Tuesday 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 136-144

 

ನಿಪಾತಿತೇSಸ್ಮಿನ್ ಮಾರುತಿರ್ದ್ದ್ರೋಣಮುಖ್ಯಾನ್ ವಿದ್ರಾಪ್ಯ ತತ್ರಾSಗಮದಾಶು ತೇsಪಿ ।

ತದಾSSಯುಧಾನಿ ಪ್ರಣಿಧಾಯ ವೀರಾಃ ಪಾರ್ತ್ಥಾಃ ಪರೇ ಚೈನಮುಪಾಸದನ್ ಸ್ಮ ॥ ೨೫.೧೩೬॥

 

ಹೊಂದಿದಾಗ ಭೀಷ್ಮಾಚಾರ್ಯರು ಪತನ,

ದ್ರೋಣಾದಿಗಳ ಓಡಿಸಿ ಬಂದನಲ್ಲಿಗೆ ಭೀಮಸೇನ.

ದ್ರೋಣಾದಿಗಳು ಆಯುಧ ಬಿಟ್ಟು ಭೀಷ್ಮರ ಬಳಿ ಬರುತ್ತಾರೆ,

ಕೌರವಪಾಂಡವ ವೀರರೆಲ್ಲಾ ಭೀಷ್ಮರ ಬಳಿ ಬಂದು ಸೇರುತ್ತಾರೆ.

 

ಪ್ರಣಮ್ಯ ತಂ ತದ್ವಚನಾತ್ ಸಮೀಯುಸ್ತಸ್ಮಿನ್ ದಿನೇ ಶಿಬಿರಾಣ್ಯೇವ ಸರ್ವೇ ।

ಪರೇ ದಿನೇ ಸರ್ವ ಏವೋಪತಸ್ಥುರ್ಭೀಷ್ಮಂ ಯದೂನಾಮ್ಪತಿನಾ ಸಹೈವ ॥ ೨೫.೧೩೭॥

 

ಎಲ್ಲರೂ ಭೀಷ್ಮಾಚಾರ್ಯರಿಗೆ ಮಾಡುತ್ತಾರೆ ನಮಸ್ಕಾರ,

ಅವರ ಮಾತಿನಂತೆ ಯುದ್ಧ ನಿಲ್ಲಿಸಿ ಸೇರುತ್ತಾರೆ ಶಿಬಿರ.

ಮರುಬೆಳಿಗ್ಗೆ ಎಲ್ಲರೂ ಭೀಷ್ಮರ ಬಳಿ ಬರುತ್ತಾರೆ,

ಆನಂತರ ಯುದ್ಧ ಮಾಡಲೆಂದು ತೆರಳುತ್ತಾರೆ.

 

ಸ ಪೂರ್ವದಿವಸೇ ಪಾರ್ತ್ಥದತ್ತಬಾಣೋಪಬರ್ಹಣಃ ।

ತದಾSಪಿ ತೃಟ್-ಪರೀತಾತ್ಮಾ ಯೋಗ್ಯಂ ಪೇಯಮಯಾಚತ ॥ ೨೫.೧೩೮॥

 

ಧಾರ್ತ್ತರಾಷ್ಟ್ರೈರವಿಜ್ಞಾತಂ ತದಭಿಜ್ಞಾಯ ವಾಸವಿಃ ।

ವಾರುಣಾಸ್ತ್ರೇಣ ಭಿತ್ತ್ವಾ ಸ ಭೂಮಿಂ ವಾರಿ ಸುಗನ್ಧಿ ಚ ॥ ೨೫.೧೩೯॥

 

ಊರ್ಧ್ವಧಾರಮದಾದಾಸ್ಯೇ ತರ್ಪ್ಪಿತೋSನೇನ ಸೋSವದತ್ ।

ಯಾದೃಶ್ಯಸ್ತ್ರಜ್ಞತಾ ಪಾರ್ತ್ಥೇ ದೃಷ್ಟಾSತ್ರ ಕುರುನನ್ದನಾಃ ॥ ೨೫.೧೪೦॥

 

ಯಾದೃಗ್ ಬಹ್ವೋರ್ಬಲಂ ಭೀಮೇ ಸಂಯುಗೇಷು ಪುನಃ ಪುನಃ ।

ಯಾದೃಶಂ ಚೈವ ಮಾಹಾತ್ಮ್ಯಾಮನನ್ತಮಜರಂ ಹರೇಃ ॥ ೨೫.೧೪೧॥

 

ವಿಜ್ಞಾತಂ ಸರ್ವಲೋಕಸ್ಯ ಸಭಾಯಾಂ ದೃಷ್ಟಮೇವ ಚ ।

ಉಪಾರಮತ ತದ್ ಯುದ್ಧಂ ಸುಖಿನಃ ಸನ್ತು ಭೂಮಿಪಾಃ  ॥ ೨೫.೧೪೨॥

 

ಯಥೋಚಿತವಿಭಕ್ತಾಂ ಚ ಭುಙ್ಧ್ವಂ ಭೂಪಾಃ ಸದಾ ಭುವಮ್ ।

ಇತ್ಯುಕ್ತಃ ಪ್ರಯಯೌ ತೂಷ್ಣೀಂ ಧಾರ್ತ್ತರಾಷ್ಟ್ರಃ ಸ್ವಕಂ ಗೃಹಮ್ ॥ ೨೫.೧೪೩॥

 

ಹಿಂದಿನ ದಿನ ಭೀಷ್ಮ ಅರ್ಜುನ ನೀಡಿದ್ದ ತಲೆದಿಂಬನ್ನು ಸ್ವೀಕರಿಸಿದ್ದ,

ಮರುದಿನ ಬಾಯಾರಿಕೆಯಿಂದ ಬಳಲಿ ಯೋಗ್ಯವಾದ ನೀರು ಬೇಡಿದ.

ಅವರ ಮಾತನ್ನು ಧೃತರಾಷ್ಟ್ರಪುತ್ರರು ತಿಳಿಯದಿದ್ದಾಗ,

ಅರ್ಜುನ ವರುಣಾಸ್ತ್ರದಿ ನೆಲ ಸೀಳಿ ಜಲ ಚಿಮ್ಮಿಸಿದನಾಗ.

ಪರಿಮಳಯುಕ್ತವಾದ ಮೇಲೆ ಹಾರುತ್ತಿದ್ದ ಆ ಶುದ್ಧ ನೀರನ್ನು,

ಭೀಷ್ಮರ ಬಾಯಿಗೆ ಬಂದು ಬೀಳುವಂತೆ ಮಾಡಿದ ವ್ಯವಸ್ಥೆಯನ್ನು.

ಸಂತುಷ್ಟರಾದ ಭೀಷ್ಮಾಚಾರ್ಯರು ಆಗ ಹೀಗೆ ಹೇಳುತ್ತಾರೆ,

ನೋಡಿದಿರಲ್ಲ,ಪಾರ್ಥನ ಅಸ್ತ್ರದ ಪರಾಕ್ರಮವ ಕೌರವರೇ.

ಭೀಮಸೇನನ ಪರಾಕ್ರಮವನ್ನೂ ನೋಡಿದ್ದೀರಿ,

ಪದೇ ಪದೇ ದೇವರ ಅನನ್ಯ ಶಕ್ತಿ ನೋಡಿದ್ದೀರಿ.

ಇದು ಎಲ್ಲರಿಗೂ ಗೊತ್ತಿರುವ ಪರಮ ಸತ್ಯ,

ತನ್ನ ವಿಶ್ವರೂಪವ ತೋರಿದ್ದಾನೆ ಭಗವಂತ.

ಸಾಕುಮಾಡಿ, ನಿಲ್ಲಿಸಿಬಿಡಿ ಈ ಕದನ,

ಎಲ್ಲ ರಾಜರಿಗಿರಲಿ ಸುಖದ ಜೀವನ.

ಯೋಗ್ಯತಾನುಸಾರವಾಗಿ ಭೂಮಿಯನ್ನು ಹಂಚಿಕೊಂಡು ಬಾಳಿ,

ಕೌರವ ಏನೂ ಮಾತಾಡದೇ ಹೊರಟ ಭೀಷ್ಮರ ಮಾತು ಕೇಳಿ.

 

 

ವ್ಯಾಸದತ್ತೋರುವಿಜ್ಞಾನಾತ್ ಸಞ್ಜಯಾದಖಿಲಂ ಪಿತಾ ।

ಶ್ರುತ್ವಾ ತದಾ ಪರ್ಯ್ಯತಪ್ಯತ್ ಪಾಣ್ಡವಾಃ ಕೃಷ್ಣದೇವತಾಃ ।

ಮುಮುದುಃ ಶಿಬಿರಂ ಪ್ರಾಪ್ಯ ಸರ್ವೇ ಕೃಷ್ಣಾನುಮೋದಿತಾಃ ॥ ೨೫.೧೪೪॥

 

ವೇದವ್ಯಾಸರು ಸಂಜಯಗೆ ಕೊಡಮಾಡಿದ್ದರು ಉತ್ಕೃಷ್ಟ ಜ್ಞಾನ,

ಅದರಿಂದ ಸಂಜಯ ಧೃತರಾಷ್ಟ್ರಗಿತ್ತಿದ್ದ ಯುದ್ಧ ವರ್ತಮಾನ.

ಅದನ್ನ ಸಂಪೂರ್ಣ ಕೇಳಿಸಿಕೊಂಡ ಧೃತರಾಷ್ಟ್ರಗೆ ಒದಗಿದ್ದು ಸಂಕಟ ಕ್ಲೇಶ,

ಕೃಷ್ಣನ ದೇವರೆಂದು ನಂಬಿ ಅವನುಪದೇಶ ಪಡೆದ ಪಾಂಡವರಿಗೆ ಸಂತೋಷ.

 

 

[ಆದಿತಃ ಶ್ಲೋಕಾಃ :  ೩೭೮೬+೧೪೪=೩೯೩೦]

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭೀಷ್ಮಪಾತೋ ನಾಮ ಪಞ್ಚವಿಂಶೋsದ್ಧ್ಯಾಯಃ ॥

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಭೀಷ್ಮಪಾತ ಹೆಸರಿನ ಇಪ್ಪತ್ತೈದನೇ ಅಧ್ಯಾಯ,

ಶ್ರೀಗುರು ಹರಿಗಳಿಗೆ ಅರ್ಪಿಸಿದ ಧನ್ಯತಾಭಾವ.

No comments:

Post a Comment

ಗೋ-ಕುಲ Go-Kula