Tuesday 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 128-135

 

ಅಮರ್ಷಯುಕ್ತೌ ಚಿರಮೇವ ವೀರಾವಯುದ್ಧ್ಯತಾಮರ್ಜ್ಜುನಧಾರ್ತ್ತರಾಷ್ಟ್ರೌ ।

ಸಮಂ ತದಾಸೀನ್ಮಹದದ್ಭುತಂ ಚ ದಿವೌಕಸಾಂ  ಪಶ್ಯತಾಂ ಭೂಭೃತಾಂ ಚ ॥ ೨೫.೧೨೮॥

 

ವೀರ ಅರ್ಜುನ, ದುಶ್ಯಾಸನರಿಬ್ಬರಲ್ಲೂ ಇತ್ತು ಕೋಪ,

ಬಹು ಹೊತ್ತಿನ ಕಾಲ ಸಾಗಿತು ಅವರ ಯುದ್ಧದ ಪ್ರತಾಪ.

ಸಮವಾಗಿ ಅದ್ಭುತವಾಗಿತ್ತು ಅವರ ಕಾದಾಟ,

ದೇವತೆ, ರಾಜರುಗಳು ವೀಕ್ಷಿಸಿದರು ಆ ನೋಟ.

 

ತದಾ ವಿರಾಟದ್ರುಪದೌ ಕುನ್ತಿಭೋಜಂ ಕೃಷ್ಣಾಸುತಾನ್ ಕೇಕಯಾಂಶ್ಚೇಕಿತಾನಮ್ ।

ಭೂರಿಃ ಶಲಃ ಸೋಮದತ್ತೋ ವಿಕರ್ಣ್ಣಃ ಸಕೇಕಯಾ ವಾರಯಾಮಾಸುರುಚ್ಚೈಃ ॥ ೨೫.೧೨೯॥

 

 

ಜಿತ್ವೈವ ತಾಂಸ್ತೇSಭಿಯಯುಶ್ಚ ಭೀಷ್ಮಂ ತತೋSರ್ಜ್ಜುನೋSತೀತ್ಯ ದುಃಶಾಸನಂ ಚ ।

ಭೀಷ್ಮಂ ಶರೈರಾರ್ಚ್ಛದರಿಪ್ರಾಮಾಥಿಭಿಃ ಶಿಖಣ್ಡಿನಂ ಧಾರ್ತ್ತರಾಷ್ಟ್ರಾದ್ ವಿಮುಚ್ಯ ॥ ೨೫.೧೩೦॥

 

ಕೌರವ ಪಕ್ಷದ ಕೈಕಯರು, ಭೂರಿ, ಶಲ್ಯರಾಜ, ಸೋಮದತ್ತ, ವಿಕರ್ಣ ಇವರೆಲ್ಲರೂ,

ದ್ರುಪದ, ವಿರಾಟ, ಭೋಜ, ದ್ರೌಪದೀ ಪುತ್ರರು, ಈ ಕಡೆಯ ಕೈಕಯ ಚೇತಾನರ ತಡೆದರು.

ಆಗ ವಿರಾಟಾದಿಗಳು ಅವರೆಲ್ಲರನ್ನು ಗೆದ್ದು ಬರುತ್ತಾರೆ ಭೀಷ್ಮಾಚಾರ್ಯರ ಬಳಿಗೆ,

ದುಶ್ಯಾಸನನ ಮೀರಿ ದುರ್ಮರ್ಷಣನಿಂದ ಶಿಖಂಡಿಯ ಬಿಡಿಸಿದ ಅರ್ಜುನ ಬಾಣ ಬಿಡುತ್ತಾನೆ ಭೀಷ್ಮರಿಗೆ.

 

ಸ ತೈಃ ಸಮಸ್ತೈರ್ಬಹುಶಸ್ತ್ರಪೂಗೈರ್ಭೃಶಂ ಮರ್ಮ್ಮಸ್ವರ್ದ್ದಿತಶ್ಚಾಪಮುಕ್ತೈಃ 

ಶರೈಃ ಸಮಸ್ತಾನ್ ವಿರಥಾಂಶ್ಚಕಾರ ಶೈನೇಯಪಾಞ್ಚಾಲ್ಯಯುಧಿಷ್ಠಿರಾದ್ಯಾನ್ ॥ ೨೫.೧೩೧॥

 

ಸ ಚೇದಿಪಾಞ್ಚಾಲಕರೂಶಮುಖ್ಯಾನ್ ರಥೋತ್ತಮಾನ್ ಪಞ್ಚವಿಂಶತ್ಸಹಸ್ರಾನ್ ।

ಸಮ್ಪ್ರೇಷಯಾಮಾಸ ಯಮಾಯ ಬಾಣೈರ್ಯ್ಯುಗಾನ್ತಕಾಲೇSಗ್ನಿರಿವ ಪ್ರವೃದ್ಧಃ ॥ ೨೫.೧೩೨॥

 

ಬಹಳ ಬಾಣಗಳಿಂದ ಮರ್ಮಸ್ಥಾನಗಳಿಗೆ ಏಟಾಗಿ  ಭೀಷ್ಮರಾಗಿದ್ದರೂ ಪೀಡಿತ,

ತಮ್ಮ ಧನುರ್ಕೌಶಲ್ಯದಿಂದ ಮಾಡಿದರು ಸಾತ್ಯಕಿ, ಪಾಂಚಾಲ, ಧರ್ಮಜರ ವಿರಥ.

ಪ್ರಳಯಕಾಲದ ಬೆಂಕಿಯಂತೆ ಧಗಧಗಿಸುತ್ತಿದ್ದರು ಆಗ ಭೀಷ್ಮಾಚಾರ್ಯ,

ಮಾಡಿದರು ಚೇದಿ,ಪಾಂಚಾಲ,ಕರೂಶದ ೨೫ ಸಹಸ್ರ ರಥಿಕರ ಸಂಹಾರ.

 

ನಿರೀಕ್ಷ್ಯ ತಂ ಸೂರ್ಯ್ಯಮಿವಾSತಪನ್ತಂ ಸಞ್ಚೋದಿತೋ ವಾಸುದೇವೇನ ಪಾರ್ತ್ಥಃ ।

ಚಿಚ್ಛೇದ ತತ್ಕಾರ್ಮ್ಮುಕಂ ಲೋಕವೀರೋ ರಣೇSರ್ದ್ಧಚನ್ದ್ರೇಣ ಸ ಚಾನ್ಯದಾದದೇ ॥ ೨೫.೧೩೩॥

 

ಚಿಚ್ಛೇದ ತಚ್ಛೈವಮಷ್ಟೌ ಧನೂಂಷಿ ಶಕ್ತಿಂ ಚ ಚರ್ಮ್ಮಾಸಿವರಂ ಪರಾಣಿ ಚ ।

ಧನೂಂಷಿ ದತ್ತಾನಿ ನೃಭಿರ್ನ್ನೃಪಸ್ಯ ಸರ್ವಾಣಿ ಚಿಚ್ಛೇದ ಸ ಪಾಕಶಾಸನಿಃ ॥ ೨೫.೧೩೪॥

 

ಸೂರ್ಯನಂತೆ ಚೆನ್ನಾಗಿ ಬೆಳಗುತ್ತಿದ್ದರು ಭೀಷ್ಮಾಚಾರ್ಯ,

ಅರ್ಜುನನನ್ನು ಪ್ರೇರೇಪಿಸಿದ (ಶ್ರೀಕೃಷ್ಣ ) ಗೀತಾಚಾರ್ಯ.

ಅರ್ಜುನ ಅರ್ಧಚಂದ್ರ ಬಾಣದಿಂದ ಭೀಷ್ಮರ ಬಿಲ್ಲನ್ನು ಕತ್ತರಿಸಿದ,

ಆಗ ಭೀಷ್ಮಾಚಾರ್ಯ ಮತ್ತೊಂದು ಬಿಲ್ಲನ್ನು ಎತ್ತಿಕೊಂಡವನಾದ.

ಅರ್ಜುನ ಆ ಬಿಲ್ಲನ್ನೂ ಕತ್ತರಿಸಿಹಾಕುತ್ತಾನೆ,

೮ ಬಿಲ್ಲು ಶಕ್ತ್ಯಾಯುಧ ಗುರಾಣಿ ಕತ್ತಿಗಳನ್ನ,

ಬೇರೆಯವರು ಕೊಟ್ಟ ಬಿಲ್ಲುಗಳ ಕತ್ತರಿಸುತ್ತಾನೆ.

 

ತತಃ ಶರೈಃ ಸೂರ್ಯ್ಯಕರಪ್ರಕಾಶೈರ್ವಿವ್ಯಾಧ ಸರ್ವೇ ಚ ಯುಧಿಷ್ಠಿರಾದ್ಯಾಃ ।

ತೈರರ್ದ್ದಿತೋ ನ್ಯಪತದ್ ಭೂತಳೇ ಸ ಪ್ರಾಣಾನ್ ದಧಾರಾಪಿ ತಥೋತ್ತರಾಯಣಾತ್ ॥ ೨೫.೧೩೫॥

 

ಆನಂತರ ಸೂರ್ಯಕಿರಣಗಳಿಗೆ ಸಮಾನವಾದ,

ಬಾಣಗಳಿಂದ ಅರ್ಜುನ ಭೀಷ್ಮರನ್ನು ಹೊಡೆದ.

ಯುಧಿಷ್ಠಿರ ಮುಂತಾದವರಿಂದಲೂ ಭೀಷ್ಮರು ಹೊಡೆಯಲ್ಪಟ್ಟರು,

ನೋವಿನಿಂದ ಭೀಷ್ಮಾಚಾರ್ಯರು ಭೂಮಿಗೆ ಬೀಳಿಸಲ್ಪಟ್ಟರು,

ಉತ್ತರಾಯಣದವರೆಗೂ ತಮ್ಮ ಪ್ರಾಣವನ್ನು ಹಿಡಿದುಕೊಂಡಿದ್ದರು.

No comments:

Post a Comment

ಗೋ-ಕುಲ Go-Kula