Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 59-67

 

ವಿಜಿತ್ಯ ಹಾರ್ದ್ದಿಕ್ಯಮಥಾಪ್ರಯತ್ನತಃ  ಸ ಇನ್ದ್ರಸೂನುಃ ಪ್ರವಿವೇಶ ತದ್ ಬಲಮ್ ।

ವಿಲೋಳಯಾಮಾಸ ಚ ಸಾಯಕೋತ್ತಮೈರ್ಯ್ಯಥಾ ಗಜೇನ್ದ್ರೋ ನಳಿನೀಂ ಬಲೋದ್ಧತಃ ॥೨೬.೫೯॥

 

ದ್ರೋಣರನ್ನು ದಾಟಿದಮೇಲೆ ಎದುರಾದ ಕೃತವರ್ಮನನ್ನು ಅರ್ಜುನ ಯಾವುದೇ ಪ್ರಯತ್ನವಿಲ್ಲದೇ ಗೆದ್ದ,

ಆ ಕೌರವಸೇನೆಯನ್ನು ಪ್ರವೇಶಿಸಿ, ಉತ್ಕೃಷ್ಟ ಬಾಣಗಳಿಂದ ಸೇನೆಯನ್ನು ಅಲ್ಲೋಲಕಲ್ಲೋಲ  ಮಾಡಿದ.

ಮದ್ದಾನೆ ಪದ್ಮಗಳುಳ್ಳ ಸರೋವರ ಹೊಕ್ಕಂತೆ,    ಸೇನೆಯ ಅಲ್ಲೋಲಕಲ್ಲೋಲ ಮಾಡಿದನಂತೆ.

 

ಸ ಉಚ್ಚಕಾಶೇSತಿರಥೋ ರಥೋತ್ತಮೇ ಸವಾಸುದೇವೋ ಹರಿಣಾ ಯಥೇನ್ದ್ರಃ ।

ಚಕರ್ತ್ತ ಚೋಗ್ರೋ ದ್ವಿಷತಾಂ ಶಿರಾಂಸಿ ಶರೈಃ ಶರೀರಾನ್ತಕರೈಃ ಸಮನ್ತತಃ ॥೨೬.೬೦॥

 

ಹೇಗೆ ಇಂದ್ರನು ಉಪೇಂದ್ರನಿಂದ ಕೂಡಿದಾಗ ಶೋಭಿಸುವಂತೆ,

ಶ್ರೀಕೃಷ್ಣನಿಂದೊಡಗೂಡಿದ ಅರ್ಜುನ ರಥದಲ್ಲಿ ಶೋಭಿಸಿದನಂತೆ.

ಶತ್ರುಭಯಂಕರನಾದ ಅರ್ಜುನನು  ಸಿಟ್ಟಿನಿಂದ, ಶತ್ರುಗಳ ತಲೆಗಳನ್ನು ಎಲ್ಲೆಡೆಯಿಂದ ಕತ್ತರಿಸಿದ.

 

ದೃಢಾಯುಮಚ್ಯುತಾಯುಂ ಚ ಹತ್ವಾ ವಿನ್ದಾನುವಿನ್ದಕೌ ।

ಶರಾಭ್ಯಾಂ ಪ್ರೇಷಯಾಮಾಸ ಯಮಾಯ ವಿಜಯೋ ಯುಧಿ ॥೨೬.೬೧॥

 

ಅರ್ಜುನನು ಯುದ್ಧದಲ್ಲಿ ಎರಡು ಬಾಣಗಳಿಂದ ದೃಢಾಯು ಅಚ್ಯುತಾಯುವನ್ನು ಸಂಹರಿಸಿದ ,  ಮತ್ತೆ ವಿಂದ ಅನುವಿಂದರನ್ನು ಇನ್ನೆರಡು ಬಾಣಗಳಿಂದ ಯಮಲೋಕಕ್ಕೆ ಕಳುಹಿಸಿದ. 

 

ಸುದಕ್ಷಿಣಂ ಚ ಕಾಮ್ಬೋಜಂ ನಿಹತ್ಯಾಮ್ಬಷ್ಠಮೇವ ಚ ।

ಶ್ರುತಾಯುಧಂ ನದೀಜಾತಂ ವರುಣಾದಾಸಸಾದ  ಹ ॥೨೬.೬೨॥

 

ಯಸ್ಯಾದಾದ್ ವರುಣೋ ದಿವ್ಯಾಮಮೋಘಾಂ ಮಹತೀಂ ಗದಾಮ್ ।

ಸ ತು ತೇನ ಶರೈಸ್ತೀಕ್ಷ್ಣೈರರ್ಪ್ಪಿತೋ ವಿರಥಂ ಕ್ಷಣಾತ್ ॥೨೬.೬೩॥

 

ಚಕಾರ ಪಾರ್ತ್ಥಸ್ಯ ರಥಮಾರುಹ್ಯಾರಿಧರಾಯ ತಾಮ್ ।

ಗದಾಂ ಚಿಕ್ಷೇಪ ಸಾ ತಸ್ಯ ವಾರುಣೇಃ ಶಿರ ಏವತು ॥೨೬.೬೪॥

 

ಬಿಭೇದ ಶತಧಾ ಶೀರ್ಣ್ಣಮಸ್ತಿಷ್ಕಃ ಸೋSಪತದ್ ಭುವಿ ।

ಅಯುದ್ಧ್ಯನ್ತಂ ಸ್ವಗದಯಾ ಯದಿ ತಾಡಯಸಿ ಸ್ವಯಮ್ ॥೨೬.೬೫॥

 

ತಯಾ ವಿಶೀರ್ಣ್ಣಮಸ್ತಿಷ್ಕೋ ಮರಿಷ್ಯಸಿ ನ ಸಂಶಯಃ ।

ಅಮೋಘಾ ಚಾನ್ಯಥಾ ಸೇಯಂ ಗದಾ ತವ ಭವಿಷ್ಯತಿ ॥೨೬.೬೬॥

 

ಇತ್ಯಬ್ರವೀತ್ ತಂ ವರುಣಃ ಪುರಾ ತೇನ ಸ ಕೇಶವೇ ।

ಅಯುದ್ಧ್ಯತಿ ಗದಾಕ್ಷೇಪಾತ್ ತಯಾ ಶೀರ್ಣ್ಣಶಿರಾ ಅಭೂತ್ ॥೨೬.೬೭॥

 

ಅರ್ಜುನ ಕಾಂಬೋಜದ  ಸುದಕ್ಷಿಣನನ್ನು ಕೊಂದ,

ಮತ್ತೆ ಅಂಬಷ್ಠನನ್ನೂ ಕೂಡಾ ಸಂಹಾರ ಮಾಡಿದ.

ನಂತರ ವರುಣ ಮತ್ತು ನದಿಯಾಭಿಮಾನಿ ದೇವತೆಗೆ ಹುಟ್ಟಿದ ಮಗ,

ಶ್ರುತಾಯುಧ ಎನ್ನುವವನನ್ನು ಯುದ್ಧಕ್ಕೆಂದು ಎದುರುಗೊಳ್ಳುವನಾಗ.

No comments:

Post a Comment

ಗೋ-ಕುಲ Go-Kula