Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 68-73

 

ಹತೇಷು ವೀರೇಷು ನಿಜೇಷು ಸಙ್ಘಶೋ ವಿದ್ರಾವಿತೇಷ್ವಾಲುಳಿತೇ ಚ ಸೈನ್ಯೇ ।

ದುರ್ಯ್ಯೋಧನೋ ದ್ರೋಣಮುಪೇತ್ಯ ದೀನಮುವಾಚ ಹಾ ಪಾರ್ತ್ಥ ಉಪೇಕ್ಷಿತಸ್ತ್ವಯಾ ॥೨೬.೬೮॥

 

ತನ್ನ ವೀರರು ಒಟ್ಟೊಟ್ಟಿಗೆ ಸಾವನಪ್ಪುತ್ತಿರಲು, ಉಳಿದವರು ಗುಂಪಾಗಿ ಓಡಿಹೋಗುತ್ತಿರಲು, ಸೈನ್ಯವು ಅಲ್ಲೋಲಕಲ್ಲೋಲವಾಗುತ್ತಿರಲು, ದ್ರೋಣರ ಬಳಿ ಬಂದ ದುರ್ಯೋಧನ ದೈನ್ಯದಿ ಹೇಳುತ್ತಾನೆ,

'ಅಯ್ಯೋ, ಅರ್ಜುನನು ನಿಮ್ಮಿಂದ ಉಪೇಕ್ಷೆಗೆ ಒಳಗಾಗಿದ್ದಾನೆ.

 

ಇತೀರಿತೇSಭೇದ್ಯಮಮುಷ್ಯ ವರ್ಮ್ಮ  ಬಧ್ವಾ ಮಹಾಮನ್ತ್ರಬಲಾತ್ ಸ ವಿಪ್ರಃ ।

ಜಗಾದ ಯೇನೈವ ಬಲೇನ ಪಾರ್ತ್ಥೈರ್ವಿರುದ್ಧ್ಯಸೇ ತೇನ ಹಿ ಯಾಹಿ ಫಲ್ಗುನಮ್ ॥೨೬.೬೯॥

 

 

ಆಗ ದ್ರೋಣಾಚಾರ್ಯರು ಮಹಾಮಂತ್ರ ಬಲದಿಂದ ಅವನಿಗೆ ಅಭೇದ್ಯ ಕವಚವನ್ನು ಅಭಿಮಂತ್ರಿಸಿ ತೊಡಿಸುತ್ತಾರೆ, ‘ಎಷ್ಟು ಬಲದಿಂದ ಪಾಂಡವರ ಜೊತೆ ಯುದ್ಧಮಾಡುತ್ತೀ, ಅಷ್ಟೂ ಬಲದಿಂದ ಅರ್ಜುನನೊಡನೆ ಹೋರಾಡೆನ್ನುತ್ತಾರೆ.

 

ಇತೀರಿತೋ ಧಾರ್ತ್ತರಾಷ್ಟ್ರಃ ಸ ಚಾಪಮಾದಾಯ ಸೌವರ್ಣ್ಣರಥೋಪರಿಸ್ಥಃ ।

ಜಗಾಮ ಪಾರ್ತ್ಥಂ ತಮವಾರಯಚ್ಚ ಶರೈರನೇಕೈರನಲಪ್ರಕಾಶೈಃ ॥೨೬.೭೦॥

 

ಆಗ ದುರ್ಯೋಧನನು ಬಿಲ್ಲನ್ನು ಹಿಡಿದು ಬಂಗಾರರಥವೇರಿ ಕುಳಿತು ಅರ್ಜುನಗೆ ಎದುರಾದ,

ವಿಚಿತ್ರವಾದ ಬೆಂಕಿಯಂಥ ಪ್ರಕಾಶದ ತೀಕ್ಷ್ಣವಾದ ಬಾಣಗಳಿಂದ ಅರ್ಜುನನನ್ನು ತಡೆದ.

 

ವಿವ್ಯಾಧ ಪಾರ್ತ್ಥೋSಪಿ ತಮುಗ್ರವೇಗೈಃ ಶರೈರ್ನ್ನ ತೇ ತಸ್ಯ ಚ ವರ್ಮ್ಮಭೇದಮ್ ।

ಚಕ್ರುಸ್ತತೋ ವಾಸವಿರ್ದಿವ್ಯಮಸ್ತ್ರಂ ತದ್ವರ್ಮ್ಮಭೇದಾಯ ಸಮಾದದೇ ರುಷಾ ॥೨೬.೭೧॥

 

ಅರ್ಜುನ ಕೂಡಾ ದುರ್ಯೋಧನಗೆ ಉಗ್ರ ವೇಗ  ಬಾಣಗಳಿಂದ ಹೊಡೆದ,

ಅವುಗಳಿಂದ ದುರ್ಯೋಧನನ ಕವಚ ಕೂಡಾ ತುಂಡಾಗದ್ದರಿಂದ ಸಿಟ್ಟಾದ.

ಅಲೌಕಿಕ ಅಸ್ತ್ರವನ್ನವನ ಕವಚ  ಕತ್ತರಿಸಲೆಂದು ಬತ್ತಳಿಕೆಯಿಂದ ಎತ್ತಿಕೊಂಡ.

 

 

ಸನ್ಧೀಯಮಾನಂ ತು ಗುರೋಃ ಸುತಸ್ತಚ್ಚಿಚ್ಛೇದ ಪಾರ್ತ್ಥೋSಥ ಸುಯೋಧನಾಶ್ವಾನ್ ।

ಹತ್ವಾ ತಳೇSವಿದ್ಧ್ಯದಥೈನಮುಗ್ರೈರ್ದ್ದ್ರೌಣಿಃ ಶರೈಃ ಪಾರ್ತ್ಥಮವಾರಯದ್ ಯುಧಿ ॥೨೬.೭೨॥

 

ಅರ್ಜುನ ಬಿಲ್ಲಿನಲ್ಲಿ ಬಾಣವನ್ನು ಹೂಡುತ್ತಿರುವಾಗ,

ಅಶ್ವತ್ಥಾಮನು ಆ ದಿವ್ಯಾಸ್ತ್ರವನ್ನು ಛೇದಿಸುವನಾಗ.

ಆಗ ಅರ್ಜುನನು ಸುಯೋಧನನ ಕುದುರೆಗಳನ್ನು ಕೊಂದ ,

ಅವನ ಕವಚವಿರದ ಭಾಗಕ್ಕೆ ಉಗ್ರಬಾಣಗಳಿಂದ ಹೊಡೆದ.

ಗಾಯಗೊಂಡ ದುರ್ಯೋಧನಗೆ ಅಶ್ವತ್ಥಾಮ ಕೊಡುತ್ತಾನೆ ರಕ್ಷಣೆ,

ಹೆಚ್ಚಿನ ದಾಳಿ ಮಾಡದಂತೆ ತನ್ನ ಬಾಣಗಳಿಂದ ತಡೆದ ಅರ್ಜುನನನ್ನೆ.

 

ಸ ದ್ರೌಣಿಕರ್ಣ್ಣಪ್ರಮುಖೈರ್ದ್ಧನಞ್ಜಯೋ ಯುಯೋಧ ತೇ ಚೈನಮವಾರಯಞ್ಛರೈಃ ।

ಬಭೂವ ಯುದ್ಧಂ  ತದತುಲ್ಯಮದ್ಭುತಂ ಜಯದ್ರಥಾರ್ತ್ಥೇSದ್ಭುತವೀರ್ಯ್ಯಕರ್ಮ್ಮಣಾಮ್ ॥೨೬.೭೩॥

 

ಆ ಅರ್ಜುನಗೆ ಅಶ್ವತ್ಥಾಮ, ಕರ್ಣ, ಮೊದಲಾದ ಪ್ರಮುಖರಿಂದ ತಡೆ,

ಆದರೂ ಅರ್ಜುನನದು ವೀರಾವೇಶ ಪರಾಕ್ರಮದ ಯುದ್ಧದ ನಡೆ .

ಜಯದ್ರಥನಿಗಾಗಿ ನಡೆದ ಆ ಸಮರ, ಆಗಿತ್ತು ಆಶ್ಚರ್ಯ ಅದ್ಭುತಗಳ ಆಗರ.

No comments:

Post a Comment

ಗೋ-ಕುಲ Go-Kula