Monday 20 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 37-46

 

ಬಭೂವುಸ್ತತ್ರ ಯುದ್ಧಾನಿ ಚಿತ್ರಾಣಿ ಸುಬಹೂನಿ ಚ ।

ತಾನ್ಯಮ್ಬರೇ ವಿಮಾನಸ್ಥಾ ಬ್ರಹ್ಮರುದ್ರಪುರಸ್ಸರಾಃ ॥ ೨೫.೩೭ ॥

 

ಅಪಶ್ಯನ್ ದೇವತಾಃ ಸರ್ವಾ ಗನ್ಧರ್ವಾಪ್ಸರಸೋSಸುರಾಃ ।

ದೃಷ್ಟದ್ಯುಮ್ನೋ ಮಹೇಷ್ವಾಸಃ ಪ್ರತಿವ್ಯೂಹ್ಯಾSಪಗಾಸುತಮ್ ॥ ೨೫.೩೮ ॥

 

ಆ ರಣರಂಗದಲ್ಲಿ ನಡೆದವು ಆಗ ಚಿತ್ರ ವಿಚಿತ್ರವಾದ ಅನೇಕ ಯುದ್ಧಗಳು,

ವೀಕ್ಷಿಸಿದರು ಆಕಾಶದಿಂದ ಗಂಧರ್ವ, ಅಪ್ಸರೆ, ಅಸುರ, ಬ್ರಹ್ಮ ರುದ್ರಾದಿ ದೇವತೆಗಳು.

ಧೃಷ್ಟದ್ಯುಮ್ನ ಬಲು ದೊಡ್ಡ ಬಿಲ್ಲುಗಾರನಾಗಿದ್ದ,

ಪ್ರತಿವ್ಯೂಹ ರಚಿಸಿ ಭೀಷ್ಮರನ್ನು ಎದುರಿಸಿದ.

 

ಚಕ್ರೇ ಯುದ್ಧಾನಿ ಸುಬಹೂನ್ಯಜೇಯಃ ಶತ್ರುಭೀ ರಣೇ ।

ತತ್ರೋದ್ದಧಾರ ಕೃಷ್ಣೋSಪಿ ಫಲ್ಗುನಂ ಮೃದುಯೋಧಿನಮ್ ॥ ೨೫.೩೯ ॥

 

ದೃಷ್ಟ್ವಾ ಚಕ್ರಂ ತಥೋದ್ಯಮ್ಯ ಬಾಹುಂ ಭೀಷ್ಮಾಯ ಜಗ್ಮಿವಾನ್ ।

ತೇನ ಸ್ತುತೋ ಗೃಹೀತಶ್ಚ ಫಲ್ಗುನೇನ ಪ್ರಣಮ್ಯ ಚ ॥ ೨೫.೪೦ ॥

 

ಪ್ರಾರ್ತ್ಥಿತೋ ರಥಮಾರೂಢಃ ಪುನಃ ಶಙ್ಖಮಪೂರಯತ್ ।

ತತೋ ಭೀಷ್ಮೋSರ್ಜ್ಜುನಶ್ಚೈವ ಶಸ್ತ್ರಾಸ್ತ್ರೈರಭ್ಯವರ್ಷತಾಮ್ ॥ ೨೫.೪೧ ॥

 

ಯುದ್ಧದಿ ಶತ್ರುಗಳಿಂದ ಅಜೇಯನಾದ ಧೃಷ್ಟದ್ಯುಮ್ನ ಭೀಷ್ಮರ ತಡೆದು ಬಹು ತೆರದ ಯುದ್ಧಗಳ ಮಾಡಿದ,

ಬಲು ಮೃದುವಾಗಿದ್ದ ಅರ್ಜುನನ ಕಂಡ ಕೃಷ್ಣ ಚಕ್ರವನ್ನೆತ್ತಿ ತೋಳನ್ನೆತ್ತಿ ಭೀಷ್ಮಾಚಾರ್ಯರ ಕಡೆಗೆ ನಡೆದ.

ಆಗ ಭೀಷ್ಮಾಚಾರ್ಯರು ಭಕ್ತಿಯಿಂದ ಶ್ರೀಕೃಷ್ಣನ ಸ್ತೋತ್ರ ಮಾಡುತ್ತಾರೆ,

ಅರ್ಜುನನಿಂದಲೂ ಬಂದಿತು ಕೃಷ್ಣನ ಗಟ್ಟಿ ಹಿಡಿದು ಪ್ರಾರ್ಥನೆಯ ಧಾರೆ.

ಶ್ರೀಕೃಷ್ಣ ಮತ್ತೆ ಅರ್ಜುನನ ರಥವನ್ನೇರಿ ಪಾಂಚಜನ್ಯವ ಊದಿದ,

ಭೀಷ್ಮಾರ್ಜುನರು ಶಸ್ತ್ರಾಸ್ತ್ರಗಳಿಂದ ಪರಸ್ಪರ ಮಾಡಿದರು ಯುದ್ಧ.

 

ಅಯತ್ನೇನ ಜಿತಶ್ಚೈವ ಫಲ್ಗುನೇನಾSಪಗಾಸುತಃ ।

ಅಯುತಾನಿ ಬಹೂನ್ಯಾಜೌ ರಥಾನಾಂ ನಿಜಘಾನ ಚ ॥ ೨೫.೪೨ ॥

 

ಯಾವುದೇ ಪ್ರಯತ್ನವಿಲ್ಲದೇ ಅರ್ಜುನ ಗಂಗಾಪುತ್ರ ಭೀಷ್ಮರ ಗೆದ್ದ,

ಅಷ್ಟು ಮಾತ್ರವಲ್ಲ, ಅರ್ಜುನ ಹತ್ತಾರು ಸಾವಿರ ರಥಿಕರನ್ನು ಕೊಂದ.

 

ಜಿತಾಃ ಸೇನಾಪಹಾರಂ ಚ ಚಕ್ರುರ್ಭೀಷ್ಮಮುಖಾಸ್ತತಃ ।

ಕದಾಚಿದಗ್ರಗೋ ಭೀಮೋ ಭೀಷ್ಮದ್ರೋಣೌ ವಿಸಾರಥೀ ॥ ೨೫.೪೩ ॥

 

ಕೃತ್ವ ವಿದ್ರಾಪ್ಯ ತಾನಶ್ವಾನ್ ಭಿತ್ತ್ವಾ ವ್ಯೂಹಂ ವಿವೇಶ ಹ ।

ಪುನಃ  ಸಂಸ್ಥಾಪಿತರಥೌ ವಿಜಿತ್ಯಾಯತ್ನತೋ ಬಲೀ ॥ ೨೫.೪೪ ॥

 

ಸೋಲಿಸಲ್ಪಟ್ಟ ಭೀಷ್ಮಾಚಾರ್ಯ ಮೊದಲಾದವರು,

ಆ ಎರಡನೇ ದಿವಸದ ಯುದ್ಧವನ್ನು ಮುಗಿಸಿದರು.

ಮೂರನೇದಿನದ ಒಂದು ಯುದ್ಧಕಾಲದಲ್ಲಿ ಸೇನಾಮುಖ್ಯಸ್ಥ ಭೀಮಸೇನ,

ಭೀಷ್ಮಾಚಾರ್ಯ, ದ್ರೋಣಾಚಾರ್ಯರನ್ನು ಮಾಡುತ್ತಾನೆ ಸಾರಥಿಹೀನ.

ಅವರ ಕುದುರೆಗಳ ಓಡಿಸಿ ಅವರು ಮಾಡುವಂತೆ ಮಾಡಿದ ಪಲಾಯನ.

ಬೇರೆ ರಥವನ್ನೇರಿ ಬಂದ ಅವರನ್ನು ಸುಲಭವಾಗಿ ಗೆದ್ದ,

ವ್ಯೂಹವನ್ನು ಭೀಮಸೇನ ಅಲ್ಲೋಲ ಕಲ್ಲೋಲ ಮಾಡಿದ.

 

ಯತಮಾನೌ ಮಹೇಷ್ವಾಸೌ ಧಾರ್ತ್ತರಾಷ್ಟ್ರಾನ್ ಜಘಾನ ಹ ।

ಪಞ್ಚವಿಂಶದ್ಧತಾಸ್ತತ್ರ ಧಾರ್ತ್ತರಾಷ್ಟ್ರಾ ಮಹಾಬಲಾಃ ॥ ೨೫.೪೫ ॥

 

ಭೀಮನ ನಿಗ್ರಹಿಸಬೇಕೆಂದು ಪ್ರಯತ್ನಿಸುತ್ತಿದ್ದವರನ್ನು ಅನಾಯಾಸ ಗೆದ್ದ,

ಮಹಾಬಲರಾಗಿದ್ದ ಧೃತರಾಷ್ಟ್ರನ ಇಪ್ಪತ್ತೈದು ಮಕ್ಕಳನ್ನು ಕೊಂದುಹಾಕಿದ.

 

ಭಗದತ್ತದ್ರೌಣಿಕೃಪಶಲ್ಯದುರ್ಯ್ಯೋಧನಾದಯಃ ।

ಸರ್ವೇ ಜಿತಾ ದ್ರಾವಿತಾಶ್ಚ ಸೇನಾ ಚ ಬಹುಲಾ ಹತಾ ॥ ೨೫.೪೬ ॥

 

ಭಗದತ್ತ, ಅಶ್ವತ್ಥಾಮ, ಕೃಪಾ, ಶಲ್ಯ, ದುರ್ಯೋಧನಾದಿಗಳು ಭೀಮನಿಂದ ಸೋತರು,

ಭೀಮನಿಂದ ನಿಗ್ರಹಿಸಲ್ಪಟ್ಟಿತು ಇಡೀ ಕೌರವಸೇನೆ, ಸೋತವರೆಲ್ಲರೂ ಓಡಿಸಲ್ಪಟ್ಟರು.

No comments:

Post a Comment

ಗೋ-ಕುಲ Go-Kula