Sunday, 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 31-37

 ಆವಂತಿ ದೇಶದ ವಿಂದಾ - ಅನುವಿಂದರು, ಜಯತ್ಸೇನ, ಪಾಂಡವರ ಸೇರದ ಕೇಕಯರು,

ಕ್ಷೇಮಧೂರ್ತಿ, ದಂಡಧರ, ಕಲಿಂಗ, ಅಂಬಷ್ಠ, ಶ್ರುತಾಯು, ಅಚ್ಯುತಾಯು, ಬೃಹದ್ಬಲ,

ಸುದಕ್ಷಿಣ, ಶ್ರುತಾಯುಧ, ಸೈಂಧವ(ಜಯದ್ರಥ), ಅಲಂಬುಸ, ಅಲಾಯುಧ, ಅಲಂಬಲ,

ಇವರೆಲ್ಲಾ ಕೂಡಾ ಸ್ವಭಾವತಃ ದೈತ್ಯರು, ಅಂತೆಯೇ ದುರ್ಯೋಧನನ ಪಕ್ಷ ಸೇರಿದರು.

 

ಗತ್ವಾ ದುರ್ಯ್ಯೋಧನಾಹೂತೋ ಭಗದತ್ತೋsಪಿ ತಂ ಯಯೌ ।

ಸಪುತ್ರಪೌತ್ರೋ ಬಾಹ್ಲೀಕೋ ಭೀಷ್ಮದ್ರೋಣಕೃಪಾ ಅಪಿ ॥೨೪.೩೧॥

 

ಪ್ರೀತ್ಯರ್ತ್ಥಂ ಧೃತರಾಷ್ಟ್ರಸ್ಯ ಬಭೂವುಸ್ತತ್ಸುತಾನುಗಾಃ ।

ಪಾಣ್ಡ್ಯಶ್ಚ ವೀರಸೇನಾಖ್ಯಃ ಪಾಣ್ಡವಾನೇವ ಸಂಶ್ರಿತಃ ॥೨೪.೩೨॥

 

ಶಲ್ಯಂ ಚ ಪಾಣ್ಡವಾನೇವ ಯಾನ್ತಂ ಜ್ಞಾತ್ವಾ ಸುಯೋಧನಃ ।

ಸುಸಭಾಃ ಕಾರಯಾಮಾಸ ಸರ್ವಭೋಗಸಮನ್ವಿತಾಃ ॥೨೪.೩೩॥

 

ದುರ್ಯೋಧನನಿಂದ ಆಹ್ವಾನ ಸ್ವೀಕರಿಸಿದ್ದ ಭಗದತ್ತ,

ಅವನೂ ಸೇರಿಕೊಂಡ ದುರ್ಯೋಧನನ ಪಕ್ಷದತ್ತ.

ಸೋಮದತ್ತ, ಭೂರಿಶ್ರವಸ್ಸು, ಮಕ್ಕಳು ಮೊಮ್ಮಕ್ಕಳೊಂದಿಗೆ ಬಾಹ್ಲೀಕನ ಬಣವೆಲ್ಲ,

ಭೀಷ್ಮ,ದ್ರೋಣ,ಕೃಪರನ್ನು ದುರ್ಯೋಧನನ ಸೇರಿಸಿದ್ದು ಧೃತರಾಷ್ಟ್ರನ ಪ್ರೀತಿಯ ಜಾಲ.

 

ಅರ್ಜುನನ ಮಾವ, ಚಿತ್ರಾಂಗದೆಯ ಅಪ್ಪ ಪಾಂಡ್ಯರಾಜ ವೀರಸೇನ,

ಆಶಿಸಿ ಆಶ್ರಯಿಸಿ ಸೇರಿಕೊಂಡದ್ದು ಸಹಜ ಪಾಂಡವರ ಪಕ್ಷವನ್ನ.

ಪಾಂಡವರನ್ನು ಸೇರಲು ತೆರಳುತ್ತಿದ್ದ ಶಲ್ಯರಾಜ,

ಭೋಗಶಿಬಿರಗಳಿಡಿಸಿದ ಅದ ತಿಳಿದ ಕೌರವರಾಜ.

 

ತಾ ಯುಧಿಷ್ಠಿರಕ್ಲೃಪ್ತಾಃ ಸ ಮತ್ವಾ ಶಲ್ಯೋSಬ್ರವೀದಿದಮ್ ।

ಯ ಏತಾಃ ಕಾರಯಾಮಾಸ ತದಭೀಷ್ಟಂ ಕರೋಮ್ಯಹಮ್ ॥೨೪.೩೪॥

 

ಶಿಬಿರಗಳ ವ್ಯವಸ್ಥೆ ಮಾಡಿಸಿದ್ದು ಧರ್ಮಜ ಎಂದು ಶಲ್ಯ ತಿಳಿದ,

ಇವುಗಳನ್ನ ಮಾಡಿಸಿದವನ ಅಭೀಷ್ಟೆ ಪೂರೈಸುವೆ ಎಂದ್ಹೇಳಿದ.

 

ಲೀನಃ ಶ್ರುತ್ವಾ ಧಾರ್ತ್ತರಾಷ್ರಃ ಸತ್ಯಂ ಕುರ್ವಿತ್ಯಭಾಷತ ।

ದೇಹಿ ಮೇ ಯುದ್ಧಸಾಹಾಯ್ಯಮಿತಿ ಸೋSಪಿ ಯಶೋSರ್ತ್ಥಯನ್ ॥೨೪.೩೫॥

 

ರಕ್ಷಾರ್ತ್ಥಮಾತ್ಮವಾಕ್ಯಸ್ಯ ತಥೇತ್ಯೇವಾಭ್ಯಭಾಷತ ।

ಸ ಪಾಣ್ಡವಾಂಸ್ತತೋ ಗತ್ವಾ ತೈರನುಜ್ಞಾತ ಏವ ಚ ॥೨೪.೩೬॥

 

ತೇಜೋವಧಾರ್ತ್ಥಂ ಕರ್ಣ್ಣಸ್ಯ ಧನಞ್ಜಯಕೃತೇSರ್ತ್ಥಿತಃ ।

ತಥೇತ್ಯುಕ್ತ್ವಾ ಯಯೌ ಧರ್ಮ್ಮನನ್ದನಂ ಕೌರವಾನ್ ಪ್ರತಿ ॥೨೪.೩೭॥

 

ಬಚ್ಚಿಟ್ಟುಕೊಂಡಿದ್ದ ದುರ್ಯೋಧನ ಕೇಳುತ್ತಾನೆ ಶಲ್ಯನ ಮಾತನ್ನ,

ಹೇಳುವ : ಯುದ್ಧದಲ್ಲಿ ನನ್ನ ಕೂಡಿ ಸತ್ಯ ಮಾಡು ನಿನ್ನ ವಚನ.

ಕಟ್ಟುಬಿದ್ದ ಶಲ್ಯ ಒಪ್ಪಿಕೊಳ್ಳುತ್ತಾನೆ ಬಯಸುತ್ತಾ ತನ್ನ ಕೀರ್ತಿಯನ್ನ.

 

ಆನಂತರ ಶಲ್ಯ ಪಾಂಡವರ ಬಳಿಗೆ ಹೋಗುತ್ತಾನೆ,

ಕೌರವಪಡೆ ಸೇರಲು ಅವರನುಮತಿ ಪಡೆಯುತ್ತಾನೆ.

ಅರ್ಜುನನ ಜಯಕ್ಕೆ ಕರ್ಣನ ತೇಜೋವಧೆ ಮಾಡೆಂದು ಧರ್ಮಜ ಬೇಡುತ್ತಾನೆ,

' ಹಾಗೇ ಆಗಲಿ ' ಎಂದೊಪ್ಪಿಕೊಂಡ ಶಲ್ಯ ಕೌರವರ ಬಳಿಗೆ ತೆರಳುತ್ತಾನೆ.

No comments:

Post a Comment

ಗೋ-ಕುಲ Go-Kula