Monday, 20 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 18-28

 

ಅಥ ವ್ಯೂಢೇಷ್ವನೀಕೇಷು ನದನ್ ವಾಯುಸುತೋSಭ್ಯಯಾತ್ ।

ಸಮಿತಿಂ ಧಾರ್ತ್ತರಾಷ್ಟ್ರಾಣಾಂ ತೇ ತಂ ಸರ್ವೇSಭ್ಯವಾರಯನ್ ॥ ೨೫.೧೮ ॥

 

ಆನಂತರದಲ್ಲಿ ಎಲ್ಲಾ ಆಯಕಟ್ಟಿನಲ್ಲಿ ನಿಂತು ಯುದ್ಧಕ್ಕಾದರು ಸಿದ್ಧ,

ಭೀಮಸೇನ ಘರ್ಜಿಸುತ್ತಾ ದುರ್ಯೋಧನಾದಿಗಳಿಗೆ ಎದುರಾಗಿ ಬಂದ.

ನಂತರ ಅವರೆಲ್ಲರಿಂದಲೂ ಭೀಮಸೇನ ಸುತ್ತುವರಿಯಲ್ಪಟ್ಟವನಾದ.

 

ಸಸೃಜುಃ ಶರವೃಷ್ಟಿಂ ಚ ಭೀಮಸೇನಸ್ಯ ಮೂರ್ದ್ಧನಿ ।

ಕ್ಷಿಪ್ರಂ ನೈವ ಪ್ರಹರ್ತ್ತವ್ಯಂ ಜ್ಞಾತಿಷು ಪ್ರಹರತ್ಸ್ವಪಿ ॥ ೨೫.೧೯ ॥

 

 

ಇತ್ಯೇವಾಪ್ರಹರತ್ಯಸ್ಮಿನ್ ಶತ್ರುಭಿಃ ಶರವಿಕ್ಷತೇ ।

ಅಮುಚನ್ ಧಾರ್ತ್ತರಾಷ್ಟ್ರೇಷು ಶಸ್ತ್ರವೃಷ್ಟಿಂ ದುರಾಸದಾಮ್  ॥ ೨೫.೨೦ ॥

 

ಸೌಭದ್ರಪ್ರಮುಖಾ ವೀರಾಃ ಸರ್ವೇ ಪಾಣ್ಡುಸುತಾತ್ಮಜಾಃ ।

ಅಪೀಡಯಂಸ್ತಾಞ್ಛಸ್ತ್ರೌಘೈರ್ದ್ಧಾರ್ತ್ತರಾಷ್ಟ್ರಾಃ ಸಮನ್ತತಃ ॥ ೨೫.೨೧ ॥

 

ರರಕ್ಷ ತಾನ್ ವಾಯುಸುತೋ ವಿಸೃಜಞ್ಛರಸಞ್ಚಯಾನ್ ।

ತತ್ರ ಭೀಮಶರೈರ್ನ್ನುನ್ನಾ ಧಾರ್ತ್ತರಾಷ್ಟ್ರಾಃ ಸಮನ್ತತಃ ॥ ೨೫.೨೨ ॥

 

ಭಗ್ನಾಸ್ತಾನಥ ಗಾಙ್ಗೇಯೋ ದಿವ್ಯಾಸ್ತ್ರವಿದಧಾರಯತ್ ।

ಅಥ ದ್ವನ್ದ್ವಾನಿ ಯುದ್ಧಾನಿ ಬಭೂವುರ್ವಿಜಿಗೀಷತಾಮ್ ॥ ೨೫.೨೩ ॥

 

ಕೌರವರಿಂದ ತನ್ನ ತಲೆಮೇಲೆ ಬಾಣಗಳ ಮಳೆಗರಿಸಿಕೊಂಡ ಭೀಮಸೇನ,

ಸುಮ್ಮನಿದ್ದ ಸಂಬಂಧಿಕರಿಗೆ ತಕ್ಷಣವೇ ಪ್ರತಿಕ್ರಿಯಿಸಬಾರದೆಂಬ ಕಾರಣ.

ಏನೂ ಮಾಡದೇ ಶತ್ರುಗಳ ಬಾಣದಿಂದ ಭೀಮ ಹೊಡೆಸಿಕೊಂಡ,

ಅಭಿಮನ್ಯು, ಪಾಂಡವಪುತ್ರರೆಲ್ಲರೂ ಮಳೆಗರೆದರು ಬಾಣಗಳಿಂದ.

ಆಗ ದುರ್ಯೋಧನಾದಿಗಳಿಂದ ಅಭಿಮನ್ಯು ಮುಂತಾದವರಿಗೆ ಪೀಡನೆ,

ಭೀಮಸೇನ ಬಾಣಗಳ ಬಿಟ್ಟು ಮಾಡುತ್ತಾನೆ ಅವರೆಲ್ಲರ ಸಂರಕ್ಷಣೆ.

ಮಧ್ಯಾಹ್ನದ ಹೊತ್ತಾಯಿತು ಯುದ್ಧದ ಮೊದಲನೇ ದಿನ,

ಭೀಮಬಾಣಗಳಿಂದ ಪೀಡಿತರಾಗಿ ಕೌರವರ ಪಲಾಯನ.

ಭೀಷ್ಮರೆಲ್ಲರಿಗೆ ಅಭಯವೀಯುತ್ತಾ ಆಗುತ್ತಾರೆ ಸಿದ್ಧ,

ನಿಲ್ಲಿಸುತ್ತಾರೆ, ಪ್ರಯೋಗಿಸಿ ದಿವ್ಯಾಸ್ತ್ರಗಳ ಬಳಕೆಯಿಂದ.

ಆಮೇಲೆ ನಡೆದದ್ದು ಅಲ್ಲಿ ವೀರರೆಲ್ಲರ ದ್ವಂದ್ವಯುದ್ಧ.

 

ದ್ರೋಣಪಾರ್ಷತಯೋಶ್ಚೈವ ಶೈನೇಯಕೃತವರ್ಮ್ಮಣೋಃ ।

ದುಃಶಾಸನೇನ ವೀರಸ್ಯ ಮಾದ್ರೇಯಸ್ಯ ಯವೀಯಸಃ ॥ ೨೫.೨೪ ॥

 

ನಕುಲಸ್ಯ  ವಿಕರ್ಣ್ಣಸ್ಯ ಕಾರ್ಷ್ಣೇಯೈರ್ದ್ದುರ್ಮ್ಮುಖಾದಿನಾಮ್ ।

ವೃತ್ತೇ ದ್ವನ್ದ್ವಮಹಾಯುದ್ಧೇ ತತ್ರ ಧರ್ಮ್ಮಜಪಕ್ಷಗಾಃ ॥ ೨೫.೨೫ ॥

 

 

ಜಿತಾ ವಿನೈವ ಶೈನೇಯಂ ಸೋSಜಯದ್ಧೃದಿಕಾತ್ಮಜಮ್ ।

ಅಥ ಭೀಷ್ಮದ್ರೋಣಮುಖೈರ್ಭಗದತ್ತಾದಿಭಿಸ್ತಥಾ ॥ ೨೫.೨೬ ॥

 

ವಿದ್ರಾಪ್ಯಮಾಣಂ ಸ್ವಬಲಂ ಸ್ಥಾಪಯಾಮಾಸ ಮಾರುತಿಃ ।

ದ್ರೋಣಂ ಚ ಭಗದತ್ತಂ ಚ ಕೃಪಂ ದುರ್ಯ್ಯೋಧನಂ ತಥಾ  ॥೨೫.೨೭ ॥

 

ಕೇವಲಂ ಬಾಹುವೀರ್ಯ್ಯೇಣ ವ್ಯಜಯದ್ ಭೀಮವಿಕ್ರಮಃ ।

ಹತ್ವೋತ್ತರಂ ಮದ್ರರಾಜೋ ವ್ಯದ್ರಾವಯದನೀಕಿನೀಮ್ ॥ ೨೫.೨೮ ॥

 

ದ್ರೋಣಾಚಾರ್ಯ-ದೃಷ್ಟದ್ಯುಮ್ನ, ಸಾತ್ಯಕಿ -ಕೃತವರ್ಮ,

ಮಾದ್ರಿಪುತ್ರ ಸಹದೇವ-ದುಶ್ಯಾಸನ, ನಕುಲ -ವಿಕರ್ಣ,

ದ್ರೌಪದೀಪುತ್ರರಾದ ಪ್ರತಿವಿಂದ್ಯ ಮೊದಲಾದವರು,

ದುರ್ಮುಖ ಮುಂತಾದವರು ದ್ವಂದ್ವಯುದ್ಧ ಮಾಡಿದರು.

ಧರ್ಮಜನ ಪಕ್ಷದಲ್ಲಿದ್ದ ಸಾತ್ಯಕಿಯೊಬ್ಬನದೇ ಕೈ ಮೇಲು,

ಅವನನ್ನು ಹೊರತುಪಡಿಸಿ ಉಳಿದವರಿಗೆಲ್ಲಾ ಆಯಿತು ಸೋಲು.

ಭೀಷ್ಮ,ದ್ರೋಣ, ಭಗದತ್ತ ಮುಂತಾದವರಿಂದ ಉಗ್ರ ಕದನ,

ಆಗ ಪಾಂಡವಸೇನೆಯಲ್ಲಿದ್ದವರಿಂದ ಭಯಗ್ರಸ್ತ ಪಲಾಯನ.

ಓಡಿಸಲ್ಪಡುತ್ತಿರುವ ತನ್ನ ಸೈನ್ಯವ ತಡೆಯುತ್ತಾನೆ ಭೀಮಸೇನ.


ದ್ರೋಣ, ಭಗದತ್ತ, ಕೃಪ, ದುರ್ಯೋಧನಾದಿಗಳನ್ನ,

ಕೇವಲ ತನ್ನ ಬಾಹುಬಲದಿಂದಲೇ ಗೆದ್ದ ಭೀಮಸೇನ.

ಮಧ್ಯಾಹ್ನವಾಯಿತು ಯುದ್ಧದ ಮೊದಲನೇ ದಿನ,

ಶಲ್ಯರಾಜ ಕೊಲ್ಲುತ್ತಾನೆ ಉತ್ತರಕುಮಾರನನ್ನ.

ಬೆದರಿಸಿ ಓಡಿಸುತ್ತಾನೆ ಪಾಂಡವರ ಸೇನೆಯನ್ನ.


No comments:

Post a Comment

ಗೋ-ಕುಲ Go-Kula