Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 96-102

 

ದುರ್ಯ್ಯೋಧನೋSಥ ಸ್ವಜನೈಃ ಸಮೇತಃ ಪುನಃ ಪ್ರಾಯಾದ್ ರಣಭೂಮಿಂ ಸ ಭೀಷ್ಮಮ್ ।

ಜಯೋಪಾಯಂ ಭೈಮಸೇನೇರಪೃಚ್ಛತ್  ಸ್ವಸ್ಯೈವ ಸ ಪ್ರಾಹ ನ ತಂ ವ್ರಜೇತಿ ॥ ೨೫.೯೬॥

 

ಬಳಿಕ ದುರ್ಯೋಧನ ತನ್ನವರೊಂದಿಗೆ ಶಿಬಿರದಿಂದ ರಣರಂಗಕ್ಕೆ ಹೋದ,

ಭೀಷ್ಮಾಚಾರ್ಯರಲ್ಲಿ ಘಟೋತ್ಕಚನ ಗೆಲ್ಲುವ ಉಪಾಯವನ್ನು ಕೇಳಿದ.

ಭೀಷ್ಮಾಚಾರ್ಯರು ಹೇಳುತ್ತಾರೆ - ನೀನವನ ಎದುರಿಗೆ ಹೋಗಬೇಡ.

 

ಪ್ರಾಗ್ಜೋತಿಷಂ ಚೈವ ಘಟೋತ್ಕಚಾಯಾ ಸಮ್ಪ್ರೇಷಯಾಮಾಸ ಸುರಾಪಗಾಸುತಃ ।

ಸ ಪ್ರಾಪ್ಯ ಹೈಡಿಮ್ಬಮಯೋಧಯದ್ ಬಲೀ ಸ ಚಾರ್ದ್ದಯಾಮಾಸ ಸಕುಞ್ಜರಂ ತಮ್ ॥ ೨೫.೯೭॥

 

ಭೀಷ್ಮ ಭಗದತ್ತನನ್ನು ಘಟೋತ್ಕಚನೆದುರು ಕಳಿಸಿದ,

ಬಲಿಷ್ಠ ಭಗದತ್ತ ಘಟೋತ್ಕಚನ ಬಳಿಗೆ ಸಾಗಿ ಬಂದ.

ಹಿಡಿಂಬಾ ಪುತ್ರಗೆ ಎದುರಾಗಿ ಭಾರೀ ಯುದ್ಧವ ಮಾಡಿದ,

ಆನೆಯೊಡನಿದ್ದ ಭಗದತ್ತನನ್ನು ಘಟೋತ್ಕಚ ಪೀಡಿಸಿದ.

 

 

ತೇನಾರ್ದ್ದಿತಃ ಪ್ರಾಹಿಣೋಚ್ಛೂಲಮಸ್ಮೈ ವಿಯತ್ಯಭಿಪ್ಲುತ್ಯ ತದಾ ಘಟೋತ್ಕಚಃ ।

ಪ್ರಗೃಹ್ಯ ಶೂಲಂ ಪ್ರಬಭಞ್ಜ ಜಾನುಮಾರೋಪ್ಯ ದೇವಾ ಜಹೃಷುಸ್ತದೀಕ್ಷ್ಯ ॥ ೨೫.೯೮॥

 

ಭಗದತ್ತ ಘಟೋತ್ಕಚನಿಂದ ಪೀಡಿತನಾದ ,

ಘಟೋತ್ಕಚನ ಮೇಲೆ ಶೂಲವನ್ನು ಎಸೆದ.

ಘಟೋತ್ಕಚ ಆಕಾಶದಲ್ಲಿ ಹಾರಿ ಶೂಲವ ಹಿಡಿದ,

ತನ್ನ ಮೊಣಕಾಲ ಮೇಲಿಟ್ಟು ಮುರಿದು ಹಾಕಿದ.

ಅವನೀ ಕರ್ಮದಿಂದ ದೇವತೆಗಳಿಗಾಯಿತು ಆನಂದ.

 

ತದಾ ಸ ತಸ್ಯೈವ ಪದಾನುಗಾನ್ ನೃಪೋ ಜಘಾನ ತಂ ಮಾರುತಿರಭ್ಯಯಾದ್ ರಣೇ ।

ಸ ಪ್ರಾಹಿಣೋದ್ ಭೀಮಸೇನಾಯ ವೀರೋ ಗಜಂ ತಮಸ್ತಮ್ಭಯದಾಶು ಸಾಯಕೈಃ ॥ ೨೫.೯೯॥

 

ಸಂಸ್ತಮ್ಭಿತೇ ಬಾಣವರೈಸ್ತು ನಾಗೇ ಭೀಮಸ್ಯಾಶ್ವಾನ್ ಸಾಯಕೈರಾರ್ದ್ದಯತ್ ಸಃ ।

ಸೋSಭ್ಯರ್ದ್ದಿತಾಶ್ವೋSಥ ಗದಾಂ ಪ್ರಗೃಹ್ಯ ಹನ್ತುಂ ನೃಪಂ ತಂ ಸಗಜಂ ಸಮಾಸದತ್ ॥ ೨೫.೧೦೦॥

 

ಭಗದತ್ತ ಘಟೋತ್ಕಚನ ಬೆಂಗಾವಲು ಪಡೆಯ ಸಂಹರಿಸಿದ,

ಘಟೋತ್ಕಚಗೆ ಕಾವಲಾಗಿ ಭೀಮ ಭಗದತ್ತನಿಗೆ ಎದುರಾದ.

ಭಗದತ್ತ ಭೀಮಸೇನನತ್ತ ತನ್ನ ಆನೆಯ ತಂದ,

ವೀರಭೀಮ ತನ್ನ ಬಾಣಗಳಿಂದ ಆನೆಯ ತಡೆದ.

ಭೀಮನ ಬಾಣಗಳ ವರಸೆಯಿಂದ ಆ ಸುಪ್ರತೀಕ,

ಆಯಿತು ಚಲನೆ ಇಲ್ಲದೇ ನಿಂತ "ನಿಶ್ಚಲಪ್ರತೀಕ ".

ಭಗದತ್ತ ಭೀಮನ ಕುದುರೆಗಳನ್ನು ಬಾಣಗಳಿಂದ ಪೀಡಿಸಿದ,

ಆಗ ಭೀಮ ಗದೆ ಹಿಡಿದು ಆನೆ, ಭಗದತ್ತನ ಕೊಲ್ಲಲು ಬಂದ.

 

ಸ ಹನ್ತುಕಾಮೇನ ರುಷಾSಭಿಪನ್ನೋ ಭೀಮೇನ ರಾಜಾ ಪುರತಃ ಪೃಷ್ಠತಶ್ಚ ।

ಕೃಷ್ಣೇನಾಸ್ತ್ರಂ ವೈಷ್ಣವಂ ತದ್ ಗೃಹೀತುಂ ಸಹಾರ್ಜ್ಜುನೇನಾಪಯಯೌ ಸುಭೀತಃ ॥ ೨೫.೧೦೧॥

 

ಎದುರಿನಲ್ಲಿ ಅತಿಕೋಪದಿಂದ ಕೊಲ್ಲಲು ಮುನ್ನುಗ್ಗುತ್ತಿದ್ದ ಭೀಮಸೇನ,

ಹಿಂಭಾಗದಲ್ಲಿ ವೈಷ್ಣವಾಸ್ತ್ರ ಕದಿಯಲು ಕೃಷ್ಣಸಮೇತ ಬರುತ್ತಿದ್ದ ಅರ್ಜುನ.

ಈ ಎರಡೂ ದೃಶ್ಯ ಕಂಡ ಭಗದತ್ತ ಭಯದಿಂದ ಮಾಡುತ್ತಾನೆ ಪಲಾಯನ.

 

 

ತಸ್ಮಿನ್ ಗತೇ ಭೀಮಸೇನಾರ್ಜ್ಜುನಾಭ್ಯಾಂ ವಿದ್ರಾವಿತೇ ರಾಜಸಙ್ಘೇ ಸಮಸ್ತೇ ।

ಭೀಷ್ಮಃ ಸೇನಾಮಪಹೃತ್ಯಾಪಯಾತೋ ದುರ್ಯ್ಯೋಧನಸ್ತಂ ನಿಶಿ ಚೋಪಜಗ್ಮಿವಾನ್ ॥ ೨೫.೧೦೨॥

 

ಭಗದತ್ತ ಓಡುತ್ತಿರಲು, ಭೀಮಾರ್ಜುನರಿಂದ ಓಡಿಸಲ್ಪಟ್ಟಿತು ರಾಜ ವೃಂದ,

ಸೇನೆಯು ಹಿಂದೆ ಶಿಬಿರಕ್ಕೆ ಕರೆದೊಯ್ಯಲ್ಪಟ್ಟಿತು ಭೀಷ್ಮಾಚಾರ್ಯರಿಂದ.

ಆ ರಾತ್ರಿಯೇ ದುರ್ಯೋಧನ ಭೀಷ್ಮಾಚಾರ್ಯರ ಶಿಬಿರಕ್ಕೆ ಬಂದ.

No comments:

Post a Comment

ಗೋ-ಕುಲ Go-Kula