Monday, 20 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 01-17

 

ಅಧ್ಯಾಯ ಇಪ್ಪತ್ತೈದು [ಭೀಷ್ಮಪಾತಃ]

 

̐

ತೇ ಸೇನೇ ಸಮರಾರಮ್ಭೇ ಸಮೇತೇ ಸಾಗರೋಪಮೇ 

ಭೀಮಭೀಷ್ಮಮುಖೇ ವೀಕ್ಷ್ಯ ಪ್ರಾಹ ವಾಸವಿರಚ್ಯುತಮ್ ॥ ೨೫.೦೧ ॥

 

ಯುದ್ಧಾರಂಭಕ್ಕೆ ಸಿದ್ಧವಾದ ಭೀಮ ಭೀಷ್ಮರಂಥ ಅಗ್ರೇಸರರ ಆ ಎರಡು ಸೈನ್ಯ ನೋಡಿ,

ಅರ್ಜುನನ ಬಾಯಿಯಿಂದ ಬಂದಿತಾಗ ಭಗವಾನ್ ಕೃಷ್ಣನತ್ತ ಕೆಳ ಹೇಳಿದಂಥ ನುಡಿ.

 

‘ಸೇನಯೋರುಭಯೋರ್ಮ್ಮದ್ಧ್ಯೇ ರಥಂ ಸ್ಥಾಪಯ ಮೇSಚ್ಯುತ’ ।

ಇತ್ಯುಕ್ತಃ ಸ ತಥಾ ಚಕ್ರೇ ಪಾರ್ತ್ಥಃ ಪಶ್ಯಂಶ್ಚ ಬಾನ್ಧವಾನ್ ॥೨೫.೦೨॥

 

ವಿಸಸರ್ಜ್ಜ ಧನುಃ ಪಾಪಾಶಙ್ಕೀ ತತ್ರಾSಹ ಮಾಧವಃ ।

ಸ್ವಧರ್ಮ್ಮೋ ದುಷ್ಟದಮನಂ ಧರ್ಮ್ಮಜ್ಞಾನಾನುಪಾಲನಮ್ ॥೨೫.೦೩ ॥

 

ಕ್ಷತ್ರಿಯಸ್ಯ ತಮುತ್ಸೃಜ್ಯ ನಿನ್ದಿತೋ ಯಾತ್ಯಧೋ ದ್ಧ್ರುವಮ್ ।

‘ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ॥೨೫.೦೪ ॥

 

‘ಸ್ವಕರ್ಮ್ಮಣಾ ತಮಭ್ಯರ್ಚ್ಚ್ಯ ಸಿದ್ಧಿಂ ವಿನ್ದತಿ ಮಾನವಃ’ ।

ನಚ ಶೋಕಸ್ತ್ವಯಾ ಕಾರ್ಯ್ಯೋ ಬನ್ಧೂನಾಂ ನಿಧನೇಕ್ಷಯಾ ॥೨೫.೦೫ ॥

 

ದೇಹಸ್ಯ ಸರ್ವಥಾ ನಾಶಾದನಾಶಾಚ್ಚೇತನಸ್ಯ ಚ ।

ಸೃಷ್ಟಿಸ್ಥಿತ್ಯಪ್ಯಯಾಜ್ಞಾನಬನ್ಧಮೋಕ್ಷಪ್ರವೃತ್ತಯಃ ॥೨೫.೦೬ ॥

 

ಪ್ರಕಾಶನಿಯಮೌ ಚೈವ ಬ್ರಹ್ಮೇಶಾದಿಕ್ಷರಸ್ಯ ಚ ।

ಅಕ್ಷರಪ್ರಕೃತೇಃ ಸನ್ತೋ ಮತ್ತ ಏವ ನಚಾನ್ಯತಃ ॥೨೫.೦೭ ॥

 

ಕೃಷ್ಣಾ, ಎರಡೂ ಸೇನೆಗಳ ಮಧ್ಯೆ ನನ್ನ ರಥವ ನಿಲ್ಲಿಸು ಎಂದ,

ಅವನ ಮಾತ ಕೇಳಿಸಿಕೊಂಡ ಕೃಷ್ಣ ತಾನು ಹಾಗೆಯೇ ಮಾಡಿದ.

ಬಂಧುಗಳ ಕಂಡ ಅರ್ಜುನಗೆ ಇದು ಪಾಪವೇನೋ ಎಂಬ ತಳಮಳ,

ಬಿಲ್ಲು ಕೈಬಿಟ್ಟು ನಿಂತ ಅರ್ಜುನಗೆ ಕೃಷ್ಣ ತಿಳಿಸುತ್ತಾನೆ ಸ್ವಧರ್ಮದ ಆಳ.

ಕ್ಷತ್ರಿಯರಿಗೆ ಸ್ವಧರ್ಮವೆಂದರೆ ಧರ್ಮ ಮತ್ತು ಜ್ಞಾನದ ಪಾಲನೆ,

ಅದನ್ನ ಬಿಟ್ಟವರಿಗೆ ಅಧೋಗತಿಯೊಂದಿಗೆ ಲೋಕನಿಂದನೆ.

ಯಾವ ಭಗವಂತನಿಂದ ಎಲ್ಲಾ ಪ್ರಾಣಿಗಳ ನಿಯಂತ್ರಣ,

ಅವನೇ ಎಲ್ಲೆಲ್ಲೂ ಎಲ್ಲರಲ್ಲೂ ವ್ಯಾಪ್ತನಾಗಿರುವ ಕಾರಣ.

ಯಾವ ಭಗವಂತ ಇದೆಲ್ಲವನ್ನು ಹೆತ್ತು ಹೊತ್ತು ಹಬ್ಬಿ ನಿಂತಿದ್ದಾನೆ,

ಅಂಥವನನ್ನು ತನ್ನ ವಿಹಿತ ಕರ್ಮದಿ ಪೂಜಿಸಿದವ ಸಿದ್ಧಿ ಪಡೆಯುತ್ತಾನೆ.

ಬಂಧುಗಳ ಸಾವಿನ ಶೋಕ ಬೇಡ,

ಹೇಗೂ ನಾಶವಾಗುವ ದೇಹ ಜಡ.

ನಾಶವಾಗದ ಜೀವ (ಚೇತನ)ಕ್ಕಿಲ್ಲ ಸಾವು,

ಅದರ ಬಗ್ಗೆ ವಿಹಿತವಲ್ಲ ವೃಥಾ ನೋವು.

ಸೃಷ್ಟಿ, ಸ್ಥಿತಿ, ಪ್ರಳಯ, ಅಜ್ಞಾನ, ಬಂಧ, ಮೋಕ್ಷ, ಪ್ರವೃತ್ತಿ, ಪ್ರಕಾಶ ಮತ್ತು ನಿಯಮ,

ನಾನೇ ಲಕ್ಷ್ಮೀ, ಬ್ರಹ್ಮ ಮುಂತಾದ ಕ್ಷರ ಪುರುಷರನ್ನೂ ನಿಯಮಿಸುವ ಸಾರ್ವಭೌಮ.

 

ನ ಮೇ ಕುತಶ್ಚಿತ್ ಸರ್ಗ್ಗಾದ್ಯಾಃ ಸ್ವಾತನ್ತ್ರ್ಯಾದ್ ಗುಣಪೂರ್ತ್ತಿತಃ ।

ಅತಃ ಸಮಾಧಿಕಾಭಾವಾನ್ಮಮ ಮದ್ವಶಮೇವ ಚ ॥೨೫.೦೮ ॥

 

ನಾನು ಯಾರ ವಶದಲ್ಲಿರದ ಸರ್ವಸ್ವತಂತ್ರ,

ಸಮ ಮಿಗಿಲಿಲ್ಲದಂಥ ಅನನ್ಯ ಗುಣಸಾಗರ.

ಹಾಗಾಗಿ ಈ ಪ್ರಪಂಚವಾಗಿರುವುದು ನನ್ನ ವಶ,

ಆದ್ದರಿಂದ ನನಗಿಲ್ಲ ಸೃಷ್ಟಿ ಮುಂತಾದವುಗಳ ಪಾಶ.

 

ಜ್ಞಾತ್ವೈಷಾಂ ನಿಧನಾದ್ಯಂ ಚ ಜೀವಾದೇರಸ್ವತನ್ತ್ರತಾಮ್ ।

ಅಸ್ವಾತನ್ತ್ರ್ಯನ್ನಿವೃತ್ತೌ ಚ ‘ಮಾಮನುಸ್ಮರ ಯುದ್ಧ್ಯ ಚ’ ॥೨೫. ೦೯ ॥

 

ಇವರೆಲ್ಲರ ಹುಟ್ಟು ಸಾವು ಮುಂತಾದವು ನನ್ನ ಅಧೀನ,

ಅದನ್ನರಿತು ಜೀವಾದಿಗಳ ಅಸ್ವಾತಂತ್ರ ತಿಳಿವುದೇ ಜ್ಞಾನ.

ಯುದ್ಧ ಮಾಡದೇ ಹಿಂತಿರುಗಲೂ ನಿನಗಿಲ್ಲ ಸ್ವಾತಂತ್ರ್ಯ,

ನನ್ನ ಸ್ಮರಿಸುತ್ತಾ, ಯುದ್ಧ ಮಾಡುವುದೇ ವಿಹಿತ ತಂತ್ರ.

 

 

‘ಯೇ ತು ಸರ್ಮಾಣಿ ಕರ್ಮ್ಮಾಣಿ ಮಯಿ ಸನ್ನ್ಯಸ್ಯ ಮತ್ಪರಾಃ ।

‘ಅನನ್ಯೇನೈವ ಯೋಗೇನ ಮಾಂ ದ್ಧ್ಯಾಯನ್ತ ಉಪಾಸತೇ ॥ ೨೫.೧೦ ॥

 

‘ತೇಷಾಮಹಂ ಸಮುದ್ಧರ್ತ್ತಾ ಮೃತ್ಯುಸಂಸಾರಸಾಗರಾತ್ ।

‘ಭವಾಮಿ ನಚಿರಾತ್ ಪಾರ್ತ್ಥ ಮಯ್ಯಾವೇಶಿತಚೇತಸಾಮ್ ॥೨೫.೧೧ ॥

 

ಯಾರು ಮಾಡುತ್ತಾರೆ ತಮ್ಮೆಲ್ಲಾ ಕರ್ಮಗಳ ನನ್ನಲ್ಲಿ ಸಮರ್ಪಣೆ,

ಯಾರು ಮಾಡುತ್ತಾರೆ ನನ್ನನ್ನೇ ಧ್ಯಾನಿಸುತ್ತಾ ನನ್ನಯ ಉಪಾಸನೆ,

ಅಂಥವರನ್ನು ಮೃತ್ಯು- ಸಂಸಾರದಿಂದ ಮೇಲೆ ಎತ್ತುವುದು ನನ್ನ ಹೊಣೆ.

 

‘ಮಯಾ ತತಮಿದಂ ಸರ್ವಂ ಜಗದವ್ಯಕ್ತ ಮೂರ್ತ್ತಿನಾ ।

‘ಮತ್ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ’ ॥ ೧೨ ॥

 

ಅವ್ಯಕ್ತನಾದ ನನ್ನಿಂದ ಇಡೀ ಪ್ರಪಂಚ ವ್ಯಾಪ್ತ,

ಎಲ್ಲರೂ ಕೂಡಾ ನನ್ನಲ್ಲೇ ಆಗಿದ್ದಾರೆ ಆಶ್ರಿತ.

ನಾನು ಮಾತ್ರ ಯಾರಲ್ಲೂ ಆಶ್ರಿತನಲ್ಲದ ಶಕ್ತ.

 

ಸುಪೂರ್ಣ್ಣಸತ್ಸರ್ವಗುಣದೇಹೋsಹಂ ಸರ್ವದಾ ಪ್ರಭುಃ ।

ಅಸ್ಪೃಷ್ಟಾಖಿಲದೋಷೈಕನಿತ್ಯಸತ್ತನುರವ್ಯಯಃ ॥ ೨೫.೧೩ ॥

 

ನಾನು ಸರ್ವಕಾಲದಲ್ಲಿಯೂ ಪರಿಪೂರ್ಣ,

ನಿರ್ದುಷ್ಟವಾದ ಎಲ್ಲಾ ಗುಣಗಳ ಗಡಣ.

ನಾನು ಸರ್ವಸ್ವತಂತ್ರ  - ದೋಷರಹಿತ,

ನಾಶವಿರದ ನಿತ್ಯವಾದ ಸ್ವರೂಪವುಳ್ಳಾತ.

 

ಇತ್ಯುಕ್ತೋ ವಾಸವಿಃ ಪ್ರಾಹ ವ್ಯಾಪ್ತಂ ತೇ ದರ್ಶಯೇಶ ಮೇ ।

ಅಥ ದಿವ್ಯದೃಶಂ ತಸ್ಯ ದತ್ವಾ ವ್ಯಾಪ್ತಂ ನಿಜಂ ವಪುಃ  ॥ ೨೫.೧೪ ॥

 

ಕೇಳಿಸಿಕೊಂಡ ಅರ್ಜುನ ಹೇಳುತ್ತಾನೆ -ಒಡೆಯಾ ತೋರು ನಿನ್ನ ಸರ್ವವ್ಯಾಪ್ತ ರೂಪ,

ಅರ್ಜುನಗೆ ದಿವ್ಯದೃಷ್ಟಿ ಇಟ್ಟ ಕೃಷ್ಣ ತೋರುತ್ತಾನೆ ತನ್ನ ಅತ್ಯದ್ಭುತವಾದ ವಿಶ್ವರೂಪ.

 

 

ದೇಶತಃ ಕಾಲತಶ್ಚೈವ ಪೂರ್ಣ್ಣಂ ಸರ್ವಗುಣೈಃ ಸದಾ ।

ದರ್ಶಯಾಮಾಸ ಭಗವಾನ್ ಯಾವತ್ಯರ್ಜ್ಜುನಯೋಗ್ಯತಾ ॥ ೨೫.೧೫ ॥

 

ಸರ್ವಕಾಲದಲ್ಲಿಯೂ ಸರ್ವವ್ಯಾಪ್ತ ಸರ್ವಗುಣ ಪರಿಪೂರ್ಣ,

ಅರ್ಜುನನ ಯೋಗ್ಯತೆಯಂತೆ ತನ್ನ ವಿಶ್ವರೂಪ ತೋರಿದ ಕೃಷ್ಣ.

 

ತತ್ಪ್ರಾರ್ತ್ಥಿತಃ ಪುನಃ ಕೃಷ್ಣಸ್ತದ್ ರೂಪಂ ಲೋಕಮಾನತಃ ।

ಪೂರ್ವವದ್ ದರ್ಶಯಾಮಾಸ ಪುನಶ್ಚೈನಮಶಿಕ್ಷಯತ್ ॥ ೨೫.೧೬ ॥

 

ಅರ್ಜುನನಿಂದ ಪ್ರಾರ್ಥಿತನಾದ ಕೃಷ್ಣ ತನ್ನ ಮೊದಲ ರೂಪ ತೋರಿದ,

ಮತ್ತು ಅರ್ಜುನನಿಗೆ ಅನೇಕ ಸಂಗತಿಗಳನ್ನು ಉಪದೇಶವಾಗಿ ನೀಡಿದ.

 

ಜ್ಞಾನಜ್ಞೇಯಪ್ರಕೃತ್ಯಾದಿ ಜ್ಞಾಪಯನ್ ಪುರುಷೋತ್ತಮಃ ।

ತೇನಾನುಶಿಷ್ಟಃ ಪಾರ್ತ್ಥಸ್ತು ಸಶರಂ ಧನುರಾದದೇ ॥ ೨೫.೧೭ ॥

 

ಯಾವುದು ಜ್ಞಾನ -ತಿಳಿಯಲೇಬೇಕಾದ ವಿಜ್ಞಾನ,

ಹೇಗಿರುವುದು ಪ್ರಕೃತಿ ವ್ಯಾಪ್ತಿ ಮತ್ತು ಪರಿಮಾಣ.

ಎಲ್ಲವನ್ನೂ ಜ್ಞಾಪಿಸುತ್ತ ಕೃಷ್ಣ ಅರ್ಜುನಗೀಯುತ್ತಾನೆ ಶಿಕ್ಷಣ,

ಉಪದೇಶಕ್ಕೊಳಗಾದ ಅರ್ಜುನ ಎತ್ತಿಕೊಳ್ಳುತ್ತಾನೆ ಬಿಲ್ಲು ಬಾಣ.

No comments:

Post a Comment

ಗೋ-ಕುಲ Go-Kula