Sunday 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 23-30

 

ದುರ್ಯ್ಯೋಧನೋ ಯಯೌ ರಾಮಂ ಸ ಭಯಾತ್ ಕೇಶವಸ್ಯ ತಮ್ ।

ನ ಸಾಹಾಯ್ಯಂ ಕರೋಮೀತಿ ಪ್ರಾಹ ತತ್ಸ್ನೇಹವಾನಪಿ ॥೨೪.೨೩॥

 

ಉಪಪ್ಲಾವ್ಯೇ ಸಭಾಯಾಂ ಹಿ ತ್ವತ್ಪಕ್ಷೀಯಂ ವಚೋ ಬ್ರುವನ್ ।

ನಿರಾಕೃತಃ ಸಾತ್ಯಕಿನಾ ಸಮಕ್ಷಂ ಕೇಶವಸ್ಯ ಚ ॥೨೪.೨೪॥

 

ದುರ್ಯೋಧನ ಬಲರಾಮನ ಬಳಿಗೆ ಹೋಗುತ್ತಾನೆ,

ಬಲರಾಮಗೂ ದುರ್ಯೋಧನ ಪ್ರೀತಿಪಾತ್ರನಾದವನೇ.

ಬಲರಾಮನಿಗಿತ್ತು ಕೃಷ್ಣ ಪರಮಾತ್ಮನ ಭಯ,

ಹೇಳುತ್ತಾನೆ-ನಾ ಮಾಡಲಾರೆ ನಿನಗೆ ಸಹಾಯ.

 

ಈ ಹಿಂದೆ ನಡೆದಿತ್ತು ಉಪಪ್ಲಾವ್ಯದಲ್ಲಿ ಮಂತ್ರಾಲೋಚನೆ,

ಬಲರಾಮ ಮಾಡಿದ್ದನಾಗ ದುರ್ಯೋಧನನ ಪರ ಮಂಡನೆ.

ಕೃಷ್ಣನ ಎದುರೇ ಸಾತ್ಯಕಿ ಮಾಡಿದ್ದ ಅದರ ನಿರಾಕರಣೆ.

(ಆಗ ಚತುರ ಕೃಷ್ಣ ಮೊರೆಹೋಗಿದ್ದು ತಟಸ್ಥ ಮೌನವನ್ನೇ.)

 

ತತೋ ದುರ್ಯ್ಯೋಧನಂ ನಾಯಾತ್ ಸ ಚ ಹಾರ್ದ್ದಿಕ್ಯಸಂಯುತಃ ।

ಜಗಾಮ ಹಸ್ತಿನಪುರಮಕ್ಷೋಹಿಣ್ಯೋ ದಶಾಭವನ್ ॥೨೪.೨೫॥

 

ಏಕಾ ಚ ಧಾರ್ತ್ತರಾಷ್ಟ್ರಸ್ಯ ನಾನಾದೇಶ್ಯೈರ್ನ್ನೃಪೈರ್ಯ್ಯುತಾಃ ।

ಸಪ್ತ ಪಾಣ್ಡುಸುತಾನಾಂ ಚ ಮಾತ್ಸ್ಯದ್ರುಪದಕೇಕಯೈಃ ॥೨೪.೨೬॥

 

ದೃಷ್ಟಕೇತುಜರಾಸನ್ಧಸುತಕಾಶೀನೃಪೈರ್ಯ್ಯುತಾಃ ।

ಪುರುಜಿತ್ ಕುನ್ತಿಭೋಜಶ್ಚ ಚೇಕಿತಾನಶ್ಚ ಸಾತ್ಯಕಿಃ ॥೨೪.೨೭॥

 

ಪಾಣ್ಡವಾನ್ ಸೇನಯಾ ಯುಕ್ತಾಃ ಸಮೀಯುರ್ದ್ದೇವಪಕ್ಷಿಣಃ ।

ವಿನ್ದಾನುವಿನ್ದಾವಾವನ್ತ್ಯೌ ಜಯತ್ಸೇನೋSನ್ಯಕೇಕಯಾಃ ॥೨೪.೨೮॥

 

ಕ್ಷೇಮಧೂರ್ತ್ತಿರ್ದ್ದಣ್ಡಧಾರಃ ಕಲಿಙ್ಗೋSಮ್ಬಷ್ಠ ಏವ ಚ ।

ಶ್ರುತಾಯುರಚ್ಯುತಾಯುಶ್ಚ ಬೃಹದ್ಬಲಸುದಕ್ಷಿಣೌ ॥೨೪.೨೯॥

 

ಶ್ರುತಾಯುಧಃ ಸೈನ್ಧವಶ್ಚ ರಾಕ್ಷಸೋSಲಮ್ಬುಸಸ್ತಥಾ ।

ಅಲಾಯುಧೋSಲಮ್ಬಲಶ್ಚ ದೈತ್ಯಾ ದುರ್ಯ್ಯೋಧನಂ ಯಯುಃ ॥೨೪.೩೦॥

 

ಹೀಗೆ ಬಲರಾಮ ಕೃಷ್ಣನ ಮೇಲಿನ ಭಯದಿಂದ,

ದುರ್ಯೋಧನನ ಅನುಸರಿಸದೇ ತಟಸ್ಥನಾಗಿದ್ದ.

ಕೌರವ ಕೃತವರ್ಮನೊಡನೆ ಹಸ್ತಿನಪುರಕ್ಕೆ ಹೋದ.

 

ಬೇರೆ ಬೇರೆ ರಾಜರುಗಳ ಹತ್ತು ಅಕ್ಷೋಹಿಣಿ ಸೇನೆ,

ಮತ್ತೆ ಹಸ್ತಿನಪುರದ ಒಂದು ಅಕ್ಷೋಹಿಣಿ ಸೇನೆ,

ಕೌರವನದಾಯಿತು ಹನ್ನೊಂದಕ್ಷೋಹಿಣಿ ಸೇನೆ.

 

ವಿರಾಟ, ದ್ರುಪದ, ಕೇಕಯ, ದೃಷ್ಟಕೇತು, ಜರಾಸಂಧಪುತ್ರ ಸಹದೇವ ಇವರದು ದೇವತೆಗಳ ಪಕ್ಷ,

ಅದೇ ಪಕ್ಷದ ಕಾಶೀರಾಜ, ಪುರುಜಿತ್, ಕುಂತೀಭೋಜ,ಚೇಕಿತಾನ, ಸಾತ್ಯಕಿ ಸೇರಿದರು ಪಾಂಡವ ಪಕ್ಷ.

ಇವರೆಲ್ಲರದೂ ಸತ್ಯವಂತ ಧರ್ಮಿಷ್ಠರಾದ ಪಾಂಡವರ ಪರ ಧ್ವನಿ,

ಪಾಂಡವರ ಪರ ನಿಂತ ಸೇನೆಯಾಯಿತು ಏಳು ಅಕ್ಷೋಹಿಣಿ.

 

ಆವಂತಿ ದೇಶದ ವಿಂದಾ - ಅನುವಿಂದರು,

ಜಯತ್ಸೇನ, ಪಾಂಡವರ ಸೇರದ ಕೇಕಯರು,

ಕ್ಷೇಮಧೂರ್ತಿ, ದಂಡಧರ, ಕಲಿಂಗ, ಅಂಬಷ್ಠ, ಶ್ರುತಾಯು, ಅಚ್ಯುತಾಯು, ಬೃಹದ್ಬಲ,

ಸುದಕ್ಷಿಣ, ಶ್ರುತಾಯುಧ, ಸೈಂಧವ(ಜಯದ್ರಥ), ಅಲಂಬುಸ, ಅಲಾಯುಧ, ಅಲಂಬಲ,

ಇವರೆಲ್ಲಾ ಕೂಡಾ ಸ್ವಭಾವತಃ ದೈತ್ಯರು,

ಅಂತೆಯೇ ದುರ್ಯೋಧನನ ಪಕ್ಷ ಸೇರಿದರು.

No comments:

Post a Comment

ಗೋ-ಕುಲ Go-Kula