಭೀಮೋ ಭಗದತ್ತಂ ಪ್ರಯಾತಿ ।
ಋತೇ ಭೀಮಂ ವಾSರ್ಜ್ಜುನಂ ನಾಸ್ತ್ರಮೇಷ ಪ್ರಮುಞ್ಚತೀತ್ಯೇವ ಹಿ
ವೇದ ಭೀಮಃ ॥ ೨೫.೭೮॥
ಭಗದತ್ತ ಯಾವ್ಯಾವಾಗ
ಅಸ್ತ್ರಮಂತ್ರ ಮರೆಯುತ್ತಿದ್ದ,
ಭೀಮಸೇನ ಭಗದತ್ತನ ಮೇಲೆ
ಯುದ್ಧ ಮಾಡುತ್ತಿದ್ದ.
ಭೀಮಗರಿವಿತ್ತು: ಭೀಮ
ಮತ್ತು ಅರ್ಜುನ (ತಮ್ಮಿಬ್ಬರನ್ನು) ಬಿಟ್ಟು,
ಉಳಿದವರ ಮೇಲೆ ವೈರಿ
ವೈಷ್ಣವಾಸ್ತ್ರ ಬಿಡಲ್ಲ ಎಂಬುವ ಗುಟ್ಟು.
ಚತುರ್ಗ್ಗಜಾತ್ಮೋಪರಿಗಾತ್ಮಕಶ್ಚ
ಘಟೋತ್ಕಚಃ ಸುಪ್ರತೀಕಂ ಚ ತಂ ಚ ।
ನಾನಾಪ್ರಹಾರೈರ್ವಿತುದಂಶ್ಚಕಾರ
ಸನ್ದಿಗ್ಧಜೀವೌ ಜಗತಾಂ ಸಮಕ್ಷಮ್ ॥ ೨೫.೭೯॥
ಘಟೋತ್ಕಚ ನಾಕು ಆನೆಗಳ
ಮೇಲೆ ನಾಕು ರೂಪಗಳಿಂದ,
ಸುಪ್ರತೀಕ ಆನೆ ಮತ್ತು
ಭಗದತ್ತರನ್ನು ಬಹಳವಾಗಿ ಪೀಡಿಸಿದ.
ನೋಡಲವರು ಬದುಕಿದ್ದಾರೋ
ಇಲ್ಲವೋ ಎಂಬಂತೆ ಮಾಡಿದ.
ಗಜಾರ್ತ್ತನಾದಂ ತು
ನಿಶಮ್ಯ ಭೀಷ್ಮಮುಖಾಃ ಸಮಾಪೇತುರಮುಂ ಚ ದೃಷ್ಟ್ವಾ ।
ಮಹಾಕಾಯಂ ಭೀಮಮಮುಷ್ಯ
ಪೃಷ್ಠಗೋಪಂ ಚ ವಾಯ್ವಾತ್ಮಜಮತ್ರಸನ್ ಭೃಶಮ್ ॥
೨೫.೮೦॥
ಸುಪ್ರತೀಕ ಆನೆಯ
ಆರ್ತನಾದವದು ಕೇಳಿ ಬಂದಾಗ,
ಭೀಷ್ಮಾದಿಗಳು
ಧಾವಿಸುತ್ತಾರೆ ಭಗದತ್ತನ ರಕ್ಷಣೆಗಾಗ.
ಮಹಾಕಾಯನಾದ ಘಟೋತ್ಕಚ, ಮತ್ತೆ ಬೆಂಬಲಕ್ಕೆ ನಿಂತ ತಂದೆ,
ಇಬ್ಬರನ್ನೂ ಕಂಡವರು
ನಡುಗಿಹೋದರು ಅತೀವವಾದ ಭಯದಿಂದೆ.
ತೇ ಭೀತಭೀತಾಃ
ಪೃತನಾಪಹಾರಂ ಕೃತ್ವಾSಪಜಗ್ಮುಃ ಶಿಬಿರಾಯ
ಶೀಘ್ರಮ್ ।
ದಿನೇ ಪರೇ ಚೈವ ಪುನಃ
ಸಮೇತಾಃ ಪರಸ್ಪರಂ ಪಾಣ್ಡವಕೌರವಾಸ್ತೇ ॥ ೨೫.೮೧॥
ಭಯಗ್ರಸ್ತ
ಭೀಷ್ಮಾದಿಗಳೆಲ್ಲಾ ಶಿಬಿರಕ್ಕೆ ಹೊರಟು ಹೋದರು,
ಮರುದಿನ ಮತ್ತೆ
ಯುದ್ಧಕ್ಕೆ ಪಾಂಡವ ಕೌರವರು ಸೇರಿದರು.
No comments:
Post a Comment
ಗೋ-ಕುಲ Go-Kula