Sunday, 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 38-49

 

ಸಞ್ಜಯಂ ಪ್ರೇಷಯಾಮಾಸ ಧೃತರಾಷ್ಟ್ರೋSಥ ಶಾನ್ತಯೇ ।

ಪಾಣ್ಡವಾನ್ ಪ್ರತ್ಯಧರ್ಮ್ಮಂ ಚ ಯುದ್ಧಂ ಸಃ ಪ್ರತ್ಯಪಾದಯತ್ ॥೨೪.೩೮॥

 

ಇತ್ತ ಧೃತರಾಷ್ಟ್ರ ಸಂಜಯನನ್ನು ಒಂದು ಒಪ್ಪಂದಕ್ಕಾಗಿ ಪಾಂಡವರಲ್ಲಿಗೆ ಕಳಹುತ್ತಾನೆ,

ಅವನು ಪಾಂಡವರಲ್ಲಿಗೆ ಹೋಗಿ ಯುದ್ಧವೊಂದು ಅಧರ್ಮ ಎಂದು ಪ್ರತಿಪಾದಿಸುತ್ತಾನೆ.

 

ಹಠವಾದೇSವದದ್ ಭೀಮೋ ಯಂ ಧರ್ಮ್ಮಂ ದ್ರೌಪದೀ ತಥಾ ।

ತಮೇವೋಕ್ತ್ವಾ ಧರ್ಮ್ಮಜಸ್ತು ಚಕಾರ ಚ ನಿರುತ್ತರಮ್ ॥೨೪.೩೯॥

 

 

ಹಿಂದೆ ಭೀಮಸೇನ  ದ್ರೌಪದಿಯರು ಏನು ಮಾಡಿದ್ದರೋ ಹಠವಾದ,

ಅದನ್ನೇ ಧರ್ಮಜ ಸಂಜಯಗ್ಹೇಳಿ ಅವನ ನಿರುತ್ತರನನ್ನಾಗಿ ಮಾಡಿದ.

 

ಕೃಷ್ಣೋSಪಿ ತಸ್ಯ ಧರ್ಮ್ಮಸ್ಯ ಪ್ರಾಮಾಣ್ಯಂ ಪ್ರತ್ಯಪಾದಯತ್ ।

ತತೋ ನಿರುತ್ತರಃ ಕೃಷ್ಣಂ ಪಾಣ್ಡವಾಂಶ್ಚ ಪ್ರಣಮ್ಯ ಸಃ ॥೨೪.೪೦॥

 

ಧೃತರಾಷ್ಟ್ರಂ ಯಯೌ ತಂ ಚ ವಿನಿನ್ದ್ಯ ಪ್ರಯಯೌ ಗೃಹಮ್ ।

ನಿನ್ದಿತಃ ಸಞ್ಜಯೇನಾಸಾವಾಹೂಯ ವಿದುರಂ ನಿಶಿ ॥೨೪.೪೧॥

 

ಪಪ್ರಚ್ಛ ಸೋSವದದ್ ಧರ್ಮ್ಮಂ ಪಾರ್ತ್ಥಾನಾಂ ರಾಜ್ಯದಾಪನಮ್ ।

ಐಹಿಕಸ್ಯ ಸುಖಸ್ಯಾಪಿ ಕಾರಣಂ ತದನಿನ್ದಿತಮ್ ॥೨೪.೪೨॥

 

ಶ್ರೀಕೃಷ್ಣ ಕೂಡಾ ಧರ್ಮರಾಜನ ಮಾತಿಗೆ ಅನುಮೋದನೆ ಕೊಟ್ಟ,

ನಿರುತ್ತರನಾದ ಸಂಜಯ ಕೃಷ್ಣ ಪಾಂಡವರಿಗೆ ನಮಸ್ಕರಿಸಿ ಹೊರಟ.

ಹೋದ ಕಾರ್ಯದ ಬಗ್ಗೆ ಕೇಳಿದ ಧೃತರಾಷ್ಟ್ರನಿಗೆ,

ಸಂಜಯ ಬೈಯ್ದು ಹೊರಟು ಹೋದ ತನ್ನ ಮನೆಗೆ.

ನಿಂದಿತ ಧೃತರಾಷ್ಟ್ರ ರಾತ್ರಿ ವಿದುರನ ಕರೆಸಿ ಧರ್ಮದ ಬಗ್ಗೆ ಕೇಳಿದ,

ವಿದುರ, ಪಾಂಡವರಿಗೆ ರಾಜ್ಯ ಕೊಡುವುದೇ ಸಮ್ಮತವೆಂದು ಹೇಳಿದ.

ಅದರಿಂದ ಐಹಿಕ ಸುಖ,ಧರ್ಮೋಲ್ಲಂಘನೆಯ ತಡೆಯೂ ಹೌದು ಎಂದ.

 

ಅನ್ಯಥಾ ಸರ್ವಪುತ್ರಾಣಾಮ್ ನಾಶಂ ಧರ್ಮ್ಮಾತಿಲಙ್ಘನಮ್ ।

ತತ್ರ ಭಾವಮಕೃತ್ವಾ ಸ ಜ್ಞಾನಾದಿಚ್ಛನ್ನಘಕ್ಷಯಮ್ ॥೨೪.೪೩॥

 

ವಿಷ್ಣೋಃ ಸ್ವರೂಪಂ ಪಪ್ರಚ್ಛ ಸೋsಸ್ಮರಚ್ಚ ಸನಾತನಮ್ ।

ಸ ಆಗತ್ಯಾವದತ್ ತತ್ವಂ ವಿಷ್ಣೋರ್ಮ್ಮಾಯಾವಿನಃ ಶುಭಾ । ॥೨೪.೪೪॥

 

ನ ಗತಿಶ್ಚೇತ್ಯಥ ಪ್ರಾತಃ ಸಞ್ಜಯಃ ಪಾಣ್ಡವೋದಿತಮ್ ।

ಅವದದ್ ಧೃತರಾಷ್ಟ್ರಾಯ ಸಭಾಯಾಂ ಕುರುಸನ್ನಿಧೌ ॥೨೪.೪೫॥

 

ಪಾಂಡವರಿಗೆ ರಾಜ್ಯ ಕೊಡದಿದ್ದರೆ ನಿನ್ನೆಲ್ಲಾ ಪುತ್ರರ ಸಾವು,

ಅಲ್ಲದೇ ಧರ್ಮವ ಉಲ್ಲಂಘಿಸಿದ ಮಹಾಪಾಪದ ನೋವು.

ವಿದುರನ ನೀತಿ ಮಾತು ರುಚಿಸಲಿಲ್ಲ ಧೃತರಾಷ್ಟ್ರನಿಗೆ,

ಪಾಪದ ನಾಶಕ್ಕಾಗಿ ಕೇಳಿಕೊಳ್ಳುತ್ತಾನೆ ತತ್ವಜ್ಞಾನದ ಬಗೆ.

ಕೇಳುತ್ತಾನೆ ನಾರಾಯಣನ ಸ್ವರೂಪದ ವಿವರಣೆ,

ವಿದುರ ಮಾಡುತ್ತಾನೆ ಸನಾತನ ಋಷಿಯ ಸ್ಮರಣೆ.

ಆಗ ಸನಾತನ ಋಷಿ ಹೇಳಿದ್ದು : ಸರ್ವೋತ್ಕೃಷ್ಟ ಇಚ್ಛೆಯ ಸತ್ಯಸಂಕಲ್ಪ ನಾರಾಯಣನ ತತ್ವ,

ಪಾಪ ಮಾಡಿದ ಕಪಟಿಗಳ ಎಂದಿಗೂ ರಕ್ಷಿಸದು ಕಲಿತೂ ಅನುಸರಿಸದ ವೇದದ ಅಂತಸ್ಸತ್ವ.

ಇದು ಹೆಸರುವಾಸಿಯಾಗಿ ಎಲ್ಲೆಲ್ಲೂ ಕರೆಯಲ್ಪಡುವ ಸನತ್ಸುಜಾತೀಯ,

ಮಾರನೇ ಬೆಳಿಗ್ಗೆ ಪಾಂಡವರು ಹೇಳಿದ್ದನ್ನ ಸಭೆಯಲ್ಲಿ ಹೇಳುತ್ತಾನೆ ಸಂಜಯ.

 

ತಚ್ಛ್ರುತ್ವಾ ಸ ತು ಭೀತೋsಪಿ ಪುತ್ರಸ್ನೇಹಾನುಗೋ ನೃಪಃ ।

ರಾಜ್ಯಂ ನಾದಾತ್ ಪಾಣ್ಡವಾನಾಂ ತತೋ ಧರ್ಮ್ಮಸುತೋ ನೃಪಃ ॥೨೪.೪೬॥

 

ಯದುಕ್ತವಾನ್ ಸಞ್ಜಯಾಯ ಯದಿ ದಿತ್ಸತಿ ನಃ ಪಿತಾ ।

ರಾಜ್ಯಂ ತದಾ ತ್ವಮಾಗಚ್ಛ ವಿದುರೋ ವಾ ನ ಚೇನ್ನಚ ॥೨೪.೪೭॥

 

ತಾವಥಾನಾಗತೌ ಜ್ಞಾತ್ವಾ ಮನ್ತ್ರಯಾಮಾಸ ಶೌರಿಣಾ ।

ಸೋSಪ್ಯಾಹಾಹಂ ಗಮಿಷ್ಯಾಮಿ ಸಭಾಯಾಮೃಷಿಸನ್ನಿಧೌ ॥೨೪.೪೮॥

 

ವಕ್ಷ್ಯೇ ಪಥ್ಯಾನಿ ಯುಕ್ತಾನಿ ಯದಿ ನಾಸೌ ಗ್ರಹೀಷ್ಯತಿ ।

ವದ್ಧ್ಯಃ ಸರ್ವಸ್ಯ ಲೋಕಸ್ಯ ಸ ಭವೇತ್ ಸರ್ವಧರ್ಮ್ಮಹಾ ॥೨೪.೪೯॥

 

ಸಂಜಯನ ಮಾತು ಕೇಳಿ ಅಳುಕಿತು ಅಂಧ ಧೃತರಾಷ್ಟ್ರನ ಮನೋಭಾವ,

ಪಾಂಡವರಿಗೆ ಅವರ ರಾಜ್ಯ ಕೊಡಗೊಡಲಿಲ್ಲ ಅವನ ಪುತ್ರ ವ್ಯಾಮೋಹ.

ಧರ್ಮರಾಜ ಸಂಜಯನಿಗೆ ಹೇಳಿದ್ದ : ಒಂದುವೇಳೆ ನಮ್ಮ ದೊಡ್ಡಪ್ಪ ರಾಜ್ಯ ಕೊಡಲು ಒಪ್ಪಿದರೆ,

ನೀನು ಅಥವಾ ವಿದುರ ಬನ್ನಿ, ಇಲ್ಲವಾದರೆ ತೆಗೆದುಕೊಳ್ಳಬೇಡಿ ಯಾರೂ ಬರುವ ತೊಂದರೆ.

ಹಾಗಾಗಿ ಸಂಜಯ, ವಿದುರ ಯಾರೂ ಬಾರದೇ ಇದ್ದಾಗ,

ಕೃಷ್ಣನ ಜೊತೆ ಮುಂದೇನು ಎಂದು ವಿಚಾರ ಮಾಡಿದನಾಗ.

ಶ್ರೀಕೃಷ್ಣಪರಮಾತ್ಮ ಹೇಳುತ್ತಾನೆ,

ನಾನೇ ಹಸ್ತಿನಪುರಕ್ಕೆ ಹೋಗುತ್ತೇನೆ.

ಋಷಿಗಳ ಸಮಕ್ಷಮದಲ್ಲಿ ಹಿತವಚನ ನುಡಿಯುತ್ತೇನೆ,

ಒಪ್ಪದಿದ್ದರೆ ದುರ್ಯೋಧನ ಸಂಹಾರಕ್ಕೆ ಅರ್ಹನಾಗುತ್ತಾನೆ,

ರಾಜ್ಯ ಕೊಡದವನು ಲೋಕಧರ್ಮ ವಿರೋಧಿಯಾಗುತ್ತಾನೆ.

No comments:

Post a Comment

ಗೋ-ಕುಲ Go-Kula