Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 114-127

 

ಯುಧಿಷ್ಠಿರೋ ಭೀಷ್ಮಪರಾಕ್ರಮೇಣ ಭೀತೋ ಭೀಷ್ಮಂ ಸ್ವವಧೋಪಾಯಮೇವ ।

ಪ್ರಷ್ಟುಂ ಯಯೌ ನಿಶಿ ಕೃಷ್ಣೋSನುಜಾಶ್ಚ ತಸ್ಯಾನ್ವಯುಸ್ತಂ ಸ ಪಿತಾಮಹೋ ಯತ್ ॥ ೨೫.೧೧೪॥

 

ಯುಧಿಷ್ಠಿರ ಭೀಷ್ಮಾಚಾರ್ಯರ ಪರಾಕ್ರಮದಿಂದ ಭಯಗೊಂಡಿದ್ದ,

ಅವರ ಕೊಲ್ಲುವ ಬಗೆಯನ್ನು ಅವರಲ್ಲೇ ಕೇಳಲು ಅವರ ಬಳಿ ಬಂದ.

ಕೃಷ್ಣ ಧರ್ಮರಾಜನ ತಮ್ಮಂದಿರು ಅವನನ್ನು ಹಿಂಬಾಲಿಸುತ್ತಾರೆ,

ಭೀಷ್ಮರು ಕುರುಪಿತಾಮಹರಾದ್ದರಿಂದ ಧರ್ಮಜನ ಅನುಸರಿಸುತ್ತಾರೆ.

 

(ಹಾಗಿದ್ದರೆ ಭೀಮಾರ್ಜುನರಿಗೆ ಭೀಷ್ಮನನ್ನು ಕೊಲ್ಲುವ ಉಪಾಯ ಗೊತ್ತಿರಲಿಲ್ಲವೇ ಎಂದರೆ-)

 

ಭೀಮಾರ್ಜ್ಜುನೌ ಶಕ್ನುವನ್ತಾವಪಿ ಸ್ಮ ನರ್ತ್ತೇSನುಜ್ಞಾಂ ಹನ್ತುಮಿಮಂ ತದೈಚ್ಛತಾಮ್ ।

ಪೂಜ್ಯೋ ಯತೋ ಭೀಷ್ಮ ಉದಾರಕರ್ಮ್ಮಾ ಕೃಷ್ಣೋSಪ್ಯಯಾತ್ ತೇನ ಹಿ ಪಾಣ್ಡವಾರ್ತ್ಥೇ ॥ ೨೫.೧೧೫॥

 

ಭೀಮಸೇನಾರ್ಜುನರು ಭೀಷ್ಮರನ್ನು ಕೊಲ್ಲಲು ಸಮರ್ಥರಿದ್ದರು,

ಪೂಜ್ಯ ಉತ್ಕೃಷ್ಟ ಕರ್ಮಿಯಾದ ಭೀಷ್ಮರಾಜ್ಞೆ ಬಯಸಿ ಬಂದಿದ್ದರು.

ಪಾಂಡವರೆಲ್ಲರಿಗೂ ಭೀಷ್ಮರಲ್ಲಿ ಅನನ್ಯ ಗೌರವ,

ಕೃಷ್ಣ ಅವರೊಂದಿಗೆ ಹೋಗಿದ್ದೂ ತೋರಲದೇ ಭಾವ.

 

ಪ್ರಾಪ್ಯಾನುಜ್ಞಾಂ ಭೀಷ್ಮತಸ್ತೇ ವಧಾಯ ಶಿಖಣ್ಡಿನಂ ತದ್ವಚಸಾSಗ್ರಯಾಯಿನಮ್ ।

ಕೃತ್ವಾSಪರೇದ್ಯುರ್ಯ್ಯುಧಯೇ ವಿನಿರ್ಗ್ಗತಾ ಭೀಷ್ಮಂ ಪುರಸ್ಕೃತ್ಯ ತಥಾ ಪರೇSಪಿ ॥ ೨೫.೧೧೬॥

 

ಅವರೆಲ್ಲರೂ ಭೀಷ್ಮಾಚಾರ್ಯರಿಂದ ಅವರ ವಧೆಯ ಅನುಜ್ಞೆ ಪಡೆಯುತ್ತಾರೆ,

ಅವರ ಮಾತಿನಂತೆ ಶಿಖಂಡಿಯ ಮುಂದಿಟ್ಟು ಕೊಂಡು ಯುದ್ಧಾರಂಭಿಸುತ್ತಾರೆ.

ಕೌರವರು ಭೀಷ್ಮರನ್ನು ಮುಂದಿಟ್ಟುಕೊಂಡು,

ಹೊರಡುತ್ತಾರೆ ಹತ್ತನೇ ದಿನದ ಯುದ್ಧಕ್ಕೆಂದು.

 

ಶಿಖಣ್ಡಿನೋ ರಕ್ಷಕಃ ಫಲ್ಗುನೋSಭೂದ್ ಭೀಷ್ಮಸ್ಯ ದುಃಶಾಸನ ಆಸ ಚಾಗ್ರೇ ।

ಅನ್ಯೇ ಚ ಸರ್ವೇ ಜುಗುಪುರ್ಭೀಷ್ಮಮೇವ ನ್ಯವಾರಯನ್ ಭೀಮಸೇನಾದಯಸ್ತಾನ್  ॥೨೫.೧೧೭॥

 

ಶಿಖಂಡಿಗೆ ಬೆಂಗಾವಲಾಗಿ ಅರ್ಜುನನಿದ್ದ,

ಭೀಷ್ಮರ ಮುಂದೆ ದುಶ್ಯಾಸನ ನಿಂತಿದ್ದ.

ಕೌರವರಲ್ಲಿ ಬಹುಪಾಲು ಭೀಷ್ಮರ ರಕ್ಷಣೆಗೆ ಸಾಗಿದ್ದರು,

ಭೀಮಸೇನ ಮುಂತಾದವರು ಭೀಷ್ಮ ರಕ್ಷಕರ ತಡೆದರು.

 

ಭೀಷ್ಮಾಯ ಯಾನ್ತಂ ಯುಯುಧಾನಮಾಜೌ ನ್ಯವಾರಯದ್ ರಾಕ್ಷಸೋSಲಮ್ಬುಸೋSಥ ।

ತಂ ವಜ್ರಕಲ್ಪೈರತುದದ್ ವೃಷ್ಣಿವೀರಃ ಶರೈಃ ಸ ಮಾಯಾಮಸೃಜತ್ ತದೋಗ್ರಾಮ್ ॥ ೨೫.೧೧೮॥

 

ಭೀಷ್ಮರ ಮೇಲೇರಿ ಹೋಗುತ್ತಿದ್ದ ಸಾತ್ಯಕಿಯನ್ನು ಅಲಂಬುಸ ರಕ್ಕಸ ತಡೆದ,

ಯಾದವವೀರ ಸಾತ್ಯಕಿ ವಜ್ರಾಯುಧ ಸಮಬಾಣ ಬಿಟ್ಟು ರಕ್ಕಸನ ಪೀಡಿಸಿದ.

ಆಗ ರಕ್ಕಸ ಅಲಂಬುಸ ಭಯಂಕರ ಕೃತ್ರಿಮ ವಿದ್ಯೆಯನ್ನು ಪ್ರಯೋಗ ಮಾಡಿದ.

 

ಅಸ್ತ್ರೇಣ ಮಾಯಾಮಪನುದ್ಯ ವೀರೋ ವ್ಯದ್ರಾವಯದ್ ರಾಕ್ಷಸಂ ಸಾತ್ಯಕಿಸ್ತಮ್ ।

ತಸ್ಮಿನ್ ಗತೇ ಯುಯುಧಾನೋ ರಥೇನ ಯಯೌ ಭೀಷ್ಮಂ ಪಾರ್ತ್ಥಮನ್ವೇವ  ಧನ್ವೀ ॥ ೨೫.೧೧೯॥

 

ವೀರ ಸಾತ್ಯಕಿ ಅಸ್ತ್ರಬಲದಿಂದ ಮಾಯೆ ದೂರ ಮಾಡಿದ,

ಆ ಅಲಂಬುಸ ರಾಕ್ಷಸನನ್ನು ಹಿಮ್ಮೆಟ್ಟಿಸಿ ದೂರ ಓಡಿಸಿದ.

ಆನಂತರ ಸಾತ್ಯಕಿ ಅರ್ಜುನಗೆ ಬೆಂಗಾವಲಾಗಿ ಭೀಷ್ಮರಿಗೆದುರಾದ.

 

ದ್ರೋಣೋ ದ್ರೌಣಿರ್ದ್ಧ್ರಾರ್ತ್ತರಾಷ್ಟ್ರಶ್ಚ ರಾಜಾ ಭೂರಿಶ್ರವಾ ಭಗದತ್ತಃ ಕೃಪಶ್ಚ ।

ಶಲ್ಯೋ ಬಾಹ್ಲೀಕಃ ಕೃತವರ್ಮ್ಮಾ ಸುಶರ್ಮ್ಮಾ ಸರ್ವಾಶ್ಚ ಸೇನಾ ವಾರಿತಾ ವಾಯುಜೇನ ॥ ೨೫.೧೨೦॥

 

ದ್ರೋಣ, ದುರ್ಯೋಧನ, ಭೂರಿಶ್ರವಸ್ಸು, ಕೃಪ,ಅಶ್ವತ್ಥಾಮ,

ಭಗದತ್ತ, ಶಲ್ಯ, ಬಾಹ್ಲೀಕ, ಕೃತವರ್ಮ ಮತ್ತು ಸುಶರ್ಮ,

ಈ ಹತ್ತುಜನರು ಮತ್ತವರ ಸೇನೆ,

ತಡೆದು ನಿಲ್ಲುತ್ತಾನೆ ಭೀಮನೊಬ್ಬನೇ.  

 

ಸ ತಾನ್ ಮುಹುರ್ವಿರಥೀಕೃತ್ಯ ವೀರಃ ಪ್ರಾಗ್ಜ್ಯೋತಿಷಂ ಸಗಜಂ ದ್ರಾವಯಿತ್ವಾ ।

ನ್ಯವಾರಯತ್  ಫಲ್ಗುನಂ ರೋದ್ಧುಕಾಮಂ ಪಾರ್ತ್ಥಶ್ಚ ದೇವವ್ರತಮಾಸಸಾದ ॥ ೨೫.೧೨೧॥

 

 

ಭೀಮಸೇನ ಮತ್ತೆ ಮತ್ತೆ ಈ ಹತ್ತು ಜನರನ್ನ ವಿರಥರನ್ನಾಗಿ ಮಾಡಿದ,

ಅರ್ಜುನನೆದುರಿಸಲು ಬರುತ್ತಿದ್ದ ಆನೆಸಹಿತ ಭಗದತ್ತನ ಪದೇಪದೇ ಅಟ್ಟಿದ.

ಹೀಗೆ ಭೀಮ ಅರ್ಜುನನಿಗೆದುರಾದವರನ್ನು ನಿವಾರಿಸಿದ,

ಸುಗಮವಾದ ಮೇಲೆ ಅರ್ಜುನ ಭೀಷ್ಮರಿಗೆ ಎದುರಾದ.

 

ಯುಧಿಷ್ಠಿರಂ ಭೀಷ್ಮಮಭಿಪ್ರಯಾನ್ತಂ ಮಾದ್ರೀಸುತಾಭ್ಯಾಂ ಸಹಿತಂ ನೃವೀರಮ್ ।

ನ್ಯವಾರಯಚ್ಛಕುನಿಃ ಸಾದಿನಾಂ ಚ ಯುತೋSಯುತೇನೈವ ವರಾಶ್ವಗೇನ ॥ ೨೫.೧೨೨॥

 

ಧರ್ಮಜ, ನಕುಲ ಸಹದೇವರ ಸಮೇತ ಭೀಷ್ಮರ ಮೇಲೇರಿ ಹೋಗುತ್ತಿದ್ದ,

ಹತ್ತು ಸಾವಿರ ಕುದುರೆ ಪಡೆಯ ಹೊಂದಿದ ಶಕುನಿ ಅವರನ್ನು ತಡೆಗಟ್ಟಿದ.

 

ತಾನ್ ಸಾದಿನೋSಶ್ವಾಂಶ್ಚ ನಿಹತ್ಯ ಸರ್ವಾನ್ ವಿಜಿತ್ಯ ತಂ ಶಕುನಿಂ ಪಾಣ್ಡವಾಸ್ತೇ ।

ಪ್ರಾಪುರ್ಭೀಷ್ಮಂ ದ್ರೌಪದೇಯಾಶ್ಚ ಸರ್ವೇ ತಥಾ ವಿರಾಟದ್ರುಪದೌ ಕುನ್ತಿಭೋಜಃ ॥ ೨೫.೧೨೩॥

 

ಧರ್ಮಜ,ನಕುಲ-ಸಹದೇವರು ಆ ಎಲ್ಲಾ ಅಶ್ವ ಪಡೆಯನ್ನು ಕೊಲ್ಲುತ್ತಾರೆ,

ಶಕುನಿಯನ್ನು ಗೆದ್ದವರು ಭೀಷ್ಮಾಚಾರ್ಯರಿಗೆ ಎದುರಾಗಿ ಬರುತ್ತಾರೆ.

ಇನ್ನೊಂದು ಕಡೆಯಿಂದ ದ್ರೌಪದೀ ಪುತ್ರರು ಮತ್ತೆ ವಿರಾಟ,

ದ್ರುಪದ,ಕುಂತೀಭೋಜ ಎಲ್ಲರೂ ಭೀಷ್ಮರನಾವರಿಸುವ ಆಟ.

 

ಧೃಷ್ಟದ್ಯುಮ್ನಂ ಭೀಷ್ಮಮಭಿಪ್ರಯಾನ್ತಂ ನ್ಯವಾರಯತ್ ಸೈನ್ಧವಸ್ತಂ ಸ ಬಾಣೈಃ ।

ಹತಾಶ್ವಸೂತಂ  ಸಗಣಂ ದ್ರಾವಯಿತ್ವಾ ಸಮಾಸದದ್ ಭೀಷ್ಮಮೇವಾSಶು ವೀರಃ ॥ ೨೫.೧೨೪॥

 

ಭೀಷ್ಮರಿಗೆದುರಾಗುತ್ತಿದ್ದ ಧೃಷ್ಟದ್ಯುಮ್ನನ ಜಯದ್ರಥ ತಡೆದ,

ವೀರನಾದ ಧೃಷ್ಟದ್ಯುಮ್ನ ಅವನ ಕುದುರೆ ಸಾರಥಿಯ ಕೊಂದ.

ಪರಿವಾರದವರನ್ನೆಲ್ಲಾ ಓಡಿಸಿ, ಭೀಷ್ಮರಿಗೆ ಎದುರಾಗಿ ತಾ ಬಂದ.

 

ಗುಪ್ತೋSಥ ಪಾರ್ತ್ಥೇನ ರಣೇ ಶಿಖಣ್ಡೀ ಭೀಷ್ಮಂ ಸಮಾಸಾದ್ಯ ಶರೈರತಾಡಯತ್ ।

ಭೀಷ್ಮಃ ಸ್ತ್ರೀತ್ವಂ ತಸ್ಯ ಜಾನನ್ ನ ತಸ್ಮೈ ಮುಮೋಚ ಬಾಣಾನ್ ಸ ತು ತಂ ತುತೋದ ॥ ೨೫.೧೨೫॥

 

 

ಅರ್ಜುನ ರಕ್ಷಿತ ಶಿಖಂಡಿಯಿಂದ ಭೀಷ್ಮರ ಮೇಲೆ ಆಕ್ರಮಣ,

ಶಿಖಂಡಿಯ ಸ್ತ್ರೀಪೂರ್ವ ತಿಳಿದ ಭೀಷ್ಮರು ಬಿಡಲಿಲ್ಲ ಬಾಣ.

ಭೀಷ್ಮರು ಗಾಯಗೊಳ್ಳುತ್ತಾರೆ ಶಿಖಂಡಿಯ ಆಕ್ರಮಣದ ಕಾರಣ.

 

ಶಿಖಣ್ಡಿನಂ ವಾರಯಾಮಾಸ ಬಾಣೈರ್ದ್ದುರ್ಮ್ಮಷಣೋSಮರ್ಷಣವಿಹ್ವಲೇಕ್ಷಣಃ ।

ನಾತ್ಯೇತುಮೇನಮಶಕಚ್ಛಿಖಣ್ಡೀ ದುಃಶಾಸನಃ ಪಾರ್ತ್ಥಮವಾರಯತ್ ತದಾ ॥ ೨೫.೧೨೬॥

 

ದುರ್ಯೋಧನನ ತಮ್ಮ ಕೋಪದ ಕೆಂಗಣ್ಣ ದುರ್ಮರ್ಷಣ,

ಶಿಖಂಡಿಯನ್ನು ತಡೆಯಲು ಶಕ್ತನಾಗುತ್ತಾನೆ ಬಿಟ್ಟು ಬಾಣ.

ಶಿಖಂಡಿ ದುರ್ಮರ್ಷಣನನ್ನು ಮೀರದಾದ,

ದುಶ್ಯಾಸನ ಅರ್ಜುನನೊಡನೆ ಯುದ್ಧ ಆರಂಭಿಸಿದ.

 

ಸ ಲೋಕವೀರೋSಪಿ ದುರಾತ್ಮನಾSಮುನಾ ರುದ್ಧೋSಶಕನ್ನೈನಮತೀತ್ಯ ಯಾತುಮ್ ।

ಭೀಷ್ಮಂ ಪಾರ್ತ್ಥಃ ಸಾಯಕಾಶ್ಚಾಸ್ಯ ತಸ್ಮಿನ್  ಸಸಜ್ಜಿರೇ ಪರ್ವತೇಷ್ವಪ್ಯಸಕ್ತಾಃ ॥ ೨೫.೧೨೭॥

 

ಅತ್ಯಂತ ವೀರನಾಗಿದ್ದರೂ ಅರ್ಜುನ, ತಡೆಯುತ್ತಾನವನ ದುಷ್ಟ ದುಶ್ಯಾಸನ.

ದುಶ್ಯಾಸನನನ್ನು ಮೀರಿಸಾಗಲು ಅರ್ಜುನ ಸಮರ್ಥನಾಗಲಿಲ್ಲ,

ಪರ್ವತಭೇದಿಸಬಲ್ಲವನ ಬಾಣ ದುಶ್ಯಾಸನ ದೇಹವ ಸೀಳಲಾಗಲಿಲ್ಲ.

No comments:

Post a Comment

ಗೋ-ಕುಲ Go-Kula